ಪ್ರಿಯರೇ,
ಭಾರತ ಮತ್ತು ವಿಶಾಲವಾದ ಪ್ರದೇಶದ ಮೇಲೆ ಪರಿಣಾಮ ಬೀರುತ್ತಿರುವ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಉದ್ವಿಗ್ನತೆಗಳ ಸುದ್ದಿ ನನ್ನ ಹೃದಯದಲ್ಲಿ ಆಳವಾದ, ಪ್ರಾರ್ಥನಾತ್ಮಕ ಚಿಂತೆಗಳನ್ನು ಉಂಟುಮಾಡುತ್ತದೆ — ನಿಮಗೂ ಸಹ ಅದೇ ರೀತಿ ಅನ್ನಿಸುತ್ತದೆ ಎಂಬುದು ನನಗೆ ತಿಳಿದಿದೆ. ಇಂತಹ ಅಶಾಂತಿಯ ಸಮಯದಲ್ಲಿ, ನಮ್ಮೊಳಗೆ ವಾಸಿಸುವ ದೇವರ ದಿವ್ಯ ಶಾಂತಿಯ ಬಲಿಷ್ಠ ಶಕ್ತಿಯಲ್ಲಿ ನಂಬಿಕೆ, ಶಾಂತಿ, ಸಮತೋಲನ ಮತ್ತು ಸ್ಥಿರತೆಯಿಂದ ನಿಲ್ಲುವಂತೆ ನಾನು ಮನವಿ ಮಾಡುತ್ತೇನೆ. ಧ್ಯಾನ ಮಾಡುವ ಭಕ್ತರು ಇಂಥ ಸಮಯಗಳಲ್ಲಿ ಜಗತ್ತಿಗೆ ಬಹುಮುಖ್ಯವಾದ ಸೇವೆಯನ್ನು ಒದಗಿಸಬಹುದು ಮತ್ತು ದೃಷ್ಟಿಗೆ ಗೋಚರಿಸದ ಮಹತ್ವಪೂರ್ಣ ಪಾತ್ರ ವಹಿಸಬಹುದು.
ವೈಎಸ್‌ಎಸ್/ಎಸ್‌ಆರ್‌ಎಫ್‌ನ ಎಲ್ಲಾ ಭಕ್ತರು ಹಾಗೂ ಸ್ನೇಹಿತರನ್ನು, ಪರಮಹಂಸ ಯೋಗಾನಂದಜಿಯವರ ಆಶ್ರಮಗಳಲ್ಲಿ ನನ್ನೊಡನೆ ಹಾಗೂ ಇತರ ಸನ್ಯಾಸಿಗಳೊಡನೆ ಧ್ಯಾನದ ಸಮಯದಲ್ಲಿ ಮತ್ತು ದಿನದ ಅನೇಕ ಹೊತ್ತಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ನಾನು ಆಹ್ವಾನಿಸುತ್ತೇನೆ. ಗುರುದೇವರ ಆತ್ಮೀಯ ಕುಟುಂಬದ ಸದಸ್ಯರಾಗಿದ್ದು, ಅವರ ವಿಶ್ವವ್ಯಾಪಿ ಪ್ರಾರ್ಥನಾ ವೃತ್ತದ ಭಾಗಿಯಾಗಿದ್ದು, ಪ್ರತಿದಿನ ಧ್ಯಾನದ ನಂತರ ಅವರು ಬೋಧಿಸಿದ ಯೋಗದ ಉಪಶಮನಕಾರಿ ಚಿಕಿತ್ಸೆ ವಿಧಾನವನ್ನು ನಾವೆಲ್ಲರೂ ನಿರಂತರವಾಗಿ ಅಭ್ಯಾಸ ಮಾಡೋಣ — ಭಗವಂತನ ಅಮಿತ ಆಶೀರ್ವಾದಗಳು ಸಂಪೂರ್ಣ ಪ್ರದೇಶವನ್ನು ಆವರಿಸುತ್ತಿವೆ ಮತ್ತು ಪವಿತ್ರ ಓಂ ನಾದದೊಂದಿಗೆ ದೈವಪ್ರೇಮದ ಮಹಾ ಶಕ್ತಿಯನ್ನು ಹೊರಸೂಸುತ್ತಾ, ಅದು ಸಾಮರಸ್ಯ, ಸೌಹಾರ್ದತೆ ಮತ್ತು ಪರಸ್ಪರ ಭಿನ್ನತೆಗಳ ಒಕ್ಕೂಟದತ್ತ ಪರಿಸ್ಥಿತಿಯನ್ನು ತಿರುಗಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ದೃಶ್ಯೀಕರಣ ಮಾಡುತ್ತಾ.
ಎಲ್ಲರ ಹೃದಯಗಳನ್ನು ಪ್ರಕಾಶಮಾನಗೊಳಿಸಿ, ಅವರನ್ನು ಪರಸ್ಪರ ಅರ್ಥಮಾಡಿಕೊಳ್ಳುವಂತೆ ಮತ್ತು ಶಾಶ್ವತ ಶಾಂತಿಯ ಕಡೆಗೆ ನಯವಾಗಿ ಮಾರ್ಗದರ್ಶನ ಮಾಡಲಿ ಎಂದು ನಾವು ಎಲ್ಲರೂ ಒಂದಾಗಿ, ಭಗವಂತನ ಆಶೀರ್ವಾದ ಮತ್ತು ಪ್ರಕಾಶವನ್ನು ಆಹ್ವಾನಿಸೋಣ. ಪ್ರತಿಯೊಂದು ಏಕಾಗ್ರ ಪ್ರಾರ್ಥನೆಯ ಕಂಪನಗಳ ಪ್ರಸರಣದೊಂದಿಗೆ, ನಾವು ಭಗವಂತನ ಎಲ್ಲಾ ಮಕ್ಕಳಿಗೆ ದಿವ್ಯತೆಯ ಜ್ಞಾನಮಯ ಮಾರ್ಗದರ್ಶನದಿಂದ ಹಾಗೂ ಸಾನ್ನಿಧ್ಯದಿಂದ ಉದ್ಧರಿಸಲ್ಪಟ್ಟ ಉಜ್ವಲ ಭವಿಷ್ಯವೊಂದನ್ನು ನೇಯಲು ಸಹಾಯ ಮಾಡುತ್ತಿದ್ದೇವೆ.
ನಾನು ನನ್ನ ಪ್ರೀತಿಯಲ್ಲೂ ಮತ್ತು ಪ್ರಾರ್ಥನೆಗಳಲ್ಲೂ ನಿಮ್ಮೆಲ್ಲರನ್ನು ಹಿಡಿದಿಟ್ಟುಕೊಂಡಿರುವೆನು ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ನಮ್ಮ ಪ್ರೀತಿಪಾತ್ರ ಗುರುದೇವರೂ, ಪರಮಗುರುಗಳ ಶರಣಾಗತ ಸಾನ್ನಿಧ್ಯವು ನೀವು ಅವರ ಅನಂತ ಪ್ರೇಮಮಯ ಕಾಳಜಿಯಲ್ಲಿ ಸದಾ ರಕ್ಷಿತರಾಗಿದ್ದೀರಿ ಎಂಬ ಸಾಂತ್ವನದಾಯಕ ಭರವಸೆಯನ್ನು ನೀಡುತ್ತಾ ನಿಮ್ಮನ್ನೂ ನಿಮ್ಮ ಆತ್ಮೀಯರನ್ನೂ ಸದಾ ಆವರಿಸಲಿ.
ದೇವರು ಮತ್ತು ಗುರುವಿನ ನಿರಂತರ ಆಶೀರ್ವಾದಗಳೊಂದಿಗೆ,
ಸ್ವಾಮಿ ಚಿದಾನಂದ ಗಿರಿ
ಪರಮಹಂಸ ಯೋಗಾನಂದರಿಂದ ಕಲಿಸಲ್ಪಟ್ಟ ಉಪಶಮನದಾಯಕ ತಂತ್ರದ ಅಭ್ಯಾಸಕ್ಕಾಗಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಜೇಶನ್ ಫೆಲೋಷಿಪ್‌ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖಂಡರಾಗಿರುವ ಸ್ವಾಮಿ ಚಿದಾನಂದ ಗಿರಿ ಅವರೊಂದಿಗೆ ಸೇರಿಕೊಳ್ಳಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ಸೇರಿಕೊಳ್ಳಲು ದಯವಿಟ್ಟು ಕೆಳಗೆ ಕೊಟ್ಟಿರುವ ಲಿಂಕನ್ನು ಒತ್ತಿ: