ಸ್ವಾಮಿ ಶ್ರೀ ಚಿದಾನಂದ ಗಿರಿಯವರಿಂದ ಒಂದು ಸಂದೇಶ
ಯೋಗದ ಸತ್ಸಂಗ ಸಂಸ್ಥೆ/ಸೆಲ್ಫ್ ರಿಯಲೈಝೇಶನ್ ಸೊಸೈಟಿಯ ಅಧ್ಯಕ್ಷರು
ಸ್ವಾಮಿ ಚಿದಾನಂದರು ಅಮೆರಿಕ ಮತ್ತು ಪ್ರಪಂಚದಾದ್ಯಂತ ಇರುವ ಪ್ರಸ್ತುತ ಪರಿಸ್ಥಿತಿಯನ್ನು ಕುರಿತು ಮಾತನಾಡುತ್ತಾ, ಜನಾಂಗೀಯ ಅನ್ಯಾಯ ಮತ್ತು ವಿಭಜನೆಯ ಗಂಭೀರ ಸಮಸ್ಯೆ ಮತ್ತು ರೋಗಲಕ್ಷಣಗಳನ್ನು ಮಾತ್ರವಲ್ಲದೆ, ಮಾನವತೆಯು ಎದುರಿಸುತ್ತಿರುವ ಈ ಪಿಡುಗಿನ ಮೂಲ ಕಾರಣವನ್ನು ಪರಿಹರಿಸುವ ಮಾರ್ಗವನ್ನು ಚರ್ಚಿಸಿದ್ದಾರೆ. ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಜನಾಂಗೀಯ ಪೂರ್ವಾಗ್ರಹಗಳನ್ನು ಪರಿಹರಿಸಲು, ಮೊದಲು ತಮ್ಮೊಳಗೆ ಧ್ಯಾನದ ಮೂಲಕ ಶಾಂತಿಯನ್ನು ಕಂಡುಕೊಂಡು, ನಂತರ ಆ ಶಾಂತಿಯನ್ನು ಸುತ್ತಲಿನ ಜನರಿಗೆ ಪಸರಿಸಿ ನಿಜವಾದ ಶಾಂತಿಯ ಹರಿಕಾರರಾಗಲು ಕರೆ ನೀಡುತ್ತಾರೆ.

ಸ್ವಾಮಿ ಚಿದಾನಂದರ ಸಂದೇಶವನ್ನು ಈ ಕೆಳಗೆ ನೀಡಲಾಗಿದೆ:
ಅಧ್ಯಾತ್ಮದ ಹಾದಿಯಲ್ಲಿರುವ ದೈವೀ ಸ್ನೇಹಿತರಿಗೆ ಶುಭಾಶಯಗಳು ಮತ್ತು ಪ್ರಣಾಮಗಳು.
ಅಮೇರಿಕದಲ್ಲಿ ಮತ್ತು ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಉದ್ಭವಿಸಿರುವ ಜನಾಂಗೀಯ ಪ್ರಕ್ಷುಬ್ಧತೆಯ ಬಿರುಗಾಳಿಯ ಬಗ್ಗೆ ನನ್ನಂತೆಯೇ ನೀವೂ ಸಹ ಆಳವಾಗಿ ಚಿಂತಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಈ ವಿಚಾರದ ಕುರಿತು ನಿಮ್ಮೊಡನೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ಮೊದಲನೆಯದಾಗಿ ಸಮಸ್ಯೆಯ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳೋಣ. ಜನಾಂಗೀಯ ಪೂರ್ವಗ್ರಹ ಮತ್ತು ಅನ್ಯಾಯವು ಮಾನವ ಹೃದಯಗಳ ಮತ್ತು ಮನಸ್ಸಿನ ಒಂದು ಪಿಡುಗಾಗಿದೆ — ನಮ್ಮ ಮನಸ್ಸು ಮತ್ತು ಹೃದಯದಲ್ಲಿ ಭಗವಂತನು ನೆಲೆಯಾಗಲು ನಾವು ಅವಕಾಶ ನೀಡದಿದ್ದಾಗ. ಇತ್ತೀಚಿನ ದಿನಗಳಲ್ಲಿ ಅಮೆರಿಕದಾದ್ಯಂತ ಈ ಖಾಯಿಲೆಯು ಏಕಾಏಕಿ ಹರಡಿರುವುದನ್ನು ನಾವು ನೋಡಿದ್ದೇವೆ. ಮತ್ತು ಕೇವಲ ಅಮೇರಿಕದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಹಲವು ದೇಶಗಳು ದ್ವೇಷ, ಪಂಥ, ವರ್ಣ ಮತ್ತು ಹಲವೆಡೆ ಧರ್ಮದ ಹೆಸರಿನಲ್ಲಿ ಯಾವುದೋ ಒಂದು ರೀತಿಯ ತಾರತಮ್ಯದ ಪಿಡುಗಿನ ಸೋಂಕಿನಿಂದ ನರಳುತ್ತಿವೆ.
ಯಾವುದೇ ದೀರ್ಘಕಾಲದ ಖಾಯಿಲೆಯಂತೆ ನಾವು ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು — ಮತ್ತು ಅದು ನಿಸ್ಸಂಶಯವಾಗಿ ಸಹಾಯಕ – ಆದರೆ, ಇದರ ಮೂಲ ಕಾರಣವನ್ನೂ ಸಹ ನಾವು ಪರಿಹರಿಸಬೇಕಾಗಿದೆ.
ಇಂತಹ ಸಮಯದಲ್ಲಿ, ಆಧ್ಯಾತ್ಮಿಕದೆಡೆಗೆ ಒಲವು ಹೊಂದಿರುವ ಪ್ರತಿಯೊಂದು ಹೃದಯ ಮತ್ತು ಮನಸ್ಸು ಸಹಾಯ ಮಾಡಲು ತಾವು ಏನು ಮಾಡಬಹುದು ಎಂದು ತಮ್ಮನ್ನು ತಾವು ಕೇಳಿಕೊಳ್ಳುತ್ತಿವೆ. ಈ ಜಗತ್ತಿನಲ್ಲಿ ನಾವೆಲ್ಲರೂ ವಿಭಿನ್ನ ಪಾತ್ರಗಳನ್ನು ವಹಿಸಬೇಕಾಗಿದೆ, ವಿಭಿನ್ನ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸಬೇಕಾಗಿದೆ. ಅದರ ಅರ್ಥ, ಯಾವುದೇ ಸಮಯದಲ್ಲಿ ನಮ್ಮ ಮಾನವ ಕುಟುಂಬ ಯಾವ ನಿರ್ದಿಷ್ಟ ಬಿಕ್ಕಟ್ಟು ಅಥವಾ ಸಮಸ್ಯೆಯನ್ನು ಎದುರಿಸುತ್ತದೋ ಅದಕ್ಕನುಗುಣವಾಗಿ ಇತರರಿಗೆ ಸೇವೆ ಸಲ್ಲಿಸಲು ನಾವು ವಿಭಿನ್ನ ರೀತಿಗಳಲ್ಲಿ ಅರ್ಹರಾಗಿದ್ದೇವೆ.
ಎಸ್ ಆರ್ ಎಫ್/ವೈ ಎಸ್ ಎಸ್‌ನ ಹಲವು ಸದಸ್ಯರಲ್ಲಿ ತಮ್ಮ ವೃತ್ತಿಪರ ಮತ್ತು ವ್ಯಾವಹಾರಿಕ ಪ್ರತಿಭೆಯಿಂದ ಬೇರೆಯವರ ಜೀವನ ಮತ್ತು ಸಮಾಜ ಮತ್ತು ನಮ್ಮ ಜಗತ್ತನ್ನು ಸುಧಾರಿಸಲು ತಮ್ಮಿಂದಾದ ಪ್ರಯತ್ನ ಮಾಡುವವರು ಅನೇಕರಿದ್ದಾರೆ ಎಂದು ನನಗೆ ತಿಳಿದಿದೆ. ಭಗವಂತನ ಆಶೀರ್ವಾದ ಅವರೆಲ್ಲರ ಮೇಲೆ ಇರಲಿ! ಬಡತನ, ಜನಾಂಗೀಯ ಅನ್ಯಾಯ ಮತ್ತು ಮನುಷ್ಯನ ಅಜ್ಞಾನದಿಂದ ಉದಿಸುವ ಯಾವುದೇ ಸಮಸ್ಯೆಗಳ ನಿರ್ಮೂಲನೆಗೆ ಸಕ್ರಿಯವಾಗಿ ಪ್ರಪಂಚದಾದ್ಯಂತ ಕೊಡುಗೆ ನೀಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ದೇವರು ಆಶೀರ್ವದಿಸುತ್ತಾನೆ.
ಆದರೆ ಪರಮಹಂಸ ಯೋಗಾನಂದರ ಎಲ್ಲಾ ಅನುಯಾಯಿಗಳು, ಧ್ಯಾನ-ಆಧಾರಿತ ಆಧ್ಯಾತ್ಮಿಕ ಬೋಧನೆಗಳ ಎಲ್ಲಾ ಅನುಯಾಯಿಗಳು ಸೇವೆ ಸಲ್ಲಿಸಲು ನಿರ್ದಿಷ್ಟವಾದ ಮತ್ತು ಮಾಡಲೇ ಬೇಕಾದ ಒಂದು ಮಾರ್ಗವಿದೆ. ಅದು ಶಾಂತಿಯ ಹರಿಕಾರರಾಗುವ ಮೂಲಕ. ಧ್ಯಾನಾಭ್ಯಾಸದ ಮೂಲಕ ನಮ್ಮೊಳಗಿನ ಶಾಂತಿಯನ್ನು ಕಂಡುಕೊಂಡು, ನಾವು ಹೊರಸೂಸುವ ಶಾಂತಿ, ಸಾಮರಸ್ಯ, ಪ್ರಾರ್ಥನೆ ಮತ್ತು ಭಗವಂತನೆಡೆಗಿನ ಪ್ರೀತಿಯ ಕಂಪನಗಳಿಂದ ನಿಮ್ಮ ಸುತ್ತಲಿನ ಎಲ್ಲರಿಗೂ ಸಹಾಯ ಮಾಡಿ.
ನಮ್ಮ ಗುರುಗಳು ಮತ್ತೆ ಮತ್ತೆ ಒತ್ತಿ ಹೇಳಿದಂತೆ, ಮಾನವತೆಯ ಹೃದಯಕ್ಕೆ ಆಘಾತ ತರುವ ನಿರಂತರ ಸಾಮಾಜಿಕ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವೆಂದರೆ, ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು. ನಮ್ಮನ್ನು ನಾವು ಹೆಚ್ಚು ಶಾಂತಿಯಿಂದ, ಪ್ರೀತಿಯಿಂದ, ಭಗವಂತನಲ್ಲೇ ನಮ್ಮ ಬದುಕನ್ನು ಕೇಂದ್ರೀಕರಿಸುವ ಮೂಲಕ. ಈ ದಿಕ್ಕಿನಲ್ಲಿ ಕೆಲಸ ಮಾಡಿದಾಗ ಇದರ ಮೂಲ ಕಾರಣವನ್ನು ಪರಿಹರಿಸಲು ಸಾಧ್ಯ. ಇಲ್ಲವಾದಲ್ಲಿ, ಮೌಲ್ಯಯುತವಾದರೂ ರೋಗಲಕ್ಷಣಗಳನ್ನು ಮಾತ್ರ ಪರಿಹರಿಸಲು ಸಾಧ್ಯ.
ಆದುದರಿಂದ ನಾವು ಪ್ರಸ್ತುತವಾಗಿ ಶಾಂತಿಯನ್ನು ಬೆಳೆಸಿಕೊಂಡು ಸ್ವಲ್ಪ ಸಮಯವನ್ನು ಒಟ್ಟಿಗೆ ಕಳೆಯೋಣ. ಮತ್ತು ನಾವು ಹಾದುಹೋಗುತ್ತಿರುವ ತೊಂದರೆಯ ಸಮಯವನ್ನು ನಿಭಾಯಿಸಲು ನಮ್ಮ ಕೊಡುಗೆಯಾಗಿ ಆ ಶಾಂತಿಯನ್ನು ಬಾಹ್ಯವಾಗಿ ಪ್ರಸಾರ ಮಾಡೋಣ.
ಏಕೆಂದರೆ ಕೇವಲ ಪದಗಳು ಸಾಕಾಗುವುದಿಲ್ಲ. ಇಂತಹ ಸಮಯದಲ್ಲಿ ತಪ್ಪು ತಿಳುವಳಿಕೆಗಳು, ಭಯ ಮತ್ತು ಕೋಪದ ಭರದಲ್ಲಿ ನೀವು ಪರಸ್ಪರ ಆಡುವ ಪದಗಳು ಸೀಮಿತ ಪರಿಣಾಮವನ್ನು ಬೀರುತ್ತವೆ. ಸಾಮಾನ್ಯವಾಗಿ ಅವು ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಏಕೆಂದರೆ, ನಾವು ಇತರ ಮನುಷ್ಯರೊಂದಿಗೆ ಮಾತನಾಡುವ ಪದಗಳು ತುಂಬಾ ಸುಲಭವಾಗಿ ತಪ್ಪಾಗಿ ಗ್ರಹಿಸಲ್ಪಡುತ್ತವೆ. ಆದರೆ ಪ್ರಾರ್ಥನೆ, ಧ್ಯಾನ ಮತ್ತು ದೈವೀ ಸಹಭಾಗಿತ್ವದಲ್ಲಿ, ನಮ್ಮ ಹೃದಯಾಂತರಾಳದ ಹಂಬಲದಿಂದ ಉದ್ಭವಿಸಿದ ಆ ಭಗವಂತನೆಡೆಗಿನ ಪ್ರೀತಿಯ ಪದಗಳು, ಎಲ್ಲಾ ರೀತಿಯ ಮಾನವ ಭಾಷೆಗೆ ಮೀರಿದ ಶಕ್ತಿಯನ್ನು ಹೊಂದಿವೆ.
ಆದ್ದರಿಂದ ನನ್ನದು ದುಪ್ಪಟ್ಟು ಪ್ರಾರ್ಥನೆ: ನಾವೆಲ್ಲರೂ ಸಾಮಾಜಿಕ, ರಾಜಕೀಯ ಐಕ್ಯತೆಗಾಗಿ ದುಡಿದ ಎಲ್ಲಾ ಜನಾಂಗ ಹಾಗೂ ಧರ್ಮಗಳ, ಸಾಮಾಜಿಕ ಮತ್ತು ರಾಜಕೀಯ ಐಕ್ಯತೆಗಾಗಿ ದುಡಿದ ಎಲ್ಲ ಜನಾಂಗ ಹಾಗೂ ಧರ್ಮಗಳ ಸಹೃದಯೀ ಸುಧಾರಕರ ಮಾತುಗಳನ್ನು ನಾವೆಲ್ಲರೂ ಗೌರವದಿಂದ ಮತ್ತು ತುರ್ತಾಗಿ ಕೇಳಬೇಕು. ಮತ್ತು ಒಬ್ಬರನ್ನೊಬ್ಬರು ಆಲಿಸುವ ಆ ಆಳವಾದ ಆಧ್ಯಾತ್ಮಿಕ ಕ್ರಿಯೆಯಿಂದ, ಉದಾತ್ತ ವಿಚಾರಗಳನ್ನು ಪದಗಳಿಂದ ಗುಣಪಡಿಸುವಿಕೆಯನ್ನು ಉತ್ತೇಜಿಸುವ ಸ್ಪಷ್ಟವಾದ ಕ್ರಿಯೆಗಳಾಗಿ ಭಾಷಾಂತರಿಸಲು ಉತ್ತಮ ಮಾರ್ಗವನ್ನು ವಿವೇಚಿಸಲು ಪ್ರಯತ್ನಿಸೋಣ.
ಎಲ್ಲಕ್ಕಿಂತ ಮಿಗಿಲಾಗಿ ಈ ವಿಭಜಿತ ಸಮಯದಲ್ಲಿ ನಮ್ಮ ಹೃದಯಾಂತರಾಳದ ಮಾತುಗಳು ಎಲ್ಲದರ ಮೂಲವಾದ, ಸದ್ಭಾವನೆಯ ಕಾರಂಜಿಯ ಸೆಲೆಯಾದ ಆ ಭಗವಂತನನ್ನು ತಲುಪಲಿ.
ಅಗತ್ಯವಾದ ಸಮಯವನ್ನು ತೆಗೆದುಕೊಂಡು, ಧ್ಯಾನದ ಆಂತರೀಕರಣಗೊಂಡ ಮೌನದಲ್ಲಿ ಕಂಡ ಶಾಂತಿ ಮತ್ತು ಅರಿವಿನ ಶಕ್ತಿಗೆ ನಾವು ಮಾತನಾಡುವ ಮತ್ತು ನಾವು ಕೇಳುವ ನುಡಿಗಳನ್ನು ತಿಳಿಸುವಂತೆ ಹೇಳಿ ನಮ್ಮ ಆತ್ಮಗಳಲ್ಲಿರುವ ವಿಧಿವಿಹಿತವಾದ ಸಮಗ್ರತೆಯನ್ನು ಕಂಡುಕೊಳ್ಳೋಣ. ನಾವು ಒಬ್ಬರಿಗೊಬ್ಬರು ನುಡಿಯುವ ನುಡಿಗಳೊಂದಿಗೆ ಭಗವಂತನಿಗೆ ನುಡಿಯುವ ನಮ್ಮ ನುಡಿಗಳು ಮತ್ತು ಪ್ರಾರ್ಥನೆಗಳು, ಒಬ್ಬರಿಗೊಬ್ಬರು ಬಡಿದಾಡಿಕೊಳ್ಳುವ ಸ್ಥಿತಿಗೆ ತಂದಿರುವ ಪ್ರಸ್ತುತ ಬಡಿದಾಟಗಳು ಮತ್ತು ಅಸಾಮರಸ್ಯಗಳಿಗೆ ನಮ್ಮ ಪ್ರತಿಸ್ಪಂದನದ ನಿರೂಪಕ ಮತ್ತು ಸೃಷ್ಟಿಕಾರನಾಗಲಿ.
ಜನಾಂಗೀಯ ಅನ್ಯಾಯವನ್ನು ಗುಣಪಡಿಸಲು ಪ್ರಾರ್ಥನೆ
ಪರಮಪಿತ, ಮಾತೆ, ಗೆಳೆಯ, ಪ್ರಿಯತಮ ಪ್ರಭು,
ಜನಾಂಗೀಯ ಅನ್ಯಾಯ ಮತ್ತು ವಿಭಜನೆಯ ವಿರುದ್ಧ ವ್ಯಾಪಕ ಪ್ರತಿಭಟನೆಯ ಜೊತೆಗೆ ಅಮೆರಿಕ ಮತ್ತು ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೋಪ, ಭಯ, ಮೌಢ್ಯ ಮತ್ತು ನೋವಿನ ಮುಖದ ಮೇಲೆ ನಾವು ತೆಗೆದುಕೊಳ್ಳಬಹುದಾದ ಅತ್ಯಂತ ರಚನಾತ್ಮಕ ಮನೋಭಾವವನ್ನು ತೋರಿಸಿ.
ನಮ್ಮೆಲ್ಲರ ಸ್ವರ್ಗಾತೀತ ತಂದೆಯೇ, ಮಾತೇ, ನಿಮ್ಮಿಂದ ದೈವೀ ಸಮಾನರಾಗಿ ಸೃಷ್ಟಿಸಲ್ಪಟ್ಟ ಸಹೋದರ ಸಹೋದರಿಯರ ಆತ್ಮಗಳಾಗಿ, ಅಮೆರಿಕ ಮತ್ತು ಇತರ ದೇಶಗಳನ್ನು ಬಾಧಿಸುತ್ತಿರುವ ನೋವು ಮತ್ತು ಜನಾಂಗೀಯ ಆಧಾರಿತ ಅನ್ಯಾಯವನ್ನು ನಿವಾರಿಸಲು ಹೇಗೆ ನಮ್ಮ ಭಾವನೆಗಳನ್ನು ಆಲಿಸಿ ವಿವೇಕಯುತ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು ಎಂದು ನಮಗೆ ಕಲಿಸಿರಿ.
ಎಲ್ಲಕ್ಕಿಂತಾ ಮಿಗಿಲಾಗಿ ಪ್ರೇಮಪೂರ್ಣನಾದ ಓ ಭಗವಂತನೇ, ಧ್ಯಾನ ಮತ್ತು ಸ್ವಯಂ ಶಿಸ್ತಿನ ಮೂಲಕ ನಮ್ಮಲ್ಲಿ ಪ್ರೀತಿಯ, ಕರುಣೆಯ ಮತ್ತು ಗುಣಾಕಾರಿಯಾದ ಬದಲಾವಣೆಗಳನ್ನು ತಂದು, ನಮ್ಮ ಆತ್ಮದಲ್ಲಿ ನಿಮ್ಮ ಉಪಸ್ಥಿತಿಯಿಂದ ಹರಿಯುವ ಸಾರ್ವತ್ರಿಕ ನಿಯಮವನ್ನು ನಮ್ಮಲ್ಲಿ ಜಾಗೃತಗೊಳಿಸಿ. ಮತ್ತು ಅದರೊಂದಿಗೆ ನಮ್ಮ ಪ್ರಾರ್ಥನೆಯ ಕೊಡುಗೆಯನ್ನು ಅರ್ಪಿಸುವ ಸಂಕಲ್ಪ, ನಮ್ಮನ್ನು ನಾವು ಬದಲಾಯಿಸಿಕೊಳ್ಳುವ ಪ್ರಯತ್ನ ಮತ್ತು ನಮ್ಮ ಯಾವುದೇ ವರ್ತನೆಯಿಂದ ಪರರಿಗೆ ಸಲ್ಲುವ ಸೇವಾ ಮನೋಭಾವವನ್ನು ಎಚ್ಚರಿಸಿ, ನಮ್ಮ ಜಗದ ಕುಟುಂಬದ ಒಳಿತು, ಸಮೃದ್ಧಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಾಗಿ ಶ್ರಮಿಸೋಣ.
ಓಂ. ಶಾಂತಿ ಶಾಂತಿ ಶಾಂತಿ
[ಸ್ವಾಮಿ ಚಿದಾನಂದ ಗಿರಿಯವರಿಂದ ನಡೆಸಲ್ಪಟ್ಟ ಧ್ಯಾನದ ಅವಧಿ.]
ಸಮಸ್ಯೆಯ ಕರ್ಮದ ಕಾರಣದ ಬಗ್ಗೆ
ಆತ್ಮೀಯ ಸ್ನೇಹಿತರೇ ಮರೆಯದಿರಿ: ನಾವು ಆಧ್ಯಾತ್ಮಿಕ ಪರಿಪಕ್ವತೆಯನ್ನು ಗಳಿಸಿಕೊಂಡು, ಕೇವಲ ಸಮಸ್ಯೆಯ ಲಕ್ಷಣವನ್ನಷ್ಟೇ ಅಲ್ಲದೆ ಅದರ ಮೂಲ ಕಾರಣವನ್ನೂ ಗುರುತಿಸಿ ಬಗೆಹರಿಸಬೇಕಾಗಿದೆ.
ಇದು ನಮ್ಮ ವೈಯಕ್ತಿಕ ಜೀವನ ಮತ್ತು ರಾಷ್ಟೀಯ ಜೀವನದ ಚಕ್ರಗಳನ್ನು ತಿರುಗಿಸುವ ಕರ್ಮದ ನಿಯಮವಾಗಿದೆ. ಮತ್ತು ಈ ಪ್ರಸ್ತುತ ದಂಗೆಗಳು ನಿಜವಾಗಿಯೂ ಆಳವಾಗಿ ಬೇರೂರಿರುವ ಕಾರಣದ ಲಕ್ಷಣಗಳಾಗಿವೆ. ಅವುಗಳನ್ನು ಕಡಿಮೆ ಮಾಡುವ ಅಥವಾ ತರ್ಕಬದ್ಧಗೊಳಿಸುವ ತಪ್ಪನ್ನು ನಮ್ಮಲ್ಲಿ ಯಾರೂ ಮಾಡಬಾರದು ಎಂದು ನಾನು ಹೇಳುತ್ತೇನೆ. ನಮ್ಮ ವೈಯಕ್ತಿಕ ಜೀವನದಲ್ಲಿ ಅಥವಾ ಸಮಾಜದಲ್ಲಿ ಯಾವುದೇ ಆಳವಾದ ಕರ್ಮದ ಸ್ಥಿತಿಯು ನಾವು ಅವುಗಳನ್ನು ಪರಿಹರಿಸುವವರೆಗೆ, ಅವುಗಳೆಡೆಗೆ ಗಮನ ಹರಿಸಿ ಕೆಲಸ ಮಾಡುವವರೆಗೆ, ಮತ್ತು ಅವು ನಮಗೆ ಕಲಿಸಲು ಉದ್ದೇಶಿಸಿರುವ ಆಧ್ಯಾತ್ಮಿಕ ಪಾಠಗಳನ್ನು ಕಲಿಯದ ಹೊರತು ಅವು ನಮ್ಮಿಂದ ದೂರಾಗುವುದಿಲ್ಲ.
ನಮ್ಮ ಗುರು ಪರಮಹಂಸ ಯೋಗಾನಂದರು ಅಮೆರಿಕ ದೇಶವನ್ನು ತುಂಬಾ ಪ್ರೇಮಿಸಿದ್ದರು. ಅವರು ಹಲವುಬಾರಿ ಇದರ ವಿಧಿಯ ಬಗ್ಗೆ ಮಾತನಾಡುತ್ತಿದ್ದರು. ತನ್ನ ಅಗಾಧ ಸತ್ಕರ್ಮಗಳಿಂದ ರಾಷ್ಟ್ರಗಳ ಕುಟುಂಬದ ಉನ್ನತಿಯ ವಿಕಾಸದಲ್ಲಿ ಅಮೆರಿಕವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದಿದ್ದರು. ಅದೇನೇ ಇದ್ದರೂ, ಆಫ್ರಿಕಾದ ಅಮೆರಿಕನ್ನರು ಮತ್ತು ಸ್ಥಳೀಯ ಅಮೆರಿಕನ್ನರನ್ನು ಅವಮಾನಕಾರವಾಗಿ ನಡೆಸಿಕೊಂಡ ಈ ರಾಷ್ಟ್ರಗಳ ಇತಿಹಾಸವು ಸೃಷ್ಟಿಸಿದ ನೋವಿನ ಕರ್ಮದ ಪರಿಣಾಮಗಳ ಬಗ್ಗೆ ಅವರು ಸ್ಪಷ್ಟವಾಗಿ ಆದರೆ ಆಧ್ಯಾತ್ಮಿಕ ದೂರದೃಷ್ಟಿಯಿಂದ ಮಾತಾಡಿದ್ದರು. ತನ್ನನ್ನು ದತ್ತು ಪಡೆದ ದೇಶವು ಈ ಅಸಹ್ಯಗಳನ್ನು ಮೀರಲು ಸಹಾಯ ಮಾಡುವ ದೊಡ್ಡ ಜವಾಬ್ದಾರಿಯನ್ನು ಅವರು ಹೊತ್ತರು. ಏಕೆಂದರೆ ಅಮೆರಿಕನ್ನರು ತಮ್ಮ ಅತ್ಯುತ್ತಮ ಮತ್ತು ಉದಾತ್ತ ಗುಣಗಳನ್ನು ವ್ಯಕ್ತಪಡಿಸಲಿ ಎಂದಾಗಲೀ ಅಥವಾ ಕಪ್ಪು ಚರ್ಮದ ವಿದೇಶೀಯನೆಂದು ನಿಂದನೆಯನ್ನು ಅನುಭವಿಸಿದ ತಮ್ಮ ಸ್ವಂತ ಅನುಭವದಿಂದಾಗಲೀ ಅಲ್ಲ. ಬದಲಾಗಿ ಕ್ರಿಸ್ತನಂತೆ ಅವರಲ್ಲಿ ನಮ್ಮೆಡೆಗಿದ್ದ ಪ್ರೀತಿಯ ಕಾರಣದಿಂದ ಮತ್ತು ಅವನ ದೈವಿಕ ಗ್ರಹಿಕೆ ಮತ್ತು ದೃಢ ವಿಶ್ವಾಸದಿಂದ ಈ ಸಮಸ್ಯೆಗಳಿಗೆ ಉತ್ತರವು ಅಧ್ಯಾತ್ಮದಲ್ಲಿದೆಯೇ ಹೊರತು ಹೊರಾಗಿನ ಜಾತ್ಯಾತೀತ ಅಥವಾ ಸಾಮಾಜಿಕ ಸುಧಾರಣೆಗಳಿಂದ ಮಾತ್ರವಲ್ಲ ಎಂದು ಅರಿತಿದ್ದರು.
ಆದ್ಧರಿಂದ ನಾನು ಅವರ ವಿವೇಕ ಮತ್ತು ಸ್ಫೂರ್ತಿಯಿಂದ ಶಕ್ತಿಯುತವಾದ ಪದಗಳೊಂದಿಗೆ ನನ್ನ ಬರಹವನ್ನು ಅಂತ್ಯಗೊಳಿಸುಲು ಬಯಸುತ್ತೇನೆ. ಈ ಮಾತುಗಳ ಹಿಂದಿರುವ ಅಧ್ಯಾತ್ಮಿಕ ಶಕ್ತಿಯನ್ನು ಅನುಭವಿಸಿ. ಮತ್ತು ಆ ಪ್ರೀತಿಯ ಶಕ್ತಿಯು ನಮ್ಮಲ್ಲಿ ಪ್ರತಿಯೊಬ್ಬರಿಗೂ ಮತ್ತು ಪ್ರಪಂಚದ ಎಲ್ಲಾ ಜನಾಂಗದ ನಮ್ಮ ಸಹೋದರ ಸಹೋದರಿಯರಿಗೂ ಹೊಸಸಾಧ್ಯತೆಗಳನ್ನು, ಭರವಸೆಯ ಪ್ರಜ್ಞೆಯನ್ನೂ ತುಂಬಲಿ.
ಅವರು ಹೇಳಿದರು:
“ಧ್ಯಾನದಲ್ಲಿ ದೇವರನ್ನು ಪ್ರೀತಿಸಲು ಕಲಿತ ತಕ್ಷಣ ನಮ್ಮ ಸ್ವಂತ ಕುಟುಂಬವನ್ನು ಪ್ರೀತಿಸುವಂತೆ ಸಮಸ್ತ ಮಾನವಕುಲವನ್ನು ಪ್ರೀತಿಸುತ್ತೇವೆ. ಆತ್ಮ ಸಾಕ್ಷಾತ್ಕಾರದ ಮೂಲಕ ಯಾರು ದೇವರನ್ನು ಕಂಡುಕೊಂಡಿರುವರೋ — ಯಾರು ನಿಜವಾಗಿ ದೇವರ ಉಪಸ್ಥಿತಿಯನ್ನು ಅನುಭವಿಸಿರುವರೋ, ಅವರು ಮಾತ್ರ ಸಮಸ್ತ ಮನುಕುಲವನ್ನು ಯಾವುದೇ ವೈಯಕ್ತಿಕತೆ ಇಲ್ಲದೆ ತಮ್ಮ ಒಡಹುಟ್ಟಿದವರಂತೆ, ಒಂದೇ ತಂದೆಯ ಮಕ್ಕಳಂತೆ ಪ್ರೀತಿಸಬಲ್ಲರು.”

“ಎಲ್ಲಾ ಜನಾಂಗಗಳ ರಕ್ತನಾಳಗಳಲ್ಲೂ ಹರಿಯುತ್ತಿರುವ ರಕ್ತ ಒಂದೇ ಎಂಬುದನ್ನು ಅರಿತುಕೊಳ್ಳಿ. ಭಗವಂತನು ಪ್ರತಿಯೊಬ್ಬರಲ್ಲಿಯೂ ನೆಲೆಸಿರುವಾಗ ಮತ್ತು ಉಸಿರಾಡುತ್ತಿರುವಾಗ ಯಾವುದೇ ಜಾತಿಯನ್ನು ದ್ವೇಷಿಸಲು ಯಾರಿಗಾದರೂ ಹೇಗೆ ಧೈರ್ಯ ಬಂದೀತು? ನಾವು ಕೆಲವೇ ವರ್ಷಗಳಿಗೆ ಅಮೆರಿಕನ್ನರೋ, ಹಿಂದೂಗಳೋ ಅಥವಾ ಇತರ ರಾಷ್ಟ್ರೀಯತೆಯವರಾಗಿರುತ್ತೇವೆಯೇ ಹೊರತು, ಶಾಶ್ವತವಾಗಿ ನಾವೆಲ್ಲರೂ ದೇವರ ಮಕ್ಕಳೇ.”

“ನಿಮ್ಮೊಳಗಿನ ಭಗವಂತನನ್ನು ನೀವು ಸಂಪರ್ಕಿಸಿದಾಗ, ಆತ ಎಲ್ಲಾ ಜನಾಂಗದ ಮಕ್ಕಳಾಗಿದ್ದಾನೆ ಮತ್ತು ಪ್ರತಿಯೊಬ್ಬರಲ್ಲಿಯೂ ನೆಲೆಸಿದ್ದಾನೆ ಎಂದು ತಿಳಿಯುತ್ತದೆ. ಆಗ ನೀವು ಯಾರಿಗೂ ಶತ್ರುವಾಗಲು ಸಾಧ್ಯವಿಲ್ಲ. ಇಡೀ ಜಗತ್ತು ಆ ಸಾರ್ವತ್ರಿಕ ಪ್ರೀತಿಯಿಂದ ಜಗತ್ತನ್ನು ಪ್ರೀತಿಸಿದಾಗ, ಪರಸ್ಪರರ ವಿರುದ್ಧ ಆಯುಧ ಹಿಡಿಯುವ ಪ್ರಮೇಯವೇ ಬರುವುದಿಲ್ಲ. ನಾವು ಈ ಜಗತ್ತಿಗೆ ಕ್ರಿಸ್ತನಂತೆ ಮಾದರಿಯಾದರೆ, ಎಲ್ಲಾ ಧರ್ಮಗಳ, ರಾಷ್ಟ್ರಗಳ ಮತ್ತು ಜನಾಂಗಗಳ ನಡುವೆ ಏಕತೆಯನ್ನು ತರಲು ಸಾಧ್ಯ.”

ಆದ್ದರಿಂದ ಸ್ನೇಹಿತರೆ, ಈ ಮಾತುಗಳಲ್ಲಿ ಭರವಸೆ ಇಡೋಣ ಮತ್ತು ಒಂದು ಉತ್ತಮ ಜಗತ್ತನ್ನು ಸೃಷ್ಟಿಸುವ ಶಕ್ತಿ ನಮ್ಮಲ್ಲಿದೆ ಎಂದು ಅರಿಯೋಣ. ಪ್ರತಿದಿನ ಧ್ಯಾನದಿಂದ ಗಳಿಸಿದ ಆ ದೈವೀ ಶಾಂತಿ ಮತ್ತು ಪ್ರೀತಿಯನ್ನು, ನಮ್ಮ ಪ್ರಾರ್ಥನೆ ಮತ್ತು ಪ್ರಾರ್ಥನೆಯ ಮಾರ್ಗದರ್ಶನದ ಮೂಲಕ ಜಗತ್ತಿಗೆ ಪಸರಿಸೋಣ.
ದೇವರ ಆಶೀರ್ವಾದ ಮತ್ತು ಪ್ರೀತಿ ನಿಮ್ಮೆಲ್ಲರಮೇಲಿರಲಿ.