ಯೋಗದಾ ಸತ್ಸಂಗ ನಿಯತಕಾಲಿಕೆಗೆ ಒಂದು ಹೊಸ ಆಯಾಮ

16 ಸೆಪ್ಟೆಂಬರ್, 2021

ಪರಮಹಂಸ ಯೋಗಾನಂದಜಿಯವರು ಮೊದಲು ಸೆಲ್ಫ್-ರಿಯಲೈಝೇಶನ್ (ಯೋಗದಾ ಸತ್ಸಂಗ) ನಿಯತಕಾಲಿಕೆಯನ್ನು, 1925ರಲ್ಲಿ ಅಮೆರಿಕಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ತರಗತಿಗಳಿಂದ ನಿಯಮಿತ ಸಂಪರ್ಕ ನೀಡುವ ಸಾಧನವಾಗಿ, ಪರಿಚಯಿಸಿದಾಗ, ಅವರು ತಿಳಿಸಿದರು, “ನಾನು ಈ ಪತ್ರಿಕೆಯ ಅಂಕಣಗಳ ಮೂಲಕ ಮಾತನಾಡುವೆನು.” ಸುಮಾರು ಒಂದು ಶತಮಾನ ಮುಗಿಯುವುದರಲ್ಲಿ, ಆಧ್ಯಾತ್ಮ ಜೀವನದ, ಈ ನಿಯತಕಾಲಿಕೆಯು, ತಮ್ಮ ಗುರುಗಳ ಸಂಕಲ್ಪದಂತೆ ಕಾಲಾತೀತ ಶಾಶ್ವತ ಸತ್ಯಗಳನ್ನು ವಿಶ್ವದಾದ್ಯಂತ ಪಸರಿಸಲು ನಿಯಮಿಸಲ್ಪಟ್ಟು, ಅವರು ಅವುಗಳನ್ನು ಓದುಗರಿಗೆ ಪರಿಚಯಿಸಿ, ಯೋಗದ ಸಮಯ ಪರೀಕ್ಷಿತ ತತ್ವಗಳನ್ನು ಅಭ್ಯಾಸ ಮಾಡಿ ಮತ್ತು ಯೋಗದ ತಂತ್ರಗಳಿಂದ ತಮ್ಮ ಜೀವನಗಳನ್ನು ಪರಿವರ್ತಿಸಿಕೊಂಡು, ಭಗವಂತನೊಡನೆ ನೇರ ವೈಯಕ್ತಿಕ ಅನುಭವವನ್ನು ಪಡೆಯಬಹುದು, ಎಂಬುದನ್ನು ಅರ್ಥ ಮಾಡಿಕೊಳ್ಳಲು, ಸಾವಿರಾರು ಜನರಿಗೆ ಸಹಾಯ ಮಾಡಿರುವರು.

ಭವಿಷ್ಯವನ್ನು ಕಾಣುತ್ತಾ, ನಾವು ಯೋಗದಾ ಸತ್ಸಂಗ ನಿಯತಕಾಲಿಕೆಯ ವಿಕಸನದಲ್ಲಿ ಮುಂದಿನ ಹಂತದ ಯೋಜನೆಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇವೆ. ಇವುಗಳು ನಮ್ಮ ಗುರುಗಳ ಕ್ರಿಯಾಯೋಗ ಬೋಧನೆಗಳ ಪ್ರಸಾರದಲ್ಲಿ ಇತ್ತೀಚಿನ ಮೈಲುಗಲ್ಲುಗಳ ಜೊತೆಯಲ್ಲಿ ನೇರವಾದ ಸಂಬಂಧವನ್ನು ಹೊಂದಿರುತ್ತವೆ. ನಿಮಗೆ ತಿಳಿದಿರುವಂತೆ, 2019ರಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾವು ವೈಎಸ್ಎಸ್ ಪಾಠಮಾಲಿಕೆಯ ಸಂಪೂರ್ಣ ಮತ್ತು ವರ್ಧಿತ ಆವೃತ್ತಿಯನ್ನು ಪ್ರಾರಂಭಿಸಿತು. ಅವುಗಳಲ್ಲಿ ಪರಮಹಂಸಜಿಯವರ ಅತ್ಯಂತ ಆಳವಾದ ಬೋಧನೆಗಳು ಮತ್ತು ತಂತ್ರಗಳನ್ನು, ಯಾವತ್ತೂ ಪ್ರಕಟಿಸಲಾದ, 30 ವರ್ಷಗಳಿಗಿಂತಲೂ ಹೆಚ್ಚಾದ ಬರವಣಿಗೆಗಳು, ಪ್ರವಚನಗಳು ಮತ್ತು ಭಕ್ತರಿಗೆ ನೀಡಿದ ವೈಯಕ್ತಿಕ ಸೂಚನೆಗಳಿಂದ ವಿಸ್ತಾರವಾಗಿ ತೆಗೆದುಕೊಳ್ಳಲಾಗಿದೆ. ಪಾಠಗಳ ಮೂಲ ಸರಣಿಯ ಬಿಡುಗಡೆಯ ನಂತರ, ಹೊಸದಾದ ಕ್ರಿಯಾಯೋಗ ಸರಣಿಯನ್ನು ಪ್ರಾರಂಭಿಸಲಾಯಿತು. ನಂತರ, ಪೂರಕ ಪಾಠ ಮಾಲಿಕೆಯಲ್ಲಿ ಹೆಚ್ಚು ಪ್ರಮುಖ ವಿಷಯಗಳಲ್ಲಿ ವಿವರಣೆ ಹೊಂದಿದ್ದು, ಇನ್ನೂ ಹಲವಾರು ವರ್ಷಗಳು ಮುಂದುವರೆಯುತ್ತವೆ. ಅತಿ ಶೀಘ್ರದಲ್ಲೇ, ನಾವು ಮುಂದುವರೆದ ಪಾಠಗಳನ್ನು (ಕ್ರಿಯಾಬಾನ್‌ಗಳಿಗೆ ಮಾತ್ರ ಲಭ್ಯ) ಮತ್ತು ವಾರಕ್ಕೊಮ್ಮೆ ಪರಮಹಂಸ ಯೋಗಾನಂದರೊಡನೆ ಸತ್ಸಂಗ ಸರಣಿಯಲ್ಲಿ, ವೈಎಸ್ಎಸ್ ಪಾಠ ಮಾಲಿಕೆಯ ವಿದ್ಯಾರ್ಥಿಗಳಿಗೆ, ಹೆಚ್ಚುವರಿಯಾದ ಜೀವಮಾನದ ಮೂಲ ಮಾರ್ಗದರ್ಶನ ಹಾಗೂ ಸೂಚನೆಗಳನ್ನು ಒದಗಿಸಲಾಗುವುದು.

ಹೊಸ ವೈಎಸ್‌ಎಸ್ ಪಾಠಮಾಲಿಕೆ ಮತ್ತು ನಮ್ಮ ಆನ್ ಲೈನ್ ಕಾರ್ಯಕ್ರಮಗಳ ಬಗ್ಗೆ, ಸಾವಿರಾರು ಅನ್ವೇಷಕರ ಪ್ರತಿಕ್ರಿಯೆ — ವೈಎಸ್ಎಸ್ ವಿದ್ಯಾರ್ಥಿಗಳು ಮತ್ತು ವೈಎಸ್ಎಸ್ ಅನ್ನು ಮೊದಲ ಬಾರಿಗೆ ಕಂಡುಕೊಂಡವರು — ಅತ್ಯಂತ ಧನಾತ್ಮಕವಾಗಿದ್ದು, ಪರಮಹಂಸಜಿಯವರ ಬೋಧನೆಗಳ ಪರಿವರ್ತನಾಶೀಲ ಶಕ್ತಿ ಹಾಗೂ ಇಂದಿನ ಪ್ರಪಂಚದ ಸರ್ವತ್ರ ಸವಾಲುಗಳಿಗೆ ಅವರ ಸಕಾಲಿಕ ಪ್ರಸ್ತುತತೆಯ ಸಹಿತ ದೃಢೀಕರಣ ಹೊಂದಿವೆ. ಅನೇಕರು ಅನಿಸಿಕೆಗಳನ್ನು ವ್ಯಕ್ತಪಡಿಸಿರುವರು, ಈ ಒಂದು ವಿಶಾಲ ಕೊಡುಗೆಗಳ ವಿಸ್ತೃತ ವ್ಯಾಪ್ತಿಯು ವೈಎಸ್ಎಸ್ ಮತ್ತು ಎಸ್ಆರ್‌ಎಫ್‌ಗಳಿಗಾಗಿ, ನಮ್ಮ ಗುರುಗಳು ಕಲ್ಪಿಸಿಕೊಂಡ ಜಾಗತಿಕ ಆಧ್ಯಾತ್ಮಿಕ ಸಮುದಾಯವನ್ನು, ಅತ್ಯುನ್ನತ ರೀತಿಯಲ್ಲಿ ಅನುಭವಿಸಲು ಸಹಾಯ ಮಾಡಿದೆ.

ಈ ಎಲ್ಲಾ ಕಾರ್ಯಕ್ರಮಗಳ ಮೂಲಕ 1925ರಲ್ಲಿ, ನಮ್ಮ ನಿಯತಕಾಲಿಕೆಯ ಪ್ರಥಮ ಪತ್ರಿಕೆಯ ಪ್ರಕಟಣೆಯಿಂದ, ಸಾಧಾರಣವಾಗಿ ಆರಂಭಗೊಂಡ ಸ್ಪೂರ್ತಿಯು, ಆಳವಾಗಿ (ಅತಿ ಹೆಚ್ಚಾಗಿ) ಬೆಳೆದು ಪರಮಹಂಸಜಿಯವರ ಬೋಧನೆಗಳ ವಿವೇಕ ಮತ್ತು ಸ್ಪೂರ್ತಿಯು, ಅನ್ವೇಷಕರಿಗೆ ಅಭೂತಪೂರ್ವ ಪ್ರಮಾಣದಲ್ಲಿ, ಅವರು ನಿಯತಕಾಲಿಕೆಯನ್ನು ಪ್ರಾರಂಭಿಸಿದಾಗ ಸಾಧ್ಯವಾಗಬಹುದಾಗಿದ್ದುದಕ್ಕಿಂತಲೂ ಅತ್ಯಂತ ಸುಲಭ ಸಾಧ್ಯವಾಗಿಸಿದೆ.

ಯೋಗದಾ ಸತ್ಸಂಗ ನಿಯತಕಾಲಿಕೆಯ ಒಂದು ಹೊಸ ವಾರ್ಷಿಕ ಮುದ್ರಿತ ಪತ್ರಿಕೆ

ನಮ್ಮ ಗುರುಗಳ ಬೋಧನೆಗಳ ಇತ್ತೀಚಿನ ವಿಸ್ತೃತ ಪ್ರಸ್ತುತಿಗಳ ಸಂಬಂಧದಲ್ಲಿ, ನಾವು ಒಂದು ದೃಷ್ಟಿಯನ್ನು ಹರಿಸೋಣ. ಯಾವ ರೀತಿ ಯೋಗದಾ ಸತ್ಸಂಗ ನಿಯತಕಾಲಿಕೆಯು ವೈಎಸ್ಎಸ್ ಪಾಠ ಮಾಲಿಕೆ ಮತ್ತು ನಮ್ಮ ಆನ್ ಲೈನ್ ಕೊಡುಗೆಗಳ ರಚನೆಗಳಿಗೆ ಕೈಜೋಡಿಸುತ್ತಾ ತನ್ನ ಪಾತ್ರವನ್ನು ಸಫಲಗೊಳಿಸಲು, ಉತ್ತಮವಾಗಿ ಹೇಗೆ ಮುಂದುವರೆಯಬಹುದು ಎಂಬುದನ್ನು ನೋಡೋಣ. ನಿಮ್ಮಲ್ಲಿ ಹೆಚ್ಚಿನವರು ತಿಳಿದಿರುವಂತೆ, ಈ ಹಿಂದಿನ ಒಂದೆರಡು ಶತಮಾನಗಳಲ್ಲಿ ನಮ್ಮ ಪ್ರಪಂಚವು ಸುದ್ದಿ, ಸಮಾಚಾರ ಮತ್ತು ಸೂಚನೆಗಳಲ್ಲಿ ಬೃಹತ್‌ ಬದಲಾವಣೆಗಳನ್ನು ಹೊಂದಿ, ಪ್ರಕಟಗೊಂಡು ಜಗತ್ತಿನಾದ್ಯಂತ ಪ್ರೇಕ್ಷಕರಲ್ಲಿ ವಿತರಿಸಲಾಗಿರುತ್ತದೆ. ನಿಯತಕಾಲಿಕೆಗಳು, ವಾರ್ತಾ ಪತ್ರಿಕೆಗಳು, ಮತ್ತು ಇತರ ಮುದ್ರಿತ ಮಾಧ್ಯಮಗಳು, ಪರಿಣಾಮಕಾರಿಯಾಗಿ ತಲುಪುತ್ತಿಲ್ಲ. ಆದರೆ, ವೆಬ್ ಸೈಟ್ ಗಳು, ಆನ್ ಲೈನ್ ವೀಡಿಯೋ ಮತ್ತಿತರ ಡಿಜಿಟಲ್ ಮಾಧ್ಯಮಗಳು, ಹಿಂದೆಂದಿಗಿಂತಲೂ, ವಿಶೇಷ ರೀತಿಯ ವಿಷಯಗಳನ್ನು ಹಂಚಿಕೊಳ್ಳಲು, ಅತಿ ಹೆಚ್ಚಾದ ಅವಕಾಶಗಳನ್ನು ತೆರೆದಿವೆ. ಈಗ, ಮೇಲೆ ಹೇಳಿದಂತೆ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ, ವಿಕಸನ ಹೊಂದಿ ಅನೇಕ ವಿಧಗಳಿಂದ ಪ್ರಯೋಜನಗಳಿಸಿದೆ. ಇದು ನಮಗೆ ಈ ನಿಯತಕಾಲಿಕೆಗಾಗಿ ಯೋಜನೆಗಳನ್ನು ತರುತ್ತದೆ.

ಆರಂಭದಲ್ಲೇ, ನಾವು ಮುದ್ರಿತ ನಿಯತಕಾಲಿಕೆಯ ಆವರ್ತನಗಳನ್ನು ಕಡಿತಗೊಳಿಸಿ, ಸ್ಪೂರ್ತಿದಾಯಕ ಮಲ್ಟಿಮೀಡಿಯ ವಿಷಯಗಳ ನಮ್ಮ ಆನ್ ಲೈನ್ ಕೊಡುಗೆಗಳ ವಿಸ್ತರಣೆಯನ್ನು ಮುಂದುವರೆಸುತ್ತೇವೆ. “ಯೋಗದಾ ಸತ್ಸಂಗ ಮ್ಯಾಗಝಿನ್” ಎಂಬ ವೈಎಸ್‌ಎಸ್ ವೆಬ್ ಸೈಟ್‌ನ ವಿಶೇಷ ವಿಭಾಗವನ್ನು ಸೃಷ್ಟಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ. ಅದರ ಜೊತೆಯಲ್ಲಿ, ಮುಂದಿನ ವರ್ಷದ ಆರಂಭದಲ್ಲಿಯೇ, ಒಂದು ವಿಶೇಷವಾದ ಯೋಗದಾ ಸತ್ಸಂಗದ ದೊಡ್ಡ ಸ್ವರೂಪದ ಮುದ್ರಿತ ಪತ್ರಿಕೆಯು, ವಾರ್ಷಿಕವಾಗಿ ಪ್ರತಿವರ್ಷದ ಆರಂಭದಲ್ಲಿ, ಈಗ ಇರುವ ತ್ರೈಮಾಸಿಕ ಪತ್ರಿಕೆಗಳ ಬದಲಾಗಿ, ಪ್ರಕಟಗೊಳ್ಳುತ್ತದೆ. ಯೋಗದಾ ಸತ್ಸಂಗ ನಿಯತಕಾಲಿಕೆಯ ಈ ವಾರ್ಷಿಕ ಮುದ್ರಿತ ಪತ್ರಿಕೆಗಳು, ಈ ಹಿಂದೆ ಪ್ರಕಟವಾಗದೆ ಇರುವ ಪರಮ ಹಂಸ ಯೋಗಾನಂದರ ಸ್ಪೂರ್ತಿದಾಯಕ, ಹಾಗೂ ಇಂದಿನ ಮತ್ತು ಹಿಂದಿನ ವೈಎಸ್ಎಸ್/ಎಸ್ಆರ್‌ಎಫ್‌ ಅಧ್ಯಕ್ಷರ ಲೇಖನಗಳನ್ನು ಒಳಗೊಂಡಿರುತ್ತದೆ. ಇದರ ಜೊತೆಯಲ್ಲಿ, ಇತರ ಲೇಖಕರ ಲೇಖನಗಳು, ಸ್ಪೂರ್ತಿದಾಯಕ ಹಾಗೂ ಬದುಕುವುದು-ಹೇಗೆ ಪ್ರಾಯೋಗಿಕ ಮಾರ್ಗದರ್ಶನದ ವಿಸ್ತೃತ ಕೊಡುಗೆಯನ್ನು ನೀಡುತ್ತವೆ. ಮತ್ತು ವರ್ಷದಲ್ಲಿನ ಗಮನಾರ್ಹ ವೈಎಸ್ಎಸ್ ಕಾರ್ಯಕ್ರಮಗಳ ಬಗ್ಗೆಯೂ ಸುದ್ದಿಯ ವ್ಯಾಪ್ತಿ ಇರುತ್ತದೆ.

ನಮ್ಮ ಓದುಗರು ಈ ವಿಶೇಷವಾದ ವಾರ್ಷಿಕ ಪತ್ರಿಕೆಗಳಿಗಾಗಿ, ಕಾತರದಿಂದ ಕಾಯುತ್ತಿರುತ್ತಾರೆ ಎಂದು ನಾವು ನಂಬಿರುತ್ತೇವೆ; ಅದೇ ಸಮಯದಲ್ಲಿ, ಈ ಬದಲಾವಣೆಯು ವೈಎಸ್ಎಸ್ ಪಾಠಮಾಲಿಕೆಯ ವಿದ್ಯಾರ್ಥಿಗಳು, ಮತ್ತೂ ಹೆಚ್ಚಾಗಿ ಕೇಂದ್ರೀಕರಿಸಲು ಮತ್ತು ಈಗ ಪೂರಕ ಪಾಠಗಳ ಮತ್ತು ಇತರ ಪಾಠ ಮಾಲಿಕೆಯ ಸರಣಿಯಲ್ಲಿ, ಅದರಲ್ಲಿ ಅತಿ ಹೆಚ್ಚು ಇದುವರೆಗೆ ಎಂದಿಗೂ ಪ್ರಕಟವಾಗಿಲ್ಲದಿರುವುದು – ಅವುಗಳಿಗಾಗಿ ಅತಿ ಹೆಚ್ಚು ಸಮಯ ಕೊಡಲು ಮತ್ತು ಅವುಗಳ ಅತ್ಯಮೂಲ್ಯ ಸಾರಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದು. (ವೈಎಸ್ಎಸ್ ಪಾಠ ಮಾಲಿಕೆಯ ಬಗ್ಗೆ ಮತ್ತಷ್ಟು ಕಂಡುಕೊಳ್ಳಿರಿ) ಈ ನಾಲ್ಕು ತ್ರೈಮಾಸಿಕ ಪತ್ರಿಕೆಗಳ ಬದಲಾಗಿ, ಒಂದು ವಾರ್ಷಿಕ ಪತ್ರಿಕೆಯ ವೇಳಾಪಟ್ಟಿಯು ಮುಂದಿನ 2-3 ವರ್ಷಗಳು ಜಾರಿಯಲ್ಲಿರುತ್ತವೆ. ತದನಂತರ, ನಾವು ಮುಂದಿನ ವರ್ಷಗಳಿಗಾಗಿ, ನಿಯತಕಾಲಿಕೆಯ ಪಾತ್ರತೆಯನ್ನು, ಪುನಃ ಮರು ಮೌಲ್ಯಮಾಪನ ಮಾಡುತ್ತೇವೆ.

2022ರ ವಾರ್ಷಿಕ ಪತ್ರಿಕೆಯು, ಜನವರಿ 2022ರಲ್ಲಿ ಪ್ರಕಟವಾಗಬೇಕಾಗಿದ್ದು, ಮೊದಲ ಮುದ್ರಿತ ಪತ್ರಿಕೆಯಾಗಿರುತ್ತದೆ. ಇದೇ ಸಮಯದಲ್ಲಿ, ನಾವು ಓದುಗರು ಹೊಸದಾದ ಯೋಗದಾ ಸತ್ಸಂಗ ಆನ್‌ಲೈನ್ ವೆಬ್‌ಪೇಜ್ ಅನ್ನು ಆನಂದಿಸಲು ಆಹ್ವಾನಿಸುತ್ತೇವೆ. ಈ ಕೆಳಗಿನ ವಿಷಯಗಳು ಅದರಲ್ಲಿ ಇರುತ್ತವೆ:

  • ನಮ್ಮ ವೆಬ್‌ಸೈಟ್ ನಲ್ಲಿ, ಬೇರೆಡೆಯಲ್ಲಿ ಪ್ರಕಟವಾದ ವಿಷಯಗಳ ಲಿಂಕ್‌ಗಳ ಸಂಗ್ರಹಿಸಲಾದ ಪಟ್ಟಿ, ಹಿಂದಿನ ಮುದ್ರಿತ ಪತ್ರಿಕೆಗಳಲ್ಲಿನ ವಿಷಯಗಳು, ಬ್ಲಾಗ್ ಬರಹಗಳು, ವೈಎಸ್‌ಎಸ್ ಸುದ್ದಿಗಳು, ಇತ್ಯಾದಿ.
  • ಎಲ್ಲಾ ಆನ್‌ಲೈನ್ ಸೇವೆಗಳು, ಪ್ರವಚನಗಳು ಮತ್ತು ಮಾರ್ಗದರ್ಶಿತ ಧ್ಯಾನಗಳ ಗ್ರಂಥಾಲಯಕ್ಕೆ-ಸುಲಭ ಪ್ರವೇಶ.
  • ವಾರ್ಷಿಕ ಮುದ್ರಿತ ಪತ್ರಿಕೆಯ (ಅದು ಲಭ್ಯವಾಗುವಾಗ) ಡಿಜಿಟಲ್ ಆವೃತ್ತಿ.

ನೀವು ಇ-ಮೇಲ್ ಮೂಲಕ, ವೈಎಸ್ಎಸ್‌ನ ಮಾಸಿಕ ವಾರ್ತಾ ಪತ್ರಿಕೆಗಳನ್ನು ಪಡೆಯಲು ಚಂದಾದಾರಾಗದಿದ್ದಲ್ಲಿ, ನೀವು ಈಗ ಮಾಡಬಹುದೆಂದು ಪ್ರೋತ್ಸಾಹಿಸುತ್ತೇವೆ. ಅದಕ್ಕಾಗಿ ಸಂದರ್ಶಿಸಿ: yssofindia.org/enewsletter. ಅತಿ ಹೆಚ್ಚು, ಹೊಸ ಸ್ಪೂರ್ತಿದಾಯಕ ವಿಷಯಗಳು, ವಿಶ್ವದಾದ್ಯಂತ ಸಾವಿರಾರು ಜನರಿಗೆ ಕಳುಹಿಸುವ ಪ್ರತಿಯೊಂದು ಆವೃತ್ತಿಯಲ್ಲಿಯೂ ಇರುತ್ತವೆ.

ಈ ವರ್ಷದ ಅಂತ್ಯದಲ್ಲಿ, ನಾವು ನಿಯತಕಾಲಿಕೆಯ ಹಿಂದಿನ ಪತ್ರಿಕೆಗಳಿಂದ ಆಯ್ಕೆ ಮಾಡಿದ, ಅನೇಕ ವರ್ಷಗಳ ಆಯ್ದ ಸ್ಪೂರ್ತಿ ದಾಯಕ ವಿಷಯಗಳನ್ನು ಹೊಂದಿರುವ, ಒಂದು ವಿಶೇಷವಾದ ಆನ್ ಲೈನ್ ಗ್ರಂಥಾಲಯವನ್ನು ಪ್ರಾರಂಭಿಸುತ್ತಿದ್ದೇವೆ. ಅದರಲ್ಲಿ, ಪರಮಹಂಸಜಿಯವರ, ಶ್ರೀ ದಯಾಮಾತಾ ಮತ್ತು ಇತರ ಮೆಚ್ಚಿನ ಲೇಖಕರ, ನೂರಾರು ಪುಟಗಳ ವಿಷಯಗಳು ಇರುತ್ತವೆ. ಅವರ ನುಡಿಗಳನ್ನು, ಹಿಂದಿನ ಯೋಗದಾ ಸತ್ಸಂಗ ನಿಯತಕಾಲಿಕೆಯ ಓದುಗರು ಉತ್ಸಾಹದಿಂದ ಗೃಹಿಸಿಕೊಂಡಿರುವರು. ಜೊತೆಯಲ್ಲಿ, ಅಪರೂಪದ ಫೋಟೋಗಳು ಮತ್ತು ವೈಎಸ್ಎಸ್ ಸುದ್ದಿಗಳು (ಈಗ ವೈಎಸ್ಎಸ್ ಇತಿಹಾಸ!) ಈ ಅಸಾಧಾರಣ ಜ್ಞಾನ ಸಂಪನ್ಮೂಲಗಳು, ವೈಎಸ್ಎಸ್ ವೆಬ್‌ಸೈಟ್‌ನಲ್ಲಿ ನೆಲೆಗೊಳ್ಳುತ್ತವೆ. ಮತ್ತು ವಾರ್ಷಿಕ ಮುದ್ರಿತ ಆವೃತ್ತಿಯನ್ನು ಒಪ್ಪುವವರಿಗೆ, ಎಲ್ಲರಿಗೂ ಪ್ರವೇಶಿಸಲು ಅವಕಾಶ ಒದಗಿಸುತ್ತದೆ.

ಶೀಘ್ರದಲ್ಲೇ, ನಾವು ನಮ್ಮ ಯೋಗದಾ ಸತ್ಸಂಗ ನಿಯತಕಾಲಿಕೆಯ ವೆಬ್‌ಪೇಜ್‌ನಲ್ಲಿ, ಅತಿ ಹೆಚ್ಚು ಮಾಹಿತಿಯನ್ನು ಯಾವ ರೀತಿ ಯೋಗದಾ ಸತ್ಸಂಗಕ್ಕೆ ಚಂದಾದಾರರಾಗಿ, ವಾರ್ಷಿಕ ಮುದ್ರಿತ ಪತ್ರಿಕೆಯನ್ನು (ಅದು ಡಿಜಿಟಲ್ ಸ್ವರೂಪದಲ್ಲಿಯೂ ಲಭ್ಯ) ಪಡೆಯಬಹುದು ಮತ್ತು ಆನ್‌ಲೈನ್ ಗ್ರಂಥಾಲಯದಲ್ಲಿ, ನಿಯತಕಾಲಿಕೆಯ ಹಿಂದಿನ ಲೇಖನಗಳಿಗೆ ಯಾವ ರೀತಿ ಪ್ರವೇಶ ಪಡೆಯಬಹುದು, ಎಂಬುದರ ಬಗ್ಗೆಯೂ ತಿಳಿಸುತ್ತೇವೆ. ಅದೇ ಸಮಯದಲ್ಲಿ, ನೀವು ನಿಯತಕಾಲಿಕೆಯ ಪುಟದಲ್ಲಿ, ಅನೇಕ ಉಚಿತ ಲೇಖನಗಳಿಗೆ ಪ್ರವೇಶ ಪಡೆಯಬಹುದು. ಮತ್ತು ನೀವು ಖರೀದಿಸಲು ಇಷ್ಟಪಟ್ಟಲ್ಲಿ, ನಿಯತಕಾಲಿಕೆಯ ಹಿಂದಿನ ಮುದ್ರಿತ ಪತ್ರಿಕೆಗಳು, ಈ ಕೆಳಗೆ ಕೊಟ್ಟಿರುವ ಲಿಂಕ್‌ನಲ್ಲಿ ನಮ್ಮ ಪುಸ್ತಕ ಮಳಿಗೆಯಿಂದ ಪಡೆಯಬಹುದು. ಈ ಪಯಣದಲ್ಲಿ ನಿಮ್ಮೊಡನೆ ಮುಂದುವರೆಯಲು ನಿರೀಕ್ಷಿಸುತ್ತೇವೆ. ನೀವು ಹೊಸದಾಗಿ ಅಥವಾ — ಮೊದಲ ಬಾರಿಗೆ — ಆನಂದಿಸುತ್ತಿದ್ದಲ್ಲಿ, ಈ ವಿಚಾರ ಪೂರ್ಣ ಪತ್ರಿಕೆಯು, ಭಾರತದ ಆಧ್ಯಾತ್ಮಿಕ ಜ್ಞಾನವನ್ನು ಮತ್ತು ಪರಮಹಂಸ ಯೋಗಾನಂದರ ವೈಶಿಷ್ಟ್ಯಪೂರ್ಣ ಧ್ವನಿ ಮತ್ತು ಪ್ರಾಯೋಗಿಕ ಬೋಧನೆಗಳನ್ನು, ನೇರವಾಗಿ ನಿಮಗೆ ತಲುಪಿಸಲು ಸೃಷ್ಟಿಸಲ್ಪಟ್ಟಿದೆ.

ಇದನ್ನು ಹಂಚಿಕೊಳ್ಳಿ