ಹೆಚ್ಚಿನ ಜನರು ಘಟನಾವಳಿಗಳನ್ನು ಸಹಜ ಮತ್ತು ಅನಿವಾರ್ಯವೆಂದು ಪರಿಗಣಿಸುತ್ತಾರೆ. ಪ್ರಾರ್ಥನೆಯಿಂದ ಎಂತಹ ಮೂಲಭೂತ ಬದಲಾವಣೆಗಳು ಸಾಧ್ಯ ಎಂಬುದರ ಬಗ್ಗೆ ಅವರಿಗೆ ಅರಿವಿರುವುದಿಲ್ಲ.
— ಪರಮಹಂಸ ಯೋಗಾನಂದ
ಯೋಗೋದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಪ್ರತೀ ಬುಧವಾರ ರಾತ್ರಿ 9:00 ಗಂಟೆಗೆ (ಅಧಿಕೃತ ಭಾರತೀಯ ಕಾಲಮಾನ) 20 ನಿಮಿಷಗಳ ಅವಧಿಯ ಸಾಪ್ತಾಹಿಕ ಆನ್‌ಲೈನ್ ಪ್ರಾರ್ಥನಾ ಅವಧಿಯನ್ನು ನಡೆಸಲಿದೆ. ಮೊದಲ ಗೋಷ್ಠಿಯನ್ನು ಮೇ 27 ರಂದು ವೈಎಸ್ಎಸ್ ಸನ್ಯಾಸಿಯೊಬ್ಬರು ನಡೆಸಲಿದ್ದಾರೆ, ಮತ್ತು ನಂತರದ ಅವಧಿಗಳನ್ನು(ಜೂನ್ 3 ರಿಂದ) ವೈಎಸ್ಎಸ್ ಭಕ್ತರು ಮುನ್ನಡೆಸಲಿದ್ದಾರೆ.
ಪ್ರಾರ್ಥನಾ ಅವಧಿಯು ಆರಂಭಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವುದು, ಅನಂತರ ಸ್ಫೂರ್ತಿದಾಯಕ ವಾಚನ ಅಥವಾ ಪರಮಹಂಸ ಯೋಗಾನಂದರ ದೃಢೀಕರಣ ವಾಕ್ಯದ ಅಭ್ಯಾಸ, ಮತ್ತು ಸಂಕ್ಷಿಪ್ತ ಧ್ಯಾನಾವಧಿಯನ್ನು ಒಳಗೊಂಡಿರುತ್ತದೆ. ಅನಂತರ ನಾವು ವೈಎಸ್ಎಸ್/ಎಸ್‌ಆರ್‌ಎಫ್ ಜಾಗತಿಕ ಪ್ರಾರ್ಥನಾ ಸಮೂಹಕ್ಕೆ ಸೇರಿಕೊಂಡು, ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಇರುವ ಇತರರಿಗಾಗಿ, ವಿಶ್ವಶಾಂತಿಗಾಗಿ, ಮತ್ತು ಆರೋಗ್ಯಕ್ಕಾಗಿ ಪ್ರಾರ್ಥನೆಯನ್ನು ವಿನಂತಿಸಿದವರಿಗಾಗಿ ಪ್ರಾರ್ಥಿಸುವೆವು. ಈ ಅವಧಿಯು ಯೋಗಾನಂದಜಿಯವರು ಕಲಿಸಿದ ಉಪಶಮನಕಾರಿ ತಂತ್ರದ ಅಭ್ಯಾಸದೊಂದಿಗೆ, ಮತ್ತು ಸಮಾರೋಪ ಪ್ರಾರ್ಥನೆಯೊಂದಿಗೆ ಮುಕ್ತಾಯವಾಗುವುದು.
ಈ ಸತ್ಸಂಗಗಳಿಗೆ ಹಾಜರಾಗಲು ಎಲ್ಲರಿಗೂ ಸ್ವಾಗತ.
ದಯವಿಟ್ಟು ಗಮನಿಸಿ: ಈ ಆನ್‌ಲೈನ್ ಪ್ರಾರ್ಥನಾ ಅವಧಿಗಳು ಕೇವಲ ಜೂಮ್ ಮೂಲಕ ಲಭ್ಯವಿರುತ್ತವೆ.
ವೈಎಸ್ಎಸ್/ಎಸ್‌ಆರ್‌ಎಫ್ ಜಾಗತಿಕ ಪ್ರಾರ್ಥನಾ ಸಮೂಹ
ಭಾರತದ ಯೋಗದಾ ಸತ್ಸಂಗ ಸೊಸೈಟಿಯು ಪ್ರಕಟಿಸಿದ ಕೆಳಗಿನ ವೈಎಸ್ಎಸ್/ಎಸ್‌ಆರ್‌ಎಫ್ ಜಾಗತಿಕ ಪ್ರಾರ್ಥನಾ ಸಮೂಹದ ಕಿರುಪುಸ್ತಕವನ್ನು ಓದಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
ಎಲ್ಲಾ ವೈಎಸ್ಎಸ್ ಆಶ್ರಮಗಳಲ್ಲಿರುವ ನಮ್ಮ ಸನ್ಯಾಸಿಗಳು ಅಗತ್ಯವಿರುವ ಎಲ್ಲರಿಗಾಗಿ ಆಳವಾಗಿ ಪ್ರಾರ್ಥಿಸುವುದನ್ನು ಮುಂದುವರಿಸಿದ್ದಾರೆ ಎಂದು ನಿಮಗೆ ನಾವು ಭರವಸೆ ನೀಡುತ್ತೇವೆ. ನಿಮಗಾಗಿ ಅಥವಾ ಇನ್ನೊಬ್ಬರಿಗಾಗಿ ನಾವು ಪ್ರಾರ್ಥಿಸಬೇಕೆಂದು ನೀವು ಬಯಸಿದರೆ, ಇಲ್ಲಿ ಒತ್ತಿ:

















