2014 ರ ಕೊನೆಯಲ್ಲಿ ನಮ್ಮ ಗುರುಗಳ ಜೀವನ ಮತ್ತು ಕಾರ್ಯದ ಕುರಿತು ಕೌಂಟರ್‌ಪಾಯಿಂಟ್ ಫಿಲ್ಮ್ಸ್‌ನ ಸಾಕ್ಷ್ಯಚಿತ್ರ – ಅವೇಕ್: ದಿ ಲೈಫ್ ಆಫ್ ಯೋಗಾನಂದ ಇದರ ಪೂರ್ವಯೋಜಿತ ಪ್ರದರ್ಶನದ ಬಿಡುಗಡೆಯ ರೋಚಕ ಸುದ್ದಿಯನ್ನು ಕಳೆದ ತಿಂಗಳು ನಾವು ನಿಮ್ಮೊಂದಿಗೆ ಹಂಚಿಕೊಂಡಿದ್ದೆವು. ವಿಶ್ವ ಚಲನಚಿತ್ರೋತ್ಸವದಲ್ಲಿ ಈ ಚಲನಚಿತ್ರದ ಪ್ರಥಮ ಪ್ರದರ್ಶನವು ಈ ತಿಂಗಳ ಕೊನೆಯಲ್ಲಿ ಸಿಯಾಟಲ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (ಎಸ್‌ಐಎಫ್‌ಎಫ್)ನಲ್ಲಿ ನಡೆಯಲಿದೆ ಎಂದು ನಿಮಗೆ ತಿಳಿಸಲು ನಾವು ಹರ್ಷಿಸುತ್ತೇವೆ.
ಅಮೆರಿಕದಲ್ಲಿ ಬಹುಜನರಿಂದ ಭಾಗವಹಿಸಲ್ಪಡುವ ಚಲನಚಿತ್ರೋತ್ಸವಗಳಲ್ಲಿ ಒಂದಾದ ಎಸ್‌ಐಎಫ್‌ಎಫ್, ಭಾನುವಾರ ಮೇ 18 ರಂದು ಸಂಜೆ 6:30 ಕ್ಕೆ ಮತ್ತು ಪುನಃ ಸೋಮವಾರ, ಮೇ 19 ರಂದು ಸಂಜೆ 7.೦೦ ಗಂಟೆಗೆ ಈ ಚಲನಚಿತ್ರವನ್ನು ಪ್ರದರ್ಶಿಸುತ್ತದೆ.
ಈ ಹಿಂದೆ ವರದಿ ಮಾಡಿದಂತೆ , ಅರಿಝೋನಾದ ಸೆಡೋನಾದಲ್ಲಿ ಇಲ್ಯುಮಿನೇಟ್ ಫಿಲ್ಮ್ ಫೆಸ್ಟಿವಲ್ – ಜಾಗೃತ ಸಿನಿಮಾಗಳಿಗೆ ವೇದಿಕೆ – ಅವೇಕ್ ಅನ್ನು ತನ್ನ ಸಾಕ್ಷ್ಯಚಿತ್ರಗಳ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿ ಆಯ್ಕೆ ಮಾಡಿದೆ. ಈ ಚಲನಚಿತ್ರವು ಶುಕ್ರವಾರ, ಮೇ 30 ರಂದು ಪ್ರದರ್ಶನಗೊಳ್ಳಲಿದೆ. ಭಾನುವಾರ ಜೂನ್ 1 ರಂದು ಎರಡನೇ ಪ್ರದರ್ಶನವನ್ನೂ ನಿಗದಿಪಡಿಸಬಹುದು. ಪ್ರದರ್ಶನದ ನಂತರ ಚಿತ್ರನಿರ್ಮಾಪಕರೊಂದಿಗೆ ಪ್ರಶ್ನೋತ್ತರ ಅವಧಿ ಇರುತ್ತದೆ.
ಸಾರ್ವಜನಿಕರಿಗೆ ಉತ್ಸವದ ಪ್ರದರ್ಶನಗಳಲ್ಲಿ ಭಾಗವಹಿಸಲು ಟಿಕೆಟ್‌ಗಳು ಲಭ್ಯವಿರುತ್ತವೆ. ಚಿತ್ರದ ಬಗ್ಗೆ, ಅದನ್ನು ಬಾಡಿಗೆ ಪಡೆಯುವುದು ಅಥವಾ ಖರೀದಿಸುವುದು, ಹಾಗೂ ಇತರೆ ಸಂಬಂಧಿತ ಮಾಹಿತಿಗಳನ್ನು ತಿಳಿದುಕೊಳ್ಳಲು, ದಯವಿಟ್ಟು ಇಲ್ಲಿ ಒತ್ತಿ.

















