Yogoda Satsanga Dhyana Mandali – Sahibabad
C/O Dr. N.C. Kaushik
11/214, Sector-3
Rajendra Nagar
Sahibabad - 201005
Ghaziabad
Uttar Pradesh
India
ಸಾಮೂಹಿಕ ಧ್ಯಾನವು ಹೊಸ ಆಧ್ಯಾತ್ಮಿಕ ಆಕಾಂಕ್ಷಿಗಳನ್ನು ಹಾಗೆಯೇ ಅನುಭವಿ ಧ್ಯಾನಿಗಳನ್ನು ರಕ್ಷಿಸುವ ಒಂದು ಭದ್ರಕೋಟೆಯಾಗಿದೆ. ಒಟ್ಟಾಗಿ ಧ್ಯಾನಿಸುವುದರಿಂದ, ಸಾಮೂಹಿಕ ಆಕರ್ಷಣೆಯ ಅದೃಶ್ಯ ಕಂಪನ ವಿನಿಮಯದ ನಿಯಮದ ಮೂಲಕ, ಗುಂಪಿನ ಪ್ರತಿಯೊಬ್ಬ ಸದಸ್ಯನ ಆತ್ಮ-ಸಾಕ್ಷಾತ್ಕಾರದ ಮಟ್ಟವು ಹೆಚ್ಚುತ್ತದೆ.
— ಶ್ರೀ ಶ್ರೀ ಪರಮಹಂಸ ಯೋಗಾನಂದರು
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ನ Sahibabad Meditation Centre ಕ್ಕೆ ನಿಮಗೆ ಸ್ವಾಗತ. ಪರಮಹಂಸ ಯೋಗಾನಂದರು, ಸರ್ವತೋಮುಖ ಯಶಸ್ಸು, ಯೋಗಕ್ಷೇಮ ಮತ್ತು ದೇವರ ನೇರ ವೈಯಕ್ತಿಕ ಅನುಭವವನ್ನು ಸಾಧಿಸಲು ಕ್ರಿಯಾ ಯೋಗ ದ ಪ್ರಾಚೀನ ವೈಜ್ಞಾನಿಕ ಬೋಧನೆಗಳು ಮತ್ತು ಧ್ಯಾನ ತಂತ್ರಗಳನ್ನು ಲಭ್ಯವಾಗಿಸಲು 1917ರಲ್ಲಿ ವೈಎಸ್ಎಸ್ ಅನ್ನು ಸ್ಥಾಪಿಸಿದರು.
ವೈಎಸ್ಎಸ್ ಸಂಸ್ಥೆಯು ಭಾರತದಾದ್ಯಂತ 200ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದ್ದು, ಎಲ್ಲಾ ಸತ್ಯಾನ್ವೇಷಕರಿಗೆ ಸಾಮೂಹಿಕ ಧ್ಯಾನಗಳ ಪ್ರಭಾವವನ್ನು ಅನುಭವಿಸಲು ಮತ್ತು ಆಧ್ಯಾತ್ಮಿಕ ಸತ್ಸಂಗಗಳಲ್ಲಿ ಪಾಲ್ಗೊಳ್ಳಲು ಸಹಾಯ ಮಾಡುತ್ತದೆ.
ಪರಮಹಂಸ ಯೋಗಾನಂದರ ಜ್ಞಾನ ರತ್ನಗಳಾದ ವೈಎಸ್ಎಸ್ ಪ್ರಕಟಣೆಗಳು, ಆಧ್ಯಾತ್ಮಿಕ ಶ್ರೇಷ್ಠ ಕೃತಿ ಮತ್ತು ಅತಿ ಹೆಚ್ಚು ಮಾರಾಟವಾದ ಯೋಗಿಯ ಆತ್ಮಕಥೆಯೂ ಸೇರಿದಂತೆ, ನಮ್ಮ ಕೇಂದ್ರಗಳಲ್ಲಿ ಮತ್ತು ಆನ್‌ಲೈನ್ ಪುಸ್ತಕ ಮಳಿಗೆಯಲ್ಲಿ ಲಭ್ಯವಿವೆ.
ವೈಎಸ್ಎಸ್‌ಗೆ ಹೊಸಬರೇ?
ಮನೆಯಲ್ಲಿ ಅಧ್ಯಯನ ಮಾಡಬಹುದಾದ ಪಠ್ಯಕ್ರಮವಾದ ವೈಎಸ್ಎಸ್ ಪಾಠಗಳು, ನೀವು ಎಂದಿಗೂ ಊಹಿಸಿರದ ರೀತಿಯಲ್ಲಿ ನಿಮ್ಮ ಜೀವನವನ್ನು ಹೇಗೆ ಪರಿವರ್ತಿಸಬಲ್ಲವು ಮತ್ತು ಸಮತೋಲಿತ ಹಾಗೂ ಯಶಸ್ವಿ ಜೀವನವನ್ನು ನಡೆಸಲು ನಿಮಗೆ ಹೇಗೆ ಸಹಾಯ ಮಾಡಬಲ್ಲವು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಿ.
ನಾವು ಸಾರ್ವಜನಿಕರಿಗಾಗಿ ನಿಯಮಿತ ಧ್ಯಾನ ಮತ್ತು ಸತ್ಸಂಗಗಳನ್ನು ನಡೆಸುತ್ತೇವೆ. ಈ ಅವಧಿಗಳಲ್ಲಿ ಧ್ಯಾನ, ಭಕ್ತಿಪೂರ್ವಕ ಕೀರ್ತನೆ ಮತ್ತು ಪ್ರೇರಣಾದಾಯಕ ವಾಚನಗಳು ಸೇರಿವೆ.
ವೈಎಸ್ಎಸ್ ಸಂಸ್ಮರಣಾ ದಿನಗಳು, ದೀರ್ಘಾವಧಿ ಧ್ಯಾನಗಳು ಮತ್ತು ಇತರೆ ವಿಶೇಷ ಕಾರ್ಯಕ್ರಮಗಳನ್ನು ವರ್ಷವಿಡೀ ಆಯೋಜಿಸಲಾಗುತ್ತದೆ.
ಕೆಲವು ಸ್ಮರಣಾರ್ಥ ಕಾರ್ಯಕ್ರಮಗಳು ಇಂತಿವೆ:
ವೇಳಾಪಟ್ಟಿಯನ್ನು ತಿಳಿಯಲು ದಯವಿಟ್ಟು Yogoda Satsanga Dhyana Mandali – Sahibabad ಅನ್ನು ಸಂಪರ್ಕಿಸಿ.
ಇದನ್ನು ಹಂಚಿಕೊಳ್ಳಿ