ವೈ. ಎಸ್. ಎಸ್. ಭಕ್ತರು ನಿರ್ವಹಿಸುತ್ತಿರುವ ಧ್ಯಾನ ಪ್ರಕ್ರಿಯೆಗಳು
(ಇಂಗ್ಲೀಷ್‌ ಹಾಗೂ ಭಾರತದ ಇನ್ನಿತರ ಭಾಷೆಗಳಲ್ಲಿ)

ಕಾರ್ಯಕ್ರಮದ ಬಗ್ಗೆ

ಸನ್ಯಾಸಿಗಳು ನಿರ್ವಹಿಸುತ್ತಿರುವ ಧ್ಯಾನದ ಜೊತೆಗೆ ,ವೈ. ಎಸ್. ಎಸ್. ಭಕ್ತರಿಂದ ನಿರ್ವಹಿಸುವ ಧ್ಯಾನಗಳನ್ನು, ನಮ್ಮ ವಾರದ ಕ್ಯಾಲೆಂಡರ್‌ ನಲ್ಲಿ ನಾವು ಅವಕಾಶ ನೀಡುತ್ತೇವೆ.

ವೇಳಾಪಟ್ಟಿ

ಪ್ರತಿ ಧ್ಯಾನ ಪ್ರಕ್ರಿಯೆ ಗುಂಪಿನ ಚೈತನ್ಯದಾಯಕ ವ್ಯಾಯಾಮಗಳ ಅಭ್ಯಾಸದೊಂದಿಗೆ ಪ್ರಾರಂಭಗೊಳ್ಳುತ್ತದೆ. ತದನಂತರ ಪ್ರಾರಂಭಿಕ ಪ್ರಾರ್ಥನೆ, ಆಧ್ಯಾತ್ಮಿಕ ದಿನಚರಿಯಿಂದ ಓದುವಿಕೆ, ದಿವ್ಯಗೀತೆಯ ಗಾಯನ ಹಾಗೂ ಧ್ಯಾನದ ಅವಧಿ ಇರುತ್ತದೆ. ಮುಕ್ತಾಯದ ಮೊದಲು ಪರಮಹಂಸ ಯೋಗಾನಂದರು ಬೋಧಿಸಿರುವ ಉಪಶಮನದಾಯಕ ತಂತ್ರದ ಅಭ್ಯಾಸ ಹಾಗೂ ಮುಕ್ತಾಯದ ಪ್ರಾರ್ಥನೆ ಇರುತ್ತದೆ. ಈ ಧ್ಯಾನ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಅಂಶವೆಂದರೆ, ದಿವ್ಯಗೀತೆಯ ಗಾಯನ ಇಂಗ್ಲಿಷನಲ್ಲಿ ಹಾಗೂ ಯಾವ ಭಾಷೆಯಲ್ಲಿ ಧ್ಯಾನವನ್ನು ನಿರ್ವಹಿಸಲಾಗುತ್ತಿದೆಯೋ, ಆಯಾ ಭಾಷೆಯಲ್ಲಿ ಇರುತ್ತದೆ.

ಬೆಳಗಿನ ಧ್ಯಾನಗಳು

ಇಂಗ್ಲೀಷ್: ಬೆಳಗ್ಗೆ 6:40 – 8:00 ರವರೆಗೆ

ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳು

ಹಿಂದಿ: ಬೆಳಗ್ಗೆ 6:40 – 8:00 ರವರೆಗೆ

ಭಾನುವಾರ ಹೊರತು ಪಡಿಸಿ ಬಾಕಿ ಎಲ್ಲ ದಿನಗಳು

ಸಂಜೆಯ ಧ್ಯಾನಗಳು

ಇಂಗ್ಲಿಷ್: ಸಂಜೆ 6:10 – 7:30 ರವರೆಗೆ

ಮಂಗಳವಾರ ಮತ್ತು ದೀರ್ಘಾವಧಿ ಧ್ಯಾನಗಳಿರುವ ದಿನಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ದಿನಗಳು***

ಹಿಂದಿ: ಸಂಜೆ 5:10 – 6:30 ರವರೆಗೆ

ಮಂಗಳವಾರ ಮತ್ತು ದೀರ್ಘಾವಧಿ ಧ್ಯಾನಗಳಿರುವ ದಿನಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ದಿನಗಳು***

ಬಂಗಾಳಿ: ಸಂಜೆ 6:10 – 7:30 ರವರೆಗೆ

ಪ್ರತಿ ಸೋಮವಾರ

ಕನ್ನಡ: ಸಂಜೆ 6:10 – 7:30 ರವರೆಗೆ

ಪ್ರತಿ ಬುಧವಾರ

ಮಲಯಾಳಂ: ಸಂಜೆ 6:10 – 7:30 ರವರೆಗೆ

ಪ್ರತಿ ಗುರುವಾರ

ತಮಿಳು: ಸಂಜೆ 6:10 – 7:30 ರವರೆಗೆ

ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಸೋಮವಾರ

ತೆಲುಗು: ಸಂಜೆ 6:10 – 7:30 ರವರೆಗೆ

ಪ್ರತಿ ಶುಕ್ರವಾರ

*** ದೀರ್ಘಾವಧಿ ಧ್ಯಾನದ ವೇಳಾಪಟ್ಟಿಗಾಗಿ ಕೆಳಗೆ ನೀಡಿರುವ ವಿವರಗಳನ್ನು ಗಮನಿಸಿ

ದೀರ್ಘಾವಧಿ ಧ್ಯಾನಗಳು

ಎರಡು-ಗಂಟೆಯ ಧ್ಯಾನ ಕಾರ್ಯಕ್ರಮಗಳು:

ಇಂಗ್ಲಿಷ್‌: ಸಂಜೆ 6:10 – 8:30 ರವರೆಗೆ

ಪ್ರತಿ ಬುಧವಾರ

ಹಿಂದಿ: ಸಂಜೆ 5:10 – 7:30 ರವರೆಗೆ

ಪ್ರತಿ ಸೋಮವಾರ

ಆರು-ಗಂಟೆಯ ಧ್ಯಾನ ಕಾರ್ಯಕ್ರಮಗಳು:

ಇಂಗ್ಲಿಷ್‌: ಸಂಜೆ 2:10 – 8:30 ರವರೆಗೆ

ಪ್ರತಿ ತಿಂಗಳ ಮೂರನೇ ಶನಿವಾರ

ದೀರ್ಘಾವಧಿ ಧ್ಯಾನ ಕಾರ್ಯಕ್ರಮಗಳ ಸ್ಥೂಲ ವಿವರಣೆ:

ದೀರ್ಘಾವಧಿ ಧ್ಯಾನವು ಚೈತನ್ಯಧಾಯಕ ವ್ಯಾಯಾಮಗಳ ಅಭ್ಯಾಸದಿಂದ ಪ್ರಾರಂಭವಾಗುತ್ತದೆ. ನಂತರ ಪ್ರಾರಂಭದ ಪ್ರಾರ್ಥನೆ, ಸ್ಫೂರ್ತಿದಾಯಕ ಓದು, ಭಕ್ತಿ ಗಾನ ಮತ್ತು 30-50 ನಿಮಿಷಗಳ ಮೌನ ಧ್ಯಾನದ ಅವಧಿಗಳು. ಪರಮಹಂಸ ಯೋಗಾನಂದರ ಉಪಶಮನದಾಯಕ ತಂತ್ರದ ಅಭ್ಯಾಸ ಹಾಗೂ ಮುಕ್ತಾಯದ ಪ್ರಾರ್ಥನೆಯೊಂದಿಗೆ, ಧ್ಯಾನ ಪ್ರಕ್ರಿಯೆ ಕೊನೆಗೊಳ್ಳುತ್ತದೆ.

ಗಮನದಲ್ಲಿಟ್ಟುಕೊಳ್ಳ ಬೇಕಾದ ಅಂಶವೆಂದರೆ, ಸನ್ಯಾಸಿಗಳಿಂದ ನಿರ್ವಹಿಸಲ್ಪಡುವ ವಿಶೇಷ ಧ್ಯಾನ ಕಾರ್ಯಕ್ರಮಗಳು ಇರುವಾಗ, ಈ ಆನ್ಲೈನ ಧ್ಯಾನಗಳನ್ನು ನಡೆಸಲಾಗುವುದಿಲ್ಲ.

ನೀವು ಆನ್ಲೈನ್‌ ಧ್ಯಾನ ಕೇಂದ್ರಕ್ಕೆ ಅಪರಿಚಿತರಾಗಿದ್ದಲ್ಲಿ “ಆನ್ಲೈನ ಧ್ಯಾನ ಕೇಂದ್ರದಲ್ಲಿ ಹೇಗೆ ಭಾಗವಹಿಸುವುದು” ಕ್ಕೆ, ದಯಮಾಡಿ ಸಂದರ್ಶಿಸಿ.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ