1925ರಲ್ಲಿ ಲಾಸ್ ಏಂಜಲೀಸ್‌ನ ಮೌಂಟ್ ವಾಷಿಂಗ್ಟನ್‌ನಲ್ಲಿ ಪರಮಹಂಸ ಯೋಗಾನಂದರು ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್‌ನ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯನ್ನು ಸ್ಥಾಪಿಸಿದ 100ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್‌ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದಗಿರಿ ಅವರು ವಿಶೇಷ ಪ್ರವಚನ ನೀಡಿದರು.
ಅವರು ಪ್ರೀತಿಯಿಂದ ಎಸ್‌ಆರ್‌ಎಫ್ ಮಾತೃಕೇಂದ್ರ ಎಂದು ಹೆಸರಿಸಿದ ಈ ಸ್ಥಳವನ್ನು, ಯೋಗಾನಂದಜಿಯವರು ಎಸ್‌ಆರ್‌ಎಫ್ ಸನ್ಯಾಸಿಗಳ ತರಬೇತಿ ಕೇಂದ್ರವಾಗಿಯೂ, ಕ್ರಿಯಾಯೋಗದ ಪ್ರಾಚೀನ ವಿಜ್ಞಾನವನ್ನು ವಿಶ್ವಾದ್ಯಂತ ಪ್ರಸಾರಗೊಳಿಸುವ ಆಡಳಿತ ಕೇಂದ್ರವಾಗಿಯೂ ಸ್ಥಾಪಿಸಿದರು.
1936ರಲ್ಲಿ ಮಾತೃಕೇಂದ್ರದಲ್ಲಿ ನಡೆದ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ ಅವರು ಪ್ರಾರ್ಥಿಸಿದರು: “ಪರಮಪಿತನೇ… ನಿನ್ನ ಪ್ರೀತಿಯ ಮೂಲಕ ನಾವು ಮೌಂಟ್ ವಾಷಿಂಗ್ಟನ್ ಅನ್ನು ಭೂಮಿಯ ಮೇಲಿನ ಸ್ವರ್ಗವನ್ನಾಗಿಸಲಿ ಎಂದು ನಮ್ಮನ್ನು ಆಶೀರ್ವದಿಸು… ನಿನ್ನನ್ನು ಅರಸುತ್ತ ಇಲ್ಲಿಗೆ ಬರುವ ಪ್ರತಿಯೊಬ್ಬರ ಹೃದಯದಲ್ಲಿ ಹೊತ್ತೊಯ್ಯಬಹುದಾದ ಸ್ವರ್ಗ ಸ್ಥಾಪನೆಯಾಗಲಿ.”
ಸ್ವಾಮಿ ಚಿದಾನಂದಜಿ ಅವರೊಂದಿಗಿನ ಈ ವಿಶೇಷ ಕಾರ್ಯಕ್ರಮವನ್ನು ಲಾಸ್ ಏಂಜಲೀಸ್‌ನಲ್ಲಿರುವ ಎಸ್‌ಆರ್‌ಎಫ್‌ನ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಿಂದ ನೇರ ಪ್ರಸಾರ ಮಾಡಲಾಯಿತು.
















