ಸ್ಮರಣಾರ್ಥ ದೀರ್ಘಾವಧಿ ಧ್ಯಾನ

ಭಾನುವಾರ, ಮೇ 4, 2025

ಬೆಳಿಗ್ಗೆ 6:10

– ಬೆಳಿಗ್ಗೆ 9:30

(ಅಧಿಕೃತ ಭಾರತೀಯ ಕಾಲಮಾನ)

ಕಾರ್ಯಕ್ರಮದ ಬಗ್ಗೆ

ಗುರುಗಳ ಸನ್ನಿಧಿಯನ್ನು ಬಯಸುವವರು, ಕೇವಲ ಅವರ ಭೌತಿಕ ಉಪಸ್ಥಿತಿಯಲ್ಲಿ ಇರುವುದಷ್ಟೇ ಅಲ್ಲ, (ಕೆಲವು ಸಲ ಇದು ಅಸಾಧ್ಯ) ಮುಖ್ಯವಾಗಿ ಅವರನ್ನು ತಮ್ಮ ಹೃದಯಗಳಲ್ಲಿ ಇರಿಸಿಕೊಳ್ಳುವುದು ಮತ್ತು ತಾತ್ವಿಕವಾಗಿ ಅವರಲ್ಲಿ ಒಂದಾಗಿ, ಅವರೊಂದಿಗೆ ತಮ್ಮನ್ನು ಶ್ರುತಿಗೂಡಿಸಿಕೊಳ್ಳುವುದು.

— ಶ್ರೀ ಶ್ರೀ ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ, ದಿ ಹೋಲಿ ಸೈನ್ಸ್

ದಿ ಹೋಲಿ ಸೈನ್ಸ್ ‌ನಲ್ಲಿ, ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿಯವರು ವಿಶ್ವಕ್ಕೆ ಒಂದು ಅತಿ ವಿಶೇಷವಾದ ಸಿದ್ದಾಂತವನ್ನು ನೀಡಿರುವರು. ಶಾಸ್ತ್ರಗಳಲ್ಲಿನ ಸಮಾನಾಂತರ ಮಾರ್ಗಗಳನ್ನು ಅನ್ವೇಷಿಸಿ, ಸಕಲ ಧರ್ಮಗಳ ಅತ್ಯಗತ್ಯ ಐಕ್ಯತೆಯನ್ನು ಪ್ರಕಟಿಸಿರುವರು. ಜ್ಞಾನಾವತಾರ ಅಥವಾ “ಬುದ್ಧಿವಂತಿಕೆಯ ಜೀವಂತ ರೂಪ” ಎಂದು ಗೌರವಿಸಲ್ಪಡುವ, ಹಾಗೂ ಪರಮಹಂಸ ಯೋಗಾನಂದರ ಗುರು, ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿಯವರು, ಮೇ 10, 1855 ರಂದು, ಪಶ್ಚಿಮ ಬಂಗಾಳದ ಸೆರಾಂಪುರದಲ್ಲಿ ಜನಿಸಿದರು.

ಸ್ವಾಮಿ ಶ್ರೀ ಯುಕ್ತೇಶ್ವರರ ಆವಿರ್ಭವ ದಿವಸದ ಗೌರವಾರ್ಥ, ಒಂದು ವಿಶೇಷ ಸ್ಮರಣಾರ್ಥ ದೀರ್ಘಾವಧಿ ಧ್ಯಾನವನ್ನು, ಒಬ್ಬ ವೈಎಸ್ಎಸ್ ಸನ್ಯಾಸಿಯವರ ಮಾರ್ಗದರ್ಶನದಲ್ಲಿ, ಭಾನುವಾರ, ಮೇ 4 ರಂದು ನಡೆಸಲಾಯಿತು. ಈ ಆತ್ಮೋದ್ಧಾರಕ ಕಾರ್ಯಕ್ರಮವು ಇಂಗ್ಲಿಷ್ ನಲ್ಲಿದ್ದು, ಭಕ್ತಿ ಗಾಯನ, ಸ್ಪೂರ್ತಿದಾಯಕ ಪಠಣ, ಮತ್ತು ಧ್ಯಾನದ ಅವಧಿಗಳನ್ನು ಹೊಂದಿದ್ದಿತು.

ಈ ಅನುಗ್ರಹಿತ ಸಂದರ್ಭದಲ್ಲಿ, ವೈಯಕ್ತಿಕ ಕಾರ್ಯಕ್ರಮಗಳನ್ನು,ವೈ ಎಸ್ಎಸ್ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ಸಹ ನಡೆಸಲಾಯಿತು.

ಈ ಪವಿತ್ರ ಸಂದರ್ಭದಲ್ಲಿ ಕಾಣಿಕೆ ನೀಡಲು ಇಚ್ಛಿಸಿದಲ್ಲಿ, ದಯಮಾಡಿ ಈ ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ನೀಡಿ. ಸ್ವಾಮಿ ಶ್ರೀ ಯುಕ್ತೇಶ್ವರರು ಹಾಗೂ ವೈಎಸ್ಎಸ್ ಗುರುಗಳ ಪರಂಪರೆಯಿಂದ ಹರಿಯುವ, ಅಗಣಿತ ಆಶೀರ್ವಾದಗಳಿಗೆ ಮೆಚ್ಚುಗೆಯ ಅಭಿವ್ಯಕ್ತಿಯಾಗಿ, ನಾವು ಸ್ವೀಕರಿಸುವ ತಮ್ಮ ಕೊಡುಗೆಗಾಗಿ, ಆಳವಾಗಿ ಕೃತಜ್ಞರಾಗಿದ್ದೇವೆ.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ