ಪರಮಹಂಸ ಯೋಗಾನಂದರ ಕ್ರಿಯಾ ಯೋಗ ಬೋಧನೆಗಳು
ಕ್ರಿಯಾ ಯೋಗದ ಪವಿತ್ರ ವಿಜ್ಞಾನವು ಧ್ಯಾನದ ಸುಧಾರಿತ ತಂತ್ರಗಳನ್ನು ಒಳಗೊಂಡಿದೆ, ಅದರ ಶ್ರದ್ಧೆಯಿಂದೊಡಗೂಡಿದ ಅಭ್ಯಾಸವು ದೈವ ಸಾಕ್ಷಾತ್ಕಾರಕ್ಕೆ ಮತ್ತು ಆತ್ಮದ ಸಕಲ ರೀತಿಯ ಬಂಧ ವಿಮೋಚನೆಗೆ ಕಾರಣವಾಗುತ್ತದೆ. ಇದು ದೈವೀ ಐಕ್ಯತೆಗೆ ಇರುವ ಯೋಗದ ರಾಜಮಾರ್ಗ ಅಥವಾ ಸರ್ವೋಚ್ಚ ತಂತ್ರವಾಗಿದೆ.