ಒಂದು ಪರಿಚಯ:
ಅಕ್ಟೋಬರ್ 6, 1920ರಂದು ಬೋಸ್ಟನ್ನಿನಲ್ಲಿ ನಡೆದ ಜಗತ್ತಿನ ಧಾರ್ಮಿಕ ಮುಖಂಡರ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ “ಧರ್ಮದ ವಿಜ್ಞಾನ (ದಿ ಸೈನ್ಸ್ ಆಫ್ ರಿಲಿಜನ್)” ಎಂಬ ವಿಷಯದ ಬಗ್ಗೆ ಪರಮಹಂಸ ಯೋಗಾನಂದರು ಅಮೆರಿಕದಲ್ಲಿ (ಯುನೈಟೆಡ್ ಸ್ಟೇಟ್ಸ್) ತಮ್ಮ ಚೊಚ್ಚಲ ಭಾಷಣವನ್ನು ಮಾಡಿದರು.
ತಮ್ಮ ಶ್ರೇಷ್ಠ ಗುರು ಪರಂಪರೆಯ ಆದೇಶದ ಮೇರೆಗೆ ಸರ್ವಶ್ರೇಷ್ಠ ಆತ್ಮ-ವಿಜ್ಞಾನ – ಯೋಗವನ್ನು ಜಗತ್ತಿಗೆ ಪ್ರಚುರಪಡಿಸಲು ಪರಮಹಂಸಜಿ ಕೆಲವು ವಾರಗಳ ಹಿಂದೆಯಷ್ಟೇ ಬಂದಿದ್ದರು. ಅವರು ಕಲಿಸಿದ ಯೋಗ ಧ್ಯಾನದ ವ್ಯಾಪಕ ಮೌಲ್ಯವು ಗ್ರಹಣಾಕಾಂಕ್ಷಿ ಶಿಷ್ಯರಿಗೆ ಅವರು ಅದರ ವಿಧಾನಗಳನ್ನು ಆಚರಣೆಗೆ ತಂದಾಗ ಸ್ಪಷ್ಟವಾಗಿ ಗೋಚರವಾಗುತ್ತದೆ ಮತ್ತು ಆಧುನಿಕ ಜಗತ್ತಿಗೆ ಅವರು ನೀಡಿದ ಭಾರತದ ಸೂಕ್ಷ್ಮ ಪರಿಜ್ಞಾನವನ್ನು ಅಂದಿನಿಂದ ಜಗತ್ತಿನಾದ್ಯಂತ ಹೆಚ್ಚು ಹೆಚ್ಚಿಗೆ ಗುರುತಿಸಲಾಗುತ್ತಿದೆ.
ಪರಮಹಂಸಜಿಯವರ ನಂತರ ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ, ಒಬ್ಬ ಸಂತನಂತಹ ಯೋಗಿಯಾಗಿ ಪರಿವರ್ತನೆಗೊಂಡ ಅಮೆರಿಕದ ವಾಣಿಜ್ಯೋದ್ಯಮಿ ರಾಜರ್ಷಿ ಜನಕಾನಂದರು: “ಭಾರತ ಮಾತೆಯು ತನ್ನ ನೆಲದ ಮಹಾನ್ ಗುರುಗಳಲ್ಲಿ ಒಬ್ಬರಾದ, ಪರಮಹಂಸ ಯೋಗಾನಂದರ ಮೂಲಕ, ನಮಗೆ ಅತ್ಯಮೂಲ್ಯವಾದ ಆತ್ಮ-ಸಾಕ್ಷಾತ್ಕಾರದ ಜ್ಞಾನವನ್ನು ತಂದುಕೊಟ್ಟಿರುವಳು….ಭಾರತವು ಇಂದು ಪರಮಹಂಸಜಿಯವರ ಬೋಧನೆಗಳ ಮೂಲಕ ನಮಗೆ ದಯಪಾಲಿಸಿರುವುದಕ್ಕೆ ಪ್ರತಿಯಾಗಿ ನಾವು ಭಾರತಕ್ಕೆ ಏನು ಕೊಟ್ಟರೂ ಕಡಿಮೆಯೇ.”
ನೀವು ಯೋಗದ ಒಂದು ಗಹನವಾದ ಜ್ಞಾನವನ್ನು ಪಡೆಯಲು ಮತ್ತು ಅದು ಎಲ್ಲರಿಗೂ ಹೇಗೆ ಅನ್ವಯಿಸುತ್ತದೆ ಎಂದು ತಿಳಿಯಲು ಬಯಸುವಿರೇನು?
ಪರಮಹಂಸಜಿಯವರ ಕೆಳಗಿನ ಉದ್ಧರಣೆಗಳು ಚೇತನದೊಡನೆ ಸಂಯೋಗದ ಭಾರತದ ಪುರಾತನ ವಿಜ್ಞಾನದ ಮತ್ತು ಅದನ್ನು ಅಮೆರಿಕ ಮತ್ತು ಜಗತ್ತಿನ ತೀರಗಳಿಗೆ ತಲುಪಿಸಿ ಪರಮಹಂಸಜಿ ಏನನ್ನು ಸಾಧಿಸಿದರು ಎಂಬುದರ ಒಂದು ಮಿನುಗುನೋಟವನ್ನು ನೀಡುತ್ತವೆ – ಸಂಸ್ಕೃತಿ, ಸಿದ್ಧಾಂತ ಹಾಗೂ ಕಾಲದ ನಿರ್ಬಂಧಗಳ ಮೇರೆಯನ್ನು ಅತಿಶಯಿಸಿ.
ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:
ಜಗತ್ತಿಗೆ ಭಾರತದ ಅಮೂಲ್ಯವಾದ ಕೊಡುಗೆ, ಅವಳ ಋಷಿಗಳು ಬಹಳ ಹಿಂದೆ ಅನ್ವೇಷಿಸಿದಂಥದ್ದು, ಎಂದರೆ ಧರ್ಮದ ವಿಜ್ಞಾನ – ಯೋಗ, “ದಿವ್ಯ ಸಂಸರ್ಗ” – ಅದರ ಮೂಲಕ ಭಗವಂತನನ್ನು ಒಂದು ಮತಧರ್ಮಶಾಸ್ತ್ರದ ಪರಿಕಲ್ಪನೆಯಾಗಲ್ಲದೆ ಒಂದು ವೈಯಕ್ತಿಕ ಅನುಭವವನ್ನಾಗಿ ತಿಳಿದುಕೊಳ್ಳಬಹುದು.
ಯೋಗವು, ಮರ್ತ್ಯ ಶರೀರ, ಅವಿಶ್ರಾಂತ ಮನಸ್ಸಿನೊಂದಿಗಿನ ನಮ್ಮ ಸಂಕುಚಿತ ಗುರುತಿಸುವಿಕೆಯಿಂದ ಮೇಲೆದ್ದು ನಮ್ಮನ್ನು ನಾವು ಪ್ರಶಾಂತ ಅಮರ ಆತ್ಮದೊಡನೆ ಗುರುತಿಸಿಕೊಳ್ಳುವುದನ್ನು ಹೊಂದಿದೆ.
ಇದರ ತಂತ್ರಗಳು ಕೇವಲ ನಿರ್ದಿಷ್ಟ ಬಗೆಗಳ ಮತ್ತು ಮನೋಭಾವದವರಿಗಾಗಿ, ಅಂದರೆ ಸನ್ಯಾಸಿ ಜೀವನದ ಬಗ್ಗೆ ಒಲವನ್ನು ಹೊಂದಿರುವಂಥ ಕೆಲವೇ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಏಕೆಂದರೆ, ಯೋಗದ ವಿಜ್ಞಾನವು ಒಂದು ಸಾರ್ವತ್ರಿಕ ಅವಶ್ಯಕತೆಯನ್ನು ಪೂರೈಸುತ್ತದೆ, ಇದು ಒಂದು ಸಹಜ ಸಾರ್ವತ್ರಿಕ ಆಕರ್ಷಣೆಯನ್ನು ಹೊಂದಿದೆ.
ಧರ್ಮದ ವಿಜ್ಞಾನವು ಸರ್ವಾನ್ವಯ ಸಾರ್ವತ್ರಿಕ ಸತ್ಯಗಳನ್ನು ಗುರುತಿಸುತ್ತದೆ – ಧರ್ಮದ ಮೂಲ – ಮತ್ತು ಅವುಗಳ ಕಾರ್ಯೋಪಯೋಗಿ ಅನುಷ್ಠಾನದಿಂದ ವ್ಯಕ್ತಿಗಳು ಹೇಗೆ ಅವರ ಜೀವನವನ್ನು ಭಗವಂತನ ಯೋಜನೆಗನುಗುಣವಾಗಿ ಕಟ್ಟಿಕೊಳ್ಳಬಹುದು ಎಂದು ಕಲಿಸುತ್ತದೆ. ಭಾರತದ ರಾಜ ಯೋಗದ ಬೋಧನೆಯು, ಆತ್ಮದ “ರಾಜಯೋಗ್ಯ” ವಿಜ್ಞಾನವು, ಯಾವುದೇ ಜನವರ್ಗ ಅಥವಾ ಪಂಥವನ್ನು ಗಮನಿಸದೆ, ಸಾರ್ವತ್ರಿಕವಾಗಿ ಅತ್ಯಗತ್ಯವಾದ ಆ ವಿಧಾನಗಳ ಅಭ್ಯಾಸವನ್ನು ಶಿಸ್ತುಬದ್ಧವಾಗಿ ಅಭ್ಯಾಸ ಮಾಡುತ್ತಾ ಧರ್ಮದ ಸಾಂಪ್ರದಾಯಿಕತೆಯನ್ನು ತಳ್ಳಿಹಾಕುತ್ತದೆ.
ಹೇಗೆ ವಿದ್ಯುಚ್ಛಕ್ತಿಯನ್ನು ಪಶ್ಚಿಮದಲ್ಲಿ ಅನ್ವೇಷಿಸಿ, ಭಾರತದಲ್ಲಿರುವ ನಮಗೆ ಅದರಿಂದ ಲಾಭವಾಯಿತೋ; ಹಾಗೇಯೇ ಭಗವಂತನನ್ನು ಅರಿಯುವ ಮಾರ್ಗಗಳನ್ನು ಭಾರತವು ಅನ್ವೇಷಿಸಿದೆ ಮತ್ತು ಪಶ್ಚಿಮವು ಅವುಗಳಿಂದ ಲಾಭವನ್ನು ಪಡೆದುಕೊಳ್ಳಬೇಕು. ಪ್ರಯೋಗಗಳ ಮೂಲಕ, ಭಾರತವು ಧರ್ಮದಲ್ಲಿರುವ ಸತ್ಯಗಳನ್ನು ನಿರೂಪಿಸಿದೆ. ಭವಿಷ್ಯದಲ್ಲಿ, ಎಲ್ಲೆಡೆಯೂ ಧರ್ಮವು ಕೇವಲ ಪ್ರಯೋಗಾತ್ಮಕ ವಿಷಯವಾಗಲಿದೆ; ಅದು ಕೇವಲ ನಂಬಿಕೆಯ ಮೇಲೆ ಆಧಾರವಾಗಿರುವುದಿಲ್ಲ.
ಧರ್ಮವನ್ನು ಆಚರಣೆಗೆ ತರಲು ಸಾಧ್ಯವಿದೆ, ನಿಮ್ಮ ಮೇಲೆ ನೀವೇ ಪ್ರಯೋಗಿಸಿಕೊಂಡು ವಿಜ್ಞಾನದಂತೆ ಸಾಬೀತು ಪಡಿಸಿ ಅದನ್ನು ಬಳಸಿಕೊಳ್ಳಬಹುದು. ಸತ್ಯದ ಅನ್ವೇಷಣೆಯೇ ಪ್ರಪಂಚದಲ್ಲಿನ ಅತ್ಯಂತ ಅಸಾಧಾರಣವಾದ ಅನ್ವೇಷಣೆಯಾಗಿದೆ…ಆಧ್ಯಾತ್ಮಿಕ ಆದರ್ಶಗಳ ಸುತ್ತಲೂ ನಿಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳುವುದು ಎಂಬುದನ್ನು ಕಲಿಯಿರಿ.
ಆತ್ಮವು ಸಂಪೂರ್ಣವಾಗಿ ಪರಿಪೂರ್ಣವಾಗಿದೆ, ಆದರೆ ಶರೀರದೊಂದಿಗೆ ಅದನ್ನು ಅಹಂ ಎಂದು ಗುರುತಿಸಿಕೊಂಡಾಗ, ಮನುಷ್ಯನ ನ್ಯೂನತೆಗಳಿಂದ ಅದರ ಅಭಿವ್ಯಕ್ತಿಯು ವಿರೂಪಗೊಳ್ಳುತ್ತದೆ…ನಮ್ಮಲ್ಲಿ ಮತ್ತು ಇತರರಲ್ಲಿರುವ ದಿವ್ಯ ಪ್ರಕೃತಿಯನ್ನು ತಿಳಿಯುವುದನ್ನು ಯೋಗ ನಮಗೆ ಕಲಿಸುತ್ತದೆ. ಯೋಗ ಧ್ಯಾನದ ಮೂಲಕ ನಾವು ಕೂಡ ದೇವತೆಗಳೆಂದು ನಾವು ಅರಿಯಬಹುದು.
ವೈಎಸ್‌ಎಸ್ ವೆಬ್‌ಸೈಟಿನಲ್ಲಿ ನೀವು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿಯವರ ಒಂದು ಬ್ಲಾಗ್ ಪ್ರಕಟಣೆಯನ್ನು ಓದಬಹುದು, ಅಲ್ಲಿ ಅವರು, ಪರಮಹಂಸ ಯೋಗಾನಂದರು 1920ರಲ್ಲಿ ಪಶ್ಚಿಮಕ್ಕೆ ಬಂದಾಗಿನಿಂದ ಜಗತ್ತಿಗೆ ನೀಡಿದ ಸಾರ್ವತ್ರಿಕ ಆಧ್ಯಾತ್ಮಿಕತೆಯ ಪ್ರಮುಖ ಕೊಡುಗೆಗಳ ವಿವರಣೆಗಳನ್ನು ಹಂಚಿಕೊಳ್ಳುತ್ತಾರೆ – ಇನ್ನೂ ಬೇರೂರುತ್ತಿರುವ ಮತ್ತು ಸಮಯ ಸರಿದಂತೆ ಹೆಚ್ಚು ಹೆಚ್ಚಿನ ಜೀವಗಳನ್ನು ಪರಿವರ್ತಿಸುವ ಕ್ರಾಂತಿಕಾರಕ ವಿಷಯಗಳು.