ಮುಂದೆ ಆಯೋಜಿಸುವ ಘಟನಾವಳಿಯಲ್ಲಿ ನೀವು ನಮ್ಮೊಂದಿಗೆ ಭಾಗಿಯಾಗಲು ಇಚ್ಛಿಸಿದಲ್ಲಿ, ದಯವಿಟ್ಟು ಘಟನಾವಳಿಗಳು ಪುಟಕ್ಕೆ ಭೇಟಿ ನೀಡಿ.
ವೈಎಸ್‌ಎಸ್ ಪಾಠಗಳ ಹೊಸ ಆವೃತ್ತಿಯ
ಕನ್ನಡ ಅನುವಾದದ ಬಿಡುಗಡೆ
ಮಾರ್ಚ್ 22, 2026
ಪರಮಹಂಸ ಯೋಗಾನಂದರು, ನಿಮ್ಮ ಆತ್ಮ-ಸಾಕ್ಷಾತ್ಕಾರದ ವೈಯಕ್ತಿಕ ಪಯಣದಲ್ಲಿ ವೈಎಸ್ಎಸ್ ಪಾಠಗಳು ಒಂದು ಮೂಲಭೂತ ಅಂಶವಾಗಿರಬೇಕೆಂದು ಉದ್ದೇಶಿಸಿದ್ದರು — ಅದೆಂದರೆ, ಶಾಶ್ವತ, ಆನಂದಮಯ ಪರಮಾತ್ಮನೊಂದಿಗೆ ಒಂದಾಗಿರುವ ನಿಮ್ಮ ದಿವ್ಯ, ಅಮರ ಆತ್ಮದ ಜಾಗೃತ ಪ್ರಜ್ಞೆ.
ಕೈಪಿಡಿ ಮತ್ತು ಪದಕೋಶ — ಯೋಗದಾ ಸತ್ಸಂಗ ಪಾಠಗಳ ವಿದ್ಯಾರ್ಥಿಗಳಿಗೆ
ಪರಮಹಂಸ ಯೋಗಾನಂದರು, ಯೋಗದಾ ಸತ್ಸಂಗ ಪಾಠಗಳನ್ನು, ಮುಂಬರುವ ಜಾಗತಿಕ ನಾಗರಿಕತೆಗಾಗಿ ಒಂದು ವಿಶೇಷ ಆಧ್ಯಾತ್ಮಿಕ ಅನುಗ್ರಹವಾಗಿ ಜಗತ್ತಿಗೆ ಕೊಡಲು ತಾವು ದೈವದಿಂದ ನಿಯೋಜಿಸಲ್ಪಟ್ಟಿದ್ದು, ಈ ಬೋಧನೆಗಳೇ ಅದರ ತಿರುಳು ಎಂದು ಪರಿಗಣಿಸಿದ್ದರು. ಈ ಪಾಠಗಳು ಕ್ರಿಯಾ ಯೋಗದ ಪ್ರಾಚೀನ ಆಧ್ಯಾತ್ಮಿಕ ವಿಜ್ಞಾನದ ಸಮಗ್ರ ನಿರೂಪಣೆಯನ್ನು ಒಳಗೊಂಡಿವೆ.
ಯೋಗದಾ ಸತ್ಸಂಗ ಪಾಠಗಳ ಕನ್ನಡ ಆವೃತ್ತಿಯ ನೋಂದಣಿ ಈಗ ಪ್ರಾರಂಭವಾಗಿದೆ!
ಯೋಗದಾ ಸತ್ಸಂಗ ಆತ್ಮ-ಸಾಕ್ಷಾತ್ಕಾರದ ಪಾಠಗಳು ಈಗ ಕನ್ನಡದಲ್ಲಿ ಲಭ್ಯವಿದ್ದು, ಈ ಕನ್ನಡ ಮೂಲ ಪಾಠಗಳ ಸರಣಿಗೆ ನೋಂದಣಿ ಈಗ ಪ್ರಾರಂಭವಾಗಿದೆ ಎಂದು ನಿಮಗೆ ತಿಳಿಸಲು ನಾವು ಅತ್ಯಂತ ಸಂತೋಷಪಡುತ್ತೇವೆ.
ಸ್ವಾಮಿ ಚಿದಾನಂದ ಗಿರಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ / ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್ (ವೈಎಸ್‌ಎಸ್/ಎಸ್‌ಆರ್‌ಎಫ್) ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರು, ಮಾರ್ಚ್ 15, 2026 ರಂದು ತಮ್ಮ ಭಾಷಣದಲ್ಲಿ ಈ ಯುಗಪರಿವರ್ತಕ ಮೈಲಿಗಲ್ಲನ್ನು ಘೋಷಿಸಿದರು. ಈ ಭಾಷಣವನ್ನು, ವೈಎಸ್‌ಎಸ್‌ನಿಂದ ನಡೆಸಲ್ಪಟ್ಟ ಮಾರ್ಚ್ 2026 ರ ಸಾಧನಾ ಸಂಗಮದ ಸಮಾಪ್ತಿಯಲ್ಲಿ, ಯುಎಸ್‌ಎಯ ಲಾಸ್ ಏಂಜಲೀಸ್‌ನಲ್ಲಿರುವ ಎಸ್‌ಆರ್‌ಎಫ್ ಅಂತರರಾಷ್ಟ್ರೀಯ ಪ್ರಧಾನ ಕಛೇರಿಯಿಂದ ನೇರ ಪ್ರಸಾರ ಮಾಡಲಾಯಿತು.
ನೋಂದಣಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ.
ಬಿಡುಗಡೆ ಸಮಾರಂಭಕ್ಕಾಗಿ ಇಂದು ನಮ್ಮೊಂದಿಗೆ ಸೇರಿಕೊಳ್ಳಿ
ಈ ಸಂತೋಷದಾಯಕ ಸಂದರ್ಭವನ್ನು ಆಚರಿಸಲು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸಂಸ್ಥಾಪನಾ ದಿನದ 109ನೇ ವಾರ್ಷಿಕೋತ್ಸವದಂದು ಹಾಸನದಲ್ಲಿ ನಡೆಸುವ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೈಎಸ್‌ಎಸ್ ಸನ್ಯಾಸಿಗಳಿಂದ ಈ ಪಾಠಗಳನ್ನು ಬಿಡುಗಡೆ ಮಾಡಲಾಗುವುದು. ಇಂದಿನ ಈ ಮಹತ್ವದ ಸಮಾರಂಭಕ್ಕಾಗಿ ಸಂಜೆ 6:00 ಗಂಟೆಗೆ (ಅಧಿಕೃತ ಭಾರತೀಯ ಕಾಲಮಾನ) ನಮ್ಮೊಂದಿಗೆ ಸೇರಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಇದನ್ನು ನಮ್ಮ ಜಾಲತಾಣದಲ್ಲಿ ನೇರಪ್ರಸಾರ ಮಾಡಲಾಗುವುದು.
ಭಾನುವಾರ, ಮಾರ್ಚ್ 22, 2026
ಸಂಜೆ 6:00 – 7:15 ರ ವರೆಗೆ
(ಭಾರತೀಯ ಕಾಲಮಾನ)
ದಯವಿಟ್ಟು ಗಮನಿಸಿ: ಈ ಕಾರ್ಯಕ್ರಮದ ರೆಕಾರ್ಡಿಂಗ್ ನಂತರ ವೀಕ್ಷಿಸಲು ಲಭ್ಯವಿರುತ್ತದೆ.
ನೋಂದಣಿ ಕುರಿತು ಒಂದು ಸೂಚನೆ
ಇಂದಿನಿಂದ, ನೀವು ವೈಎಸ್‌ಎಸ್ ಡಿವೋಟಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಈ ಪಾಠಗಳಿಗೆ ಚಂದಾದಾರರಾಗಬಹುದು. ನಿಮಗೆ ಡಿವೋಟಿ ಪೋರ್ಟಲ್ ಖಾತೆ ಇಲ್ಲದಿದ್ದರೆ, ದಯವಿಟ್ಟು ಈಗಲೇ ಒಂದು ಖಾತೆಯನ್ನು ತೆರೆಯಿರಿ. ಪಾಠಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ತಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದಲ್ಲಿ ಅಥವಾ ತಾಂತ್ರಿಕ ಸಹಾಯದ ಅಗತ್ಯವಿದ್ದಲ್ಲಿ, ದಯವಿಟ್ಟು ವೈಎಸ್ಎಸ್ ಸಹಾಯವಾಣಿಯನ್ನು ಈ ಮೂಲಕ ಸಂಪರ್ಕಿಸಿ:
- ಇಮೇಲ್: [email protected]
- ದೂರವಾಣಿ: (0651) 6655 555, ಸೋಮವಾರದಿಂದ ಶನಿವಾರದವರೆಗೆ: ಬೆಳಿಗ್ಗೆ 9:00 ರಿಂದ ಸಂಜೆ 4:30 ರ ವರೆಗೆ (ಭಾರತೀಯ ಕಾಲಮಾನ)
ಇತರ ಭಾರತೀಯ ಭಾಷೆಗಳಲ್ಲಿಯೂ ಭಾಷಾಂತರಗಳು ಪ್ರಗತಿಯಲ್ಲಿವೆ. ಮುಂದಿನ ದಿನಗಳಲ್ಲಿ ಇವುಗಳೂ ಸಹ ಲಭ್ಯವಾಗುವುದೆಂಬ ಭರವಸೆಯನ್ನು ಹೊಂದಿದ್ದೇವೆ. ಇದರಿಂದ ಸಾಧ್ಯವಾದಷ್ಟು ಹೆಚ್ಚು ಸಾಧಕರಿಗೆ, ಅವರ ಮಾತೃಭಾಷೆಯಲ್ಲಿ ಪರಮಹಂಸ ಯೋಗಾನಂದಜಿಯವರ ಬೋಧನೆಗಳ ಬೆಳಕು ಲಭ್ಯವಾಗುತ್ತದೆ.

















