⁠ಈ ಕಾರ್ಯಕ್ರಮವು ಈಗ ಮುಕ್ತಾಯಗೊಂಡಿದೆ.
ಮುಂದೆ ಆಯೋಜಿಸುವ ಘಟನಾವಳಿಯಲ್ಲಿ ನೀವು ನಮ್ಮೊಂದಿಗೆ ಭಾಗಿಯಾಗಲು ಇಚ್ಛಿಸಿದಲ್ಲಿ, ದಯವಿಟ್ಟು ಘಟನಾವಳಿಗಳು ಪುಟಕ್ಕೆ ಭೇಟಿ ನೀಡಿ.

“ಪರಮಹಂಸ ಯೋಗಾನಂದರ ಸಮತೋಲಿತ ಜೀವನದ ಆದರ್ಶಗಳು”

(ವೈಎಸ್ಎಸ್/ಎಸ್ಆರ್‌ಎಫ್ ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದಗಿರಿ ಅವರಿಂದ ಪ್ರವಚನ)

ಭಾನುವಾರ, ಮಾರ್ಚ್ 15, 2026

ಬೆಳಿಗ್ಗೆ 8:30 ಕ್ಕೆ

– ಬೆಳಿಗ್ಗೆ 9:30 ಕ್ಕೆ

(ಅಧಿಕೃತ ಭಾರತೀಯ ಕಾಲಮಾನ)

ಕಾರ್ಯಕ್ರಮದ ಬಗ್ಗೆ

ವೈಎಸ್ಎಸ್/ಎಸ್ಆರ್‌ಎಫ್ ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು, ಮಾರ್ಚ್ 15, ಭಾನುವಾರದಂದು ವೈಎಸ್ಎಸ್ ಸಾಧನಾ ಸಂಗಮದ ಸಮಾರೋಪ ಸಮಾರಂಭದಲ್ಲಿ “ಪರಮಹಂಸ ಯೋಗಾನಂದರ ಸಮತೋಲಿತ ಜೀವನದ ಆದರ್ಶಗಳು” ಎಂಬ ವಿಷಯದ ಮೇಲೆ ವಿಶೇಷ ಪ್ರವಚನವನ್ನು ನೀಡಲಿದ್ದಾರೆ ಎಂದು ತಿಳಿಸಲು ನಮಗೆ ಅಪಾರ ಆನಂದವಾಗುತ್ತಿದೆ. ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿರುವ ಎಸ್ಆರ್‌ಎಫ್ ನ ಅಂತರರಾಷ್ಟ್ರೀಯ ಪ್ರಧಾನ ಕಛೇರಿಯಿಂದ ನೇರ ಪ್ರಸಾರವಾಗುವ ಈ ಪ್ರವಚನಕ್ಕೆ ಹಾಜರಾಗಲು ನಾವು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ.

ಇಂದಿನ ವೇಗದ ಮತ್ತು ಸವಾಲಿನ ಜಗತ್ತಿನಲ್ಲಿ, ಅನೇಕರು ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆಯೊಂದಿಗೆ ಬಾಹ್ಯ ಜವಾಬ್ದಾರಿಗಳನ್ನು ಪೂರೈಸಲು ಬಯಸುತ್ತಾರೆ. ಈ ಪ್ರವಚನದಲ್ಲಿ, ಸ್ವಾಮಿ ಚಿದಾನಂದಜಿ ಅವರು ಪರಮಹಂಸ ಯೋಗಾನಂದರ ಸಮತೋಲಿತ ಜೀವನದ ಪ್ರಾಯೋಗಿಕ ಆದರ್ಶಗಳನ್ನು ಹಂಚಿಕೊಳ್ಳುತ್ತಾ — ದೇವರಲ್ಲಿ ನಮ್ಮ ನಂಬಿಕೆಯನ್ನು ಸ್ಥಿರವಾಗಿಟ್ಟುಕೊಂಡು ಜಗತ್ತಿನಲ್ಲಿ ಹೇಗೆ ಬದುಕಬೇಕು ಎಂಬುದನ್ನು ವಿವರಿಸುವರು. ದೇಹ, ಮನಸ್ಸು ಮತ್ತು ಆತ್ಮದ ಸಾಮರಸ್ಯದ ಬೆಳವಣಿಗೆಯ ಯೋಗಿಕ ತತ್ವಗಳನ್ನು ಆಧರಿಸಿ, ಪ್ರತಿದಿನದ ಧ್ಯಾನ, ಸರಿಯಾದ ಕಾರ್ಯ ಮತ್ತು ಸಮಚಿತ್ತತೆಗಳು ಶಾಂತಿ, ಆನಂದ ಮತ್ತು ಆಧ್ಯಾತ್ಮಿಕ ಸ್ಥಿರತೆಯೊಂದಿಗೆ ಜೀವನದ ಕರ್ತವ್ಯಗಳನ್ನು ನಿರ್ವಹಿಸಲು ಹೇಗೆ ಶಕ್ತಗೊಳಿಸುತ್ತವೆ ಎಂಬುದು ಈ ಪ್ರವಚನದ ಪ್ರಮುಖಾಂಶವಾಗಿದೆ. ವೃತ್ತಿ ಜೀವನ, ಸಂಬಂಧಗಳು ಮತ್ತು ಸೇವೆಗೆ ದೈವೀ-ಸಂಪರ್ಕದ ಶಾಂತಿಯನ್ನು ಹೇಗೆ ತರುವುದು ಎಂಬುದನ್ನು ಕಲಿಯಿರಿ.

ಈ ಪ್ರವಚನವು ನೇರ ಪ್ರಸಾರ ಮುಗಿದ ನಂತರವೂ ಲಭ್ಯವಿರಲಿದೆ.

ಇವುಗಳನ್ನೂ ನೀವು ಅನ್ವೇಷಿಸಬಹುದು:

ಪರಮಹಂಸ ಯೋಗಾನಂದರ ಜೀವನ ಕಲೆಯ ಬೋಧನೆಗಳು ಮತ್ತು ಧ್ಯಾನ ತಂತ್ರಗಳನ್ನು ಆಧರಿಸಿದ ಸ್ವಾಮಿ ಚಿದಾನಂದ ಗಿರಿ ಅವರ ಇನ್ನಷ್ಟು ಪ್ರೋತ್ಸಾಹಕ ಪ್ರವಚನಗಳು ಇಲ್ಲಿವೆ. ಇವುಗಳನ್ನೂ ವೀಕ್ಷಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ