ಯುವ ಸಾಧಕ ಶಿಬಿರ: ಆಂತರಿಕ ಯಾತ್ರೆ

April 22, 2025

ಈ ಶಿಬಿರ ಬಹಳ ಉದ್ಧರಿಸುವಂತಹ ಅನುಭವವಾಗಿತ್ತು, ಅದು ನನಗೆ ಶಾಂತಿಯನ್ನು ಅನುಭವಿಸಲು, ದೇವರು ಮತ್ತು ನನ್ನ ಗುರುವಿನ ಬಗ್ಗೆ ನನ್ನ ಭಕ್ತಿಯನ್ನು ಆಳಗೊಳಿಸಲು ಮತ್ತು ಒತ್ತಡದಿಂದ ಪರಿಹಾರವನ್ನು ಕಂಡುಕೊಳ್ಳಲು ಅನುವು ಮಾಡಿಕೊಟ್ಟಿತು.

— ಎಂ. ಆರ್., ಜಾರ್ಖಂಡ್

ರಾಂಚಿಯ ಯೋಗದಾ ಸತ್ಸಂಗ ಶಾಖಾ ಮಠದಲ್ಲಿ 2025ರ ಮಾರ್ಚ್ 5ರಿಂದ 10ರವರೆಗೆ ಮೊತ್ತ ಮೊದಲ ಬಾರಿಗೆ ಯುವ ಸಾಧಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಶಿಬಿರ ನಡೆಯಿತು. 18-35 ವರ್ಷ ವಯಸ್ಸಿನ ಯುವ ಆಧ್ಯಾತ್ಮಿಕ ಅನ್ವೇಷಕರಿಗೆ ವೈಎಸ್ಎಸ್ ಭಕ್ತರು ಮತ್ತು ಕ್ರಿಯಾಬನ್ ಗಳಿಗೆ ಇದು ಅದ್ಭುತ ಮತ್ತು ಪರಿವರ್ತಕ ಅನುಭವವೆಂದು ದೃಶ್ಯೀಕರಿಸಲಾಗಿದೆ. ಈ ಶಿಬಿರ ಗುರೂಜಿಯವರ ಬೋಧನೆಗಳೊಂದಿಗೆ ತಮ್ಮ ಸಂಪರ್ಕವನ್ನು ಆಳಗೊಳಿಸುವ ಗುರಿಯನ್ನು ಹೊಂದಿತ್ತು, ಧ್ಯಾನ ತಂತ್ರಗಳು, ಆಂತರಿಕ ವಿಶ್ಲೇಷಣೆ, ಭಕ್ತಿ, ಸ್ವಯಂ ಶಿಸ್ತು ಮತ್ತು ಇತರ ಯುವ ಭಕ್ತರೊಂದಿಗೆ ಮೈತ್ರಿಯ ಮೇಲೆ ಕೇಂದ್ರೀಕೃತ ಅಭ್ಯಾಸಕ್ಕೆ ಸ್ಥಳವನ್ನು ಒದಗಿಸಿತು. 

ಶಿಬಿರದಲ್ಲಿ ಭಾಗವಹಿಸಿದ ಯುವ ಸಾಧಕರು ಸ್ವಾಮಿಗಳಾದ ಶಂಕರಾನಂದ ಮತ್ತು ಶ್ರೇಯಾನಂದ ಅವರೊಂದಿಗೆ ಸ್ಮೃತಿ ಮಂದಿರದಲ್ಲಿ

ಮಾರ್ಚ್ 7 ಮತ್ತು 9 ರಂದು ಪರಮಹಂಸ ಯೋಗಾನಂದಜಿ ಮತ್ತು ಸ್ವಾಮಿ ಶ್ರೀ ಯುಕ್ತೇಶ್ವರಜಿ ಅವರ ಮಹಾಸಮಾಧಿ ದಿನಗಳು ಮತ್ತು ಈ ಶಿಬಿರ ಒಂದೇ ಸಮಯದಲ್ಲಿ ಆಯೋಜನೆಗೊಂಡಿದುದು, ಇದನ್ನು ಒಂದು ವಿಶೇಷವಾದ ಆಶೀರ್ವದಿತ ಸಂದರ್ಭವನ್ನಾಗಿಸಿದೆ. ಇದನ್ನು ಆಳವಾದ ಮತ್ತು ದೀರ್ಘವಾದ ಧ್ಯಾನ, ಆಧ್ಯಾತ್ಮಿಕ ಪ್ರವಚನಗಳು, ಭಕ್ತಿ ಚಟುವಟಿಕೆಗಳು, ಸೇವೆಗಳನ್ನು ಮತ್ತು ಹುಂಡ್ರು ಜಲಪಾತಗಳಿಗೆ ಉನ್ನತೀಕರಿಸುವಂತ ಹೊರಾಂಗಣ ವಿಹಾರಗಳನ್ನು ಸಮತೋಲನಗೊಳಿಸಲು ಚಿಂತನಶೀಲವಾಗಿ ರೂಪಿಸಲಾಗಿತ್ತು.

ಒಬ್ಬ ಶಿಬಿರದಲ್ಲಿ ಪಾಲ್ಗೊಂಡವರು ತಮ್ಮ ಅನುಭವವನ್ನು ಹೀಗೆ ವಿವರಿಸಿದರು:

ವೈಎಸ್ಎಸ್ ರಾಂಚಿ ಆಶ್ರಮದಲ್ಲಿ ಆರು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಧ್ಯಾನ, ಸ್ವಯಂ ಶಿಸ್ತು ಮತ್ತು ಗುರು ಸೇವೆಯ ಮೂಲಕ ಆಧ್ಯಾತ್ಮಿಕ ಬೆಳವಣಿಗೆಯನ್ನು ಪೋಷಿಸಿತು, ದೇವರು ಮತ್ತು ಗುರುವಿನೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಿತು.

— ಎಸ್.ಎನ್., ಜಾರ್ಖಂಡ್

ಗಮನ ಕೇಂದ್ರೀಕರಿಸುವುದು ಮತ್ತು ಮಗ್ನವಾಗಿರುವುದು

ಈ ಶಿಬಿರ ಎಲ್ಲಾ ಶಿಬಿರಾರ್ತಿಗಳಿಗೆ ಇದರ ಉದ್ದೇಶವನ್ನು ತಿಳಿಸುವುದರೊಂದಿಗೆ ಪ್ರಾರಂಭವಾಯಿತು, ಅದು ಅವರಿಗೆ ಸರಿಯಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು, ತಮ್ಮ ಗುರಿಗಳನ್ನು ಸ್ಪಷ್ಟಪಡಿಸಿಕೊಳ್ಳಲು ಮತ್ತು ಶಿಬಿರದಿಂದ ಹೆಚ್ಚಿನದನ್ನು ಪಡೆಯಲು ಸಹಾಯ ಮಾಡಿತು.

ಇದರ ನಂತರ ಸ್ವಾಮೀಜಿಗಳಾದ ಶಂಕರಾನಂದ ಮತ್ತು ಶ್ರೇಯಾನಂದ ಅವರು ವೈಎಸ್ಎಸ್ ರಾಂಚಿ ಆಶ್ರಮದ ಮೈದಾನಕ್ಕೆ ತೀರ್ಥಯಾತ್ರೆ ಪ್ರವಾಸ ಕೈಗೊಂಡರು, ಅವರು ಆಶ್ರಮದ ಇತಿಹಾಸವನ್ನು ಶಿಬಿರದಲ್ಲಿ ಭಾಗವಹಿಸಿದವರೊಂದಿಗೆ ಹಂಚಿಕೊಂಡರು ಮತ್ತು ಗುರೂಜಿಯವರು ಪವಿತ್ರಗೊಳಿಸಿದ ವಿವಿಧ ಸುಂದರ ಸ್ಥಳಗಳ ಮಹತ್ವವನ್ನು ತಿಳಿದುಕೊಳ್ಳಲು ಸಹಾಯ ಮಾಡಿದರು.

ಒಂದು ವ್ಯವಸ್ಥಿತ ಆದರೆ ಭಾವಪೂರ್ಣ ದಿನಚರಿ

ಪ್ರತಿದಿನ ಬೆಳಿಗ್ಗೆ ಸಮೂಹ ಧ್ಯಾನದೊಂದಿಗೆ ಆರಂಭವಾಯಿತು, ಇದು ಚಿಂತನಶೀಲ ಮತ್ತು ಶಾಂತಿಯುತ ವಾತಾವರಣವನ್ನು ಸೃಷ್ಟಿಸಿತು. ಇದರ ನಂತರ ಆಧ್ಯಾತ್ಮಿಕ ಅಧ್ಯಯನ, ಹಿರಿಯ ಸನ್ಯಾಸಿಗಳೊಂದಿಗೆ ಸಂವಾದಾತ್ಮಕ ಸತ್ಸಂಗ ಮತ್ತು ಸಮೂಹ ಚಟುವಟಿಕೆಗಳು ಗುರೂಜಿಯವರ ಬೋಧನೆಗಳ ಬಗ್ಗೆ ಭಾಗವಹಿಸಿದವರ ತಿಳುವಳಿಕೆಯನ್ನು ಬಲಪಡಿಸಿದವು. ಶಿಬಿರದಲ್ಲಿ ಭಾಗವಹಿಸಿದವರು ಸ್ಮೃತಿ ಮಂದಿರ, ಲಿಚಿವೇದಿ ಅಥವಾ ಗುರೂಜಿಯವರ ಕೋಣೆಯಲ್ಲಿ ಮಧ್ಯಾಹ್ನದ ಧ್ಯಾನಕ್ಕಾಗಿ ವಿರಾಮ ತೆಗೆದುಕೊಂಡರು. ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕ್ರಿಕೆಟ್ ಮತ್ತು ಜಪ ನಡಿಗೆಗಳಂತಹ ಲಘು ಮನರಂಜನಾ ಚಟುವಟಿಕೆಗಳು ಸಂಜೆಗಳನ್ನು ಉಲ್ಲಾಸಗೊಳಿಸುವುದರೊಂದಿಗೆ, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ಸಮಗ್ರ ಅನುಭವವನ್ನು ಖಾತ್ರಿಪಡಿಸಿದವು.

ಶಿಬಿರಾರ್ಥಿಗಳು ಸ್ಮೃತಿ ಮಂದಿರದ ಒಳಗೆ ಮತ್ತು ಲಿಚ್ಚಿ ವೇದಿಯಲ್ಲಿ ಧ್ಯಾನ ಮಾಡುತ್ತಾರೆ

ಗೊಂದಲಮಯವಾದ ಜಗತ್ತಿನಲ್ಲಿ ಏಕಾಗ್ರತೆಯನ್ನು ಕಂಡುಕೊಳ್ಳುವುದು

ಮಾತೃ ಮಂದಿರದಲ್ಲಿ ಸ್ವಾಮಿ ನಿರ್ಮಲಾನಂದರ ನೇತೃತ್ವದಲ್ಲಿ ನಡೆದ “ಗೊಂದಲಮಯವಾದ ಜಗತ್ತಿನಲ್ಲಿ ಏಕಾಗ್ರತೆಯಿಂದಿರುವುದು” ಎಂಬ ಶೀರ್ಷಿಕೆಯ ಸತ್ಸಂಗವು ಪ್ರಮುಖ ಆಕರ್ಷಣೆಯಾಗಿತ್ತು. ಆತ್ಮಾವಲೋಕನ ಅಭ್ಯಸಿಸುವುದರ ಮೂಲಕ, ಭಾಗವಹಿಸುವವರು ಸಾಮಾನ್ಯ ಗೊಂದಲಗಳನ್ನು ಗುರುತಿಸಿದರು — ಸಾಮಾಜಿಕ ಮಾಧ್ಯಮ, ಅತಿಯಾದ ಪರದೆಯ ಸಮಯ ಮತ್ತು ಪ್ರಕ್ಷುಬ್ಧ ಆಲೋಚನೆಗಳು. ಶಿಬಿರದಲ್ಲಿ ದೂರವಾಣಿ ಬಳಕೆಯನ್ನು ಪ್ರಜ್ಞಾಪೂರ್ವಕವಾಗಿ ಮಿತಿಗೊಳಿಸಲು ಅವರನ್ನು ಪ್ರೋತ್ಸಾಹಿಸಲಾಯಿತು, ಇದು ಧ್ಯಾನ ಮತ್ತು ಸ್ವಯಂ-ಜಾಗೃತಿಯಲ್ಲಿ ಆಳವಾಗಿ ಮುಳುಗಲು ಅನುವು ಮಾಡಿಕೊಟ್ಟಿತು. ಹಲವಾರು ಯುವ ಸಾಧಕರು ತಮ್ಮ ದೈನಂದಿನ ಜೀವನದಲ್ಲಿ ಗಮನ ಮತ್ತು ಶಿಸ್ತನ್ನು ಸುಧಾರಿಸಲು ಹಾಂಗ್-ಸೌ ತಂತ್ರವು ಹೇಗೆ ಸಹಾಯ ಮಾಡಿತು ಎಂಬುದನ್ನು ಹಂಚಿಕೊಂಡರು.

ಗುರು-ಸೇವೆ: ಪ್ರೀತಿ ಕ್ರಿಯೆಯಲ್ಲಿ

“ಪ್ರೀತಿ ಮಾತ್ರ ನನ್ನ ಸ್ಥಾನವನ್ನು ತುಂಬಬಲ್ಲದು” ಎಂಬ ಗುರೂಜಿಯವರ ಮಾತುಗಳಿಂದ ಸ್ಫೂರ್ತಿ ಪಡೆದು, “ಕಾರ್ಯರೂಪಕ್ಕೆ ಬಂದ ಪ್ರೀತಿ — ಗುರು-ಸೇವೆಯ ಆಶೀರ್ವಾದಗಳು” ಎಂಬ ಶೀರ್ಷಿಕೆಯ ಬದುಕುವುದು – ಹೇಗೆ ಕಾರ್ಯಾಗಾರವನ್ನು ನಡೆಸಲಾಯಿತು, ಇದು ನಿಸ್ವಾರ್ಥ ಸೇವೆಯು ದೇವರು ಮತ್ತು ಗುರುವಿನೊಂದಿಗಿನ ಸಂಪರ್ಕವನ್ನು ಹೇಗೆ ಬಲಪಡಿಸುತ್ತದೆ ಎಂಬುದರ ಕುರಿತು ಸಮೂಹ ಚರ್ಚೆಯನ್ನು ಒಳಗೊಂಡಿತ್ತು. ಚರ್ಚೆಯ ನಂತರ ಶ್ರವಣಾಲಯ ಸಭಾಂಗಣದಲ್ಲಿ ಮತ್ತು ಆಶ್ರಮದ ಉದ್ಯಾನಗಳಲ್ಲಿ ಸೇವೆ ಮಾಡುವ ಮೂಲಕ ಪ್ರೀತಿಯನ್ನು ಕಾರ್ಯರೂಪಕ್ಕೆ ತರುವ ಪ್ರಾಯೋಗಿಕ ಸೆಷನ್ ನಡೆಯಿತು.

ಗುರುಗಳಿಗೆ ಗೌರವಾರ್ಪಣೆ: ಮಹಾಸಮಾಧಿ ಸ್ಮರಣಾರ್ಥ

ಗುರೂಜಿ ಮತ್ತು ಸ್ವಾಮಿ ಶ್ರೀ ಯುಕ್ತೇಶ್ವರಜಿಯವರ ಮಹಾಸಮಾಧಿ ದಿನಗಳು (ಮಾರ್ಚ್ 7 ಮತ್ತು 9) ದೀರ್ಘ ಧ್ಯಾನ, ಭಕ್ತಿಯ ಸಂಕೀರ್ತನೆ, ಪುಷ್ಪಾಂಜಲಿ, ಕಥೆಗಳನ್ನು ಹಂಚಿಕೊಳ್ಳುವುದು, ಮತ್ತು ಸನ್ಯಾಸಿಗಳೊಂದಿಗಿನ ಪ್ರಶ್ನೋತ್ತರ ಸೆಷನ್‌ಗಳೊಂದಿಗೆ ಆಚರಿಸಲಾಯಿತು, ಇವು ಧ್ಯಾನವನ್ನು ಗಾಢಗೊಳಿಸುವುದು ಮತ್ತು ಸೇವೆಯ ಬಗ್ಗೆ ಮಾರ್ಗದರ್ಶನ ನೀಡಿದವು. ಈ ಅವಧಿಗಳು ಯುವ ಸಾಧಕರಿಗೆ ಧ್ಯಾನ ತಂತ್ರಗಳು, ವೈಯಕ್ತಿಕ ಸವಾಲುಗಳು, ಮತ್ತು ಗುರು-ಶಿಷ್ಯ ಸಂಬಂಧದ ಬಗ್ಗೆ ಮಾರ್ಗದರ್ಶನ ಪಡೆಯಲು ಅವಕಾಶವನ್ನು ಒದಗಿಸಿದವು. ಸ್ವಾಮಿ ಶ್ರೇಯಾನಂದರ ಸಂದೇಶ, “ಗುರು-ಶಿಷ್ಯ ಸಂಬಂಧವು ಈ ಲೋಕದ ಇತರ ಸಂಬಂಧಗಳಿಗಿಂತ ಉನ್ನತವಾದದ್ದು, ಏಕೆಂದರೆ ಇದು ಶುದ್ಧ, ನಿರಪೇಕ್ಷ, ಮತ್ತು ನಿಸ್ವಾರ್ಥ ಪ್ರೀತಿಯ ಮೇಲೆ ಆಧಾರಿತವಾಗಿದೆ,” ಯುವ ಸಾಧಕರಲ್ಲಿ ಗಾಢವಾಗಿ ಬೇರೂರಿತು.

ಸ್ವಾಮಿ ನಿರ್ವಾಣಾನಂದರು ಅನೌಪಚಾರಿಕ ಸತ್ಸಂಗಕ್ಕಾಗಿ ಯುವ ಸಾಧಕರನ್ನು ಭೇಟಿಯಾದರು

ಹುಂಡ್ರು ಜಲಪಾತಕ್ಕೆ ಭೇಟಿ: ಪ್ರಕೃತಿಯಲ್ಲಿ ಒಂದು ಆಧ್ಯಾತ್ಮಿಕ ಶಿಬಿರ

ಗುರೂಜಿ ಕೆಲವೊಮ್ಮೆ ತಮ್ಮ ಶಿಷ್ಯರನ್ನು ವಿಹಾರಕ್ಕೆ ಕರೆದೊಯ್ಯುತ್ತಿದ್ದರು. ಆದ್ದರಿಂದ, ಯುವ ಸಾಧಕರಿಗೆ ಹುಂಡ್ರು ಜಲಪಾತಕ್ಕೆ ಒಂದು ದಿನದ ಪ್ರವಾಸವನ್ನು ಆಯೋಜಿಸಲಾಯಿತು. ಜಲಪಾತವನ್ನು ತಲುಪಿದ ನಂತರ, ಭಾಗವಹಿಸಿದವರು ಗುಂಪು ಧ್ಯಾನ, ತಮಾಷೆಯ ಚಟುವಟಿಕೆಗಳು ಮತ್ತು ಪ್ರಶಾಂತ ಪರಿಸರದ ನಡುವೆ ಆತ್ಮಾವಲೋಕನದ ಶಾಂತ ಕ್ಷಣಗಳಲ್ಲಿ ತೊಡಗಿಸಿಕೊಂಡರು. ಆಶ್ರಮಕ್ಕೆ ಮರಳಿದ ನಂತರ, ಸಾಧಕರು ಗುರೂಜಿಯವರ ಜೀವನದ ಕುರಿತಾದ ಸಾಕ್ಷ್ಯಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ಒಟ್ಟುಗೂಡಿದರು.

ಒಂದು ಸಂತೋಷಕರ ಮುಕ್ತಾಯ

ಅಂತಿಮ ದಿನದಂದು, “ಮನೆಗೆ ತೆಗೆದುಕೊಂಡು ಹೋಗುವ ಆಲೋಚನೆಗಳು” ಎಂಬ ಶೀರ್ಷಿಕೆಯ ಅವಧಿ ನಡೆಯಿತು, ಇದು ಶಿಬಿರದಿಂದ ಕಲಿತವುಗಳನ್ನು ದೈನಂದಿನ ಜೀವನದಲ್ಲಿ ಸಂಯೋಜಿಸಲು ಪ್ರಾಯೋಗಿಕ ಮಾರ್ಗದರ್ಶನವನ್ನು ಒದಗಿಸಿತು. ಭಾಗವಹಿಸಿದವರು ನವೀಕೃತ ಸ್ಪಷ್ಟತೆ, ಭಕ್ತಿ, ಮತ್ತು ಆಂತರಿಕ ಶಕ್ತಿಯ ಭಾವನೆಯೊಂದಿಗೆ ವಿದಾಯ ಹೇಳಿದರು.

ಅನೇಕರು ಶಿಬಿರಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು, ಮತ್ತು ಭಾಗವಹಿಸಿದ ಒಬ್ಬರು ಈ ಅನುಭವವನ್ನು ಸುಂದರವಾಗಿ ಸಂಕ್ಷಿಪ್ತವಾಗಿ ಹೇಳಿದರು:

ತಾರೆಗಳಿಂದ ತುಂಬಿದ ರಾತ್ರಿಗಳು ಮತ್ತು ಸೂರ್ಯೋದಯದ ಧ್ಯಾನಗಳ ಮೂಲಕ, ನಿರಂತರವಾದ ಸಂಕೀರ್ತನೆ, ಪ್ರಾರ್ಥನೆಗಳು ಮತ್ತು ಧೃಡೀಕರಣಗಳ ಝೇಂಕಾರವು ನಮ್ಮ ಹೃದಯಗಳನ್ನು ತುಂಬಿತು. ಮೌನದಲ್ಲಿಯೂ ಸಹ, ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದ ಪ್ರೀತಿಯನ್ನು ನಾವು ಆನಂದಿಸಿದೆವು. ಈ ಶಿಬಿರ ನನಗೆ ಜೀವನವನ್ನು ಗಮನ, ಭಕ್ತಿ ಮತ್ತು ಸ್ವಯಂ-ಶಿಸ್ತಿನೊಂದಿಗೆ ನಿರ್ವಹಿಸಲು ಬೇಕಾದ ಸಾಧನಗಳನ್ನು ನೀಡಿದೆ.

— ಕೆ. ಎ., ಚಂಡೀಗಢ

ಯುವ ಸಾಧಕ ಶಿಬಿರ ನಿಜವಾಗಿಯೂ ಒಂದು ಅಮೂಲ್ಯ ಅನುಭವವಾಗಿತ್ತು — ಇದು ಒಂದು ಪವಿತ್ರ ವಿರಾಮವಾಗಿತ್ತು, ಆತ್ಮದ ಜೊತೆ ಮರುಸಂಪರ್ಕಿಸಲು ಸಿಕ್ಕ ಅವಕಾಶವಾಗಿತ್ತು, ಮತ್ತು ಶಾಂತಿಯ ಮಾರ್ಗವು ಒಳಗಿನಿಂದಲೇ ಇದೆ ಎಂಬುದನ್ನು ನೆನಪಿಸಿತ್ತು.

para-ornament

ವೈಎಸ್ಎಸ್ ಯುವ ಸೇವೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತಿ.

ಇದನ್ನು ಹಂಚಿಕೊಳ್ಳಿ