
ಸಂಘ ಮಾತಾ ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಅಧ್ಯಕ್ಷರಾದ ಶ್ರೀ ಶ್ರೀ ಮೃಣಾಲಿನಿ ಮಾತಾ, ಅವರ 2014ರ ಹೊಸ ವರುಷದ ಸಂದೇಶದಿಂದ:
“ಈ ವರ್ಷದ ಜನವರಿ 31ರಂದು, ನಮ್ಮೆಲ್ಲರ ಪ್ರೀತಿಯ ಶ್ರೀ ಶ್ರೀ ದಯಾಮಾತಾರವರ ಜನ್ಮದಿನದ 100ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ಅವರ ದಿವ್ಯ ಜೀವನವು ನಮ್ಮೆಲ್ಲರನ್ನೂ ಸ್ಪರ್ಶಿಸಿದೆ ಮತ್ತು ಅವರ ಆತ್ಮವು, ಈ ಬ್ರಹ್ಮಾಂಡದ ಆಚೆಗಿನ ಪ್ರಕಾಶ ಮತ್ತು ಆನಂದದ ಅನುಗ್ರಹಿತ ಆನಂದಮಯ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಇದ್ದರೂ, ಅವರು ಪಶ್ಚಿಮದಲ್ಲಿ ಮತ್ತು ಪೂರ್ವದಲ್ಲಿ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಪರಿವಾರದ ಮೇಲೆ ಸುರಿಸಿದ ಪ್ರೇಮ ಮತ್ತು ಕಾಳಜಿಗಳು ಇಂದಿಗೂ ನಮ್ಮ ಜೊತೆಯಲ್ಲಿವೆ. ಗುರುದೇವರ ನುಡಿಗಳು, ‘ಪ್ರೇಮವು ಮಾತ್ರ ನನ್ನ ಜಾಗವನ್ನು ತುಂಬಬಲ್ಲುದು,’ ಎಂಬುದು ಅವರಲ್ಲಿ ಪೂರ್ಣ ಅಭಿವ್ಯಕ್ತಿಯನ್ನು ಕಂಡಿತು ಮತ್ತು ಅದು ಸದಾ ಕಾಲ ನಮ್ಮ ಪ್ರಜ್ಞೆಯಲ್ಲಿ, ಅವರ ಸುಂದರ ಉದಾಹರಣೆಯ ಮೂಲಕ ಪ್ರತಿಧ್ವನಿಸುತ್ತದೆ.”
ಶ್ರೀ ಮೃಣಾಲಿನಿ ಮಾತಾರವರು ಶ್ರೀ ದಯಾ ಮಾತಾರವರ ಜನ್ಮದಿನದ ಶತಮಾನೋತ್ಸವದಂದು ನೀಡಿದ ವಿಶೇಷ ಸಂದೇಶವನ್ನು ಓದಿರಿ
ಪ್ರೇಮ, ನಮ್ರತೆ ಮತ್ತು ಭಗವಂತನಿಗೆ ಸಮರ್ಪಿತವಾದ ಸೇವೆಯ ಜೀವನ
ಶ್ರೀ ದಯಾಮಾತಾರವರು ಒಂದು ಅಸಾಧಾರಣ ಜೀವನ ನಡೆಸಿದರು — ಅದರಲ್ಲಿ ಸುಮಾರು 80 ವರ್ಷಗಳಷ್ಟು ಕಾಲ ತಮ್ಮ ಗುರುವಿನ ಆಶ್ರಮಗಳಲ್ಲಿ ಸನ್ಯಾಸಿ ಶಿಷ್ಯೆಯಾಗಿ ಕಳೆದರು, ಅವರ ಆಲೋಚನೆಗಳು ಸದಾಕಾಲ ಭಗವಂತನ ಪ್ರೇಮದಿಂದ ಆವರಿಸಲ್ಪಟ್ಟಿದ್ದವು ಮತ್ತು ಅವರ ಕ್ರಿಯೆಗಳು ಅವನ ಸೇವೆಗೆ ಸಮರ್ಪಿತವಾಗಿದ್ದವು.
ಪರಮಹಂಸ ಯೋಗಾನಂದರ ಬಗೆಗಿನ ಶ್ರೀ ದಯಾಮಾತಾ ಅವರ ನೆನಪುಗಳು
“ಆತ್ಮವನ್ನು ಸ್ಪರ್ಶಿಸಿದ ಘಟನೆಗಳು ಎಂದಿಗೂ ಮಾಸುವುದಿಲ್ಲ; ಅವು ನಮ್ಮ ಅಸ್ತಿತ್ವದ ನಿತ್ಯ-ಜೀವಂತ ಮತ್ತು ಉತ್ಸಾಹಗಳಿಂದ ತುಡಿಯುತ್ತಿರುವ ಭಾಗವಾಗುತ್ತವೆ. ನನ್ನ ಗುರು ಪರಮಹಂಸ ಯೋಗಾನಂದರ ಜೊತೆಗಿನ ನನ್ನ ಭೇಟಿಯು ಆ ರೀತಿಯದಾಗಿತ್ತು….”
ಮಹಾವತಾರ ಬಾಬಾಜಿಯವರ ಅನುಗ್ರಹ: ಶ್ರೀ ದಯಾಮಾತಾ ಅವರ ವೈಯಕ್ತಿಕ ಅನುಭವ
ಭಾರತದಲ್ಲಿ ಪರಮಹಂಸ ಯೋಗಾನಂದರ ಆಶ್ರಮಗಳಿಗೆ ಭೇಟಿ ನೀಡಿದಾಗ (ಅಕ್ಟೋಬರ್ 1963 – ಮೇ 1964), ಶ್ರೀ ದಯಾಮಾತಾರವರು ಮಹಾವತಾರ ಬಾಬಾಜಿಯವರ ಭೌತಿಕ ಉಪಸ್ಥಿತಿಯಿಂದ ಪವಿತ್ರೀಕೃತವಾಗಿರುವ, ಹಿಮಾಲಯದ ಗುಹೆಗೆ ಪವಿತ್ರ ತೀರ್ಥ ಯಾತ್ರೆ ಮಾಡಿದರು.
ಶ್ರೀ ದಯಾಮಾತಾ ಅವರ ಸಂದೇಶಗಳು
ದಯಾಮಾತಾಜಿಯವರು ವಿಶೇಷ ಸಂದೇಶಗಳನ್ನು ವರ್ಷಪೂರ್ತಿ ಮತ್ತು ವಿಷಮ ಪರಿಸ್ಥಿತಿಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಅವುಗಳು ವಿಶ್ವಾದ್ಯಂತ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ಮಾರ್ಗದರ್ಶನ, ಸ್ಫೂರ್ತಿ ಮತ್ತು ಆಧ್ಯಾತ್ಮಿಕ ಪ್ರೋತ್ಸಾಹದ ನಿರಂತರ ಸೆಲೆಯಾಗಿದ್ದವು.
ವಿಶ್ವಾದ್ಯಂತ ಪ್ರಾರ್ಥನಾ ಮಂಡಳಿ–ಶ್ರೀ ದಯಾ ಮಾತಾ ಅವರಿಂದ ಒಂದು ಆಹ್ವಾನ
ಶ್ರೀ ದಯಾಮಾತಾರವರಿಂದ ಒಂದು ಆಹ್ವಾನ: “ನಮ್ಮ ಜೊತೆಗೂಡಿ, ಪ್ರಾರ್ಥನೆಯ ಕ್ರಿಯಾತ್ಮಕ ಶಕ್ತಿಯ ಮೂಲಕ, ಇತರರ ಸೇವೆ ಮಾಡಲು ನಿಮ್ಮನ್ನು ಆಹ್ವಾನಿಸಲು ಇಚ್ಚಿಸುತ್ತೇನೆ…”
- Paramahansa Yogananda’s Immortal Message: Celebrating a Beloved World Teacher
- Fulfilling the Soul’s Deepest Needs
- How Can My Prayers Help Others?
- Experiencing the Unconditional Love of God
- When I Am Only a Dream | A Poem by Paramahansa Yogananda Read by Sri Daya Mata
- Scripture Of Love
- A True Guru Guides Us From Experience
ಶ್ರೀ ದಯಮಾತಾರವರ ಪುಸ್ತಕಗಳು ಮತ್ತು ರೆಕಾರ್ಡಿಂಗ್ಗಳು
ಸಂಸ್ಮರಣೆ: ಶ್ರೀ ದಯಾ ಮಾತಾ
ಪಸಾಡೆನಾ ಸಿವಿಕ್ ಆಡಿಟೋರಿಯಮ್‌ನಲ್ಲಿ ನಡೆಸಿದ, ಸಾರ್ವಜನಿಕ ಸಂಸ್ಮರಣೆ ಸತ್ಸಂಗದ ಸಂಪೂರ್ಣ ವಿಡಿಯೋ, ವಿಶ್ವಾದ್ಯಂತದ ಸಂದೇಶಗಳು ಮತ್ತು ಶ್ರದ್ಧಾಂಜಲಿಗಳು, ಮಾಧ್ಯಮ ಪ್ರಸಾರಗಳು ಮತ್ತು ಇನ್ನಷ್ಟು.