
ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್, (ವೈಎಸ್ಎಸ್/ಎಸ್ಆರ್‌ಎಫ್) ನ ಅಧ್ಯಕ್ಷರು ಮತ್ತು ಆಧ್ಯಾತ್ಮ ಮುಖಂಡರು, ಇತ್ತೀಚೆಗೆ ಫೆಬ್ರವರಿ 2023 ರಲ್ಲಿ ಭಾರತಕ್ಕೆ ಭೇಟಿ ನೀಡಿದರು. ಈ ಪ್ರವಾಸದ ಸಮಯದಲ್ಲಿ ಸ್ವಾಮೀಜಿಯವರು ರಾಂಚಿ, ನೊಯ್ಡಾ ಮತ್ತು ದಕ್ಷಿಣೇಶ್ವರದ ವೈಎಸ್ಎಸ್ ಆಶ್ರಮಗಳಿಗೆ ಭೇಟಿ ನೀಡಿದರು ಮತ್ತು ಹೈದರಾಬಾದ್‌ನಲ್ಲಿ ವೈಎಸ್ಎಸ್ ಸಂಗಮ 2023 ಇದರ ಅಧ್ಯಕ್ಷತೆ ವಹಿಸಿದ್ದರು.
ಸ್ವಾಮೀಜಿಯವರ ಭಾರತ ಪ್ರವಾಸದಲ್ಲಿನ ಮಾಧ್ಯಮ ಪ್ರಸಾರದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

ಸ್ವಾಮಿ ಚಿದಾನಂದಜಿಯವರೊಡನೆ ಸಂದರ್ಶನ — ಸಂಸ್ಕಾರ ಟಿವಿ
ಸಂಸ್ಕಾರ್ ಟಿವಿಯಲ್ಲಿ ಇತ್ತೀಚೆಗೆ ಪ್ರಸಾರವಾದ ವೈಎಸ್ಎಸ್/ಎಸ್ಆರ್‌ಎಫ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮ ಮುಖಂಡರಾದ ಸ್ವಾಮಿ ಶ್ರೀ ಚಿದಾನಂದ ಗಿರಿಯವರ ಸ್ಪೂರ್ತಿದಾಯಕ ಸಂದರ್ಶನವನ್ನು ವೀಕ್ಷಿಸಲು ನಿಮ್ಮನ್ನು ಆಹ್ವಾನಿಸುತ್ತೇವೆ. ಇದು ಸಂಸ್ಕಾರ ಟಿವಿಯಿಂದ ಇತ್ತೀಚಿಗಷ್ಟೆ ಪ್ರಸಾರವಾಯಿತು. ಈ ಪ್ರಬುದ್ಧ ಸಂಭಾಷಣೆಯಲ್ಲಿ, ಸ್ವಾಮಿ ಚಿದಾನಂದಜಿಯವರು ಯೋಗದ ಸಾರ, ಮತ್ತು ನಾಗಾಲೋಟದ ಆಧುನಿಕ ಜಗತ್ತಿನಲ್ಲಿ ಅದರ ಪಾತ್ರ ಮತ್ತು ತಮ್ಮಲ್ಲಿ ಅಂತರ್ಗತವಾದ ದೈವತ್ವವನ್ನು ಅರಿಯಲು ಮತ್ತು ಅದರಿಂದ ಇತರರಲ್ಲೂ ದೈವತ್ವವನ್ನು ಅರಿಯುವದರಲ್ಲಿ ಕ್ರಿಯಾಯೋಗ ಧ್ಯಾನದ ಅಭ್ಯಾಸದ ಅದ್ಭುತ ಪ್ರಭಾವವನ್ನು ಕುರಿತು ಚರ್ಚಿಸಿದರು.

ಸ್ವಾಮಿ ಚಿದಾನಂದಜಿಯವರೊಂದಿಗೆ ಚಿಂತನ — ದಿ ಪಯನಿಯರ್ ನಲ್ಲಿ ಪ್ರಕಟವಾದ ಸಂದರ್ಶನದ ಒಂದು ಸರಣಿ
ಸ್ವಾಮೀಜಿಯವರನ್ನು “ದಿ ಪಯನಿಯರ್,” ಎಂಬ ಇಂಗ್ಲೀಷ್ ದಿನಪತ್ರಿಕೆಯವರು ಸಂದರ್ಶಿಸಿದರು. ವಿಶ್ವದ ಹಾಗೂ ಸಮಾಜದ ವಿವಿಧ ಸಮಸ್ಯೆಗಳ ಮೇಲೆ ಪ್ರಭಾವ ಬೀರುವ ವಿವಿಧ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಎಲ್ಲಾ ಲೇಖನಗಳು (ಈ ಕೆಳಗೆ ಪ್ರಕಟಿತ) 10 ವಿಭಾಗಗಳ ಸರಣಿಯಲ್ಲಿ ದಿ ಪಯನಿಯರ್ ನಲ್ಲಿ ಪ್ರಕಟಿತವಾಗಿವೆ.
ಪ್ರಶ್ನೆ: ಸ್ವಾಮೀಜಿ, ಭಾರತದಲ್ಲಿ ನಾವು ರಾಮಾಯಣ, ಗೀತೆ ಮತ್ತು ಉಪನಿಷತ್‌ಗಳಂತಹ ಶಾಸ್ತ್ರಗಳನ್ನು ಪಠಿಸುವ ಸಂಪ್ರದಾಯವಿದೆ. ಯೋಗಾನಂದಜಿಯವರ ಬೋಧನೆಗಳನ್ನು ಓದುವವರೆಲ್ಲರಿಗೂ ಈ ಬೋಧನೆಗಳಲ್ಲಿರುವ ಜ್ಞಾನವು ಇರುವುದೇ? ಮತ್ತು ಅವರು ಇವುಗಳನ್ನೂ ಸಹ ಅಧ್ಯಯನಮಾಡಬೇಕೇ?
ಮತ್ತು ಕೆಲವೊಮ್ಮೆ, ಯಾರಾದರೂ ನಮಗೆ ಒಂದು ಪುಸ್ತಕವನ್ನು ಓದಲು ಅಥವಾ ಒಂದು ಸ್ಪೂರ್ತಿದಾಯಕ ಪ್ರವಚನವನ್ನು ಆಲಿಸಲು ಶಿಫಾರಸ್ಸು ಮಾಡುವರು. ಆಗ ಭಕ್ತನು ಇತರ ಮಾರ್ಗಗಳ ಕಡೆ ನೋಡದೆ ಇರುವುದು ಅಥವಾ ಆಧ್ಯಾತ್ಮಿಕ ಗ್ರಂಥಗಳನ್ನು ಪಠಿಸಲು ಆಸಕ್ತಿ ತೋರಿಸದೆ ಇರುವುದು, ಆಧ್ಯಾತ್ಮಿಕ ಒಣಜಂಬವೇ?
ಸ್ವಾಮಿ ಚಿದಾನಂದಜಿ: ಇಲ್ಲ! ಅದು ಸ್ವಾಮಿನಿಷ್ಠೆ! ಅದು ನಿಜವಾಗಿಯೂ ಒಬ್ಬನು ಮಾರ್ಗದ ಯಾವ ಹಂತದಲ್ಲಿರುವುದರ ಮೇಲೆ ಅವಲಂಬಿತವಾಗಿರುತ್ತದೆ. ಯಾವಾಗ ನೀವು ಬೋಧನೆಗಳನ್ನು ಪರಿಷ್ಕರಿಸಿ, ತುಲನೆ ಮಾಡುವ ಹಂತದಲ್ಲಿ ಇದ್ದಲ್ಲಿ, ಆಗ ನಿಶ್ಚಯವಾಗಿಯೂ, “ಓಹ್! ನಾವು ಆ ಪ್ರವಚನವನ್ನು ಆಲಿಸೋಣ, ಮತ್ತು ಅದೇನಾದರೂ ಅರ್ಥವಾಗುವುದೋ, ಅಥವಾ ಇದು ಮತ್ತೂ ಹೆಚ್ಚಿಗೆ ಅರ್ಥಗರ್ಭಿತವಾಗಿರುವುದೋ, ನೋಡೋಣ!” ಎಂದು ಅನಿಸುತ್ತದೆ. ಅದು ಒಳ್ಳೆಯದು. ಆದರೆ, ಗುರುವಿನೊಡನೆ ಆ ಬಾಂಧವ್ಯವನ್ನು ಹೊಂದಿರುವ ಕ್ರಿಯಾಬಾನ್ ಶಿಷ್ಯರಿಗೆ ಯೋಗಾನಂದಜಿಯವರು ಸ್ಪಷ್ಟವಾಗಿ ಹೇಳಿರುವರು, ಆಧ್ಯಾತ್ಮಿಕ ಶಕ್ತಿಯು ಕೇವಲ ಒಂದು ವಾಹಿನಿಯಲ್ಲಿ ಮಾತ್ರ ಬರುತ್ತದೆ, ಮತ್ತು ಅದುವೇ ಒಬ್ಬನ ಭಗವತ್-ನಿಯುಕ್ತಿತ ಗುರು.
ಈಗ ಅದನ್ನು ಸಹ ವ್ಯವಹಾರಿಕ ಜ್ಞಾನ ಮತ್ತು ತೂಕ ಬದ್ಧವಾಗಿ ಅರಿತುಕೊಳ್ಳುವ ಅವಶ್ಯಕತೆ ಇದೆ. ಹಾಗೆಂದ ಮಾತ್ರಕ್ಕೆ ಈಗ ನೀವು ಭಯಭೀತರಾಗಬೇಕೆಂದಾಗಲಿ ಅಥವಾ ವಿಷಯಗಳನ್ನು ದೂರವಿರಿಸಬೇಕೆಂದಾಗಲಿ ಅರ್ಥವಲ್ಲ. ಇತರರ ಸ್ಪೂರ್ತಿದಾಯಕ ಕಥೆಗಳಿಂದ ಅಥವಾ ನಿಜವಾಗಿಯೂ ಮನಸ್ಸನ್ನು ಉತ್ತೇಜಿಸಲು ಸಹಾಯಕವಾದ ವೈಜ್ಞಾನಿಕ ಮಾಹಿತಿಗಳಿಂದ, ನಮ್ಮ ಗುರುಗಳು ಬೋಧಿಸಿರುವುದನ್ನು ಮೌಲ್ಯೀಕರಿಸುವಂತಹ ಅದ್ಭುತ ಸ್ಪೂರ್ತಿ ಹಾಗೂ ಪ್ರೋತ್ಸಾಹವನ್ನು ಪಡೆಯಬಹುದು. ವಿಷಯವಿಷ್ಟೇ, ನೀವು ನಿಮ್ಮದೇ ಸ್ವಂತ ಗುರುವಿನ ಸಾಧನೆಯನ್ನು ಒಪ್ಪಿಕೊಂಡ ನಂತರ ಇತರ ಆಧ್ಯಾತ್ಮಿಕ ಸೂಚನೆಗಳು ಅಥವಾ ಆಧ್ಯಾತ್ಮಿಕ ವಿಧಾನಗಳನ್ನು ಸ್ವೀಕರಿಸಬಾರದು.
ಮೊದಲನೆಯದಾಗಿ, ಯೋಗಾನಂದಜಿಯವರ ಭಕ್ತರಾಗಿ, ನೀವು ಈಗಾಗಲೇ ಶಾಸ್ತ್ರಗಳನ್ನು — ‘ಗೀತೆ’; ಮತ್ತು ಪಾಶ್ಚಾತ್ಯ ಪ್ರಪಂಚಕ್ಕೆ, ಕ್ರಿಸ್ತನ ಸುವಾರ್ತೆ ಬೋಧನೆಗಳನ್ನು, ಅಧ್ಯಯನ ಮಾಡುತ್ತಿರುವಿರಿ. ಅವೆರಡೂ ಅತ್ಯದ್ಭುತ ಶಾಸ್ತ್ರಗಳು. “ನೀವು ಶಾಸ್ತ್ರಗಳ ಅಧ್ಯಯನವನ್ನು ಬಿಟ್ಟುಬಿಡಿ” ಎಂದು ಹೇಳುತ್ತಿಲ್ಲ. ಆದರೆ ಎಲ್ಲಾ ಶಾಸ್ತ್ರಗಳನ್ನು ಅಧ್ಯಯನ ಮಾಡುವ ಅವಶ್ಯಕತೆ ಇದೆಯೇ? ಇಲ್ಲ! ಏಕೆಂದರೆ, ಗುರೂಜಿಯವರು ಶಿಷ್ಯನಿಗೆ ಶಾಸ್ತ್ರಗಳಿಂದ ಅವಶ್ಯಕತೆ ಇರುವ ಎಲ್ಲಾ ವಿಷಯಗಳನ್ನು ಭಟ್ಟಿ ಇಳಿಸಿ, ಅದನ್ನು ಸಾಧನೆಯ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಹಾಕಿರುವರು. ಅನೇಕ ಜನರು (ಇದು ಪ್ರಪಂಚದ ರೀತಿ) ಕೆಲವು ಶಾಸ್ತ್ರಗಳನ್ನು ಓದುತ್ತಾರೆ, ಮತ್ತು ನಂತರ ಯೋಚಿಸುತ್ತಾರೆ, “ಓಕೆ, ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ.” ಆದರೆ, ಅದು ನೀವು ಇಚ್ಛಿಸುವುದನ್ನು ಕೊಡಲಾರದು. ನೀವು ನಿಮ್ಮ ಆತ್ಮದ ಪ್ರಜ್ಞೆಯನ್ನು ಇಚ್ಛಿಸುವಿರಿ, ನೀವು ಭಗವಂತನೊಡನೆ ನಿಮ್ಮ ಪ್ರಜ್ಞೆಯ ಜೀವಂತ ಕ್ರಿಯಾತ್ಮಕ ಸಂಬಂಧವನ್ನು ಹೊಂದಲು ಇಚ್ಛಿಸುವಿರಿ. ಕೇವಲ ಪುಸ್ತಕ ಓದುವುದರಿಂದ ಅಥವಾ ಶಾಸ್ತ್ರದಿಂದಾಗಲಿ ಅದನ್ನು ಪಡೆಯಲು ಸಾಧ್ಯವಿಲ್ಲ.
ಆದ್ದರಿಂದ, ಶಾಸ್ತ್ರಗಳ ಅಧ್ಯಯನ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಅವು ಅದ್ಭುತ. ಅವುಗಳಲ್ಲಿ ಅತ್ಯಂತ ಹೆಚ್ಚಿನ ಸ್ಪೂರ್ತಿದಾಯಕ ವಿಷಯಗಳು ಇವೆ. ಮತ್ತು ಸನ್ಮಾರ್ಗದಲ್ಲಿ ನಡೆಯಲು ಬೇಕಾಗಿರುವ ಅತ್ಯಮೂಲ್ಯ ಶಾಶ್ವತ ಸತ್ಯಗಳು ಮತ್ತು ಆಳವಾದ ಆಧ್ಯಾತ್ಮಿಕ ತತ್ವಗಳು, ಮತ್ತು ಇನ್ನೂ ಇತರ ವಿಷಯಗಳು ಇವೆ. ಆದ್ದರಿಂದ, ನಾನು ಹೇಳುವೆ, ಅವುಗಳನ್ನು ಓದುವ ಅವಶ್ಯಕತೆ ಇಲ್ಲ. ಆದರೆ, ಒಂದು ವೇಳೆ ಭಕ್ತನು, ವೈಎಸ್ಎಸ್ ಪಾಠ ಮಾಲಿಕೆಯ ಅಧ್ಯಯನ ಹಾಗೂ ನಿಜವಾಗಿ ಧ್ಯಾನ ಮಾಡುವುದಕ್ಕಿಂತ ಅತಿ ಹೆಚ್ಚಿನ ಸಮಯವನ್ನು, ಅದರ ಮೇಲೆ ಕಳೆಯದೆ ಇದ್ದಲ್ಲಿ, ಅವನ್ನು ಓದಿದರೆ ಯಾವ ತಪ್ಪೂ ಇಲ್ಲ. ಗುರೂಜಿ ಹೇಳಿರುವರು, ಒಂದು ವೇಳೆ, ನೀವು ಒಂದು ಗಂಟೆ ಓದಿದಲ್ಲಿ, ನಂತರ ನಿಮ್ಮ ಪ್ರತಿಕ್ರಿಯೆಯನ್ನು ಅದಕ್ಕಿಂತ ಎರಡು ಪಟ್ಟು ಹೆಚ್ಚು ಸಮಯ ಬರೆಯಿರಿ. ಮತ್ತು ಇನ್ನೂ ಹೆಚ್ಚಿನ ಸಮಯ ಅದರ ಬಗ್ಗೆ ಆಳವಾಗಿ ಆಲೋಚಿಸಿ. ಆದರೆ ಅತ್ಯಂತ ಪ್ರಮುಖವಾದದ್ದು ಧ್ಯಾನ. ಪುಸ್ತಕಗಳನ್ನು ಓದುವುದು ಸ್ಪೂರ್ತಿದಾಯಕವಾಗಿರಬಹುದು. ಆದರೆ, ಅಂತಿಮವಾಗಿ ಸ್ಪೂರ್ತಿಯನ್ನು ಆಚರಣೆಗೆ ತರದಿದ್ದಲ್ಲಿ ಅದು ನಿಜವಾಗಿಯೂ ಅತ್ಯಲ್ಪ ಮೌಲ್ಯ ಉಳ್ಳದ್ದು.”
ಪ್ರಶ್ನೆ: “ಎಂದಿಗೂ ಪ್ರಯತ್ನ ಬಿಡದ ಪಾಪಿಯು ಒಬ್ಬ ಸಂತನಾಗುವನು.” ಎಂದು ಯೋಗಾನಂದಜಿಯವರು ಹೇಳಿರುವರು. ಆದರೆ, ಕೆಲವೊಮ್ಮೆ ಒಬ್ಬ ವ್ಯಕ್ತಿಯು ಆಧ್ಯಾತ್ಮ ಪಥದಲ್ಲಿ ಮೊದಲ ಬಾರಿಗೆ ಹೆಜ್ಜೆ ಇಡುವಾಗ, ಅವರು ತಾವು ನಿಜವಾಗಿಯೂ ಅದಕ್ಕಾಗಿಯೇ ಎಂದಿಗೂ ವಿನ್ಯಾಸಗೊಂಡಿರುವುದಿಲ್ಲ, ಎಂಬ ಭಾವದಲ್ಲಿ ನೆಲೆಗೊಂಡಿರುತ್ತಾರೆ. ನಾವು ನಮ್ಮದೇ ಆದ ಭೌತಿಕ ಹವ್ಯಾಸಗಳು ಮತ್ತು ಪ್ರಾಪಂಚಿಕ ರೀತಿಗಳಲ್ಲಿ ಆಳವಾಗಿ ಬೇರೂರಿರುತ್ತೇವೆ. ಅದರಿಂದಾಗಿ, ಒಬ್ಬ ವ್ಯಕ್ತಿಯು ಆಧ್ಯಾತ್ಮ ಪಯಣದಲ್ಲಿ ಹೆಜ್ಜೆ ಇಡಲು ನಿರುತ್ಸಾಹ ಗೊಳ್ಳಬಹುದು. ಬಹುಶಃ ಅವನು ಹೀಗೆ ಯೋಚಿಸಬಹುದು, “ಇಲ್ಲಿ ಇರುವವರೆಲ್ಲರೂ ಸಂತರೇ, ಮತ್ತು ನಾನು ಒಬ್ಬ ಪಾಪಿ, ಅವರ ನಡುವೆ ಕುಳಿತಿರುವೆನು!”
ಸ್ವಾಮಿ ಚಿದಾನಂದಜಿ: ಎಲ್ಲಾ ಮಾನವರು, ಅದರಲ್ಲೂ ವಿಶೇಷವಾಗಿ ಆಧ್ಯಾತ್ಮ ಪಥದಲ್ಲಿ ಇರುವವರು ಅನುಭವಿಸಬೇಕಾಗಿರುವುದು ಇದು ಒಂದು ಸಾರ್ವತ್ರಿಕ ಭ್ರಮೆ. ನಾವೆಲ್ಲರೂ ಅಲ್ಪ ಮಾತ್ರ ಕರುಣೆಯನ್ನು ಹೊಂದಿದ್ದೇವೆ. ಮತ್ತು ಆ ಕರುಣೆಯು ತಪ್ಪಾಗಿ ನಿರ್ದೇಶಿಸಲ್ಪಟ್ಟು, ಅತ್ಯಲ್ಪ ಸ್ವಾಭಿಮಾನಿಯಾಗಿ ಅಥವಾ ತನ್ನ ಬಗ್ಗೆಯೇ ಕೀಳರಿಮೆ ಹೊಂದಿದವನಾಗುವನು.
ಆದರೆ ನೆನಪಿಡಿ, ಒಮ್ಮೆ ಯೋಗಾನಂದಜಿಯವರನ್ನು ಒಬ್ಬರು ಪ್ರಶ್ನಿಸಿದರು, ಯೋಗಿಯ ಆತ್ಮಕಥೆ ಯಲ್ಲಿ ಅತ್ಯಂತ ಸ್ಪೂರ್ತಿದಾಯಕ ವಿಷಯ ಯಾವುದು? ಅವರು ಹೇಳಿದರು, “ನನ್ನ ಗುರು, ಶ್ರೀಯುಕ್ತೇಶ್ವರರ ಈ ನುಡಿಗಳು: ‘ಆಗಿ ಹೋದುದನ್ನು ಮರೆತುಬಿಡು. ಎಲ್ಲಾ ಮಾನವರ ಜೀವನಗಳು, ಅನೇಕ ಅಪಮಾನಗಳಿಂದ ಅಂಧಕಾರಯುಕ್ತವಾಗಿದೆ. ನೀವು ಈಗ ಆಧ್ಯಾತ್ಮ ಸಾಧನೆ ಮಾಡಿದರೆ ಭವಿಷ್ಯದಲ್ಲಿ ಎಲ್ಲವೂ ಸುಧಾರಿಸುತ್ತದೆ.’” ಇದು ಒಂದು ಏಕಾಗ್ರತೆಯ ಧನಾತ್ಮಕ ಮಾರ್ಗ.
ಇದು ಸ್ವಲ್ಪ ಕಠಿಣವಾಗಿ ಕೇಳಿಸಬಹುದು. ಆದರೆ ಯಾವ ಒಂದು ಗಳಿಗೆಯಲ್ಲಿ ಜನರು ತಮ್ಮಲ್ಲಿಯೇ ದೃಢೀಕರಿಸುತ್ತಾರೋ, “ಉಳಿದವರೆಲ್ಲರೂ ನನಗಿಂತ ಹೆಚ್ಚು ಮುಂದುವರೆದಿರುವರು. ಮತ್ತು ಈ ಕೋಣೆಯಲ್ಲಿ ಇರುವವರಲ್ಲಿ ನಾನೊಬ್ಬನೇ ಈ ಮಾರ್ಗದಲ್ಲಿ ಸಂಪೂರ್ಣವಾಗಿ ವಿಫಲನಾಗಿರುವೆನು,” ಅದರ ನಂತರ ಇದು ಒಂದು ರೀತಿಯಲ್ಲಿ, ಮುಂದಿನ ಪ್ರಯತ್ನ ಮಾಡದೇ ಇರಲು, ಒಂದು ನೆಪವಾಗುತ್ತದೆ. ನೀವೇ ಆ ಪ್ರವೃತ್ತಿಯನ್ನು ನಿಮ್ಮಲ್ಲಿಯೇ ಎದುರಿಸಬೇಕು. ಮತ್ತು ಕೂಡಲೇ ಆಜ್ಞಾಪಿಸಬೇಕು, “ನಿಲ್ಲು! ನಾನು ನಿನ್ನ ಮಾತು ಕೇಳುವುದಿಲ್ಲ! ಹೊರಗೆ ಹೋಗು!” ಅದು ಹೇಗೆಂದರೆ, ಒಬ್ಬ ಹುಚ್ಚನು ನಿಮ್ಮ ಬಾಗಿಲಲ್ಲಿ ನಿಂತು ಹೇಳುತ್ತಿರುವನು, “ಓಹ್, ನೀನೊಬ್ಬ ಅತಿ ಭಯಂಕರ ವ್ಯಕ್ತಿ. ನೀನು ಸರಿ ಇಲ್ಲ.” ಏಕೆಂದರೆ ನಿಜವಾಗಿಯೂ ಅಲ್ಲಿ ನಡೆಯುತ್ತಿರುವುದು ಇದೇ.
ಈ ಭ್ರಮೆಗಳೇ ನಿಮ್ಮ ಅಹಂ ಮೇಲೆ ತಾಳ ಹಾಕುತ್ತಿರುವುವು ಮತ್ತು ಅವುಗಳ ಪ್ರಪ್ರಥಮ ಉದ್ದೇಶವೇ ನಿಮ್ಮ ಆಧ್ಯಾತ್ಮಿಕ ಪ್ರಯತ್ನವನ್ನು ತಡೆಯುವುದು. ನಿಮ್ಮ ಬಗ್ಗೆ ನಿರುತ್ಸಾಹಗೊಳಿಸುವಿಕೆಯು, ನಿಮ್ಮನ್ನು ಆಧ್ಯಾತ್ಮಿಕ ಪ್ರಯತ್ನ ಮಾಡುವುದರಿಂದ ತಡೆಯಲು, ಸಾಮಾನ್ಯವಾಗಿ ಪ್ರಭಾವಶಾಲಿಯಾದ ಮಾರ್ಗವಾಗಿರುತ್ತದೆ. ಆದ್ದರಿಂದ ನೀವು ಅದನ್ನು ಎದುರಿಸಿ, ನೀವು ಒಬ್ಬ “ಆಧ್ಯಾತ್ಮ ಯೋಧ” ರಾಗಿ. ಅವುಗಳೇ ಕೌರವ ಯೋಧರೆಂದು ಪರಮಹಂಸಯೋಗಾನಂದಜಿಯವರು ಭಗವದ್ಗೀತೆಯ (ಗಾಡ್ ಟಾಕ್ಸ್ ವಿತ್ ಅರ್ಜುನ) ಮೊದಲನೆಯ ಅಧ್ಯಾಯದ ಮೇಲಿನ ತಮ್ಮ ವ್ಯಾಖ್ಯಾನದಲ್ಲಿ ಬರೆದಿರುತ್ತಾರೆ. ಮತ್ತು ಅದು ನಿಮ್ಮಆಲೋಚನಾ ಲಹರಿಗೆ ತಾಳಹಾಕಲು ಪ್ರಯತ್ನಿಸುತ್ತ, ನಿಮ್ಮನ್ನು ಬೇರೆ ದಿಕ್ಕಿಗೆ ತಿರುಗಿಸಿ, ನೀವು ಎದ್ದು ನಿಂತು ನಿಮ್ಮ ಆಧ್ಯಾತ್ಮಿಕ ಸ್ವಭಾವದ ಮೇಲೆ ವಿಜಯ ಸಾಧನೆಯನ್ನು ಪ್ರತಿಪಾದಿಸುವುದನ್ನು ತಡೆಯುವವರೇ ಕೌರವ ಯೋಧರು.
ಆದರೆ, ಅದು ತಾನಾಗಿಯೇ ಬರುವುದಿಲ್ಲ. ಅದು ಇಚ್ಛಾಶಕ್ತಿಯನ್ನು, ದೃಢ ನಿರ್ಧಾರವನ್ನು, ಆಂತರ್ಯದ ಬಲವನ್ನು ತೆಗೆದುಕೊಳ್ಳುತ್ತದೆ. ಆದರೆ ಯಾರಾದರೂ ಮಾಡಬಲ್ಲ ಅತಿ ಕಳಪೆ ಕೆಲಸವೆಂದರೆ ತಮಗೆ ತಾವೇ ಪುನರುಚ್ಛರಿಸಿಕೊಳ್ಳುವುದು. “ನಾನು ಒಳ್ಳೆಯವನಲ್ಲ. ಬೇರೆಯವರೆಲ್ಲರೂ ನನಗಿಂತ ಉತ್ತಮರು.” ಕೂಡಲೇ ಈ ರೀತಿ ಯೋಚನೆ ಮಾಡುವುದನ್ನು ನಿಲ್ಲಿಸಿ. ಮತ್ತು ಅದಕ್ಕಿಂತ ಉತ್ತಮವಾಗಿರುವ ಧನಾತ್ಮಕವಾದದನ್ನು ಗುರೂಜಿಯವರ ಪುಸ್ತಕಗಳಿಂದ ಆಯ್ದುಕೊಳ್ಳಿರಿ. ಉದಾಹರಣೆಗೆ ಬೆಳಕಿರುವೆಡೆ ಅಥವಾ ಮೆಟಾಫಿಸಿಕಲ್ ಮೆಡಿಟೇಷನ್ಸ್ ಆದುದರಿಂದಲೇ ಗುರೂಜಿಯವರು ನಮಗೆ ಆ ಧನಾತ್ಮಕ ದೃಢೀಕರಣಗಳನ್ನು ಕೊಟ್ಟಿರುವರು. ಅಲ್ಲಿ ಅವರು ಹೇಳಿರುವರು, “ನಾನು ಭಗವಂತನ ಶಿಶು. ನಾನು ಭಗವಂತನ ಪ್ರತಿರೂಪದಲ್ಲಿ ಮಾಡಲ್ಪಟ್ಟಿದ್ದೇನೆ.” ನಮ್ಮ ಬಗ್ಗೆಯೇ ತೆಗೆದುಕೊಂಡಿರುವ ತಪ್ಪು ಪರಿಕಲ್ಪನೆಗಳ ಭ್ರಮೆಗಳನ್ನು ಬುಡ ಸಹಿತ ಕಿತ್ತು ಹಾಕಲು ಪ್ರಯತ್ನ ಮಾಡಬೇಕಾಗುತ್ತದೆ. ಆ ಕಾರ್ಯವನ್ನು ಧ್ಯಾನ ಮತ್ತು ಧನಾತ್ಮಕ ದೃಢೀಕರಣಗಳು ಮಾಡುತ್ತವೆ.
ಪ್ರಶ್ನೆ: “ಭಗವಂತನನ್ನು ಅರಿಯಲು ಅತಿ ಸುಲಭ ಮಾರ್ಗವೆಂದರೆ ಪ್ರೇಮ ಮಾರ್ಗ,” ಎಂದು ಯೋಗಾನಂದಜಿಯವರು ಹೇಳಿರುವರು. ಧ್ಯಾನ ಮಾರ್ಗವು ಹೇಗೆ “ಪ್ರೇಮ ಮಾರ್ಗ” ವಾಗುತ್ತದೆ? ಯೋಗವು ಈ “ಅನಿರ್ಬಂಧಿತ” ಪ್ರೇಮವನ್ನು ಅನುಭವಿಸುವಂತೆ ಮತ್ತು ವ್ಯಕ್ತಪಡಿಸುವಂತೆ ನಮ್ಮನ್ನು ಮುನ್ನಡೆಸುತ್ತದೆಯೇ?
ಸ್ವಾಮಿ ಚಿದಾನಂದಜಿ: “ಹೌದು! ಹೌದು! ಮತ್ತು ಹೌದು! ಧ್ಯಾನವು ನಮ್ಮೆಲ್ಲ ಜೀವಿಗಳಲ್ಲಿಯೂ, ಅಂತಿಮವಾಗಿ ಅದನ್ನು ಉಂಟು ಮಾಡುತ್ತದೆ. ಏಕೆಂದರೆ, ನಾವು ಭಗವಂತನ ಇರುವನ್ನು ನಮ್ಮಲ್ಲಿ ಅನುಭವಿಸುತ್ತೇವೆ ಮತ್ತು ನಂತರ ಆ ಪ್ರಜ್ಞೆಯು ವಿಸ್ತಾರಗೊಂಡಾಗ ನಾವು ಅದನ್ನು ಅರಿಯುವಂತೆಯೂ ಮಾಡುತ್ತದೆ. ಮೊದಲು ಸೂಪ್ತಪ್ರಜ್ಞೆಯ ಅಥವಾ ಸೂಕ್ಷ್ಮ ಸ್ತರದಲ್ಲಿ ಮತ್ತು ಅನಂತರ ಮತ್ತೂ ಹೆಚ್ಚಿಗೆ ಪ್ರಕಟವಾದ ಪ್ರಜ್ಞೆಯ ಸ್ತರದಲ್ಲಿ, ಭಗವಂತನ ಆ ಇರುವಿಕೆಯನ್ನು ಇತರರಲ್ಲೂ ಅನುಭವಿಸುತ್ತೇವೆ. ಭಗವಂತನು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಪ್ರೀತಿಪಾತ್ರನು. ಒಂದು ವೇಳೆ ಪ್ರತಿಯೊಬ್ಬರೂ ಭಗವಂತ ಏನು ಎಂಬುದನ್ನು ಅರಿತಿದ್ದಲ್ಲಿ… ಭಗವಂತ ಸುಂದರ, ಆನಂದ ಸ್ವರೂಪ, ಆನಂದ ಮತ್ತು ಸೇವೆಯಿಂದ ಭರಿತ, ಮತ್ತು ತಮಗೆ ತಾವೇ ನಮ್ಮ ಗೌರವ ಹಾಗೂ ವಿಶ್ವಾಸಗಳನ್ನು ಗಳಿಸುವ ಎಲ್ಲಾ ಇತರ ಅದ್ಭುತ ಗುಣಗಳು ಅವನೇ. ಆದ್ದರಿಂದ, ಆ ಪ್ರೇಮವನ್ನು ತಮ್ಮಲ್ಲಿ ಅನುಭವಿಸಲು ಬೇಕಾಗಿರುವ ಕೀಲಿಕೈ ಯಾವುದೆಂದರೆ, ಪ್ರೇಮದ ಮೂಲಕ್ಕೇ ಹೋಗಬೇಕೆಂದು ದಯಾ ಮಾತಾಜಿಯವರು ಮೇಲಿಂದ ಮೇಲೆ ಪುನಃ ಹೇಳುತ್ತಿದ್ದರು. ಅದೇ ಅವರ ಜೀವನದ ಲಕ್ಷ್ಯವಾಗಿತ್ತು. ಅವರು ಹೇಳುತ್ತಿದ್ದರು, “ನನಗೆ ಪ್ರೇಮ ಬೇಕಾಗಿತ್ತು. ನಾನು ಮಾನವೀಯ ಅಪರಿಪಕ್ವತೆಗಳಿಂದ, ದೋಷರಹಿತವಾದ ಪ್ರೇಮವನ್ನು ಅನುಭವಿಸಲು ಇಚ್ಛಿಸುತ್ತಿದ್ದೆ.” ಅವರು ಹೇಳಿದರು, “ನಾನು ಆ ಪ್ರೇಮವನ್ನು ಕಂಡುಕೊಳ್ಳಲು, ಭಗವಂತನಲ್ಲಿಗೆ ಹೋಗಲು, ಬಹಳ ಮುಂಚೆಯೇ ಮನದಲ್ಲಿ ತೀರ್ಮಾನಿಸಿದ್ದೆ.” ಭಗವಂತನಲ್ಲಿಗೆ ಹೋಗುವುದು ಹೇಗೆ? ಧ್ಯಾನದಿಂದ! ಅವರ ಇಡೀ ಪುಸ್ತಕ, ಒನ್ಲಿ ಲವ್, ಇದರ ಬಗ್ಗೆಯೇ ಇದೆ.
ಪ್ರಶ್ನೆ: ಸ್ವಾಮೀಜಿ, ನಾವು ಪಂಥೀಯ ಹಿಂಸೆ ಮತ್ತು ದ್ವೇಷಗಳನ್ನು ಯಾವ ರೀತಿ ಎದುರಿಸಬಲ್ಲೆವು?
ಸ್ವಾಮಿ ಚಿದಾನಂದಜಿ: “ಒಳ್ಳೆಯದು, ಮೊದಲಿಗೆ, ನಮ್ಮ ಗುರುಗಳ (ಯೋಗಾನಂದಜಿಯವರ) ಸಂಪ್ರದಾಯಗಳು ಹಾಗೂ ನಮ್ಮ ಗುರುಗಳ ಬೋಧನೆಗಳಲ್ಲಿ ಕಂಡುಬರುವ, ಆದರ್ಶ ಹಾಗೂ ಉದಾಹರಿಸಲ್ಪಡುವ, ಇತರ ಧಾರ್ಮಿಕ ಸಂಪ್ರದಾಯಗಳ ಸಾರ್ವತ್ರಿಕತೆ ಹಾಗೂ ಅರ್ಥಗಳನ್ನು ಗೌರವಿಸುವುದು.
“ಇದೊಂದು ಪ್ರತ್ಯೇಕ ಭಕ್ತರಿಗೆ, ಅವರು ಹಠಾತ್ತಾಗಿ ಈ ಪಂಥೀಯ ದ್ವೇಷವನ್ನು ತಾವಾಗಿಯೇ ನಿಲ್ಲಿಸಬಲ್ಲರು ಎಂಬ ಭಾವವು ಒಂದು ಆಶಾದಾಯಕ ಯೋಜನೆಯ ಅಲ್ಪ ಭಾಗವಾಗಿದೆ. ಇದೊಂದು ಕ್ರಾಂತಿಕಾರಕ ವಿಷಯ. ಆದರೆ, ನಮ್ಮಲ್ಲಿ ಪ್ರತಿಯೊಬ್ಬರೂ ಇದರಲ್ಲಿ ಕೈಜೋಡಿಸಬಹುದು. ಮೊದಲನೆಯದಾಗಿ – ಗೌರವದ ವಿಧಾನ ಮತ್ತು ಅರ್ಥೈಸುವಿಕೆಯ ರೀತಿ ಮತ್ತು ಧರ್ಮಗಳ ಹಿಂದಿರುವ ಸಮಾನತೆಯನ್ನು ಖಡಾಖಂಡಿತವಾಗಿ ಬೋಧಿಸುವ ನಮ್ಮ ಗುರುಗಳ ವಿವಿಧ ಲೇಖನಗಳು ಹಾಗೂ ಪುಸ್ತಕಗಳನ್ನು ಹಂಚಿಕೊಳ್ಳುವ ಮೂಲಕ ಈ ಕೆಲಸ ಮಾಡಬಹುದು. ಉದಾಹರಣೆಗೆ – ಗುರೂಜಿಯವರ ಪುಸ್ತಕಗಳು: ಧರ್ಮದ ವಿಜ್ಞಾನ, ಮ್ಯಾನ್ಸ್ ಎಟರ್ನಲ್ ಕ್ವೆಸ್ಟ್ ಅಥವಾ ಆ ರೀತಿಯ ಇನ್ನಿತರ ಪುಸ್ತಕಗಳ ಕೆಲವು ಅಧ್ಯಾಯಗಳಲ್ಲಿ ಅಥವಾ ಇದೇ ರೀತಿಯ ಇನ್ನಿತರ ಪುಸ್ತಕಗಳಲ್ಲಿ, ಹೆಚ್ಚು ಅತಿ ಹೆಚ್ಚು ಕಲ್ಪನೆಗಳು ಸಮಾಜದಲ್ಲಿ ಶೋಧಿಸಲ್ಪಡುತ್ತವೆ. ಮತ್ತು ನಂತರ, ಸಹಜವಾಗಿಯೇ, ಯಾವಾಗ ತನ್ನನ್ನು ತಾನೇ ಯಾರಾದರೂ ಮತ್ತೊಂದು ಪಂಥದ ಅನುಯಾಯಿಗಳ ಬಗ್ಗೆ ಹೀಗಳೆಯುವ ಅಥವಾ ಅವಹೇಳನಕಾರಿ ಮಾತನಾಡುತ್ತಿರುವ ಸಂದರ್ಭ ಬಂದಾಗ, ಮತ್ತು ಒಂದು ವೇಳೆ ಗೌರವಯುತವಾಗಿ ಮತ್ತು ವಿನಮ್ರತೆಯಿಂದ ಹಿಂದೇಟು ಹಾಕಲು ಅವಕಾಶವಿದ್ದಲ್ಲಿ, ಇಷ್ಟು ಮಾತ್ರ ಹೇಳಿರಿ, ಈ ಜಗತ್ತಿನಲ್ಲಿ ಸಾಕಷ್ಟು ದ್ವೇಷ ತುಂಬಿದೆ. ಮತ್ತು ಇದು ನಿಜವಾಗಿಯೂ ಮತ್ತಷ್ಟು ದ್ವೇಷ ಹೆಚ್ಚಿಸಲು ಸಹಾಯ ಮಾಡುತ್ತದೆ. ನಾವು ಇತರರನ್ನು ತಿದ್ದಲು ಅಥವಾ ಶಿಸ್ತುಗಾರರನ್ನಾಗಿ ಮಾಡಲು ಬಂದಿರುತ್ತೇವೆ, ಎಂದಲ್ಲ. ಆದರೆ ಯಾರಾದರೂ ನಮ್ಮ ಸುತ್ತಲೂ ಈ ರೀತಿ ವರ್ತಿಸುತ್ತಿದ್ದರೆ, ನೀವು ಹಿಮ್ಮೆಟಿಸಬಹುದು. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ, ಆ ಪ್ರಶ್ನೆಗೆ ಉತ್ತರ-ನಿಜವಾಗಿಯೂ ಹೆಚ್ಚು ಹೆಚ್ಚು ಭಕ್ತರು ಸಾರ್ವತ್ರಿಕ ದೃಷ್ಟಿಕೋನದ ಜೀವನ ನಡೆಸುವರು. ಮತ್ತು ಹೆಚ್ಚು ಭಕ್ತರು ವೈಎಸ್ಎಸ್ ಪಾಠಮಾಲಿಕೆಯಲ್ಲಿ, ನಾವು ಕಲಿಯುವ ಸಾರ್ವತ್ರಿಕ ದೃಷ್ಟಿಕೋನದಲ್ಲಿ ಜೀವಿಸುವರು. ಮತ್ತು ನಿಮಗೆ ಗೊತ್ತು, ಕಾಲ ಕಳೆದಂತೆ ಸಮಾಜದಲ್ಲಿ, ಒಂದು ಕ್ರಾಂತಿಕಾರಕ ಬದಲಾವಣೆಯು ಉಂಟಾಗುವುದು.ಆದರೆ ನಾನು ಪ್ರತಿಯೊಬ್ಬ ವ್ಯಕ್ತಿಯೂ ಹೊರಬಂದು, ನೇರವಾಗಿ ಪಂಥೀಯ ಕ್ರಾಂತಿಯನ್ನು ಎದುರಿಸಬೇಕೆಂದು ಅವರನ್ನು ಪ್ರೋತ್ಸಾಹಿಸುವುದಿಲ್ಲ, ಅವರಲ್ಲಿ ನಿರ್ದಿಷ್ಟ ವಿಧಾನಗಳಿದ್ದಲ್ಲಿ ಮಾತ್ರ ಅವರದನ್ನು ಮಾಡಬಹುದು.
ಪ್ರಶ್ನೆ: ಸುಮಾರು 3200 ಭಕ್ತರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ವೈಎಸ್ಎಸ್‌ನಿಂದ ನಡೆದ ಸಂಗಮದಲ್ಲಿ ಭಾಗವಹಿಸಿದ್ದರು. ಸಂಗಮದ ಸಮಯದಲ್ಲಿ ಪಡೆದುಕೊಂಡ ಆಶೀರ್ವಾದಗಳನ್ನು, ಮನೆಗೆ ತೆಗೆದುಕೊಂಡು ಹೋಗಲು ಭಕ್ತರು ಏನು ಮಾಡಬೇಕು?
ಸ್ವಾಮಿ ಚಿದಾನಂದಜಿ: ಅದಕ್ಕೆ ನನ್ನ ಉತ್ತರ, 3 ವರ್ಷಗಳ ಹಿಂದೆ ನೀಡಿದುದಕ್ಕಿಂತ ಭಿನ್ನವಾಗಿರುತ್ತದೆ. ಮತ್ತು ಅದು ಏಕೆಂದು ಹೇಳುತ್ತೇನೆ. ನಾವು ಕೇವಲ ಸತ್ಸಂಗದ — ಆಧ್ಯಾತ್ಮಿಕ ಸಂಗದ ಮೂಲತತ್ವವನ್ನು ತೆಗೆದುಕೊಳ್ಳೋಣ.
ಪರಮಹಂಸ ಯೋಗಾನಂದಜಿಯವರು ಅದರ ಬಗ್ಗೆ, ಅಂತಹ ಒಂದು ಅಂಶವನ್ನು ಹೇಳಿದರು. ‘ಪರಿಸರವು ಇಚ್ಛಾ ಶಕ್ತಿಗಿಂತ ಬಲವಾದುದು.’ ನಾವು ಇಟ್ಟುಕೊಳ್ಳುವ ಸಹವಾಸದಂತೆಯೇ ನಾವಾಗುತ್ತೇವೆ. ನಾವು ವ್ಯಾಪಾರ ಅಥವಾ ಆಟಪಾಟ ಅಥವಾ ಯಾವುದೇ ಕ್ಷೇತ್ರದಲ್ಲಿ, ಸಫಲರಾಗಬೇಕೆಂದರೆ ನೀವು ನಿಮ್ಮ ಸಹವಾಸಿಗಳಾಗಿರುವವರಂತೆಯೇ ಆಗುವಿರಿ. ಸಾಮೂಹಿಕ ಪ್ರಜ್ಞೆಯು ನಮ್ಮ ವೈಯಕ್ತಿಕ ಪ್ರಯತ್ನದ ಜೊತೆಗೂಡುತ್ತದೆ. ಯೋಗಾನಂದಜಿಯವರ ಕಾರ್ಯದ ಬಹಳ ಆರಂಭದಿಂದಲೇ ಅವರು ಇದಕ್ಕೆ ಒತ್ತು ನೀಡಿದುದು, ಭಕ್ತರು ಸಾಮೂಹಿಕ ಧ್ಯಾನಕ್ಕೆ ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಒಟ್ಟಾಗಿ ಸೇರಬೇಕು. ಅದು ಸತ್ಸಂಗವನ್ನು ಇರಿಸಿಕೊಳ್ಳುವ ಒಂದು ರೀತಿ.
ಎರಡನೆಯ ವಿಷಯವು, ಈ ಹಿಂದಿನ ಎರಡು ವರ್ಷಗಳಿಂದ ವಿಕಸನಗೊಂಡಿರುವುದು. ಯಾವಾಗ ಕೋವಿಡ್ ಪಿಡುಗು ಭುಗಿಲೆದ್ದಿತೋ ಮತ್ತು ಪ್ರತಿಯೊಬ್ಬರೂ ಮನೆಯಲ್ಲಿಯೇ ಉಳಿದುಕೊಳ್ಳಬೇಕಾಯಿತು. ಎಲ್ಲಾ ಧ್ಯಾನ ಕೇಂದ್ರಗಳು ಮತ್ತು ಆಶ್ರಮಗಳು ಮುಚ್ಚಿ ಹೋಗಿದ್ದವು. ಮುಚ್ಚುವ ಕೇವಲ ಎರಡು ತಿಂಗಳುಗಳ ಮುಂಚೆ, ನಾವು ಆನ್ ಲೈನ್ ಧ್ಯಾನ ಕೇಂದ್ರವನ್ನು, ವೀಡಿಯೋ ಕಾನ್ಫರೆನ್ಸ್ ಸಹಿತವಾಗಿ, ಆರಂಭಿಸಿದೆವು. ಅದರಲ್ಲಿ ಭಕ್ತರು ಆನ್ ಲೈನ್ ನಲ್ಲಿ ಒಟ್ಟಿಗೆ ಬಂದು, ಸಾಮೂಹಿಕ ಧ್ಯಾನ ಮತ್ತು ಸಾಮೂಹಿಕ ಸತ್ಸಂಗಗಳನ್ನು ಮಾಡಬಹುದಾಗಿತ್ತು. ಅದು ನಿಜವಾಗಿಯೂ ಒಂದು ವಿಶ್ವದಾದ್ಯಂತ, ಮೂರು ವರ್ಷಗಳ ಪ್ರತ್ಯೇಕತೆಯ ಸಮಯದಲ್ಲಿ, ಭಕ್ತರಿಗೆ ಜೀವದಾನವಾಗಿ ಪರಿವರ್ತಿತವಾಗಿತ್ತು. ಈಗ ಸತ್ಸಂಗಕ್ಕಾಗಿ ಆ ತಂತ್ರಜ್ಞಾನವನ್ನು ಉಪಯೋಗಿಸಲು, ಪ್ರಚಂಡ ಸಾಮರ್ಥ್ಯವಿದೆ. ಆ ಶಕ್ತಿಯನ್ನು ಸರಿಯಾದ ವಾತಾವರಣವನ್ನು ಸೃಷ್ಟಿಸಲು, ಮತ್ತು ನೀವು ನಿಮ್ಮ ಮನೆಯಿಂದ ಹೊರಗೆ ಹೋಗದೆ ಇದ್ದರೂ ಸಹ, ಉಪಯೋಗಿಸಬಹುದಾಗಿರುತ್ತದೆ.
ಮೂರನೆಯ ವಿಷಯ ಏನೆಂದರೆ….“ಒಮ್ಮೆ ನೀವು ಪರಮಹಂಸ ಯೋಗಾನಂದರ ತರಹ ಜ್ಞಾನೋದಯ ಹೊಂದಿರುವವರೊಂದಿಗೆ, ಆಳವಾದ ಆಧ್ಯಾತ್ಮಿಕ ಬಾಂಧವ್ಯ ಹೊಂದಿದಲ್ಲಿ, ನೀವು ಎಂದೆಂದಿಗೂ, ಒಬ್ಬರೇ ಧ್ಯಾನ ಮಾಡಲಾರಿರಿ. ಏಕೆಂದರೆ ಭಕ್ತರ ಶ್ರಮಗಳು ಸದಾ ಕಾಲ, ಭಕ್ತನನ್ನು ಭಗವಂತನಲ್ಲಿ ಒಂದಾಗಿಸುವ ಗುರುವಿನ ಸಹಾಯದಿಂದ, ಬಲಪಡಿಸಲಾಗಿರುತ್ತದೆ. ಒಂದು ರೀತಿಯಲ್ಲಿ, ಅದೊಂದು ಅತ್ಯಮೂಲ್ಯವಾದ ಸತ್ಸಂಗ — ಗುರುವಿನೊಂದಿಗೆ ಸತ್ಸಂಗ — ಏಕೆಂದರೆ ಹೊರಗಿನ ಪರಿಸರ ಏನೇ ಇರಲಿ, ಅದು ಸಂಪೂರ್ಣವಾಗಿ ದೊರಕುತ್ತದೆ-ನಾನು ಧ್ಯಾನ ಕೇಂದ್ರದಲ್ಲಿಯೇ ಇರಲಿ, ಕಂಪ್ಯೂಟರ್ ಮಧ್ಯೆ ಇರಲಿ, ಯಾವುದೇ ಸ್ಥಳದಲ್ಲಿ ಇರಲಿ, ಅದು ಏನೇ ಆಗಿರಲಿ.”
“ನಾನು ಯಾವಾಗಲೂ ಇಲ್ಲಿಯೇ (ಕೂಟಸ್ಥ ಕೇಂದ್ರವನ್ನು ಸೂಚಿಸುತ್ತ), ಈ ಪವಿತ್ರ ಆಶ್ರಯ, ಆತ್ಮದ ಪವಿತ್ರ ಗರ್ಭಗುಡಿಯನ್ನು ಹೊಂದಿರುವೆ, ಭಕ್ತ ಹಾಗೂ ಅವನ ಗುರುವಿನ ಜೊತೆಯಲ್ಲಿ ಇರುವಂತಹ ಆ ಸತ್ಸಂಗವನ್ನು, ಒಂದು ಕ್ಷಣವೂ ಅಗಲದೆ ಇರುವಂತೆ ಹೊಂದಿರುತ್ತೇನೆ. ಅದು ಎಂದೆಂದಿಗೂ ಅಲ್ಲಿರುತ್ತದೆ.”
ಪ್ರಶ್ನೆ: ಸ್ವಾಮೀಜಿ, ಯುವಕರಿಗೆ ನಿಜವಾದ ಯಶಸ್ಸನ್ನು ಸಾಧಿಸಲು ಏನಾದರೂ ಸೂಚನೆಗಳನ್ನು ನೀಡುವಿರಾ?
ಸ್ವಾಮಿ ಚಿದಾನಂದಜಿ: “ಮೊಟ್ಟಮೊದಲಿಗೆ, ನನಗೆ ದೇಹವು ಇದೆ, ನನಗೆ ಒಂದು ಮನಸ್ಸು ಇದೆ, ಆದರೆ ನಾನು ಆತ್ಮ — ಒಂದು ಆತ್ಮ, ಎಂಬುದನ್ನು ಅರಿಯಲಿ. ನಿಜವಾದ ಯಶಸ್ಸು ಅಂದರೆ ಒಬ್ಬರ ಜೀವನವನ್ನು ಮತ್ತು ಧ್ಯೇಯಗಳನ್ನು, ಪ್ರತಿಯೊಂದಕ್ಕೂ ಸರಿಯಾದ ಮೊತ್ತದ ಸಮಯವನ್ನು ನಿಗದಿಪಡಿಸಿ, ತನ್ನ ಜೀವನವನ್ನು ಸಂಘಟಿತಗೊಳಿಸುವುದು. ನೀವು ಭೌತಿಕವನ್ನು ನಿರ್ಲಕ್ಷಿಸಬಾರದು ಮತ್ತು ನಿಮ್ಮ ಬುದ್ಧಿವಂತಿಕೆಯ ಬೆಳವಣಿಗೆ ಮತ್ತು ಶೈಕ್ಷಣಿಕ ವೃದ್ಧಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಮತ್ತು ನೀವು ಖಚಿತವಾಗಿಯೂ ಆಧ್ಯಾತ್ಮಿಕ ಪ್ರಜ್ಞೆಯ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಲು ಆಗುವುದಿಲ್ಲ.
“ನಿಜವಾದ ಯಶಸ್ಸು, ಮೇಲಿನ ಪ್ರತಿಯೊಂದಕ್ಕೂ ಸಮಯ ಕೊಟ್ಟು, ಜೀವನ ಶೈಲಿಯನ್ನು ಅಳವಡಿಸಿಕೊಂಡಲ್ಲಿ ದೊರಕುವುದು. ಯೋಗದಾ ಸತ್ಸಂಗ ಪಾಠ ಮಾಲಿಕೆಯಲ್ಲಿ ಅದನ್ನೇ ನಿಖರವಾಗಿ ನೀವು ಕಾಣುವಿರಿ. ಸಮತೋಲಿತ ಜೀವನಕ್ಕಾಗಿ ಸಂಪೂರ್ಣ ಮಾರ್ಗಸೂಚಿ: ಶಾರೀರಿಕ ಸ್ವಾಸ್ಥ್ಯ, ಶಿಕ್ಷಣದಲ್ಲಿ ಮತ್ತು ಬುದ್ಧಿವಂತಿಕೆ ಹಾಗೂ ತರ್ಕಬದ್ಧ ಗುಣಗಳಲ್ಲಿ ಮಾನಸಿಕ ಸಾಮರ್ಥ್ಯ, ಇವೆಲ್ಲವೂ ಅತಿ ಮುಖ್ಯವಾದವುಗಳು.
“ಮತ್ತು ಧ್ಯಾನ ಕಲಿಯಲು ಅಲ್ಪಸಮಯ ತೆಗೆದುಕೊಳ್ಳುವುದು, ಬಹುಶಃ 10 ನಿಮಿಷಗಳು ಬೆಳಿಗ್ಗೆ ಮತ್ತು 10 ನಿಮಿಷಗಳು ಸಂಜೆಯಲ್ಲಿ, ತೆಗೆದುಕೊಳ್ಳಲಿ. (ಅದು ನಿಜವಾಗಿಯೂ ಒಂದು ರೀತಿಯಲ್ಲಿ ನ್ಯಾಯೋಚಿತವಲ್ಲ. ಏಕೆಂದರೆ, ಒಮ್ಮೆ ಹತ್ತು ನಿಮಿಷಗಳು ಮಾಡಿದರೆ ಸಾಕು, ಅದನ್ನು 20 ನಿಮಿಷಗಳು ಮಾಡಲು ಬಯಸುವರು ಮತ್ತು ಒಮ್ಮೆ 20 ನಿಮಿಷಗಳು ಮಾಡಿದರೆ ಅವರು ಮತ್ತಷ್ಟು ದೀರ್ಘಕಾಲ ಮಾಡಲು ಇಚ್ಛಿಸುವರು…ಅದು ಧ್ಯಾನವು ಕೆಲಸ ಮಾಡುವ ರೀತಿ!)
“ಆದರೆ…ಅಲ್ಲಿರುವ ಅಂಶವೆಂದರೆ ಯಶಸ್ಸನ್ನು ಸಾಧಿಸಬೇಕಾದಲ್ಲಿ ನೀವು ಜೀವನಕ್ಕಾಗಿ ಯೋಜನೆಯನ್ನು ತಯಾರಿಸಬೇಕು. ಅದು ತಾನಾಗಿಯೇ ಆಗಲಿ…ಎಂದು ಕಾದು ನಿಂತರೆ ಯಾರೂ ಯಶಸ್ವಿಯಾಗಲಾರರು. ಒಂದು ದಿನದಲ್ಲಿ ಇರುವ 24 ಗಂಟೆಗಳಿಗೂ ಪ್ರತಿಯೊಬ್ಬರೂ ವಿನ್ಯಾಸವನ್ನು ರಚಿಸಬೇಕು. ನೀವು ಅದನ್ನು ದೃಷ್ಟಿಯಲ್ಲಿ ಇಟ್ಟು, ಪ್ರಜ್ಞಾಪೂರ್ವಕವಾಗಿ ನಿಮ್ಮ ಸಮಯವನ್ನು ನಿಯಂತ್ರಣಕ್ಕೆ ತರಬೇಕು. ಮತ್ತು ನಿಮ್ಮ ಸಮಯವನ್ನು, ನೀವು ನಿಮ್ಮ ಸಂಕಲ್ಪಗಳಿಗಾಗಿ ಪ್ರಜ್ಞಾಪೂರ್ವಕವಾಗಿ ಉಪಯೋಗಿಸಬೇಕು.”
ಪ್ರಶ್ನೆ: ನಾವು ಯಾವ ರೀತಿ ಮಕ್ಕಳನ್ನು ಪರಮಹಂಸ ಯೋಗಾನಂದಜಿಯವರ ಯೋಗ-ಧ್ಯಾನಗಳಲ್ಲಿ ಆಸಕ್ತರಾಗಿಸಬಲ್ಲೆವು? ವೈಎಸ್ಎಸ್ ಮತ್ತು ಎಸ್ಆರ್‌ಎಫ್‌ಗಳಲ್ಲಿ ಮಕ್ಕಳನ್ನು ಧ್ಯಾನಕ್ಕೆ ಪರಿಚಯಿಸುವ ಸಾಹಿತ್ಯವು ಇದೆಯೇ?
ಸ್ವಾಮಿ ಚಿದಾನಂದಜಿ: “ಮಾತಾಪಿತೃಗಳು ಮಕ್ಕಳನ್ನು ಬೋಧನೆಗಳಲ್ಲಿ ಪರಿಚಯಿಸಲು ಸಂತೋಷ ಭರಿತರಾಗಿರಬೇಕು. ಮತ್ತು ಅವರು ತಮ್ಮ ಮಕ್ಕಳಲ್ಲಿ ಕಾಣಲು ಇಚ್ಛಿಸುವ ಗುಣಗಳ ಆದರ್ಶ ವ್ಯಕ್ತಿಗಳಾಗಿ ಪರಿಪೂರ್ಣತೆಯಿಂದ ಇರಬೇಕು. ನೀವು ಮಕ್ಕಳಿಗೆ ಹೀಗೆ ಹೇಳಲಾಗದು, ‘ನಾನು ಹೇಳಿದಂತೆ ಮಾಡು. ನಾನು ಮಾಡಿದಂತೆ ಅಲ್ಲ.’ ಅದು ಎಂದಿಗೂ ಕಾರ್ಯಗತವಾಗಲಾರದು. ಅದರ ಬದಲು ಯಾರೂ ಏನನ್ನೂ ಮಾತನಾಡದೆಯೇ, ಜೀವನದಲ್ಲಿ ದಯೆ, ಘನತೆ ಮತ್ತು ಇತರರಿಗೆ ಗೌರವ ಮತ್ತು ಸ್ವ-ಸಂಕಲ್ಪ, ‘ನನ್ನ ಜೀವನವು ನಿಶ್ಚಯವಾಗಿಯೂ ನಾನು ಮಾಡಿದಂತೆ ಇರುತ್ತದೆ’ – ಇವುಗಳನ್ನು ಸಾಕಾರಗೊಳಿಸಿಕೊಂಡು, ಜೀವನ ನಡೆಸುವ ಅವರು ತಮ್ಮ ಮಕ್ಕಳ ಮೇಲೆ ಪ್ರಭಾವ ಬೀರುತ್ತಾರೆ.
“…ಮಾತಾಪಿತೃಗಳು ತಮ್ಮ ಮಕ್ಕಳಿಗೆ ಮೇಲ್ಪಂಕ್ತಿಯಾಗಿರಬೇಕು. ಮಕ್ಕಳು ತಮ್ಮ ಸಹಜ ಸ್ವಭಾವದಂತೆ ನಿರಂತರ ಕಲಿಕೆಯ ಭಾವದಲ್ಲಿ ಇರುತ್ತಾರೆ. ಅವರ ಮೆದುಳುಗಳು ಮತ್ತು ನರಗಳು ಅವರ ಅತ್ಯಂತ ಚಿಕ್ಕ ವಯಸ್ಸಿನಲ್ಲಿ, ಕಲಿಯಲು ಮತ್ತು ಗ್ರಹಿಸಲು ಬೇಕಾಗುವಂತಹ ಆಳದಲ್ಲಿರುತ್ತದೆ. ಮಗುವಿನ ಮೆದುಳು, ಬಹಳ ಮೃದು, ಮೆದುವಾಗಿರುತ್ತದೆ. ಆದ್ದರಿಂದ, ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಅಚ್ಚೊತ್ತಿ ಸಬಹುದು. ನಾನು ಇದನ್ನು ಅತ್ಯಂತ ಪ್ರಬಲವಾಗಿ ಭಾವಿಸುತ್ತೇನೆ. ಏಕೆಂದರೆ, ಇಂದಿನ ಜಗತ್ತಿನಲ್ಲಿ ಮಾತಾಪಿತೃಗಳ ಜವಾಬ್ದಾರಿಯ ಬಗ್ಗೆ ಅತಿ ಹೆಚ್ಚು ಒತ್ತುಕೊಟ್ಟಿರುವುದಿಲ್ಲ. ಒಂದು ವೇಳೆ, ನೀವು ಒಂದು ಮಗುವನ್ನು ಈ ಪ್ರಪಂಚಕ್ಕೆ ತರುವುದಾದರೆ, ನೀವು ಅದಕ್ಕೆ ಜವಾಬ್ದಾರರಾಗಿರಬೇಕು. ಅದಕ್ಕಾಗಿ ಕೇವಲ, ಎಲ್ಲಾ ಆಧುನಿಕ ವೀಡಿಯೋ ಗೇಮ್ಸ್, ಉಡುಪುಗಳು, ಫ್ಯಾಷನ್ ಮೊದಲಾದವುಗಳನ್ನು ಕೊಂಡುಕೊಳ್ಳ ಬೇಕೆಂದಿಲ್ಲ. ಅಲ್ಲ, ನಿಮ್ಮ ಮಗುವು ನಿಮ್ಮನ್ನು ಮೇಲ್ಪಂಕ್ತಿಯಾಗಿಸುವ ರೀತಿಯ ವ್ಯಕ್ತಿಯಾಗಿರಬೇಕು.”
ಮಹಿಳೆಯರ ಇಂದಿನ ಪರಿಸ್ಥಿತಿಯು ಒಂದು ಪರಿವರ್ತನೆಯ ಹಂತ
ಪ್ರಶ್ನೆ: ಭಾರತದಲ್ಲಿ (ಮತ್ತು ಬಹುಶಃ ವಿಶ್ವದಾದ್ಯಂತವೂ ಸಹ), ತಾಯಿಯು ಸಾಮಾನ್ಯವಾಗಿ, ಗೃಹ ಕೃತ್ಯದ ಕೇಂದ್ರ ಬಿಂದು – ಕುಶಲ ಕುಟುಂಬ, ಗೃಹಕೃತ್ಯ ಕರ್ತವ್ಯಗಳು, ಕೆಲಸ, ಮತ್ತು ಎಲ್ಲಾ ರೀತಿಯ ನಿರೀಕ್ಷೆಗಳು. ಮಹಿಳೆಯು ಯಾವ ರೀತಿ ಯೋಗಾನಂದಜಿಯವರು ನಿಯಮಿತಗೊಳಿಸಿರುವ, ದಿನಕ್ಕೆರಡು ಬಾರಿ ಧ್ಯಾನದ ದಿನಚರಿಯನ್ನು ಅವರ ಬಹು ಜವಾಬ್ದಾರಿಗಳಲ್ಲಿ ರಾಜಿಮಾಡಿಕೊಳ್ಳದೆ ಮತ್ತು ತಮ್ಮ ಮನೆಗಳಲ್ಲಿ ಸಾಮರಸ್ಯವನ್ನು ಕೆಡಿಸದೆ, ಅನುಸರಿಸಬಹುದು?
ಸ್ವಾಮಿ ಚಿದಾನಂದಜಿ: “ಅದೊಂದು ನಿಜವಾಗಿಯೂ ಕರ್ತವ್ಯಗಳ ಪಟ್ಟಿಯೇ ಆಗಿದೆ. ಅಲ್ಲವೇ? ಇದನ್ನು ಸಂದರ್ಭಕ್ಕೆ ಅಳವಡಿಸಿಕೊಳ್ಳಲು ಒಂದು ಮಾತು ಹೇಳುತ್ತೇನೆ. ಭಾರತದಲ್ಲಿ ಹಾಗೂ ವಿಶ್ವದಾದ್ಯಂತ ಮತ್ತು ಇತರ ಮುಂದುವರೆದ ದೇಶಗಳಲ್ಲಿ, ಮಹಿಳೆಯರ ಇಂದಿನ ಪರಿಸ್ಥಿತಿಯು ಪರಿವರ್ತನಾ ಹಂತದಲ್ಲಿದೆ. ಮಹಿಳೆಯರು ಇಷ್ಟೊಂದು ಮಾಡಲು ತಲೆತಲಾಂತರದಿಂದ ಬಂದಿದೆ. ಅಲ್ಲಿ ಮಹಿಳೆಯರನ್ನು ನಿಗ್ರಹಿಸಲಾಗಿತ್ತು. ಮತ್ತು ಪಂಜರದಲ್ಲಿಟ್ಟು, ‘ನೀನು, ಸುಮ್ಮನೆ ಮನೆಯಲ್ಲಿ ಕುಳಿತುಕೋ. ಮತ್ತು ಅಡಿಗೆ ಹಾಗೂ ಶುಚಿಗೊಳಿಸುವ ಕೆಲಸ ಮಾಡು’ ಮತ್ತು ಅಷ್ಟಕ್ಕೇ ಸೀಮಿತವಾಗಿತ್ತು. ಅದಂತೂ ಅನಾಗರಿಕ ಹಾಗೂ ಪ್ರಾಚೀನ ಪದ್ಧತಿ. ಅದೇ ಸಮಯದಲ್ಲಿ ನಾವು ಒಂದು ವಿಧವಾದ ಮಧ್ಯಮ ಹಂತದಲ್ಲಿ ಇದ್ದೇವೆ. ಅಲ್ಲಿ ಮಹಿಳೆಯರು ಸರಿಯಾಗಿಯೇ ತಮ್ಮ ವೈಯಕ್ತಿಕ ಅಭಿವೃದ್ಧಿ ಹಾಗೂ ತಮ್ಮದೇ ವೈಯಕ್ತಿಕ ಆಸಕ್ತಿಗಳನ್ನು ತೋರಿಸಲು, ಇತರ ದಾರಿಗಳನ್ನು ಅನ್ವೇಷಿಸಬಲ್ಲವರಾಗಿರುವರು. ಆದರೆ ಆಧ್ಯಾತ್ಮಿಕ ಸಮತೋಲನದ ನಿಜಜೀವನವೆಂದರೆ ಪುರುಷ ಮತ್ತು ಮಹಿಳೆಯರ ಸಮತೋಲನ ಪಾತ್ರಗಳ ಜೀವನವಾಗಿ ರೂಪುಗೊಂಡು, ಮನೆಯಲ್ಲಿಯೂ ಹಾಗೂ ವ್ಯಾವಹಾರಿಕ ಪ್ರಪಂಚದಲ್ಲಿಯೂ, ಸಾಮರಸ್ಯದ ಜೀವನವನ್ನು ನಿರ್ಮಿಸಿಕೊಳ್ಳುವುದು.”
“ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವೆನು. ಮತ್ತು ಅದು ಹೇಗೆ ಮಹಿಳೆಯರು ಅದನ್ನು ನಿಭಾಯಿಸುತ್ತಾರೆ, ಎಂಬುದು ನನಗೆ ತಿಳಿಯದು. ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಶಕ್ತಿಶಾಲಿಗಳು. ಏಕೆಂದರೆ ಅವರು ಅಷ್ಟೊಂದು ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಮಹಿಳೆಯರು “ಎಲ್ಲವನ್ನೂ ಹೊಂದಬೇಕು” – ಎಂಬುದರ ಬಗ್ಗೆ ಯೋಚಿಸಬೇಕಾಗಿಲ್ಲ. ಅದು ಕಾರ್ಪೊರೇಟ್ ವಲಯದವರಾಗಿ, ಎರಡು ಅಥವಾ ಮೂರು ಗರಿಷ್ಠ ಸಾಧಕರಾದ ಮಕ್ಕಳು, ಎರಡು ಅಥವಾ ಮೂರು ಸುಂದರವಾದ ದೊಡ್ಡ ಮನೆಗಳು, ಒಂದು ಪರಿಪೂರ್ಣ ಆರೋಗ್ಯವಂತ ಶರೀರ, ಮತ್ತೆ ಇನ್ನೂ. ಈ ಕೆಲವು ಸಮರ್ಥನೀಯವಲ್ಲದ ಉದ್ವಿಗ್ನತೆಗಳ ಸಮೂಹವನ್ನು ಮತ್ತು ದುರದೃಷ್ಟವಶಾತ್ ಈ ವಿಶಾಲ ಸಮಾಜವು, ಇನ್ನೂ ಸಹ ಸರಿಯಾದ ಸಮತೋಲನವನ್ನು ಕಂಡುಹಿಡಿಯುವ ಪ್ರಕ್ರಿಯೆಯಲ್ಲಿಯೇ ಹಾದು ಹೋಗುತ್ತಿದೆ. ಆದರೆ, ನಾವು ಹೇಗೆ ಪಡೆಯುವೆವು, ಎಂಬುದು ಇನ್ನೂ ತಿಳಿದಿಲ್ಲ. ನೀವು ವಿವರಿಸುತ್ತಿರುವ ಈ ಸನ್ನಿವೇಶವನ್ನು ಅದು ಫಲಿಸುವವರೆಗೆ ಸಹಿಸಿಕೊಳ್ಳಬೇಕು. ಆದಷ್ಟು ಬೇಗ ಬೆಳೆದಷ್ಟು, ಅದು ಉತ್ತಮ.”
ಪ್ರಶ್ನೆ: ಸ್ವಾಮೀಜಿ, ಬೆಳೆಯುತ್ತಿರುವ ಬ್ರಹ್ಮಾಂಡೀಯ ಆಧ್ಯಾತ್ಮಿಕ ನಾಗರೀಕತೆಯಲ್ಲಿ, ಭಾರತದ ಆಧ್ಯಾತ್ಮಿಕ ನಾಗರೀಕತೆಯು ಯಾವ ಪಾತ್ರ ವಹಿಸಬಲ್ಲದು, ಎಂದು ನೀವು ಭಾವಿಸುವಿರಿ?
ಸ್ವಾಮಿ ಚಿದಾನಂದಜಿ: “ಇದು ನನ್ನ ಹೃದಯಕ್ಕೆ ಅತ್ಯಂತ ಪ್ರಿಯವಾದದ್ದು. ಏಕೆಂದರೆ, ನಮ್ಮ ಗುರು ಪರಮಹಂಸ ಯೋಗಾನಂದರನ್ನು, ಒಂದು ಪ್ರಮುಖ ಉದ್ದೇಶ ಸಾಧಿಸಲು ಕಳುಹಿಸಲಾಗಿತ್ತು. ಭಾರತದ ಆಧ್ಯಾತ್ಮಿಕತೆಯ ಬಗ್ಗೆ ಮಾತನಾಡುವಾಗ, ನಾವು ನಾಗರೀಕತೆಯ ಆ ಸುವರ್ಣಯುಗಕ್ಕೆ ಹಿಂತಿರುಗೋಣ. ಅದರಿಂದಲೇ ಗೀತೆ, ಯೋಗ ಸೂತ್ರಗಳು, ಮತ್ತು ಉಪನಿಷತ್ತುಗಳು ಬಂದಿವೆ. ಇಲ್ಲಿ ನೀವು ಈ ಸತ್ಯವಾದ ಸಾರ್ವತ್ರಿಕ ಬೋಧನೆಗಳು, ಕೇವಲ ಒಂದು ಧರ್ಮದ ಅಥವಾ ಮತ್ತೊಂದು ಧರ್ಮದ ಸದಸ್ಯರಿಗೆ ಅಥವಾ ಕೇವಲ ಒಂದು ಜನಾಂಗದ ಸದಸ್ಯನಿಗೆ ಮಾತ್ರ, ಎಂದು ಹೇಳುತ್ತಿಲ್ಲ. ಅದು ಜಗತ್ತಿನಾದ್ಯಂತ ಇರುವ ಮಾನವನ ಪರಿಸ್ಥಿತಿಗಾಗಿ ಮಾತನಾಡುತ್ತಿದೆ. ಅದರಿಂದಾಗಿಯೇ, ನೀವು ಉಪನಿಷತ್ತುಗಳಲ್ಲಿ, ಈ ಸುಂದರ ಹೇಳಿಕೆಗಳನ್ನು ಕಾಣುವಿರಿ, ‘ಇಡೀ ವಿಶ್ವವೇ ಒಂದು ಕುಟುಂಬ’ [‘ವಸುದೈವ ಕುಟುಂಬಕಂ’], ಮತ್ತು ಋಷಿಗಳು ಅದನ್ನು ಅನೇಕ ಹೆಸರುಗಳಿಂದ ಕರೆಯುತ್ತಿದ್ದರೂ ‘ಸತ್ಯವು ಮಾತ್ರ ಒಂದೇ’ [‘ಏಕಮ್ ಸತ್ ವಿಪ್ರಾ ಬಹುಧಾ ವದಂತಿ’].
“ಒಂದು ಆದರ್ಶ ಧರ್ಮವು ಹೀಗಿರಬೇಕು: ‘ಎಲ್ಲರೂ ಸಂತಸದಿಂದ ಇರಲಿ’, ‘ಎಲ್ಲರೂ ದುಃಖದಿಂದ ದೂರವಾಗಿರಲಿ.’ ಅವು ಹೀಗೆ ಹೇಳುವುದಿಲ್ಲ, ‘ಭಾರತದಲ್ಲಿ ಎಲ್ಲರೂ ಸಂತಸದಿಂದ ಇರಲಿ,’ ಅಥವಾ ‘ಹಿಂದೂಗಳೆಲ್ಲರೂ ಸಂತಸದಿಂದ ಇರಲಿ’ ‘ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಅಲ್ಲ’ ಮತ್ತು ಹೀಗೆಯೇ ಮತ್ತಿನ್ನೂ. ಏಕೆಂದರೆ, ನಾವೆಲ್ಲರೂ ಒಬ್ಬನೇ ಭಗವಂತನ ಕಿರಣಗಳನ್ನು ಪ್ರತಿಯೊಬ್ಬರಲ್ಲೂ ಹೊಂದಿದ್ದೇವೆ. ಇದು ನಾವು ಕಂಡಿರುವ ವಿಕಸನ ಪ್ರಕ್ರಿಯೆಯ ಒಂದು ಭಾಗ. ಅದರಲ್ಲಿ ನಾವು ಪ್ರತಿಯೊಬ್ಬರನ್ನೂ ಸೋದರ ಮತ್ತು ಸೋದರಿಯರಂತೆ ಗುರುತಿಸುವುದು. ಇಲ್ಲದಿದ್ದಲ್ಲಿ, ನಾವು ಪರಸ್ಪರ ಹಾಗೂ ಅದರೊಂದಿಗಿರುವ ಯೋಜನೆಯನ್ನು ನಾಶಪಡಿಸುತ್ತೇವೆ.
“ಇಡೀ ಜಗತ್ತು ಭಾರತದ ಕಡೆ ಅಂತಹ ಅಭಿಮಾನಪೂರ್ವಕವಾಗಿ ನೋಡುತ್ತಿದೆ”
“ಭಾರತದ ಪಾತ್ರದ ಬಗ್ಗೆ ಹೇಳುವುದಾದರೆ, ವಿಶ್ವಕ್ಕೆ ಭಾರತದ ಅತಿ ಮಹತ್ತಾದ ಕೊಡುಗೆ, ಎಂದರೆ ಭಾರತದ ಸ್ವಂತ ದೈವಿಕ ಮತ್ತು ಶಾಶ್ವತ ಪರಂಪರೆಗೆ ಆದರ್ಶವಾಗಿದ್ದು, ಉದಾಹರಣೆಗೆ ತಕ್ಕದ್ದಾಗಿರಬೇಕು. ಏಕೆಂದರೆ, ಜಗತ್ತು ಭಾರತದ ಕಡೆ ಅಷ್ಟೊಂದು ಅಭಿಮಾನದಿಂದ ನೋಡುತ್ತಲಿದೆ. ನೀವು ಪಶ್ಚಿಮದ ಕಡೆ ಪ್ರಯಾಣ ಬೆಳೆಸದಿದ್ದಲ್ಲಿ, ನಿಮಗೆ ತಿಳಿಯದಿರಬಹುದು. ಆದರೆ, ಯಾವ ಪೀಳಿಗೆಯಲ್ಲಿ, ಎಲ್ಲಿ ಅನೇಕ ಜನರು ಯೋಗಿಯ ಆತ್ಮಕಥೆ ಯನ್ನು ಓದಿರಬಹುದು ಅಥವಾ ಭಾರತದಿಂದ ಯು.ಎಸ್. ಗೆ ಬಂದ ಆಧ್ಯಾತ್ಮ ಶಿಕ್ಷಕರ ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿರುವವರ ಪೀಳಿಗೆಯಲ್ಲಿ ಬೆಳೆಯುತ್ತಿರುವ ವ್ಯಕ್ತಿಯಾಗಿದ್ದಲ್ಲಿ, ಜಗತ್ತು ಈ ರೀತಿಯಲ್ಲಿ ಭಾರತವನ್ನು ನೋಡುತ್ತದೆ. ಇದೇ ರೀತಿ, ಯುರೋಪ್, ಆಸ್ಟ್ರೇಲಿಯಾ, ಮತ್ತು ದಕ್ಷಿಣಅಮೇರಿಕಾದ ಪರಿಸ್ಥಿತಿಯಲ್ಲಿಯೂ ನಿಜವಾಗಿರುತ್ತದೆ. ಲಕ್ಷಾಂತರ ಜನರು ಭಾರತವನ್ನು, ಮಾನವತ್ವದ ಹಿರಿಯ ಸಹೋದರನು, ಆಧ್ಯಾತ್ಮಿಕವಾಗಿ ನುಡಿಯುತ್ತಿರುವಂತೆ ಕಾಣುತ್ತಾರೆ.
“ಜಾಗತಿಕ ಆಧ್ಯಾತ್ಮಿಕ ನಾಗರೀಕತೆಯು ಎರಡು ರೀತಿಗಳಲ್ಲಿ ಆಗುತ್ತಿದೆ, ಎಂಬುದರಲ್ಲಿ ಪ್ರಶ್ನೆ ಇಲ್ಲ: ಒಂದು — ಭೌತಿಕ ಮಾರ್ಗದಲ್ಲಿ ಆಗುತ್ತಿದೆ. ಎರಡು — ತಂತ್ರಜ್ಞಾನ — ಸಂವಹನ ಹಾಗೂ ಪ್ರಯಾಣಗಳ ಮೂಲಕ. ಒಂದೆರಡು ಪೀಳಿಗೆಗಳ ಹಿಂದೆ, ಯು.ಎಸ್. ನಿಂದ ಭಾರತಕ್ಕೆ ಪ್ರಯಾಣ ಮಾಡುವುದು ವಿಶೇಷವಾಗಿದ್ದು, ಅನೇಕ ಜನರಿಗೆ ಅದು ಅಸಾಧ್ಯವಾಗಿತ್ತು. ಆದರೆ, ಈಗ ಜನರು ಕೇವಲ ಒಂದು ವಿಮಾನ ಹತ್ತಿ ಬೆಂಗಳೂರು ಅಥವಾ ಚಿಕಾಗೋಗೆ ಭೇಟಿ ನೀಡಬಹುದು. ಆದ್ದರಿಂದ, ವಿಶ್ವವು ಈಗ ಚಿಕ್ಕದಾಗಿದೆ. ಇದು ಪ್ರತ್ಯೇಕ ದೇಶ ಮತ್ತು ಸಂಸ್ಕೃತಿಗಳ ವಿಭಿನ್ನ ಸಂಗ್ರಹವಾಗಿರುವುದಿಲ್ಲ.
“ಇಂಟರ್ ನೆಟ್ (ಅಂತರ್ಜಾಲ) ನಿಜವಾಗಿಯೂ ಮಾನವ ಸಮಾಜದ ಚೌಕಟ್ಟನ್ನೇ ಪರಿವರ್ತಿಸಿದೆ. ಅದು ನಿಜವಾಗಿಯೂ, ಮಾನವ ಕುಟುಂಬದ ಒಂದು ದೇಹವನ್ನು ಒಂದಾಗಿಸುವ ನರಮಂಡಲದಂತೆಯೇ ಆಗಿದೆ. ಏನಾಗುತ್ತದೆಂದರೆ, ನೀವು ಜನರನ್ನು ಪರಸ್ಪರ ನಿಕಟವಾಗಿರುವಂತಾಗಿಸಿದಾಗ, ಪರಸ್ಪರ ಹೊಂದಾಣಿಕೆ ಉಂಟು ಮಾಡುವುದು ಒಳ್ಳೆಯದು. ಇದು ಹೇಗಿದೆ ಎಂದರೆ, ನೀವು ಒಂದು ಕುಟುಂಬದಲ್ಲಿ ಇರುವುದು, ಅಲ್ಲಿಯೇ ಅದೇ ಮನೆಯಲ್ಲಿಯೇ ಹೊಂದಿರುವಂತೆ ಇರುವುದು. ದುರದೃಷ್ಟವಶಾತ್, ನೀವು ಒಂದೇ ಕುಟುಂಬದಲ್ಲಿ ಪರಸ್ಪರ ಕಚ್ಚಾಡುವುದನ್ನು, ಮತ್ತೇನೆಲ್ಲವನ್ನೂ ನೋಡಿರುವಿರಿ. ಒಳ್ಳೆಯದು, ಒಂದು ವೇಳೆ ಮಾನವ ಜನಾಂಗವು ಅದನ್ನು ಮಾಡಿದಲ್ಲಿ, ಅನಂತರ ಅದು ಕೆಲವು ಪೀಳಿಗೆಗಳಿಗಿಂತ ಹೆಚ್ಚು ಕಾಲ ಉಳಿಯಲಾರದು.
“ನಮ್ಮಲ್ಲಿ ಸಾಮೂಹಿಕ ವಿನಾಶಕ್ಕೆ ಬೇಕಾದ ಸಾಮರ್ಥ್ಯವಿದೆ. ಅದು ನೂರು ವರ್ಷಗಳ ಹಿಂದೆ ಇರಲಿಲ್ಲ. ಅದರ ಜೊತೆಯಲ್ಲಿ ತಂತ್ರಜ್ಞಾನದ ಶಕ್ತಿಯ ಬೆಳವಣಿಗೆ ಮತ್ತು ಪ್ರಪಂಚದ ಕುಗ್ಗುವಿಕೆಗಳಿಂದಾಗಿ, ನಾವು ಅಕ್ಷರಶಃ ಒಂದೇ ಮನೆಯಲ್ಲಿ, ಇತಿಹಾಸದಲ್ಲಿ ಹಿಂದೆ ಎಂದಿಗೂ ದಾಖಲಿಸಲಾಗಿರುವುದಕ್ಕಿಂತ ಹೆಚ್ಚಾಗಿ ಇದ್ದೇವೆ. ಹಾಗಿದ್ದಲ್ಲಿ ನಾವು ಅಷ್ಟೇ ಸಮಾನ ರೂಪದ ‘ಆಧ್ಯಾತ್ಮಿಕ ಬೆಳವಣಿಗೆ,’ ಒಂದು ಆಧ್ಯಾತ್ಮಿಕ ಪರಿಪಕ್ವತೆ, ಇಂದ್ರಿಯ ನಿಗ್ರಹ, ಸ್ವ-ನಿಯಂತ್ರಣವಿದ್ದು, ಕೇವಲ, ನಮಗೆ ಇಷ್ಟವಿಲ್ಲದ ಜನರನ್ನು ದೂರವಿರಿಸುವುದಷ್ಟೇ ಅಲ್ಲ, ನನಗೆ ಸಂತೋಷ ಮತ್ತು ಸುರಕ್ಷತೆ, ಶಾಂತಿ ಮತ್ತು ಯಶಸ್ಸು, ಇವುಗಳಿಗಾಗಿ ವ್ಯವಸ್ಥಿತ ಪ್ರಯತ್ನ ಮಾಡುವ ಇಚ್ಛೆ ಇರುವುದರಿಂದ, ಅದೇ ರೀತಿ ಎಲ್ಲಾ ಮಾನವರು ಅದನ್ನು ಅರಿಯುವ ಆಧ್ಯಾತ್ಮಿಕ ಪರಿಪಕ್ವತೆಯನ್ನು ಹೊಂದಿರಲೇಬೇಕು. ಮತ್ತು ಅಂತಿಮವಾಗಿ ಜನರು, ನಿಜವಾಗಿಯೂ, ‘ನನ್ನ ಸುತ್ತಲೂ ಇರುವ ಜನರು ಸಂತಸದಿಂದ ಇಲ್ಲದೆ ಇದ್ದಲ್ಲಿ, ನಾನು ಸಂತೋಷವಾಗಿರುವುದಿಲ್ಲ.’ ಎಂಬುದನ್ನು ಅರಿಯುತ್ತಾರೆ. ಮತ್ತು ಅದು, ಆ ದೇಶದಲ್ಲಿ ಮುಗಿದು ಹೋಯಿತು, ಈ ದೇಶದಲ್ಲಿ ಮುಗಿದು ಹೋಯಿತು ಎಂದು ತಳ್ಳಿ ಹಾಕಲು ಸಾಧ್ಯವಿಲ್ಲ. ಏಕೆಂದರೆ ಅದು ಜಗತ್ತಿನ ಮೇಲೆ ಸಂಪೂರ್ಣವಾದ ಪ್ರಭಾವ ಬೀರುತ್ತದೆ. ರಷ್ಯಾ ಮತ್ತು ಉಕ್ರೇನ್‌ನಲ್ಲಿ ಏನಾಯಿತು, ಎಂಬುದನ್ನು ನೋಡಿ. ಒಂದು ನೂರು ವರ್ಷಗಳ ಹಿಂದೆ, ಅವೆರಡು ಅನ್ಯೋನ್ಯವಾಗಿದ್ದ ನೆರೆಹೊರೆ ದೇಶಗಳಾಗಿದ್ದಿರಬಹುದು. ಮತ್ತು ಈಗ ಪ್ರತಿಯೊಬ್ಬರೂ, ಪ್ರಧಾನಮಂತ್ರಿ ಮೋದಿ ಯವರಿಂದ ಹಿಡಿದು ಅಧ್ಯಕ್ಷ ಬೈಡನ್‌ರವರಗೆ ಪ್ರತಿಯೊಬ್ಬರೂ ಹೇಳಿದರು, 21ನೇ ಶತಮಾನದಲ್ಲಿ ನಾವು ಹೀಗೆ ಮಾಡುವುದು ಸರಿಯಲ್ಲ. ತಂತ್ರಜ್ಞಾನದ ಜೊತೆಯಲ್ಲಿಯೇ ಆಧ್ಯಾತ್ಮಿಕತೆಯೂ ಸಮಾನಾಂತರವಾಗಿ ಬೆಳೆಯಬೇಕು.”
ಪ್ರಶ್ನೆ: ಜನರು ಯಾವ ರೀತಿ ತಮ್ಮ ಒತ್ತಡದ ಜೀವನದಲ್ಲಿ, ಧ್ಯಾನಕ್ಕೆ ಸಮಯ ಮಾಡಿಕೊಳ್ಳುವರು?
ಸ್ವಾಮಿ ಚಿದಾನಂದಜಿ: “ಈ ವಿಶ್ವವು ಹೆಚ್ಚು ಹೆಚ್ಚು ಜಟಿಲವಾಗುತ್ತಿರುವಂತೆ, ಮತ್ತು ಹೆಚ್ಚು ಹೆಚ್ಚು ವಸ್ತುಪ್ರಜ್ಞೆಯ ಕಡೆಗೆ ಸಾಗುತ್ತಿರುವಾಗ, ಜನರು, ಧ್ಯಾನವು ಒಂದು ಬದುಕುಳಿಯುವ ಕೌಶಲ್ಯ, ಎಂಬುದನ್ನು ಅರಿತುಕೊಳ್ಳುತ್ತಿರುವರು. ಆ ರೀತಿಯ ಆಂತರಿಕ ಶಾಂತಿಯ ಬಾವಿ ಅಥವಾ ಕಾರಂಜಿಯ ಕಡೆಗೆ, ನಿಮಗೆ ಪ್ರವೇಶಾವಕಾಶವಿಲ್ಲದಿದ್ದಲ್ಲಿ, ನೀವು ಚೂರು ಚೂರಾಗುವಿರಿ. ಧ್ಯಾನವೂ ಇದನ್ನೇ ನಮಗೆ ತಂದುಕೊಡುವುದು.
“ಯಾವುದು ಜನರನ್ನು ಪ್ರೇರೇಪಿಸುತ್ತದೆ ಮತ್ತು ಯಾವ ರೀತಿ ಸಮಯವನ್ನು ಕಂಡುಕೊಳ್ಳುತ್ತಾರೆ, ಎಂಬ ಪರಿಭಾಷೆಯಲ್ಲಿ ನೀವು ಅವರನ್ನು, ಇಷ್ಟು ಮಾತ್ರ ಕೇಳಬಹುದು, ಅವರು ನಿದ್ರಿಸಲು ಯಾವ ರೀತಿ ಸಮಯ ಹೊಂದಿಸಿಕೊಳ್ಳುತ್ತಾರೆ, ಊಟ ಮಾಡಲು ಯಾವ ರೀತಿ ಸಮಯ ಹೊಂದಿಸಿಕೊಳ್ಳುತ್ತಾರೆ, ಈ ಕೆಲಸಗಳಲ್ಲಿ ಏನನ್ನಾದರೂ ಮಾಡಲು ಹೇಗೆ ಸಮಯ ಕಂಡುಕೊಳ್ಳುತ್ತಾರೆ? ಏಕೆಂದರೆ, ಅದನ್ನು ಒಂದು ಅಗತ್ಯವೆಂದು ಸ್ವೀಕರಿಸುವಿರಿ. ಈ ಸಮಾಜವು ಅತಿರೇಕದ ವರ್ತನೆಗಳಿಂದಾಗಿ, ಪಶ್ಚಿಮದಲ್ಲಿ ಹೆಚ್ಚು ಹೆಚ್ಚು ಜನರು ಅರಿತುಕೊಂಡಿರುವುದು: ಯುರೋಪ್, ಯು.ಎಸ್., ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಖಂಡಿತವಾಗಿಯೂ ಭಾರತ. ‘ಒಂದು ವೇಳೆ ನಾನು ನನ್ನ ಮಾನವತ್ವ ಮತ್ತು ಸ್ವಸ್ಥ ಚಿತ್ತದ ಮೇಲೆ ಕೂಡ ನನ್ನ ಹಿಡಿತವನ್ನು ಉಳಿಸಿಕೊಳ್ಳಬೇಕೆಂದಲ್ಲಿ, ನಾನು ಆ ಆತ್ಮದ ಅರಿವನ್ನು ಸಂಪರ್ಕಿಸಲು ಕಲಿಯಬೇಕು.’”
ಧ್ಯಾನ: ಪ್ರಯತ್ನಿಸಿ ಮತ್ತು ಹೋಲಿಸಿ!
ಪ್ರಶ್ನೆ: ಇಂದಿನ ಸಮಾಜವು ಯುವಕರಿಗೆ ಕಲಿಸುವುದು, ಇಂದ್ರಿಯಗಳಲ್ಲಿ ತೊಡಗುವುದೇ, ಜೀವನವನ್ನು ಆನಂದಿಸುವ, ಏಕಮಾತ್ರ ಮಾರ್ಗವೆಂದು, ಆದರೆ ಧ್ಯಾನ ಮತ್ತು ಯೋಗಗಳು ವಿರುದ್ಧವಾದುದನ್ನು ಬೋಧಿಸುತ್ತವೆ – ಅದು ಇಂದ್ರಿಯ-ನಿಗ್ರಹ ಮತ್ತು ಆಂತರೀಕರಣಗಳೇ ಸಂತೋಷಕ್ಕೆ ಉಪಾಯ. ಯೋಗಾನಂದಜಿಯವರ ಬೋಧನೆಗಳು ಈ ಸಂಧಿಗ್ಧತೆಯನ್ನು ಪರಿಹರಿಸುತ್ತವೆಯೇ?
ಸ್ವಾಮಿ ಚಿದಾನಂದಜಿ: “ಪರಮಹಂಸ ಯೋಗಾನಂದರು ಯಾವಾಗಲೂ ಹೇಳುತ್ತಿದ್ದರು, ‘ಪ್ರಯತ್ನಿಸು ಮತ್ತು ಹೋಲಿಸು.’ ಜನ್ಮಾಂತರಗಳಲ್ಲಿನ ಆತ್ಮದ ವಿಕಸನದ ಹಾದಿಯಲ್ಲಿ ಪ್ರತಿ ಒಬ್ಬ ವ್ಯಕ್ತಿಯು, ಒಂದು ಘಟ್ಟವನ್ನು ತಲುಪುತ್ತಾನೆ. ಅಲ್ಲಿ ಅವನು ಯೋಚಿಸುತ್ತಾನೆ: ‘ಇಂದ್ರಿಯಗಳನ್ನು ತೃಪ್ತಿಗೊಳಿಸುವುದು ನನ್ನನ್ನು ಅತೃಪ್ತನನ್ನಾಗಿಸುತ್ತದೆ. ಏಕೆಂದರೆ ನಾನು ಇಂದ್ರಿಯಗಳಲ್ಲ.’ ನಾವೆಲ್ಲರೂ ಅದರ ಮೂಲಕವೇ ಬಂದಿದ್ದೇವೆ, ಮತ್ತು ನಾವು ಕುಡಿತ ಅಥವಾ ಆಸ್ತಿ ಅಥವಾ ಲೈಂಗಿಕತೆ ಇತ್ಯಾದಿಗಳನ್ನು ಬೆನ್ನಟ್ಟಿ ಹೋಗುತ್ತಿರುವ ಜನರ ಬಗ್ಗೆ ವಿಮರ್ಶಾತ್ಮಕವಾಗಿರುವುದಿಲ್ಲ. ಯಾವಾಗ ಬೇರೊಬ್ಬರು ಅಧ್ಯಾತ್ಮ ಮಾರ್ಗದಲ್ಲಿ, ಗಂಭೀರ ಬದ್ಧತೆಯಿಂದ ಮುಂದುವರೆಯುತ್ತಿದ್ದಾರೆ, ಅದು ಏಕೆಂದರೆ, ಅವರು ಅದೆಲ್ಲವನ್ನು ಮಾಡಿರುವರು, ಆದರೆ ಅದು ಕೊನೆಯಲ್ಲಿ ಅವರನ್ನು ಪೂರ್ತಿಯಾಗಿ ಖಾಲಿ ಮಾಡಿಬಿಟ್ಟಿದೆ.
“ಮತ್ತೊಂದೆಡೆ, ಆ ಘಟ್ಟವನ್ನು ತಲುಪದೇ ಇರುವವರನ್ನು, ಮನವೊಲಿಸುವುದು ಬಹಳ ಕಷ್ಟ. ನೀವು ಯಾರಿಗಾದರೂ: ‘ಅದನ್ನು ಮಾಡಬೇಡ. ಅದು ಬಹಳ ಕೆಟ್ಟದು’ ಎಂದು ಭಾಷಣ ಮಾಡಿ ಹೇಳಲು ಸಾಧ್ಯವಿಲ್ಲ. ಅದು ಹೇಗೆಂದರೆ, ನೀವು ಚಿಕ್ಕ ಮಗುವಾಗಿದ್ದಾಗ ನಿಮ್ಮ ಅಮ್ಮ ನಿಮಗೆ ಈ ರೀತಿಯದನ್ನು ಹೇಳುತ್ತಾರೆ ಅಂದುಕೊಳ್ಳಿ, ಮತ್ತು ಆಕೆ ಹಿಂತಿರುಗಿದ ಕೂಡಲೇ, ನೀವು ಅದನ್ನು ಮಾಡಲು ಇಚ್ಚಿಸುವಿರಿ. ಅದು ಕೆಲಸ ಮಾಡುವುದಿಲ್ಲ. ಅದು ಹೇಗಿರಬೇಕೆಂದರೆ: ‘ಧ್ಯಾನ ಮಾಡು ಮತ್ತು ನಂತರ ಹೋಲಿಸು.’
ಆತ್ಮ ಸಾಕ್ಷಾತ್ಕಾರದ ಉನ್ನತ ಹಂತಗಳು
ಪ್ರಶ್ನೆ: ಒಬ್ಬ ವ್ಯಕ್ತಿಯು ಎಲ್ಲಿಂದ ಪ್ರಾರಂಭಿಸಬೇಕು?
ಸ್ವಾಮಿ ಚಿದಾನಂದಜಿ: “ನಾವು ಅವರಿಗೆ ‘ಯೋಗಿಯ ಆತ್ಮ ಕಥೆ’ ಅಥವಾ ‘ಬೆಳಕಿರುವೆಡೆ’ ಮತ್ತೆ ಏನಾದರೂ ಅಂತಹ ಪುಸ್ತಕವನ್ನು, ಅವರಿಗೆ ಆರಂಭಿಕ ಪರಿಚಯಕ್ಕೆ ಕೊಡುತ್ತೇವೆ. ನಂತರ, ನಾವು ನಮ್ಮ ಗುರು ಪರಮಹಂಸ ಯೋಗಾನಂದರು ನಮಗಾಗಿ ಬಿಟ್ಟು ಹೋಗಿರುವ, ಆತ್ಮ ಸಾಕ್ಷಾತ್ಕಾರಕ್ಕಾಗಿ ಅತ್ಯಧ್ಭುತ ಯೋಗದಾ ಸತ್ಸಂಗ ಪಾಠಮಾಲಿಕೆಯ ಪರಿಚಯವನ್ನು ಓದಲು ಪ್ರೋತ್ಸಾಹಿಸುತ್ತೇವೆ. ಅದರ ಪರಿಚಯವನ್ನು, ‘ಆತ್ಮ ಸಾಕ್ಷಾತ್ಕಾರದ ಅತ್ಯುನ್ನತ ಹಂತಗಳು’ ಎಂದು ಕರೆಯುತ್ತಾರೆ. ಅದರ ಶೀರ್ಷಿಕೆಯಲ್ಲಿಯೂ ಸಹ ಅದು ತಿಳಿಸುತ್ತದೆ, ‘ನಿನ್ನ ಜೀವನವನ್ನು ಏನಾದರೂ ಮಾಡಲು ಇಚ್ಚಿಸುತ್ತಿರುವೆಯಾ? ಹಾಗಿದ್ದಲ್ಲಿ, ಇದರ ಬಗ್ಗೆ ದೃಷ್ಟಿ ಹರಿಸು. ಮತ್ತು ನಿನಗೆ ಏನು ಅನಿಸುತ್ತದೆ ಎಂಬುದನ್ನು ನೋಡು.’ ವೈಎಸ್ಎಸ್ ಪಾಠಮಾಲಿಕೆಯು, ದಿನನಿತ್ಯದ ದಿನಚರಿಯನ್ನು ರೂಪಿಸಿಕೊಳ್ಳಲು, ಧ್ಯಾನ ಮತ್ತು ಅದಕ್ಕೆ ಬೇಕಾದ ತಂತ್ರಗಳ ಬಗ್ಗೆ ಸೂಚನೆಗಳನ್ನು, ಕೆಲವು ತಿಂಗಳುಗಳಲ್ಲಿ ಕೊಡುತ್ತದೆ. ಮತ್ತು ನಂತರ 9-10 ತಿಂಗಳುಗಳಲ್ಲಿ, ನೀವು ನಿಮ್ಮನ್ನು ನಿಜವಾದ ಧ್ಯಾನಿಯನ್ನಾಗಿ ಮಾಡಿಕೊಳ್ಳಲು ಬೇಕಾಗಿರುವ, ಸಂಪೂರ್ಣ ನಿರ್ದಿಷ್ಟ ಉಪಕರಣಗಳ ಸೆಟ್ ಅನ್ನು ಹೊಂದಿರುತ್ತೀರಿ.”
ಪ್ರಶ್ನೆ: ಸ್ವಾಮೀಜಿ, ಯೋಗಾನಂದಜಿಯವರು ತಮ್ಮ ಬೋಧನೆಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಒಬ್ಬ ಯುವಕನು ಯಶಸ್ಸು ಗಳಿಸಲು ಯಾವುದಾದರೂ ನಿರ್ದಿಷ್ಟ ಮಾರ್ಗವನ್ನು ಸೂಚಿಸಿರುವರೇ? ಮಾನವರು ಯಶಸ್ಸು ಗಳಿಸಲು ಬೋಧನೆಗಳು ಯಾವ ರೀತಿ ಅರ್ಥೈಸುತ್ತವೆ? ಯೋಗಾನಂದಜಿಯವರ ಬೋಧನೆಗಳು ಯುವಕರಿಗೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಹಾಯ ಮಾಡಬಲ್ಲವೇ?
ಸ್ವಾಮಿ ಚಿದಾನಂದಜಿ: “ಮನುಷ್ಯರಾಗಿ ನಾವು ಯಶಸ್ಸಿಗಾಗಿ, ಯಾವ ರೀತಿ ಕಾರ್ಯ ನಿರ್ವಹಿಸುವುದು ಎಂಬುದನ್ನು ತಿಳಿದುಕೊಳ್ಳಬೇಕು. ಅದೇ ಅವರ (ಪರಮಹಂಸ ಯೋಗಾನಂದಜಿಯವರ) ಬೋಧನೆಗಳು ಹೇಳಿರುವುದು. ಅದಕ್ಕೆ ಮೂಲ ಆಧಾರವಾಗಿರುವುದೆಲ್ಲವೂ, ಸಮತೋಲನದ ಪರಿಕಲ್ಪನೆ. ಅದರ ಅರ್ಥ, ನಮ್ಮ ಸ್ವಭಾವಕ್ಕೆ ಒಂದು ಭೌತಿಕ ಪರಿಕಲ್ಪನೆ ಇರುತ್ತದೆ: ನಾವು ಒಂದು ದೇಹವನ್ನು ಹೊಂದಿದ್ದೇವೆ, ಅದು ರೋಗಪೀಡಿತವಾಗಿದ್ದಾಗ, ಅದನ್ನು ಕಾಳಜಿಯಿಂದ ನೋಡಿಕೊಳ್ಳಬೇಕು, ಅದರ ಉಪಶಮನಕಾರಿ ಮಾರ್ಗವನ್ನು ಕಂಡುಕೊಳ್ಳಬೇಕು…ಈ ಎಲ್ಲಾ ಸಮಸ್ಯೆಗಳು ಜೀವನದ ಭೌತಿಕ ದೃಷ್ಟಿಯಿಂದ ನಿರ್ವಹಿಸಬೇಕಾದವುಗಳು. ಆದರೆ, ವಿಷಯವೇನೆಂದರೆ, ಬಹಳಷ್ಟು ಮಾನವೀಯತೆಯು ಅವುಗಳನ್ನು ಅಲ್ಲಿಗೇ ನಿಲ್ಲಿಸುತ್ತದೆ, ಅಷ್ಟೇ.
“ಅದಕ್ಕಿಂತ ಹೆಚ್ಚು ಮುಖ್ಯವಾದದ್ದು ಏನೆಂದರೆ, ನಾವು ಮಾನಸಿಕ, ಭಾವುಕ ಮತ್ತು ಅದಕ್ಕಿಂತ ಹೆಚ್ಚಾದ ನಮ್ಮ ಅಸ್ತಿತ್ವದ ಆಧ್ಯಾತ್ಮಿಕ ಆಯಾಮವನ್ನು ಹೊಂದಿರುತ್ತೇವೆ. ಆದ್ದರಿಂದ ಅವರ (ಯೋಗಾನಂದಜಿಯವರ) ಯಶಸ್ಸಿನ ಮಾರ್ಗವು ಸರಿಯಾದ ಸಮತೋಲನವನ್ನು ಕಂಡುಹಿಡಿಯುವುದು. ಅದರಲ್ಲಿ ನೀವು ಭೌತಿಕ ಯಶಸ್ಸು ಮತ್ತು ಸಮೃದ್ಧಿ, ಎಲ್ಲಿ ನಿಮ್ಮ ಭಾವನಾತ್ಮಕ ಸಮತೋಲನ ಮತ್ತು ಆಂತರಿಕ ಶಾಂತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕವಾಗಿ ನೀವು ನಿಮ್ಮ ಜೀವನವನ್ನು ಉತ್ಕೃಷ್ಟ ಉದ್ದೇಶಕ್ಕಾಗಿ ನಿರ್ದೇಶಿಸಬಲ್ಲಿರಿ — ಕೇವಲ ಧನಸಂಪತ್ತಿಗಾಗಿ ಅಲ್ಲ, ಹಣ ಮಾಡುವುದಕ್ಕಾಗಿ ಅಲ್ಲ, ಕೇವಲ ಸಂಸಾರ ಮತ್ತು ಮಕ್ಕಳಿಗಾಗಿ ಅಲ್ಲ. ಆದರೆ ಉನ್ನತ ಉದ್ದೇಶವಾದ — ನಾನು ದೈವಿಕ ಅಸ್ತಿತ್ವದ ಒಂದು ವಿದ್ಯುತ್ ಕಣವಷ್ಟೇ — ಎಂಬುದರ ಸಾಕ್ಷಾತ್ಕಾರಕ್ಕಾಗಿ. ನಾನು ಈ ಭೌತಿಕ ಶರೀರದಲ್ಲಿರುವ ಆತ್ಮನು, ಮತ್ತು ನನ್ನ ಅಂತಿಮ ಉದ್ದೇಶ — ಸಂಪೂರ್ಣ ಸಾಕ್ಷಾತ್ಕಾರ ಮತ್ತು ನನ್ನ ಜೀವನದ ಎಲ್ಲಾ ಅಂಶಗಳಲ್ಲಿಯೂ ಅಭಿವ್ಯಕ್ತವಾಗಿರುವುದು.”
ಸ್ವಾಮೀಜಿಯವರು ಮುಂದುವರಿಸಿದರು: “ಈಗ, ಒಮ್ಮೆ ನೀವು ಆ ಪರಿಕಲ್ಪನೆಯನ್ನು ಹೊಂದಿದಲ್ಲಿ, ಜೀವನವು ಅಷ್ಟೊಂದು ಅತ್ಯಾಕರ್ಷಕವಾಗಿ ಬಿಡುತ್ತದೆ. ಏಕೆಂದರೆ ನಿಮಗೆ ಪ್ರತಿಯೊಬ್ಬ ಮಾನವನ ಪ್ರತಿಭೆಗಳಾದ, ಸಂಪೂರ್ಣ ಕೌಶಲ್ಯಗಳು, ಮನಸ್ಸಿನಶಕ್ತಿಗಳು, ಮತ್ತು ಸಾಮರ್ಥ್ಯಗಳ ಸಂಪೂರ್ಣ ಆವೃತ್ತಿಗೆ ಪ್ರವೇಶಾಧಿಕಾರವಿರುತ್ತದೆ. ಆದರೆ, ಅವುಗಳನ್ನು ಪ್ರಜ್ಞಾಪೂರ್ವಕ ಗಮನ ಮತ್ತು ಪ್ರಜ್ಞಾಪೂರ್ವಕ ಪ್ರಯತ್ನಗಳಿಂದ ಜಾಗೃತಗೊಳಿಸುವವರೆಗೆ, ಅವುಗಳೆಲ್ಲವೂ ಸಂಪೂರ್ಣವಾಗಿ ಸ್ತಬ್ಧವಾಗಿರುತ್ತವೆ. ಅದನ್ನೇ ಯೋಗಾನಂದಜಿಯವರ ಬೋಧನೆಗಳು, ನೀಡಿರುವುದು. ಅವರು ಹೇಳುತ್ತಾರೆ, ಧ್ಯಾನ ಮಾಡುವುದರಿಂದ, ಇಚ್ಛಾಶಕ್ತಿಯನ್ನು ವೃದ್ಧಿಸುವುದರಿಂದ, ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವುದರಿಂದ, ಒಬ್ಬರನ್ನು ಪರಿಪೂರ್ಣ ಮಾನವನನ್ನಾಗಿ ಮಾಡುವ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ, ನೀವು ಅತ್ಯುನ್ನತ ಭೌತಿಕ ಯಶಸ್ಸು, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಹಾಗೂ ಸಮತೋಲನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕ ಆರೋಗ್ಯವನ್ನು ಕಂಡುಕೊಳ್ಳುವಿರಿ.
“ಅವರು 1920 ರಲ್ಲಿ ಅಮೆರಿಕಕ್ಕೆ ಬಂದಾಗ, ಅಮೆರಿಕಾದ ಇತಿಹಾಸದಲ್ಲಿ ಈ ಹಂತವನ್ನು ‘ಘರ್ಜಿಸುವ ಇಪ್ಪತ್ತರ ದಶಕಗಳು’ ಎಂದು ಕರೆಯುತ್ತಿದ್ದರು. ಏಕೆಂದರೆ ಅಮೆರಿಕಾವು ಸಂಪೂರ್ಣವಾಗಿ ಅತಿ ಉತ್ಸಾಹ ಶಕ್ತಿಗಳಿಂದ ತುಂಬಿದ್ದು, ತನ್ನ ಬಂಡವಾಳ ಶಾಹಿ ತತ್ವಗಳಿಂದ ಮುನ್ನುಗ್ಗುತ್ತಿತ್ತು. ಅವರು ಹಲವಾರು ವ್ಯಾಪಾರಿ ಜನರನ್ನು, ಕೈಗಾರಿಕಾ ಉದ್ಯಮಿಗಳ ಮುಖಂಡರನ್ನು ಇತ್ಯಾದಿ ಭೇಟಿಯಾದರು. ಮತ್ತು ಅವರೆಲ್ಲರೂ ಯೋಗಾನಂದಜಿಯವರು, ತಮ್ಮ ಜೀವನದಲ್ಲಿ ಕಾಣೆಯಾಗಿರುವ ಒಂದು ವಿಷಯವನ್ನು ತೆಗೆದುಕೊಂಡು ಬಂದಿರುವುದನ್ನು ಗುರುತಿಸಿದರು.
“ನಾನು ಒಂದು ಸಣ್ಣ ಹಾಸ್ಯ ಪ್ರಸಂಗವನ್ನು ಹೇಳುತ್ತೇನೆ: ಅವರು ನ್ಯೂಯಾರ್ಕ್ ನಗರದಲ್ಲಿ ಉಪನ್ಯಾಸ ಮಾಡುತ್ತಿದ್ದಾಗ, ಒಬ್ಬ ವ್ಯಕ್ತಿ ಅವರ ಹತ್ತಿರ ಸಂದರ್ಶನ ಬೇಡಿದನು. ಅವನು ಅವರ ಹೋಟೆಲ್ ಕೊಠಡಿಗೆ ಬಂದನು. ಮತ್ತು ಯೋಗಾನಂದಜಿ ಯವರು ನಿಜವಾಗಿಯೂ ಏನನ್ನಾದರೂ ಹೇಳುವ ಮೊದಲೇ, ಅವನು ಸವಾಲೊಡ್ಡುವಧೋರಣೆಯಲ್ಲಿ ಹೇಳಿದನು, ‘ನಾನು ರೋಸಿ ಹೋಗುವಷ್ಟು ಶ್ರೀಮಂತ. ನಾನು ರೋಸಿ ಹೋಗುವಷ್ಟು ಆರೋಗ್ಯವಂತ.’ ಅದು ‘ನೀನೇಕೆ ಇಲ್ಲಿರುವೆ?’ ಎಂಬ ಅರ್ಥದಲ್ಲಿತ್ತು. ಮತ್ತು ಯೋಗಾನಂದಜಿಯವರು ತಕ್ಷಣವೇ ಹೇಳಿದರು, ‘ಹೌದು, ಆದರೆ ನೀನು ರೋಸಿ ಹೋಗುವಷ್ಟು ಸಂತೋಷವಾಗಿರುವೆಯಾ?’
ನಂತರ ಆ ವ್ಯಕ್ತಿ ಹೇಳಿದನು, ‘ಅವರು ನನ್ನನ್ನು ಹಿಡಿದು ಬಿಟ್ಟರು!’ ಮತ್ತು ಅವನು ತನ್ನ ಉಳಿದ ಜೀವನಪರ್ಯಂತ ಕ್ರಿಯಾಯೋಗಿಯಾದನು. ಹೊರನೋಟಕ್ಕೆ ಒಬ್ಬ ಕೋಟ್ಯಾಧಿಪತಿ, ಕೈಗಾರಿಕೋದ್ಯಮಿ, ಆಂತರ್ಯದಲ್ಲಿ ಅವನು ಜ್ಞಾನೋದಯ ಹೊಂದಿದ ಯೋಗಿಯಾದನು.”
ಪ್ರಶ್ನೆ: ಸ್ವಾಮೀಜಿ, ನಿಮ್ಮ ಅಭಿಪ್ರಾಯದಲ್ಲಿ ಪರಮಹಂಸ ಯೋಗಾನಂದಜಿಯವರ ಬೋಧನೆಗಳು ಇಂದಿನ ಯುವ ಜನತೆಯ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು ಎಂದೆನಿಸುತ್ತದೆ?
ಸ್ವಾಮಿ ಚಿದಾನಂದಜಿ: “ಯಾವಾಗ ನೀವು ಮಾನವರು ಮೂಲಭೂತವಾಗಿ ಆತ್ಮಗಳು ಎಂಬುದನ್ನು ಅರ್ಥ ಮಾಡಿಕೊಳ್ಳುವಿರೋ ಆಗ ನೀವು, ಕೇವಲ ಒಂದು ಸಣ್ಣ ಜನ್ಮದ ಕಡೆ ನೋಡಲಾರಿರಿ. ನಾವು ಯಾರನ್ನು ‘ಯುವಜನತೆ’ ಎಂದು ಕರೆಯುತ್ತೇವೆಯೋ, ಅವರು ಹಳೆಯ ಆತ್ಮಗಳು ಮತ್ತು ಅವರು ಪ್ರತಿಯೊಬ್ಬ ವ್ಯಕ್ತಿಯು ತನ್ನ ಜನ್ಮ ಸಿದ್ಧ ಆಕಾಂಕ್ಷೆಗಳನ್ನು ತೃಪ್ತಿಪಡಿಸಲುಬೇಕಾದ ಪರಿಶ್ರಮಗಳ ಮೂಲಕ — ಸಂತಸಕ್ಕಾಗಿ, ಸುರಕ್ಷೆಗಾಗಿ, ಪ್ರೇಮಕ್ಕಾಗಿ, ಹಾಗೆಯೇ ಮತ್ತೆನೋ — ಸಾಧಿಸಲು ಪ್ರತಿಯೊಂದು ರೀತಿಯ ಪ್ರಯತ್ನವನ್ನು ಮಾಡಿರುತ್ತಾರೆ. ಅವರು ಆ ಒಂದು ಸಫಲತೆಯನ್ನು ಪಡೆಯಲು ಅನೇಕ ಜನ್ಮಗಳನ್ನೇ ಕಳೆದಿರುತ್ತಾರೆ. ಮತ್ತು ಅಂತಿಮವಾಗಿ, ಈಗ ಬಂದಿರುವರು. ಮತ್ತು ಜನ್ಮತಾಳಿದ ಅನೇಕರಲ್ಲಿ ಲಕ್ಷಾಂತರ ವ್ಯಕ್ತಿಗಳು, ಹಿಂದಿನ ಜನ್ಮಗಳಿಂದ ವಿಕಸನದ ಹಂತದಲ್ಲಿರುವವರೇ ಆಗಿರುತ್ತಾರೆ.
“ಭಗವದ್ಗೀತೆಯಲ್ಲಿ ಕೃಷ್ಣ ಅದರ ಬಗ್ಗೆ ಮಾತನಾಡುತ್ತಾನೆ — ಅವನು ಅರ್ಜುನನಿಗೆ ಹೇಳುತ್ತಾನೆ: ‘ನೀನು ಈ ಜನ್ಮದಲ್ಲಿ ಅಂತಿಮ ಧ್ಯೇಯವನ್ನು ಸಾಧಿಸದೆ ಈ ಜನ್ಮದ ಅಂತ್ಯವನ್ನು ತಲುಪಿದಲ್ಲಿ ಚಿಂತಿಸಬೇಡ. ಏಕೆಂದರೆ ಧ್ಯಾನ ಯೋಗದಲ್ಲಿ ನಿನ್ನ ಯಾವ ಪ್ರಯತ್ನವೂ ವ್ಯರ್ಥವಾಗುವುದಿಲ್ಲ.’ ಆ ಭಕ್ತನು ಮತ್ತೆ, ಅವನು/ಅವಳು ಅದನ್ನು ಪುನಃ ಎತ್ತಿ ಹಿಡಿಯುವಂತಹ ವಾತಾವರಣದಲ್ಲಿ ಜನ್ಮ ತಾಳುತ್ತಾರೆ. ಆದ್ದರಿಂದ, ನೀವು ‘ಯುವಜನರು’ ಎಂದು ಯಾರನ್ನು ಕರೆಯುವಿರೋ ಅವರು ಬುದ್ಧಿವಂತರು. ಬಹುಶಃ, ಸ್ವಲ್ಪ ಮಟ್ಟಿಗೆ ವಿಕಸಿತ ಆತ್ಮಗಳು, ‘ಅಲ್ಲಿ ಇದ್ದೆನು, ಅದನ್ನು ಮಾಡಿದೆನು’ ಎಂಬಂತಃ ಪ್ರಶ್ನೆಯಲ್ಲಿ ಹಾದು ಬಂದವರು. ಮತ್ತು ಅವರು ಹಿಂತಿರುಗಿ ಮತ್ತೆ ಹೇಳುತ್ತಾರೆ, ‘ನಾನು ಇನ್ನೇನೂ ಸಮಯವನ್ನು ವ್ಯರ್ಥಗೊಳಿಸುವುದಿಲ್ಲ. ನಾನು ಇನ್ನೇನೂ ಜನ್ಮಗಳನ್ನು ವ್ಯರ್ಥ ಗೊಳಿಸುತ್ತಿಲ್ಲ. ಮತ್ತು ನಾನು ನನ್ನ ಆತ್ಮದಲ್ಲಿರುವ ಸಾಮರ್ಥ್ಯವನ್ನು ಆ ದಿವ್ಯ ಸಂಪರ್ಕಕ್ಕೆ ಬೇಕಾದ ಹಂಬಲವನ್ನು ನಿಜವಾಗಿಯೂ ಪೂರೈಸುವ ಸಾಧನೆಯಲ್ಲಿ ತೊಡಗುತ್ತೇನೆ.’
“ಎಲ್ಲಾ ಜೀವಿಗಳು ಊರ್ಧ್ವ ಮುಖಿ ವಿಕಸನ ಹೊಂದುತ್ತಿರುವಂತೆ, ಮಾನವರೂ ಸಹ ತಮ್ಮ ಮೂಲಭೂತ ಸ್ವಭಾವದಿಂದ, ಉನ್ನತ ಸ್ತರಗಳಿಗೆ ವಿಕಸನ ಹೊಂದುತ್ತಾರೆ. ಮತ್ತು ಜನ್ಮ ಜನ್ಮಾಂತರಕ್ಕೆ, ತಮ್ಮ ಹೆಚ್ಚು ಅತಿ ಹೆಚ್ಚು, ಸಾಮರ್ಥ್ಯವನ್ನು ಹೊರಗೆ ತರುತ್ತಾರೆ. ಮಾನವೀಯತೆಯು ಸಂಪೂರ್ಣವಾಗಿ, ಶಾಸ್ತ್ರಗಳಲ್ಲಿ ಯುಗಗಳೆಂದು ಕರೆಯಲ್ಪಡುವ ವಿಕಸನ ಮತ್ತು ಹಿಂಚಲನಗಳ ವರ್ತುಲಗಳಲ್ಲಿ ಚಲಿಸುತ್ತದೆ. ಅವು ಮೇಲೆ ಕೆಳಗೆ ಚಲಿಸುತ್ತವೆ; ಈ ಸಮಯದಲ್ಲಿ ನಾವು ಮೇಲ್ಮುಖವಾಗಿ ಚಲಿಸುತ್ತಿರುವ ಯುಗದಲ್ಲಿ ಇದ್ದೇವೆ. ಬೇರೆ ಪದಗಳಲ್ಲಿ ಹೇಳಬೇಕೆಂದರೆ, ಜನ್ಮತಳೆಯಲು ಬರುತ್ತಿರುವ ಆತ್ಮಗಳು, ಅವರ ಅಜ್ಜ, ಅಜ್ಜಿಯರು, ಮುತ್ತಜ್ಜ, ಮುತ್ತಜ್ಜಿಯರಿಗಿಂತ ವಿಕಸನದ ಉನ್ನತ ಸ್ತರದಲ್ಲಿ ಬರುತ್ತಿದ್ದಾರೆ. … ಈಗಿನ ಕಾಲದ ಮಕ್ಕಳನ್ನು ನೋಡಿ; ಅಲ್ಲಿ ಸಹಜ ಸ್ವಭಾವದ… ‘ಇಲ್ಲ, ನಾನು ಕೆಲವರ ದ್ವೇಷ ಭಾವನೆಯನ್ನು ಕೇವಲ ಅವರ ಚರ್ಮದಬಣ್ಣದಿಂದಾಗಿ ರಕ್ಷಿಸಲು ಇಚ್ಚಿಸುವುದಿಲ್ಲ,’ ಮತ್ತು ಅವರ ಇತರ ರೀತಿಯ ಮಾನವ ಅಜ್ಞಾನವನ್ನು, ಹಿಂದಿನ ಪೀಳಿಗೆಯವರಲ್ಲಿ, ವಿಶ್ವದಾದ್ಯಂತ ಎಲ್ಲಾ ದೇಶಗಳಲ್ಲಿಯೂ ಅಷ್ಟೊಂದು ಬೇರೂರಿರುವ, ಅವರ ಸಹಜ ತಿರಸ್ಕಾರ ಭಾವವನ್ನು ರಕ್ಷಿಸುವುದಿಲ್ಲ.
“ಇದು ಬಹುತೇಕ ಅವರು ಒಂದಿಷ್ಟು ಪೂರ್ವ ತಯಾರಿಯಿಂದ ಬಂದಿರುವರು, ಮತ್ತು [ಪರಮಹಂಸ ಯೋಗಾನಂದರು ನೀಡಿರುವ], ಧ್ಯಾನದ ಪರಿಕಲ್ಪನೆಯು ಅರಿವಿಗೆ ಬಂದೊಡನೆ, ಈ ಮಾರ್ಗವು ಸಾರ್ವತ್ರಿಕ ಆಧ್ಯಾತ್ಮಿಕತೆಯ ಮೇಲೆ ಆಧಾರಿತವಾಗಿದ್ದು, ‘ನನ್ನ ಧರ್ಮದ ವಿರುದ್ಧವಾಗಿ ನಿನ್ನ ಧರ್ಮ,’ ಎಂಬುದರ ಬಗ್ಗೆ ಏನೂ ಇಲ್ಲದೆ ಇರುವುದರಿಂದ, ಆದರೆ, ಇದೊಂದು ಸಾರ್ವತ್ರಿಕ ಮಾರ್ಗವಾಗಿದ್ದು, ಮಾನವ ಕುಟುಂಬವನ್ನು ಭೇದಿಸುವ ಬದಲು, ಒಟ್ಟುಗೂಡಿಸುತ್ತಿದೆ ಎಂಬುದರ ಪರಿಪೂರ್ಣ ಅರಿವನ್ನು ನೀಡುತ್ತದೆ. ಏಕೆಂದರೆ ಅವರು ವಿಕಸನದ ಮೆಟ್ಟಿಲಿನ ಮೇಲಿದ್ದಾರೆ. ಬಹುಶಃ ನೀವು ಇನ್ನು ನನ್ನ ವಯಸ್ಸಿನವರಾದಾಗ ನೋಡುವಿರಿ ಎಂದು ಅನಿಸುತ್ತಿದೆ. ನೀವು ಹಿಂತಿರುಗಿ ನೋಡುವಿರಿ. ಮತ್ತು ಹೇಳುವಿರಿ, ‘ಓಹ್, ಅದು ಹೇಗೆ ಜನರು ಮೊದಲು ಹೀಗಿರಬಲ್ಲವರಾಗಿದ್ದರು?’”

ದೂರದರ್ಶನ್ ಇಂಡಿಯಾದೊಡನೆ ಸಂದರ್ಶನ
ಡಿಡಿ ನ್ಯೂಸ್ ರವರು ಸ್ವಾಮೀಜಿಯವರೊಡನೆ ನಡೆಸಿದ ಸಂದರ್ಶನವನ್ನು ವೀಕ್ಷಿಸಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ಅದರಲ್ಲಿ, ಅವರು ಧ್ಯಾನ ಮತ್ತು ಸಾರ್ವತ್ರಿಕ ಆಧ್ಯಾತ್ಮಿಕತೆಗಳು, ವಿಶ್ವವು ಅದೇನೇ ಕಷ್ಟಗಳನ್ನು ಎದುರಿಸುತ್ತಿರಲಿ ಮತ್ತು ನಮ್ಮ ಸ್ವಂತ, ಸಹಜ, ಆಂತರಿಕ, ದೈವಿಕ ಗುಣಗಳನ್ನು ಅನ್ವೇಷಿಸುವಲ್ಲಿ ಅದೆಷ್ಟು ಅತ್ಯಗತ್ಯ ಎಂಬುದನ್ನು ಹಂಚಿಕೊಂಡಿದ್ದಾರೆ.


ನಾವು ನಿಮ್ಮೊಡನೆ, ಸ್ವಾಮಿ ಚಿದಾನಂದಜಿಯವರು ವೈಎಸ್ಎಸ್ ಆಶ್ರಮಗಳನ್ನು, ರಾಂಚಿ, ನೊಯ್ಡಾ, ಮತ್ತು ದಕ್ಷಿಣೇಶ್ವರಗಳಿಗೆ ಭೇಟಿ ನೀಡಿದಾಗ, ಮಾಡಿದ ಮಾಧ್ಯಮ ಪ್ರಸಾರದ ಕೆಲವು ಭಾಗಗಳನ್ನು, ನಿಮ್ಮೊಡನೆ ಹಂಚಿಕೊಳ್ಳಲು ಇಚ್ಚಿಸುತ್ತೇವೆ. ಜೊತೆಗೆ ಸ್ವಾಮೀಜಿಯವರು ಹೈದರಾಬಾದ್ ನಲ್ಲಿ, ವೈಎಸ್ಎಸ್ ಸಂಗಮ 2023 ಕ್ಕಾಗಿ ನೀಡಿದ ಭೇಟಿಯು ಮಾಧ್ಯಮದಲ್ಲಿ ಅತ್ಯಂತ ವಿಸ್ತಾರವಾಗಿ ಪ್ರಸಾರಗೊಂಡಿತು.
ರಾಂಚಿ
ಹೈದರಾಬಾದ್
ಸ್ವಾಮೀಜಿಯವರ ಭಾರತದ ವಿವಿಧ ಭಾಗಗಳಿಗೆ ನೀಡಿದ ಭೇಟಿಯ ಫೋಟೋಗಳನ್ನು ವೀಕ್ಷಿಸಲು ದಯಮಾಡಿ ಕೆಳಗಿರುವ ಬಟನ್ ಕ್ಲಿಕ್ ಮಾಡಿ.
