ಈ ಲೋಕದಲ್ಲಿ ಭಗವಂತನು ನಿಮಗೆ ನೀಡಿರುವ ಶಾಂತಿ ಮತ್ತು ಆನಂದದ ದಿವ್ಯ ಸ್ವರೂಪವನ್ನು ಕಳೆದುಕೊಳ್ಳದೆ ಬದುಕುವ ಕಲೆಯನ್ನು ರೂಢಿಸಿಕೊಳ್ಳುವುದು — ಅದೇ ನೀವು ಪರಿಹರಿಸಿಕೊಳ್ಳಬೇಕಾದ ಜೀವನದ ರಹಸ್ಯ. ಯೋಗವು ಸಹ ಅದನ್ನೇ ಬೋಧಿಸುತ್ತದೆ.
— ಪರಮಹಂಸ ಯೋಗಾನಂದ
ನಿತ್ಯ ಜೀವನದಲ್ಲಿ ದೇವರನ್ನು ಅರಿತುಕೊಳ್ಳುವ ಕುರಿತು ಪರಮಹಂಸ ಯೋಗಾನಂದರ ಕಾಲಾತೀತ ಜ್ಞಾನವನ್ನು ಒಳಗೊಂಡಿರುವ ಸಂಗ್ರಹಿತ ಭಾಷಣಗಳು ಮತ್ತು ಪ್ರಬಂಧಗಳು ಸರಣಿಯ ನಾಲ್ಕನೇ ಸಂಪುಟವಾದ ಸಾಲ್ವಿಂಗ್ ದ ಮಿಸ್ಟರಿ ಆಫ್ ಲೈಫ್ ಕೃತಿಯ ವೈಎಸ್ಎಸ್ ಆವೃತ್ತಿಯು ಈ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಇಂದೇ ನಿಮ್ಮ ಪ್ರತಿಯನ್ನು ಮುಂಗಡವಾಗಿ ಕಾಯ್ದಿರಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಹಿಂದಿನ ಕೃತಿಗಳಾದ (ಅತೀತದೆಡೆಗೆ ಮನುಜನ ಆನ್ವೇಷಣೆ, ದೈವೀ ಪ್ರೇಮ, ಮತ್ತು ಆತ್ಮಸಾಕ್ಷಾತ್ಕಾರದತ್ತ ಪಯಣ) ಗಳಂತೆಯೇ, ಈ ಹೊಸ ಸಂಕಲನದಲ್ಲಿಯೂ ಪರಮಹಂಸ ಯೋಗಾನಂದರು ಯೋಗದ ಸಾರ್ವತ್ರಿಕ ಮಾರ್ಗ ಮತ್ತು ಶ್ರೇಷ್ಠ ತಿಳುವಳಿಕೆಯೊಂದಿಗೆ ವಿಜಯಶಾಲಿಯಾಗಿ ಬದುಕುವುದು ಹೇಗೆ ಎಂಬ ವಿಷಯಗಳ ಕುರಿತು ತಮ್ಮ ಉಪನ್ಯಾಸಗಳು ಮತ್ತು ತರಗತಿಗಳಲ್ಲಿ ತಾತ್ಕಾಲಿಕವಾಗಿ ಹಂಚಿಕೊಂಡ ವೈಯಕ್ತಿಕ ಸಲಹೆಗಳು ಹಾಗೂ ಪ್ರಬುದ್ಧ ದೃಷ್ಟಿಕೋನಗಳನ್ನು ಒಳಗೊಂಡಿದೆ.
ಮೂರು ದಶಕಗಳ ಅವಧಿಯಲ್ಲಿ ನೀಡಲಾದ ಸುಮಾರು ನಲವತ್ತು ಉಪನ್ಯಾಸಗಳನ್ನು ಒಳಗೊಂಡಿರುವ ಸಾಲ್ವಿಂಗ್ ದ ಮಿಸ್ಟರಿ ಆಫ್ ಲೈಫ್ ಕೃತಿಯು ಉತ್ತರ ಸಿಗದಂತೆ ಕಾಣುವ ಅನೇಕ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡುತ್ತದೆ: ನಾವು ಏಕೆ ಇಲ್ಲಿ ಇದ್ದೇವೆ? ನಮ್ಮ ವಿಧಿ ಏನು, ಅದನ್ನು ಹೇಗೆ ನಿಯಂತ್ರಿಸಬಹುದು? ದೇವರು ಎಂದರೇನು? ದೇವರು ಒಳ್ಳೆಯವನಾಗಿದ್ದರೆ ಈ ಜಗತ್ತಿನಲ್ಲಿ ಕೆಡುಕು ಏಕೆ ಇದೆ? ನಾವು ಯಾವ ಸವಾಲನ್ನೇ ಎದುರಿಸಿದರೂ ಹೆಚ್ಚು ಸಂತೋಷ ಮತ್ತು ಭದ್ರತೆಯನ್ನು ಹೇಗೆ ಅನುಭವಿಸಬಹುದು?
ಜೀವನದ ರಹಸ್ಯವನ್ನು ಸ್ವತಃ ಬೇಧಿಸಿರುವ ಪರಮಹಂಸ ಯೋಗಾನಂದರು, ಬ್ರಹ್ಮಾಂಡದಲ್ಲಿ ಕಾರ್ಯನಿರ್ವಹಿಸುವ ದಿವ್ಯ ನಿಯಮಗಳನ್ನು ವಿವರಿಸಿ, ನಾವು ಮೂಲತಃ ಅಪರಿಮಿತ ಸಾಮರ್ಥ್ಯ ಹೊಂದಿರುವ ಅಮರ ಜೀವಿಗಳೆಂದು ನೆನಪಿಸುತ್ತಾರೆ.
ನೀವು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿರಲಿ ಅಥವಾ ದೀರ್ಘಕಾಲದ ಅನುಯಾಯಿಯಾಗಿರಲಿ, ಈ ಪುಸ್ತಕವು ನಿಮ್ಮ ಆಧ್ಯಾತ್ಮಿಕ ಪ್ರಯಾಣವನ್ನು ಬೆಳಗಿಸುವ ಜ್ಞಾನದ ಖಜಾನೆಯಾಗಿದೆ.
ಸಾಲ್ವಿಂಗ್ ದಿ ಮಿಸ್ಟರಿ ಆಫ್ ಲೈಫ್ ಪುಸ್ತಕವು ದಪ್ಪ ಮುಚ್ಚಿಗೆ, ಪೇಪರ್ ಮತ್ತು ಇ-ಪುಸ್ತಕ ಆವೃತ್ತಿಗಳಲ್ಲಿ ಲಭ್ಯವಿದೆ.



















