ವೈಎಸ್‌ಎಸ್‌ ಸನ್ಯಾಸಿಗಳು ನಡೆಸಿಕೊಡುವ ಧ್ಯಾನ ಕಾರ್ಯಕ್ರಮ
(ಪ್ರತಿ ಮಂಗಳವಾರ)

ಸಂಜೆ 6.10 ಕ್ಕೆ

– ಸಂಜೆ 7.30 ಕ್ಕೆ

(ಅಧಿಕೃತ ಭಾರತೀಯ ಕಾಲಮಾನ)

ಕಾರ್ಯಕ್ರಮದ ಬಗ್ಗೆ

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಕೇಂದ್ರಗಳ ಗುರಿ ಭಗವಂತನೊಡನೆ ಸಂಸರ್ಗವನ್ನು ಸಾಧಿಸುವುದೇ ಆಗಿದೆ. ಭಕ್ತಾದಿಗಳು ಭಗವಂತನ ಹೆಸರಿನಲ್ಲಿ ಒಂದೆಡೆ ಸೇರುವುದು ಭಗವಂತನಿಗೆ ಎಷ್ಟು ಸಂತೋಷವಾಗುತ್ತದೆ ಎಂಬುದು ನಿಮಗೆ ತಿಳಿದಿಲ್ಲ.

— ಪರಮಹಂಸ ಯೋಗಾನಂದ

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ (ವೈಎಸ್‌ಎಸ್‌) ಆನ್‌ಲೈನ್‌ ಧ್ಯಾನ ಕೇಂದ್ರವನ್ನು ವೈಎಸ್‌ಎಸ್‌/ಎಸ್‌ಆರ್‌ಎಫ್‌ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು 2021ರ ಜನವರಿ 31ರಂದು ಉದ್ಘಾಟಿಸಿದರು. ಅಂದಿನಿಂದಲೂ, ಅದು ಸಮೂಹ ಧ್ಯಾನದ ಅನುಗ್ರಹಗಳನ್ನು ಮನಗಾಣಲು, ಭಾರತ ಹಾಗೂ ಪ್ರಪಂಚದಾದ್ಯಂತ ಹಲವಾರು ಭಕ್ತಾದಿಗಳೊಂದಿಗೆ ಬಾಂಧವ್ಯವನ್ನು ಸ್ಥಾಪಿಸಿಕೊಳ್ಳಲು ಭಕ್ತಾದಿಗಳಿಗೆ ಒಂದು ಅವಕಾಶವನ್ನು ನೀಡುತ್ತಿದೆ.

ಮಂಗಳವಾರ ಸಂಜೆ ವೈಎಸ್‌ಎಸ್‌ ಸನ್ಯಾಸಿಗಳು ನಡೆಸಿಕೊಡುವ ಧ್ಯಾನ ಕಾರ್ಯಕ್ರಮದಲ್ಲಿ ನೀವು ಭಾಗಿಯಾಗಿ ಎಂದು ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ. ಈ ಕಾರ್ಯಕ್ರಮವು ಈಗಾಗಲೇ ರೆಕಾರ್ಡ್‌ ಆದ ಚೈತನ್ಯದಾಯಕ ವ್ಯಾಯಾಮಗಳೊಂದಿಗೆ ಆರಂಭವಾಗುತ್ತದೆ, ನಂತರ ವೈಎಸ್‌ಎಸ್‌ ಸನ್ಯಾಸಿಯವರ ಮಾರ್ಗದರ್ಶಿತ ಧ್ಯಾನವಿರುತ್ತದೆ.

ಧ್ಯಾನದ ಅವಧಿಯು ಪ್ರಾರಂಭದ ಪ್ರಾರ್ಥನೆ, ಓದುವುದು ಮತ್ತು ಭಜನೆಯೊಂದಿಗೆ ಆರಂಭವಾಗುತ್ತದೆ. ನಂತರ ಮಾರ್ಗದರ್ಶಿತ ಧ್ಯಾನದ ಅವಧಿಯಿರುತ್ತದೆ ಮತ್ತು ಪರಮಹಂಸ ಯೋಗಾನಂದಜೀಯವರ ಉಪಶಮನದಾಯಕ ತಂತ್ರ ಹಾಗೂ ಮುಕ್ತಾಯದ ಪ್ರಾರ್ಥನೆಯೊಂದಿಗೆ ಮುಗಿಯುತ್ತದೆ.

ಕಾರ್ಯಕ್ರಮದ ವಿವರ

ಪ್ರತಿ ತಿಂಗಳ ಮೊದಲನೆ, ಮೂರನೇ ಹಾಗೂ ಐದನೇ (ಇದ್ದಲ್ಲಿ) ಮಂಗಳವಾರದಂದು

ಇಂಗ್ಲಿಷ್‌

ಸಂಜೆ 6.10 ರಿಂದ 7.30 ರವರೆಗೆ

ಪ್ರತಿ ತಿಂಗಳ ಎರಡನೇ ಹಾಗೂ ನಾಲ್ಕನೇ ಮಂಗಳವಾರದಂದು

ಹಿಂದಿ

ಸಂಜೆ 6.10 ರಿಂದ 7.30 ರವರೆಗೆ

ಈ ಧ್ಯಾನಗಳಲ್ಲಿ ಭಾಗಿಯಾಗಲು ದಯವಿಟ್ಟು ಕೆಳಗೆ ನೀಡಿರುವ ಯೂಟ್ಯೂಬ್ ಲಿಂಕ್ ಮೇಲೆ ಒತ್ತಿ.

ದಯವಿಟ್ಟು ಗಮನಿಸಿ: 

  1. ಈ ಧ್ಯಾನಗಳನ್ನು ಸದ್ಯಕ್ಕೆ ಕೇವಲ ಯೂಟ್ಯೂಬ್ ಮೇಲೆ ಮಾತ್ರ ನೇರಪ್ರಸಾರ ಮಾಡಲಾಗುತ್ತಿದೆ.
  2. ಈ ಧ್ಯಾನಗಳ ಮುದ್ರಿತ ಕಾರ್ಯಕ್ರಮಗಳು ನೇರ ಪ್ರಸಾರವಾದ ನಂತರ ಬುಧವಾರ ಸಂಜೆ 6.00 ಘಂಟೆಯವರೆಗೂ (ಭಾರತೀಯ ಕಾಲಮಾನ), ಅಂದರೆ 24 ಘಂಟೆಗಳ ಕಾಲ ಯುಟ್ಯೂಬ್‌ನಲ್ಲಿ ಲಭ್ಯವಿರುತ್ತದೆ.
  3. ಸನ್ಯಾಸಿಗಳು ನಡೆಸಿಕೊಡುವ ವಿಶೇಷ ಕಾರ್ಯಕ್ರಮಗಳಿದ್ದಲ್ಲಿ, ಆ ದಿನಗಳಲ್ಲಿ ಈ ಆನ್‌ಲೈನ್‌ ಧ್ಯಾನದ ಕಾರ್ಯಕ್ರಮಗಳನ್ನು ನಡೆಸಲಾಗುವುದಿಲ್ಲ.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ