ಭಾರತದ ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ವೈಎಸ್‌ಎಸ್‌ ದ್ವಾರಾಹಟ್‌ ಆಶ್ರಮ ಮತ್ತು ಬಾಬಾಜಿಯವರ ಗುಹೆಗೆ ಭೇಟಿ ನೀಡಿದರು

1 ನವೆಂಬರ್‌, 2025

ಭಾರತದ ಮಾಜಿ ರಾಷ್ಟ್ರಪತಿಗಳು, ಮಾನ್ಯ ಶ್ರೀ ರಾಮನಾಥ್ ಕೋವಿಂದ್ ಅವರು ಅಕ್ಟೋಬರ್ 28, 2025 ರಂದು ದ್ವಾರಾಹಟ್‌ನ ಯೋಗದಾ ಸತ್ಸಂಗ ಶಾಖಾ ಆಶ್ರಮಕ್ಕೆ ಭೇಟಿ ನೀಡಿದರು.

ಸ್ವಾಮಿ ವಾಸುದೇವಾನಂದರು, ಸ್ವಾಮಿ ವಿಶ್ವಾನಂದರು ಹಾಗೂ ಇತರ ಐವರು ವೈಎಸ್‌ಎಸ್‌ ಸನ್ಯಾಸಿಗಳೊಂದಿಗೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅವರು ಆಗಮಿಸಿದಾಗ, ಅವರಿಗೆ ಪುಷ್ಪಗುಚ್ಛವನ್ನು ಅರ್ಪಿಸಲಾಯಿತು. ನಂತರ ಅವರನ್ನು, ಅವರ ಪರಿವಾರ ಮತ್ತು ಭದ್ರತಾ ಸಿಬ್ಬಂದಿಯನ್ನು ಧ್ಯಾನ ಮಂದಿರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸ್ವಲ್ಪ ಸಮಯ ಧ್ಯಾನ ಮಾಡಿದರು, ನಂತರ ಅವರು ಕೃಷ್ಣ ಮಂದಿರಕ್ಕೆ ತೆರಳಿ ಪ್ರಣಾಮ ಸಲ್ಲಿಸಿದರು.

ಭಾರತದ ಮಾಜಿ ರಾಷ್ಟ್ರಪತಿ ಮಾನ್ಯ ಶ್ರೀ ರಾಮನಾಥ್ ಕೋವಿಂದ್ ಅವರನ್ನು ಸ್ವಾಮಿ ವಾಸುದೇವಾನಂದರು ದ್ವಾರಾಹಟ್‌ನ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿ ಸ್ವಾಗತಿಸಿದರು
ಸ್ವಾಮಿ ವಾಸುದೇವಾನಂದರು, ಸ್ವಾಮಿ ವಿಶ್ವಾನಂದರು ಮತ್ತು ಇತರ ವೈಎಸ್‌ಎಸ್‌ ಸನ್ಯಾಸಿಗಳು ಅವರನ್ನು ಧ್ಯಾನ ಮಂದಿರಕ್ಕೆ ಕರೆದೊಯ್ದರು…
…ಅಲ್ಲಿ ಅವರು ಪೀಠಕ್ಕೆ ಪ್ರಣಾಮ ಸಲ್ಲಿಸಿ ಸ್ವಲ್ಪ ಸಮಯ ಧ್ಯಾನ ಮಾಡಿದರು.
ಧ್ಯಾನ ಮಂದಿರದ ಹೊರಭಾಗದಲ್ಲಿ ಶ್ರೀ ಕೋವಿಂದ್ ಹಾಗೂ ಸನ್ಯಾಸಿಗಳೊಂದಿಗೆ ಸಾಮೂಹಿಕ ಭಾವಚಿತ್ರವನ್ನು ತೆಗೆದುಕೊಳ್ಳಲಾಯಿತು.

ಆಶ್ರಮದ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ, ಸ್ವಾಮಿ ವಾಸುದೇವಾನಂದರು ಶ್ರೀ ಕೋವಿಂದ್‌ರಿಗೆ ಶಾಲು ಹೊದಿಸಿ, ಹೊಸದಾಗಿ ಬಿಡುಗಡೆಯಾದ ಹಿಂದಿ ಪುಸ್ತಕ ದಿ ಯೋಗ ಆಫ್ ದಿ ಭಗವದ್ಗೀತ ದ ಒಂದು ಪ್ರತಿ ಹಾಗೂ 2026ರ ವೈಎಸ್‌ಎಸ್‌ ಗೋಡೆ ಕ್ಯಾಲೆಂಡರ್‌ ಅನ್ನು ಅರ್ಪಿಸಿದರು. ಅವರೊಂದಿಗೆ ಬಂದಿದ್ದ ಕೆಲವು ಇತರ ಗಣ್ಯರಿಗೂ ಶಾಲು ಹೊದಿಸಿ, ಮೇಲ್ಕಂಡ ಹೊಸದಾಗಿ ಬಿಡುಗಡೆಯಾದ ಪುಸ್ತಕದ ಒಂದು ಪ್ರತಿ ಮತ್ತು ಕ್ಯಾಲೆಂಡರ್‌ ನೀಡಲಾಯಿತು.

ಶ್ರೀ ಕೋವಿಂದ್‌ರವರು ಅತಿಥಿ ಪುಸ್ತಕದಲ್ಲಿ ಗೌರವ ಸಂದೇಶವನ್ನು ಬರೆದರು.
ಸ್ವಾಮಿ ವಾಸುದೇವಾನಂದರು ಶ್ರೀ ಕೋವಿಂದ್‌ರವರಿಗೆ ಶಾಲು ಹೊದಿಸಿ, ಹೊಸದಾಗಿ ಬಿಡುಗಡೆಯಾದ ಹಿಂದಿ ಪುಸ್ತಕ “ದಿ ಯೋಗ ಆಫ್ ದಿ ಭಗವದ್ಗೀತ” ದ ಒಂದು ಪ್ರತಿ ಮತ್ತು 2026 ವೈಸ್‌ಎಸ್‌ ಗೋಡೆ ಕ್ಯಾಲೆಂಡರ್ ಅನ್ನು ಅರ್ಪಿಸಿದರು.

ಪರಿಚರದ ಪ್ರತಿಯೊಬ್ಬ ಸದಸ್ಯರೂ ಪ್ರಸಾದ ಮತ್ತು 2026ರ ವೈಎಸ್‌ಎಸ್‌ ಕ್ಯಾಲೆಂಡರ್‌ನ ಒಂದು ಪ್ರತಿಯನ್ನು ಸ್ವೀಕರಿಸಿದರು.

ಶ್ರೀ ಕೋವಿಂದ್‌ರು ಸ್ವಾಮಿಗಳಾದ ವಿಶ್ವಾನಂದ ಮತ್ತು ವಾಸುದೇವಾನಂದರೊಂದಿಗೆ ಕೆಲವು ನಿಮಿಷಗಳ ಕಾಲ ಸಂಭಾಷಣೆ ನಡೆಸಿ, ಆಶ್ರಮದ ವಿವಿಧ ಚಟುವಟಿಕೆಗಳ ಬಗ್ಗೆ ತಿಳಿದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಜೊತೆಗೆ, ಮುಂದಿನ ವರ್ಷ ಯೋಗದಾ ಆಶ್ರಮಕ್ಕೆ ಮತ್ತೆ ಭೇಟಿ ನೀಡುವ ತೀವ್ರ ಆಸೆಯನ್ನು ಹೊರಹಾಕಿದರು.

ಅವರು ಆಶ್ರಮದಲ್ಲಿ ಸುಮಾರು ಅರ್ಧ ಗಂಟೆ ಕಳೆದರು.

2025ರ ಅಕ್ಟೋಬರ್‌ 29ರಂದು ಮಹಾವತಾರ್‌ ಬಾಬಾಜಿ ಅವರ ಗುಹೆಗೆ ಭೇಟಿ

ಮಾರನೆಯ ದಿನ ಶ್ರೀ ರಾಮನಾಥ್ ಕೋವಿಂದ್‌ ಅವರು ದ್ವಾರಾಹಟ್‌ ಸಮೀಪದ ಪಾಂಡುಖೋಲಿ ಪರ್ವತದ ಮೇಲಿರುವ ಮಹಾವತಾರ್‌ ಬಾಬಾಜಿ ಅವರ ಗುಹೆಗೆ ಆಗಮಿಸಿದರು.

ಮಾರನೆಯ ದಿನ ಮಹಾವತಾರ್ ಬಾಬಾಜಿ ಅವರ ಗುಹೆಗೆ ಆಗಮಿಸಿದ ಶ್ರೀ ಕೋವಿಂದ್ ಅವರು, ಸ್ಮೃತಿ ಭವನದಲ್ಲಿರುವ ಮಹಾವತಾರ್ ಬಾಬಾಜಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.
ಮಹಾವತಾರ್ ಬಾಬಾಜಿ ಅವರ ಗುಹೆಗೆ ವೈಎಸ್‌ಎಸ್‌ ಸನ್ಯಾಸಿಗಳು ಅವರಿಗೆ ಜೊತೆಯಾದರು.

ವೈಎಸ್‌ಎಸ್‌ ಸನ್ಯಾಸಿಗಳು ಅವರನ್ನು ಹೂಗುಚ್ಛದೊಂದಿಗೆ ಸ್ವಾಗತಿಸಿದಾಗ, ಅವರು ಅದನ್ನು ಸ್ವೀಕರಿಸದೆ, ಬಾಬಾಜಿಯವರ ಕುರಿತು ತಮ್ಮ ಆಳವಾದ ಗೌರವವನ್ನು ವ್ಯಕ್ತಪಡಿಸುತ್ತಾ, “ಸ್ವೀಕರಿಸುವುದು ನನ್ನ ಪಾತ್ರವಲ್ಲ; ಬದಲಾಗಿ ನಾನೇ ಅವರ ಪಾದಪದ್ಮಗಳಿಗೆ ಹೂಗಳನ್ನು ಅರ್ಪಿಸಬೇಕು” ಎಂದು ಹೇಳಿದರು. ನಂತರ ಅವರನ್ನು ಸ್ಮೃತಿ ಭವನಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮಹಾವತಾರ್‌ ಬಾಬಾಜಿಯವರ ಭಾವಚಿತ್ರದ ಮುಂದೆ ಗೌರವ ಸಲ್ಲಿಸುತ್ತಾ ಸ್ವಲ್ಪ ಸಮಯ ಕಳೆದರು.

ನಂತರ ಅವರು ಬಾಬಾಜಿಯವರ ಗುಹೆಗೆ ಭೇಟಿ ನೀಡಿದರು, ಅಲ್ಲಿ ಸ್ವಾಮಿ ವಿಶ್ವಾನಂದರು ಪ್ರವೇಶದ್ವಾರದಲ್ಲಿ ಅವರನ್ನು ಸ್ವಾಗತಿಸಿ, ಗುಹೆಯೊಳಗೆ ಕರೆದೊಯ್ದರು. ಅವರು ಸುಮಾರು 15 ರಿಂದ 20 ನಿಮಿಷಗಳ ಕಾಲ ಧ್ಯಾನ ಮಾಡಿದ ನಂತರ, ಸ್ವಾಮಿ ವಿಶ್ವಾನಂದರು ಅವರಿಗೆ ರುದ್ರಾಕ್ಷಿ ಮಾಲೆಯನ್ನು ಉಡುಗೊರೆಯಾಗಿ ನೀಡಿದರು.

ಅವರು ಲಘು ಉಪಹಾರಕ್ಕಾಗಿ ಗುಹೆಯ ಪ್ರದೇಶದ ಕೆಳಭಾಗದಲ್ಲಿರುವ ಸ್ಮೃತಿ ಭವನಕ್ಕೆ ತೆರಳಿದರು. ಸ್ವಾಮಿ ವಿಶ್ವಾನಂದರು ಮತ್ತು ಚೈತನ್ಯಾನಂದರು ಬಾಬಾಜಿ ಗುಹೆಯ ಇತಿಹಾಸವನ್ನು ವಿವರಿಸಿ, ವರ್ಷಪೂರ್ತಿ ಗುಹೆಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದರಿಂದ, ಅವರಿಗೆ ಉತ್ತಮ ಸೇವೆ ಸಲ್ಲಿಸಲು ಮತ್ತು ಬೆಂಬಲ ಒದಗಿಸಲು ಗುಹೆಯ ಪ್ರದೇಶದಲ್ಲಿ ನಡೆಯುತ್ತಿರುವ ಸುಧಾರಣೆಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು. ಶ್ರೀ ಕೋವಿಂದ್‌ರು ಅದರಲ್ಲಿ ಆಳವಾದ ಆಸಕ್ತಿ ತೋರಿಸಿ, ಯೋಜನೆಗೆ ತಮ್ಮ ಬೆಂಬಲವನ್ನು ನೀಡುವುದಾಗಿ ಹೇಳಿದರು. ನಂತರ, ಬೆಟ್ಟದಿಂದ ಕೆಳಗೆ ಇಳಿದು ತಮ್ಮ ವಾಹನದತ್ತ ಮರಳುವಾಗ, ವೈಎಸ್‌ಎಸ್‌ನ ನಿರ್ಮಾಣ ಸ್ಥಳದಲ್ಲಿರುವ ಸಂದರ್ಶಕರ ಕೇಂದ್ರ ಮತ್ತು ಬಹುಪಯೋಗಿ ಕಟ್ಟಡದ ಕಾಮಗಾರಿ ಅವರಿಗೆ ತೋರಿಸಲಾಯಿತು.

ಬಾಬಾಜಿ ಗುಹೆಯಲ್ಲಿ ಧ್ಯಾನ
ಗುಹೆಯ ಹೊರಭಾಗದಲ್ಲಿ ಶ್ರೀ ಕೋವಿಂದ್‌ರು ಸ್ವಾಮಿ ವಿಶ್ವಾನಂದರು, ಸ್ಥಳೀಯರು ಮತ್ತು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಭಾವಚಿತ್ರಕ್ಕಾಗಿ ನಿಂತರು.

ಮಾನ್ಯ ಮಾಜಿ ರಾಷ್ಟ್ರಪತಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾ, ಭವಿಷ್ಯದಲ್ಲಿ ಆಶ್ರಮಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು. ನಂತರ ಅವರು ಯೋಗದಾ ಸತ್ಸಂಗ ಸೊಸೈಟಿ ದ್ವಾರಾಹಟ್‌ ಆಶ್ರಮ ಮತ್ತು ಬಾಬಾಜಿಯವರ ಗುಹೆಯಲ್ಲಿ ಪಡೆದ ಉನ್ನತಪ್ರೇರಕ ಹಾಗೂ ಮಾಹಿತಿ ಸಮೃದ್ಧ ಅನುಭವಕ್ಕಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಮರುದಿನ, 2025ರ ಅಕ್ಟೋಬರ್‌ 30ರಂದು, ಮಾಜಿ ರಾಷ್ಟ್ರಪತಿಗಳ ಆಪ್ತ ಸಹಾಯಕರು ದೂರವಾಣಿ ಮೂಲಕ ಶ್ರೀ ಕೋವಿಂದ್‌ ಅವರನ್ನು ಸ್ವಾಮಿ ಧೈರ್ಯಾನಂದರೊಂದಿಗೆ ಸಂಪರ್ಕಿಸಿದರು. ಈ ಸಂದರ್ಭದಲ್ಲಿ, ಶ್ರೀ ಕೋವಿಂದ್‌ ಅವರನ್ನು ವೈಎಸ್‌ಎಸ್‌ ಆಶ್ರಮದಲ್ಲಿ ಪಡೆದ ಆತಿಥ್ಯಕ್ಕಾಗಿ ತಮ್ಮ ಹೃತ್ಪೂರ್ವಕ ಸಂತೋಷ ಮತ್ತು ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಇದನ್ನು ಹಂಚಿಕೊಳ್ಳಿ