ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡಗಳಲ್ಲಿ ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದ್ದು, ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಮಾನವೀಯ ಆದರ್ಶಗಳ ಮಾರ್ಗದರ್ಶನದಂತೆ ನಿರ್ವಹಿಸುತ್ತಿದೆ. ಈ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಲು ಶ್ರಮಿಸುತ್ತಿವೆ, ಶೈಕ್ಷಣಿಕ ಸಾಧನೆಯ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಶಿಕ್ಷಣವನ್ನು ನೀಡುತ್ತವೆ.
ರಾಂಚಿಯ ಯೋಗದಾ ಸತ್ಸಂಗ ಮಹಾವಿದ್ಯಾಲಯದ ನಮ್ಮ ಇಂಟರ್‌ಮೀಡಿಯೇಟ್ ವಿಭಾಗದ (10+2) ವಿದ್ಯಾರ್ಥಿಗಳು ಇತ್ತೀಚಿನ ಬೋರ್ಡ್ ಪರೀಕ್ಷೆಗಳಲ್ಲಿ ಮಾಡಿದ ಗಮನಾರ್ಹ ಸಾಧನೆಗಳನ್ನು ಹಂಚಿಕೊಳ್ಳಲು ನಮಗೆ ಸಂತೋಷವಾಗುತ್ತಿದೆ. ನಮ್ಮ ವಿದ್ಯಾರ್ಥಿಗಳು ಶ್ಲಾಘನೀಯ ಪ್ರದರ್ಶನವನ್ನು ನೀಡಿದ್ದು, ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ.

- ಕುಮಾರಿ ಮುಸ್ಕಾನ್ ಕುಮಾರಿ (ವಾಣಿಜ್ಯ ವಿಭಾಗ) 94.2% ಅಂಕಗಳೊಂದಿಗೆ ರಾಂಚಿಯಲ್ಲಿ ಪ್ರಥಮ ಸ್ಥಾನ ಮತ್ತು ರಾಜ್ಯದ ಅರ್ಹತಾ ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿದರು. ಸರಳ ಹಿನ್ನೆಲೆಯಿಂದ ಬಂದಿದ್ದರೂ, ಅವರು ಆರ್ಥಿಕ ಸಂಕಷ್ಟಗಳ ನಡುವೆಯೂ ಸರಳ, ಶಿಸ್ತು ಮತ್ತು ದೃಢ ಸಂಕಲ್ಪದಿಂದ ಮುಂದುವರಿದರು. ಸ್ಥಳೀಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾದ ಅವರ ಯಶಸ್ಸು, ಕೇಂದ್ರೀಕೃತ ಪ್ರಯತ್ನದ ಶಕ್ತಿಗೆ ಸಾಕ್ಷಿಯಾಗಿದೆ. ರಾಂಚಿಯ ಉಪ ಆಯುಕ್ತರಾದ ಶ್ರೀ ಮಂಜುನಾಥ ಭಜಂತ್ರಿ ಅವರು ಶೀಘ್ರದಲ್ಲೇ ಅವರಿಗೆ ಸನ್ಮಾನ ಮಾಡಲಿದ್ದಾರೆ.
- ಕುಮಾರಿ ಕಾವ್ಯ ಕೌಶಿಕಿ (ವಾಣಿಜ್ಯ ವಿಭಾಗ) 93.2% ಅಂಕಗಳೊಂದಿಗೆ ರಾಂಚಿಯಲ್ಲಿ ಮೂರನೇ ಸ್ಥಾನ ಮತ್ತು ರಾಜ್ಯದಲ್ಲಿ ಏಳನೇ ಸ್ಥಾನ ಗಳಿಸುವ ಮೂಲಕ ನಿರಂತರ ಕಠಿಣ ಪರಿಶ್ರಮದ ಫಲಕ್ಕೆ ನಿದರ್ಶನವಾಗಿದ್ದಾರೆ.


ಸ್ವಾಮಿ ನಿಶ್ಚಲಾನಂದರು ಉನ್ನತ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಈ ಸಾಧನೆಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವಲ್ಲಿ ತೋರಿದ ನಮ್ಮ ಅಧ್ಯಾಪಕರ ಸಮರ್ಪಣಾ ಮನೋಭಾವ, ನಮ್ಮ ಸಂಸ್ಥೆಗಳಲ್ಲಿನ ಪೂರಕ ಕಲಿಕಾ ವಾತಾವರಣ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗುರುದೇವರ ಪ್ರೀತಿ ಮತ್ತು ಆಶೀರ್ವಾದಗಳ ಫಲಿತಾಂಶವಾಗಿದೆ. ಅರ್ಹತಾ ಪಟ್ಟಿಗೆ ಸೇರಿದ ನಮ್ಮ ಎಲ್ಲ ವಿದ್ಯಾರ್ಥಿಗಳಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ, ಮತ್ತು ಚಾರಿತ್ರ್ಯ, ಸೇವೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಮೇಲೆ ಆಧಾರಿತವಾದ ಶಿಕ್ಷಣದ ಧ್ಯೇಯವನ್ನು ಮುನ್ನಡೆಸುವಲ್ಲಿ ದಣಿವರಿಯದ ಸೇವೆ ಸಲ್ಲಿಸಿದ ಸಿಬ್ಬಂದಿಗೆ ನಮ್ಮ ಪ್ರಾಮಾಣಿಕ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
ವೃತ್ತಪತ್ರಿಕೆಯ ಸುದ್ದಿ ತುಣುಕುಗಳು:
