ಜನ್ಮಾಷ್ಟಮಿ ಮೂರು ಗಂಟೆಗಳ ಧ್ಯಾನ
ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಅಧ್ಯಕ್ಷರು ಸ್ವಾಮಿ
ಚಿದಾನಂದ ಗಿರಿ ಅವರೊಂದಿಗೆ

ಶನಿವಾರ, ಆಗಸ್ಟ್‌ 16

ಸಂಜೆ 7:30

– ರಾತ್ರಿ 10:30

(ಅಧಿಕೃತ ಭಾರತೀಯ ಕಾಲಮಾನ)

ಕಾರ್ಯಕ್ರಮದ ಬಗ್ಗೆ

ಪ್ರತಿ ವರ್ಷವೂ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ, ಜನ್ಮಾಷ್ಟಮಿ – ಭಾರತದ ಪ್ರೀತಿಯ ಅವತಾರವಾದ ಭಗವಾನ್ ಕೃಷ್ಣನ ಜನ್ಮೋತ್ಸವವನ್ನು ಆಚರಿಸುತ್ತದೆ, ಅವರ ಬೋಧನೆಗಳು ಭಗವದ್ಗೀತೆಯಲ್ಲಿ ಅಡಕವಾಗಿವೆ. ಈ ಆನಂದಮಯ ವಾರ್ಷಿಕ ಆಚರಣೆಯು ಈ ವರ್ಷ ಆಗಸ್ಟ್ 16, ಶನಿವಾರದಂದು ನಡೆಯುತ್ತದೆ.

ಈ ವಿಶೇಷ ದಿನದಂದು, ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು ಲಾಸ್ ಏಂಜಲೀಸ್‌ನಲ್ಲಿರುವ ಎಸ್‌ಆರ್‌ಎಫ್‌ನ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಿಂದ ರಾತ್ರಿ 7:30 ರಿಂದ 10:30 ರವರೆಗೆ (ಭಾರತೀಯ ಕಾಲಮಾನ) ನೇರ ಪ್ರಸಾರ ಮಾಡಲಾದ ಜನ್ಮಾಷ್ಟಮಿಯ ಮೂರು ಗಂಟೆಗಳ ವಿಶೇಷ ಧ್ಯಾನವನ್ನು ನಡೆಸಿದರು. ಧ್ಯಾನದ ಸಮಯದಲ್ಲಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸಂನ್ಯಾಸಿಗಳ ಕೀರ್ತನೆ ಗುಂಪು ಭಾರತದಿಂದ ನೇರ ಪ್ರಸಾರದ ಮೂಲಕ ಸ್ವಾಮಿ ಚಿದಾನಂದಜಿ ಅವರೊಂದಿಗೆ ಭಕ್ತಿಪೂರ್ವಕ ಪಠಣಕ್ಕಾಗಿ ಸೇರಿಕೊಂಡಿತು.

ಈ ವಿಶೇಷ ಧ್ಯಾನವನ್ನು ಇಂಗ್ಲಿಷ್‌ನಲ್ಲಿ ನಡೆಸಲಾಯಿತು ಮತ್ತು ನೇರ ಕಾರ್ಯಕ್ರಮದ ಸಮಯದಲ್ಲಿ ಹಿಂದಿ ಹಾಗೂ ಇತರ ಅಂತರರಾಷ್ಟ್ರೀಯ ಭಾಷೆಗಳಲ್ಲಿ ಏಕಕಾಲಿಕ ವ್ಯಾಖ್ಯಾನ ಲಭ್ಯವಿತ್ತು. ಹಿಂದಿ, ತಮಿಳು, ಮತ್ತು ತೆಲುಗು ಹಾಗೂ ಇತರ ಅಂತರರಾಷ್ಟ್ರೀಯ ಭಾಷೆಗಳಲ್ಲಿ ಉಪಶೀರ್ಷಿಕೆಗಳನ್ನು ಆದಷ್ಟು ಬೇಗ ವೀಡಿಯೊಗೆ ಸೇರಿಸಲಾಗುವುದು.

ಈ ವೀಡಿಯೊ ವೀಕ್ಷಣೆಗಾಗಿ ಲಭ್ಯವಿರುತ್ತದೆ.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ