ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ, 2024 ರ ಫೆಬ್ರವರಿಯಲ್ಲಿ ಚೆನ್ನೈ ಏಕಾಂತ ಧಾಮದಲ್ಲಿ ವೈಎಸ್‌ಎಸ್ ಸನ್ಯಾಸಿಗಳ ಅನುದಿನದ ಸಾನಿಧ್ಯವನ್ನು ಅನುಮೋದಿಸಿದರು. ಇದು ಭಕ್ತರ ಸೇವೆಗಾಗಿ ದೈನಂದಿನ ಧ್ಯಾನಗಳು, ಆಧ್ಯಾತ್ಮಿಕ ಸಲಹೆಗಳನ್ನು ನೀಡುವುದು, ಸತ್ಸಂಗಗಳು, ಸಾಧನಾ ಸಂಗಮಗಳು, ಧ್ಯಾನ ಶಿಬಿರಗಳು ಮತ್ತು ಸ್ಮರಣಾರ್ಥ ಕಾರ್ಯಕ್ರಮಗಳನ್ನು ನಡೆಸುವುದಕ್ಕಾಗಿಯೇ ಆಗಿತ್ತು. ಅಂದಿನಿಂದ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭಕ್ತರ ಆಸಕ್ತಿಯು ದ್ವಿಗುಣಗೊಂಡಿದೆ ಮತ್ತು ಹೆಚ್ಚಿನ ಭಕ್ತರು ಆಧ್ಯಾತ್ಮಿಕ ಪುನರ್ ನವೀಕರೀಣ ಮತ್ತು ಮಾರ್ಗದರ್ಶನವನ್ನು ಬಯಸುವುದರಿಂದ ಈ ಬೇಡಿಕೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೆಳೆಯುವ ನಿರೀಕ್ಷೆಯಿದೆ.
ಪ್ರಸ್ತುತ ಸೌಲಭ್ಯಗಳಲ್ಲಿರುವ ಸವಾಲುಗಳು
ಅಸ್ತಿತ್ವದಲ್ಲಿರುವ ಸೌಲಭ್ಯಗಳು – ಮೂಲತಃ ಧ್ಯಾನ ಶಿಬಿರಕ್ಕಾಗಿ ವಿನ್ಯಾಸಗೊಳಿಸಲಾಗಿದ್ದವು – ಈಗ ಈ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಅಸಮರ್ಪಕವಾಗಿವೆ. ಆಶ್ರಮದ ವಿಸ್ತೃತ ಪಾತ್ರವನ್ನು ಸಹಕರಿಸಲು ವಸತಿ, ಅಡುಗೆ ಮನೆ, ಊಟದ ಪ್ರದೇಶಗಳು, ಆಡಳಿತ ಮತ್ತು ಇತರ ಪೂರಕ ಸೌಲಭ್ಯಗಳಿಗೆ ಗಮನಾರ್ಹವಾದ ನವೀಕರಣಗಳು ಬೇಕಾಗುತ್ತವೆ.
ಕೆಲವು ಪ್ರಮುಖ ಸವಾಲುಗಳು ಈ ಕೆಳಗಿನಂತಿವೆ:
- ಅತಿಥಿ ವಸತಿ: ಇದು ಹೆಚ್ಚಾಗಿ ವಸತಿ-ನಿಲಯದ ಶೈಲಿಯಲ್ಲಿದೆ. ಆದರೆ, ಅನೇಕ ಭಕ್ತರು ಸ್ನಾನದ ಕೋಣೆ ಇರುವ ಪ್ರತ್ಯೇಕ ಕೊಠಡಿಗಳನ್ನು ವಿನಂತಿಸಿದ್ದಾರೆ.
- ಸೇವಕರ ವಸತಿ: ಪೂರ್ಣ ಸಮಯದ ಸೇವಕರಿಗೆ, ಅಡುಗೆಮನೆ ಕೆಲಸದಲ್ಲಿರುವವರಿಗೆ, ಸ್ವಾಗತಕಾರರಿಗೆ ಮತ್ತು ಇತರ ಪ್ರದೇಶಗಳನ್ನು ನೋಡಿಕೊಳ್ಳುವವರಿಗೆ ಕೊಠಡಿಗಳ ಕೊರತೆಯಿದೆ.
- ಸನ್ಯಾಸಿಗಳ ನಿವಾಸ ಸ್ಥಳ: ಸನ್ಯಾಸಿಗಳು ಪ್ರಸ್ತುತ ಸಣ್ಣದಾದ, ಬೇರೆ ಉದ್ದೇಶಕ್ಕಾಗಿ ನಿರ್ಮಿಸಿದ್ದ, ಹಿಂದೆ ಉಸ್ತುವಾರಿ ವಹಿಸುತ್ತಿದ್ದವರ ನಿವಾಸ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. ಇದು ಕಚೇರಿ ಸ್ಥಳ, ಊಟದ ಜಾಗ, ಅಡುಗೆಮನೆ ಮತ್ತು ಬಟ್ಟೆ ಒಗೆಯುವ ಸ್ಥಳ ಇಂತಹ ಅಗತ್ಯ ಸೌಲಭ್ಯಗಳನ್ನು ಹೊಂದಿರುವುದಿಲ್ಲ.
- ಕಚೇರಿ ಮತ್ತು ಸ್ವಾಗತ ಕೇಂದ್ರ: ಹೆಚ್ಚಿದ ಆಡಳಿತಾತ್ಮಕ ಕೆಲಸದ ಹೊರೆಯನ್ನು ನಿಭಾಯಿಸಲು ಅಸ್ತಿತ್ವದಲ್ಲಿರುವ ಕಚೇರಿ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕು. ವಿಶೇಷ ಕಾರ್ಯಕ್ರಮಗಳ ಸಮಯದಲ್ಲಿ, ಸ್ವಾಗತ ಮತ್ತು ನೋಂದಣಿ ಮರದ ಕೆಳಗೆ ನಡೆಸಲಾಗುತ್ತದೆ. ಅಲ್ಲದೆ, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಸಾಕಷ್ಟು ಸ್ಥಳಾವಕಾಶವಿಲ್ಲ.
ಸೌಲಭ್ಯಗಳ ಮಧ್ಯಂತರ ಉನ್ನತೀಕರಣದ ಅಗತ್ಯತೆ
ಆಶ್ರಮದ ದೀರ್ಘಾವಧಿಯ ಬೆಳವಣಿಗೆಗಾಗಿ ಸಮಗ್ರ ಬೃಹದ್ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿರುವಾಗ, ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಬೇಕಾಗುತ್ತದೆ ಮತ್ತು ಭಕ್ತರು, ಸೇವಕರು ಮತ್ತು ಸನ್ಯಾಸಿಗಳಿಗೆ ಆರಾಮದಾಯಕ ವಸತಿ ಮತ್ತು ಸೇವೆಗಳನ್ನು ಒದಗಿಸಬೇಕಾಗುತ್ತದೆ.
ಪ್ರಸ್ತಾವಿತ ಸೌಲಭ್ಯ ನವೀಕರಣಗಳು
ವಸತಿ ಸೌಕರ್ಯಗಳ ವಾಸ್ತುಶಿಲ್ಪದ ಚಿತ್ರಣಗಳನ್ನು ಕೆಳಗೆ ತೋರಿಸಲಾಗಿದೆ.


- ಪುರುಷರ ವಸತಿ: ಮೊದಲ ಮಹಡಿಯಲ್ಲಿರುವ ದೊಡ್ಡ ವಸತಿ-ನಿಲಯವನ್ನು ಸ್ನಾನದ ಕೋಣೆಗಳಿರುವ ಆರು ಡಬಲ್- ಬೆಡ್ ರೂಮ್‌ಗಳಾಗಿ ಪರಿವರ್ತಿಸಲು ಯೋಜಿಸಲಾಗಿದೆ ಮತ್ತು ಎರಡನೇ ಮಹಡಿಯಲ್ಲಿ ನಾಲ್ಕು ದೊಡ್ಡ ಕೊಠಡಿಗಳನ್ನು ನಿರ್ಮಿಸಿ ಪ್ರತಿಯೊಂದಕ್ಕೂ ನಾಲ್ಕು ಹಾಸಿಗೆಗಳು ಮತ್ತು ಪ್ರತ್ಯೇಕ ಸ್ನಾನಗೃಹಗಳು ಇರುವಂತೆ ಯೋಜಿಸಲಾಗಿದೆ.
- ಮಹಿಳೆಯರ ವಸತಿ: ಅದೇ ರೀತಿ, ಮೊದಲ ಮಹಡಿಯ ವಸತಿ-ನಿಲಯವನ್ನು ಸ್ನಾನದ ಕೋಣೆಗಳಿರುವ ಆರು ಡಬಲ್ ಬೆಡ್ ರೂಮ್‌ಗಳಾಗಿ ಪರಿವರ್ತಿಸಲು ಯೋಜಿಸಲಾಗಿದೆ. ಎರಡನೇ ಮಹಡಿಯಲ್ಲಿ, ತಲಾ ನಾಲ್ಕು ಹಾಸಿಗೆಗಳ ಮೂರು ದೊಡ್ಡ ಕೊಠಡಿಗಳು ಮತ್ತು ಸ್ನಾನದ ಗೃಹವಿರುವ ಒಂದು ಡಬಲ್-ಬೆಡ್ ಕೋಣೆಯನ್ನು ನಿರ್ಮಿಸಲಾಗುವುದು.
- ಕಾರ್ಯಾಲಯ ಸಮುಚ್ಚಯ: ಸ್ವಾಗತ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಲೆಕ್ಕ ವಿಭಾಗ, ಸೇವಕರ ವಾಸಸ್ಥಳ , ಒಂದು ಅಂಗಡಿ, ಸಾರ್ವಜನಿಕ ಶೌಚಾಲಯಕ್ಕೆ ಸ್ಥಳಾವಕಾಶವಿರುವ ನೂತನ ಕಚೇರಿ ಕಟ್ಟಡವನ್ನು ನಿರ್ಮಿಸಲಾಗುವುದು. ಈ ಕಟ್ಟಡವು ಆಶ್ರಮದ ಎಲ್ಲಾ ಸಾಂಸ್ಥಿಕ ಮತ್ತು ಸಮುದಾಯ ಸೇವೆಗಳ ಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸುವ ನಿರೀಕ್ಷೆಯಿದೆ.
- ಸನ್ಯಾಸಿಗಳ ನಿವಾಸ ಸ್ಥಳ: ಆರು ಕೊಠಡಿಗಳು, ಸ್ನಾನಗೃಹಗಳು, ಕಚೇರಿ ಸ್ಥಳ, ಸಭೆಗಾಗಿ ಕೊಠಡಿ, ಅಡುಗೆ ಕೋಣೆ ಮತ್ತು ಭೋಜನದ ಸೌಲಭ್ಯಗಳನ್ನು ಹೊಂದಿರುವ ಸನ್ಯಾಸಿಗಳಿಗೆ ಮೀಸಲಾದ ಕಟ್ಟಡವನ್ನು ನಿರ್ಮಿಸಲಾಗುವುದು.
- ಸೇವಕರ ಕಟ್ಟಡ: ಒಮ್ಮೆ ಸನ್ಯಾಸಿಗಳು ತಮ್ಮ ಪ್ರಸ್ತುತ ವಿರುವ ವಸತಿಗಳನ್ನು ಖಾಲಿ ಮಾಡಿದರೆ, ಇವುಗಳನ್ನು ಸೇವಕ ದಂಪತಿಗಳಿಗೆ ಆರು ವಾಸಸ್ಥಳಗಳಾಗಿ ಮರುವ್ಯವಸ್ಥಿತಗೊಳಿಸಲಾಗುವುದು, ಪ್ರತಿಯೊಂದಕ್ಕೂ ಪ್ರತ್ಯೇಕ ಸ್ನಾನಗೃಹಗಳಿರುತ್ತವೆ.
ಈ ನವೀಕರಣಗಳು ಆಶ್ರಮದ ಮೂಲಸೌಕರ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತವೆ – ದೊಡ್ಡ ವಾಸದ ಸ್ಥಳಗಳು, ಉತ್ತಮ ಪೀಠೋಪಕರಣಗಳು, ವಿಶಾಲವಾದ ಸ್ನಾನಗೃಹಗಳು, ಹೆಚ್ಚುವರಿ ಸೌಕರ್ಯಗಳೊಂದಿಗೆ ಸುಧಾರಿತ ಕಚೇರಿ ಸ್ಥಳವನ್ನು ಒದಗಿಸುವುದು.
ಅಂದಾಜು ವೆಚ್ಚ
ಈ ನವೀಕರಣಗಳ ಒಟ್ಟು ಅಂದಾಜು ವೆಚ್ಚ ₹ 4 ಕೋಟಿ. ನಿಮ್ಮ ಉದಾರ ದೇಣಿಗೆಯು ಭಕ್ತರು ಈ ಆಶ್ರಮಕ್ಕೆ ಭೇಟಿ ನೀಡಿದಾಗ ಹೆಚ್ಚು ಉದಾತ್ತವಾದ ಮತ್ತು ಆಧ್ಯಾತ್ಮಿಕವಾಗಿ ಸಂತೃಪ್ತ ಅನುಭವವನ್ನು ಹೊಂದಲು ಸಹಾಯ ಮಾಡುತ್ತದೆ.