ಅಕ್ಟೋಬರ್ 5, 2011ರಂದು ನಿಧನರಾದ ವಾಣಿಜ್ಯೋದ್ಯಮದ ಕನಸುಗಾರ ಮತ್ತು ಆಪಲ್ ಕಂಪ್ಯೂಟರ್ ಸಂಸ್ಥೆಯ ಸಂಸ್ಥಾಪಕ ಸ್ಟೀವ್ ಜಾಬ್ಸ್‌ರವರ ಸ್ಪಷ್ಟ ಇಚ್ಛೆಯಂತೆ, 2011ರಂದು ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮದ, ರಾಜಕೀಯದ ಮತ್ತು ಜನಪ್ರಿಯ ಸಂಸ್ಕೃತಿಯ ನೂರಾರು ಪ್ರಭಾವಶಾಲಿ ವ್ಯಕ್ತಿಗಳನ್ನು ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆಗೆ ಪರಿಚಯಿಸಲಾಯಿತು.
ಸೆಪ್ಟೆಂಬರ್ 2013ರಲ್ಲಿ ಆನ್‌ಲೈನ್‌ಲ್ಲಿ ಪ್ರದರ್ಶಿತವಾದ ಒಂದು ವೀಡಿಯೋ ಸಂದರ್ಶನದಲ್ಲಿ ಸೇಲ್ಸ್‌ಫೋರ್ಸ್. ಕಾಮ್‌ನ ಸಿಇಓ ಮಾರ್ಕ್ ಬೆನಿಆಫ್ ಅವರು ಶ್ರೀ ಜಾಬ್ಸ್ ಅವರಲ್ಲಿ ಕಂಡ ಆಳವಾದ, ಆದರೆ ಕೆಲವೊಮ್ಮೆ ಅಂತರ್ಗತವಾಗಿದ್ದ, ಆಧ್ಯಾತ್ಮಿಕತೆಯ ಬಗ್ಗೆ ಈ ಮತ್ತು ಇತರ ಕಥೆಗಳನ್ನು ಹಂಚಿಕೊಂಡರು. ಸಿಎನ್‌ಇಟಿ ನ್ಯೂಸ್‌ನಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ಕೆಳಗಿನ ಆಯ್ದ ಭಾಗವೂ ಸೇರಿದೆ:
“ಬೆನಿಆಫ್ ಅವರು ಜಾಬ್ಸ್ ಅವರ ನಿಧನದ ನಂತರದ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಹೋಗಿದ್ದ ಕಥೆಯನ್ನು ಹೇಳಿದರು. ಅಲ್ಲಿಗೆ ಬಂದಿದ್ದವರೆಲ್ಲರೂ ಹೋಗುವಾಗ ಪ್ರತಿಯೊಬ್ಬರ ಕೈಗೂ ಒಂದು ಸಣ್ಣ ಕಂದುಬಣ್ಣದ ರಟ್ಟಿನ ಪೆಟ್ಟಿಗೆಯನ್ನು ನೀಡಲಾಯಿತು. ‘ಇದು ಏನೋ ಒಳ್ಳೆಯದೆಂದು ಕಾಣುತ್ತದೆʼ ಎಂದು ಅವರು ಅಂದುಕೊಂಡರು. ನನಗೆ ತಿಳಿದಿತ್ತು, ಇದು ಜಾಬ್ಸ್ ಅವರು ತೆಗೆದುಕೊಂಡ ನಿರ್ಧಾರ ಮತ್ತು ಅದು ಏನೇ ಇರಲಿ, ನಾವೆಲ್ಲರೂ ಅದರ ಬಗ್ಗೆ ಚಿಂತಿಸಬೇಕೆಂಬುದು ಅವರ ಕಡೆಯ ಬಯಕೆಯಾಗಿತ್ತು.ʼ
“ಪೆಟ್ಟಿಗೆಯಲ್ಲಿ ಪರಮಹಂಸ ಯೋಗಾನಂದರ ಯೋಗಿಯ ಅತ್ಮಕಥೆಯ ಒಂದು ಪ್ರತಿಯಿತ್ತು. ಇದು ಜಾಬ್ಸ್ ಅವರನ್ನು ಅವರ ಜೀವಮಾನವಿಡೀ ಪ್ರೇರಿಸಿದ ಆಧ್ಯಾತ್ಮಿಕ ಪುಸ್ತಕವಾಗಿತ್ತು. 1946ರಲ್ಲಿ ಮೊದಲು ಪ್ರಕಟವಾದ ಪುಸ್ತಕವು, ‘ಆತ್ಮ-ಸಾಕ್ಷಾತ್ಕಾರʼ ಮತ್ತು ಕ್ರಿಯಾ ಯೋಗ ಧ್ಯಾನದ ಅಭ್ಯಾಸವನ್ನು ಸಮರ್ಥಿಸುತ್ತದೆ.
“[ವಾಲ್ಟರ್] ಐಸಾಕ್ಸನ್‌ರ ಜೀವನಚರಿತ್ರೆಯಲ್ಲಿ ಹೇಳಿರುವಂತೆ, ͑ಜಾಬ್ಸ್ ಅದನ್ನು ಹದಿಹರೆಯದಲ್ಲಿ ಮೊಟ್ಟ ಮೊದಲು ಓದಿದರು. ನಂತರ ಅದನ್ನು ಭಾರತದಲ್ಲಿ ಮತ್ತೆ ಓದಿದರು. ಅಂದಿನಿಂದ ಪ್ರತಿ ವರ್ಷ ಒಮ್ಮೆ ಅವರು ಅದನ್ನು ಓದುತ್ತಿದ್ದರು.ʼ ಆಧ್ಯಾತ್ಮಿಕ ಜ್ಞಾನೋದಯವನ್ನು ಅರಸುತ್ತ 1974ರಲ್ಲಿ ಜಾಬ್ಸ್ ಭಾರತಕ್ಕೆ ಪಯಣಿಸಿದರು. ‘ಅವರ ಅಂತರ್ಬೋಧೆಯು ಅವರ ಮಹತ್ವದ ಕೊಡುಗೆ ಎಂಬ ವಿಸ್ಮಯಕಾರಿ ಅರಿವು ಅವರಿಗಿತ್ತು. ಅವರು ಪ್ರಪಂಚವನ್ನು ತಿರುಗುಮುರುಗಾಗಿ ನೋಡಲು ಬಯಸುತ್ತಿದ್ದರು,ʼ ಎಂದು ಬೆನಿಆಪ್ ಹೇಳಿದರು.”