ಜನ್ಮೋತ್ಸವದ ಮನವಿ — 2025

4 ಜನವರಿ, 2025

“ಗುರು ಹೇಳುವುದನ್ನು ಆಲಿಸುವುದು ಒಂದು ಕಲೆ, ಅದು ಶಿಷ್ಯನನ್ನು ಅತ್ಯುಚ್ಚ ಗುರಿಯೆಡೆಗೆ ಕರೆದೊಯ್ಯುತ್ತದೆ. ಭಕ್ತನು ವೈಜ್ಞಾನಿಕ ಯೋಗ ಮತ್ತು ಸಂಖ್ಯಾ ತರ್ಕವನ್ನು ತಿಳಿಯದೇ ಇದ್ದರೂ ಮತ್ತು ಒಬ್ಬ ಕರ್ಮ ಯೋಗಿಯಾಗಿ ಅರ್ಹನಾಗಲು ತನ್ನನ್ನು ತಾನು ತನ್ನ ಚಟುವಟಿಕೆಗಳಿಂದ ಸಾಕಷ್ಟು ಪ್ರತ್ಯೇಕಿಸಲಾಗದೇ ಇದ್ದರೂ ಕೂಡ ತನ್ನ ಗುರುವಿನ ಬೋಧನೆಗಳನ್ನು ಪೂರ್ಣ ವಿಶ್ವಾಸದಿಂದ ಅನುಸರಿಸಿದಲ್ಲಿ ಅವನು ವಿಮೋಚನೆ ಹೊಂದುತ್ತಾನೆ.”

— ಶ್ರೀ ಶ್ರೀ ಪರಮಹಂಸ ಯೋಗಾನಂದ

ಶ್ರೀ ಶ್ರೀ ಪರಮಹಂಸ ಯೋಗಾನಂದರ ಆವಿರ್ಭವ ದಿನದ (ಜನ್ಮ ದಿನಾಚರಣೆ) ಪವಿತ್ರ ಸಂದರ್ಭದಂದು ನಿಮಗೆಲ್ಲರಿಗೂ ಪ್ರೇಮಪೂರ್ವಕ ಶುಭಾಶಯಗಳು. ಯಾರ ದಿವ್ಯ ಉಪಸ್ಥಿತಿಯು ಜಗದಾದ್ಯಂತ ಜನರನ್ನು ಆಶೀರ್ವದಿಸಿ ಪರಿವರ್ತಿಸುತ್ತಿದೆಯೋ ಆ ನಮ್ಮ ಪ್ರಿಯ ಗುರುದೇವರ ಬದುಕು ಮತ್ತು ಗುರಿಯನ್ನು ನಾವೆಲ್ಲರೂ ಭಕ್ತಿಯಿಂದ ಮತ್ತು ಕೃತಜ್ಞತೆಯಿಂದ ಒಟ್ಟಾಗಿ ಉತ್ಸಾಹದಿಂದ ಆಚರಿಸಲು ಇದು ಸುಸಮಯವಾಗಿದೆ. ಪವಿತ್ರ ಕ್ರಿಯಾ ಯೋಗ ವಿಜ್ಞಾನದ ದಿವ್ಯಜ್ಞಾನ ನೀಡುವ ಬೋಧನೆಗಳ ಮೂಲಕ, ಅಸಂಖ್ಯಾತ ಅನ್ವೇಷಕರನ್ನು ಭಗವಂತನಲ್ಲಿರುವ ತಮ್ಮ ಶಾಶ್ವತ ನಿವಾಸಕ್ಕೆ ಹಿಂದಿರುಗಲು ಗುರುದೇವರು ಭಗವಂತನೆಡೆಗಿನ ಕಾಲಾತೀತ ಹಾದಿಯನ್ನು ಬೆಳಗಿಸಿದ್ದಾರೆ.

ಗುರುದೇವರ ಕಾರ್ಯಗಳಿಗೆ ಬೆಂಬಲ ನೀಡಲು ಒಂದು ಅವಕಾಶ

ನಿಮ್ಮ ಕೊಡುಗೈ ದೇಣಿಗೆಗೆ ಧನ್ಯವಾದಗಳು, ಇದರಿಂದ ಒಂದು ನೈಜ ಆಧ್ಯಾತ್ಮಿಕ ಮಾರ್ಗಕ್ಕಾಗಿ ಹಂಬಲಿಸುತ್ತಿರುವ ಸಹಸ್ರಾರು ಅನ್ವೇಷಕರನ್ನು ನಾವು ತಲುಪಲು ಸಾಧ್ಯವಾಗಿದೆ. ಅಸಂಖ್ಯಾತ ಜನರಿಗೆ ಜ್ಞಾನೋದಯವನ್ನುಂಟುಮಾಡಲು ಎಲ್ಲ ಎಲ್ಲೆಗಳನ್ನು ಮತ್ತು ಭಾಷೆಗಳನ್ನು ದಾಟುತ್ತಾ ಪರಮಹಂಸಜಿಯವರ ಬೋಧನೆಗಳ ಪ್ರಕಾಶವು ಹಿಂದೆಂದೂ ಇಲ್ಲದಂತೆ ಜಗಮಗಿಸುತ್ತಿದೆ. ಈ ಬೆಳವಣಿಗೆಯಿಂದ ಅವರ ಜ್ಞಾನದಲ್ಲಿ ಸಾಂತ್ವನವನ್ನು ಕಂಡುಕೊಂಡ ಎಲ್ಲರಿಗೂ ನಮ್ಮ ಸೇವೆಯನ್ನು ವಿಸ್ತರಿಸುವ ಪವಿತ್ರ ಜವಾಬ್ದಾರಿ ನಮ್ಮದಾಗಿದೆ. ಗುರುದೇವರ ಕಾರ್ಯದಲ್ಲಿ ಬೆಂಬಲ ನೀಡುತ್ತಾ ಈ ಪವಿತ್ರ ಕಾರ್ಯದಲ್ಲಿ ನಮ್ಮೊಡನೆ ಸೇರಿ ಎಂದು ನಾವು ಮನಃಪೂರ್ವಕವಾಗಿ ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ. ಇನ್ನೊಂದು ಹೊಸ ವರ್ಷಕ್ಕೆ ನಾವು ಕಾಲಿಡುತ್ತಿರುವಾಗ, ನಮ್ಮ ವೃದ್ಧಿಸುತ್ತಿರುವ ಆಧ್ಯಾತ್ಮಿಕ ಪರಿವಾರದೊಂದಿಗೆ ನಮ್ಮ ಸಾಧನೆಗಳು ಮತ್ತು ದೃಷ್ಟಿಕೋನವನ್ನು ಹಂಚಿಕೊಳ್ಳಲು ನಮಗೆ ಸಂತೋಷವಾಗುತ್ತಿದೆ:

  • ಪರಮಹಂಸಜಿ ಅವರ ಕ್ರಿಯಾ ಯೋಗ ಬೋಧನೆಗಳು ಮತ್ತು ಜ್ಞಾನಪೂರ್ಣ ಪ್ರಕಟಣೆಗಳನ್ನು ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುವುದು
  • ವೈಎಸ್‌ಎಸ್‌ ಸನ್ಯಾಸಿಗಳ ಮುಂದಾಳತ್ವದಲ್ಲಿ ವೈಯಕ್ತಿಕ ಮತ್ತು ಆನ್‌ಲೈನ್‌ ಕಾರ್ಯಕ್ರಮಗಳ ಮೂಲಕ ಭಕ್ತಾದಿಗಳಿಗೆ ಆಧ್ಯಾತ್ಮಿಕ ಬೆಂಬಲವನ್ನು ನೀಡುವುದು
  • ವೈಎಸ್‌ಎಸ್‌ ಆಶ್ರಮಗಳ ಮೇಲ್ವಿಚಾರಣೆ


ಈ ಕಾರ್ಯಗಳನ್ನು ಸಾಕಾರಗೊಳಿಸಲು ಸುಮಾರು ₹15 ಕೋಟಿಗಳ ಖರ್ಚುವೆಚ್ಚವನ್ನು ನಾವು ಅಂದಾಜಿಸಿದ್ದೇವೆ.

ನಿಮ್ಮ ದೇಣಿಗೆಯು ಬಹಳ ಮೌಲ್ಯದ್ದಾಗಿದೆ

ನಿಮ್ಮ ಕೊಡುಗೈ ದೇಣಿಗೆಗಳಿಂದ, ಗುರುದೇವರ ಬೋಧನೆಗಳು ದೇಶದ ಉದ್ದಗಲ ಮತ್ತು ಪ್ರಪಂಚದಾದ್ಯಂತ ಅಸಂಖ್ಯಾತ ಆತ್ಮಗಳನ್ನು ತಲುಪಿದೆ. ಈ ದಿವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗಾಗಿ ಸಂರಕ್ಷಿಸಲು ಮತ್ತು ವಿಸ್ತರಿಸಲು ನಾವೆಲ್ಲರೂ ಕೈ ಜೋಡಿಸೋಣ. ನಿಮ್ಮ ಬೆಂಬಲ — ಪ್ರಾರ್ಥನೆ, ಸೇವೆ ಅಥವಾ ಆರ್ಥಿಕ ಸಹಾಯಗಳ ಮೂಲಕ — ಗುರುದೇವರ ಬೆಳಕು ಮತ್ತು ಪ್ರೇಮವನ್ನು ಪ್ರಪಂಚದ ಮೂಲೆ ಮೂಲೆಗೆ ಪ್ರಸಾರ ಮಾಡಲು ಅತ್ಯಮೂಲ್ಯವಾದದ್ದಾಗಿದೆ.

ನಾವು, ಗುರೂಜಿಯವರ ಆಶ್ರಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಾರ್ಥಿಗಳೊಂದಿಗೆ ಸನ್ಯಾಸಿಗಳ ಸಮುದಾಯವು, ನಿಮ್ಮ ಪ್ರೀತಿ, ಪ್ರಾರ್ಥನೆಗಳು ಮತ್ತು ಕೊಡುಗೈ ದೇಣಿಗೆಗಳಿಗೆ ನಮ್ಮ ಹೃದಯಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇವೆ ಮತ್ತು ಈ ದಿವ್ಯ ಸಂದರ್ಭದಲ್ಲಿ ನಿಮಗೆ ಶಾಂತಿ ಮತ್ತು ಆನಂದವನ್ನು ಆಶಿಸುತ್ತಿದ್ದೇವೆ.

ಗುರುದೇವರ ಪ್ರೇಮದಲ್ಲಿ,
ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ

ಪೂರ್ಣ ಮನವಿಯನ್ನು ಕೆಳಗೆ ಓದಿ:

ಪರಮಹಂಸಜಿ ಅವರ ಕ್ರಿಯಾ ಯೋಗ ಬೋಧನೆಗಳು ಮತ್ತು ಜ್ಞಾನಪೂರ್ಣ ಪ್ರಕಟಣೆಗಳನ್ನು ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುವುದು

ಪರಮಹಂಸ ಯೋಗಾನಂದಜಿ ಅವರ ಬೋಧನೆಗಳು ಪ್ರಪಂಚದಾದ್ಯಂತ ಅಸಂಖ್ಯಾತ ಅನ್ವೇಷಕರಿಗೆ ಭಗವಂತನ ಸಾಕ್ಷಾತ್ಕಾರದ ಮಾರ್ಗವನ್ನು ತೋರಿಸುತ್ತಾ ಅವರನ್ನು ಪ್ರಚೋದಿಸಿವೆ ಮತ್ತು ಉದ್ಧರಿಸಿವೆ. ಗುರುದೇವರ ಉತ್ಕೃಷ್ಟ ಬೋಧನೆಗಳಿಂದ ಇನ್ನೂ ಹಲವರು ಪ್ರಯೋಜನ ಪಡೆಯಲು, ಈ ಪವಿತ್ರ ಬೋಧನೆಗಳನ್ನು ಅಧಿಕ ಭಾಷೆಗಳಲ್ಲಿ ತರಲು ನಾವು ಬದ್ಧರಾಗಿದ್ದೇವೆ. ನಮ್ಮ ಪ್ರಗತಿಯಲ್ಲಿರುವ ಪ್ರಯತ್ನ, ಗುರುದೇವರ ಸಂದೇಶವು ಎಷ್ಟು ಸಾಧ್ಯವೋ ಅಷ್ಟು ಸತ್ಯಾನ್ವೇಷಕರಿಗೆ ಅವರು ತಿಳಿಯಬಲ್ಲ ಮತ್ತು ಅಂತರ್ಗತಮಾಡಿಕೊಳ್ಳಬಲ್ಲ ಭಾಷೆಯಲ್ಲಿ ಸಿಗಲಿ ಎಂಬುದನ್ನು ಖಚಿತ ಪಡಿಸಿಕೊಳ್ಳುವುದಾಗಿದೆ.

ಗುರುದೇವರ ಜ್ಞಾನದ ಪ್ರಸರಣವನ್ನು ವಿಸ್ತರಿಸುವುದು

ವೈಎಸ್‌ಎಸ್‌ ಪಾಠಗಳ ಹೊಸ ಆವೃತ್ತಿಗಳು

ಗುರುದೇವರ ಇಚ್ಛೆಯಂತೆ, ವೈಎಸ್‌ಎಸ್‌ ಪಾಠಗಳ ಇಂಗ್ಲಿಷ್‌ನ ಒಂದು ಹೊಸ ಮತ್ತು ಸಮಗ್ರ ಅವೃತ್ತಿಯನ್ನು 2019ರಲ್ಲಿ ಲೋಕಾರ್ಪಣೆ ಮಾಡಲಾಯಿತು. ಈ ಆವೃತ್ತಿಯ ಹಿಂದಿ, ತಮಿಳು ಮತ್ತು ತೆಲುಗು ಆವೃತ್ತಿಗಳನ್ನು ಈಗಾಗಲೇ ಲೋಕಾರ್ಪಣೆ ಮಾಡಲಾಗಿದೆ ಮತ್ತು ಇತರ ಭಾಷೆಗಳಲ್ಲಿನ ಅನುವಾದ ಕಾರ್ಯವು ಪ್ರಗತಿಯಲ್ಲಿದೆ. ಭಕ್ತಾದಿಗಳು ಈ ಅನುವಾದಗಳನ್ನು ಬಹಳ ಉತ್ಸಾಹದಿಂದ ಸ್ವಾಗತಿಸಿದ್ದಾರೆ ಮತ್ತು ಈ ಬೋಧನೆಗಳನ್ನು ತಮ್ಮ ಸ್ವಂತ ಭಾಷೆಯಲ್ಲಿ ನೀಡಿದ್ದಕ್ಕಾಗಿ ಅವರ ಕೃತಜ್ಞತೆಯನ್ನು ಪತ್ರಮುಖೇನ ತಿಳಿಸಿದ್ದಾರೆ.

“ಗುರುದೇವರ ಜ್ಞಾನ ಮತ್ತು ಪ್ರೇಮದ ಲವಲವಿಕೆಯಿಂದ ಕೂಡಿದ ವೈಎಸ್‌ಎಸ್‌ ಪಾಠಗಳು ನನ್ನ ಆತ್ಮಕ್ಕೆ ಮಾರ್ಗದರ್ಶನ ಮಾಡುವ ಒಂದು ದಿವ್ಯ ನಕ್ಷೆಯಂತೆ ಭಾಸವಾಗಿದೆ. ಈ ಪವಿತ್ರ ಬೋಧನೆಗಳನ್ನು ನಮ್ಮ ಭಾಷೆಯಲ್ಲಿ ಭಾಷಾಂತರಿಸಿರುವುದಕ್ಕೆ ನಾನು ಬಹಳ ಆಭಾರಿಯಾಗಿದ್ದೇನೆ.”
– ಕೆ.ಎಂ. ತಿರುವಳ್ಳೂರ್‌, ತಮಿಳು ನಾಡು

ಸಹಾಯಕ ವಿಷಯಕಗಳು ಮತ್ತು ಪಾಠಗಳ ಆಪ್‌

ಪಾಠಗಳ ವಿದ್ಯಾರ್ಥಿಗಳು ಗುರುದೇವರ ಬೋಧನೆಗಳನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಬೇಕಾದ ಕಾರ್ಯೋಪಯೋಗಿ ಮಾರ್ಗದರ್ಶನವನ್ನು ನೀಡುವ ಮೌಲ್ಯಯುತ ಪೂರಕ ವಿಷಯವಸ್ತುಗಳನ್ನು ಕೂಡ ಪಡೆಯುತ್ತಾರೆ. ಈ ಸಂಪನ್ಮೂಲಗಳಲ್ಲಿರುವ, ವಿವಿಧ ಭಾರತೀಯ ಭಾಷೆಗಳಲ್ಲಿ ಸನ್ಯಾಸಿಗಳು ನಡೆಸಿಕೊಡುವ ಮಾರ್ಗದರ್ಶಿತ ಧ್ಯಾನಗಳು ಮತ್ತು ವೀಡಿಯೋ ತರಗತಿಗಳು, ಭಕ್ತಾದಿಗಳು ತಮ್ಮ ಧ್ಯಾನ ತಂತ್ರಗಳ ಅಭ್ಯಾಸವನ್ನು ಚೆನ್ನಾಗಿ ಅರಿತು ಅದನ್ನು ಗಾಢವಾಗಿಸಲು ಸಹಾಯ ಮಾಡುತ್ತವೆ.

“ಆಶ್ರಮಗಳು ಬಹಳ ದೂರದಲ್ಲಿರುವುದರಿಂದ, ಸನ್ಯಾಸಿಗಳ ವಿವರವಾದ ವೈಯಕ್ತಿಕ ಮಾರ್ಗದರ್ಶನವನ್ನು ಪಡೆಯಲು ಅಷ್ಟು ದೂರ ಪ್ರಯಾಣಿಸುವುದು ಒಂದು ಸವಾಲೇ ಸರಿ. ಆದರೂ, ಏಕಾಗ್ರತೆಯ ತಂತ್ರದ ಬಗ್ಗೆ ನನ್ನ ಮಾತೃಭಾಷೆಯಲ್ಲಿ ವೀಡಿಯೋ ತರಗತಿಯನ್ನು ವೀಕ್ಷಿಸಿದ್ದು ನಿಜಕ್ಕೂ ಒಂದು ಅನುಗ್ರಹವೇ ಸರಿ. ಅದು ಸ್ಪಷ್ಟತೆಯನ್ನು ನೀಡಿತು ಮತ್ತು ತಂತ್ರವನ್ನು ಹೆಚ್ಚು ಪರಿಣಾಮಕಾರಿಯಾಗಿ ಅರಿತು ಅಭ್ಯಾಸ ಮಾಡಲು ನನಗೆ ಸಹಾಯ ಮಾಡಿತು.”
– ಟಿ.ಪಿ. ಕಾಕಿನಾಡ, ಆಂಧ್ರ ಪ್ರದೇಶ

ಭಕ್ತಾದಿಗಳು ಪಾಠಗಳನ್ನು ಡಿಜಿಟಲಿ ಸುಲಭವಾಗಿ ಅಧ್ಯಯನ ಮಾಡಲು ಅವರಿಗೆ ನಾವು ವೈಎಸ್‌ಎಸ್‌ ಪಾಠಗಳ ಆಪನ್ನು ಉಚಿತವಾಗಿ ನೀಡುತ್ತಿದ್ದೇವೆ. ಮುಖ್ಯವಾದ ಅಂಶಗಳಲ್ಲಿ ಒಂದು ವಿಸ್ತೃತ ಹಾಗೂ ಕ್ರಿಯಾತ್ಮಕ ಟೆಕ್ಸ್ಟ್‌-ಟು-ಸ್ಪೀಚ್‌ ಇರುವ ಇರೀಡರ್‌ ಸೇರಿದೆ; ವಿಷಯಾಧಾರಿತ ಪೂರಕ ಪಾಠಗಳ ನೋಡುವಿಕೆ; ವೈಎಸ್‌ಎಸ್‌ ಸಮಾಚಾರ ಹಾಗೂ ಬ್ಲಾಗ್‌ಗಳನ್ನು ನೋಡಲು ಅನುಮತಿ; ಮತ್ತು ಮಾರ್ಗದರ್ಶಿತ ಹಾಗೂ ಆನ್‌ಲೈನ್‌ ಧ್ಯಾನಗಳಲ್ಲಿ ಭಾಗಿಯಾಗುವ ಸಾಧ್ಯತೆ.

ಪುಸ್ತಕಗಳ ಅನುವಾದ

ಪಾಠಗಳಷ್ಟೇ ಅಲ್ಲದೆ, ನಾವು ಗುರುದೇವರ ಆಧ್ಯಾತ್ಮಿಕ ಮೇರುಕೃತಿ, ಆಟೋಬಯಾಗ್ರಫಿ ಆಫ್‌ ಎ ಯೋಗಿ (ಯೋಗಿಯ ಆತ್ಮಕಥೆ) ಮತ್ತು ಅವರ ಇತರ ಪ್ರಕಟಣೆಗಳನ್ನು ಹಲವಾರು ಭಾರತೀಯ ಭಾಷೆಗಳಲ್ಲಿ ಅನುವಾದಿಸಿ, ಅವು ಮುದ್ರಿತ, ಆಡಿಯೋ ಮತ್ತು ಡಿಜಿಟಲ್‌ ರೂಪಗಳಲ್ಲಿ ಲಭ್ಯವಾಗುವಂತೆ ಮಾಡುತ್ತಿದ್ದೇವೆ. 2024ರಲ್ಲಿ ನಾವು ಆಟೋಬಯಾಗ್ರಫಿ ಆಫ್‌ ಎ ಯೋಗಿಯ ಗುಜರಾತಿ ಭಾಷೆಯ ಒಂದು ಆಡಿಯೋ ಪುಸ್ತಕವನ್ನು ಹೊರತಂದೆವು ಮತ್ತು ವಿವಿಧ ಭಾಷೆಗಳಲ್ಲಿ 16 ಹೊಸ ಪುಸ್ತಕಗಳನ್ನು ಹೊರತಂದಿದ್ದೇವೆ.

ಈ ಪವಿತ್ರ ಬೋಧನೆಗಳ ಪ್ರಸರಣಕ್ಕೆ ಕೆಳಗಿನದೂ ಸೇರಿದಂತೆ ಗಮನಾರ್ಹವಾದ ಆರ್ಥಿಕ ಸಂಪನ್ಮೂಲಗಳು ಬೇಕಾಗುತ್ತವೆ:

  1. ಪ್ರತಿಯೊಬ್ಬರೂ ಈ ಬೋಧನೆಗಳನ್ನು ಪಡೆಯಲು ಶಕ್ತರಾಗಲು ವೈಎಸ್‌ಎಸ್ ಪಾಠಗಳನ್ನು ಕಡಿಮೆ ದರದಲ್ಲಿ ನೀಡುವುದು.
  2. ಗುರುದೇವರ ಪುಸ್ತಕಗಳನ್ನು ಇನ್ನೂ ಹೆಚ್ಚು ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸುವುದು.
  3. ಇಂದಿನ ಡಿಜಿಟಲ್‌ ಜಗತ್ತಿನಲ್ಲಿ ಸತ್ಯಾನ್ವೇಷಕರ ವಿಕಸಿಸುತ್ತಿರುವ ಅವಶ್ಯಕತೆಗಳನ್ನು ಉತ್ತಮವಾಗಿ ಪೂರೈಸಲು ತಂತ್ರಜ್ಞಾನವನ್ನು ವೃದ್ಧಿಪಡಿಸುವುದು ಮತ್ತು ಮೇಲ್ದರ್ಜೆಗೇರಿಸುವುದು.
ಆಟೋಬಯಾಗ್ರಫಿ ಆಫ್‌ ಎ ಯೋಗಿಯ ಗುಜರಾತಿ ಭಾಷೆಯ ಆಡಿಯೋ ಪುಸ್ತಕದ ಆವೃತ್ತಿಯ ಲೋಕಾರ್ಪಣೆ ಗುಜರಾತ್‌ನ ವಡೋದರ‌ದ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ

ನಿಮ್ಮ ಕೊಡುಗೈ ದೇಣಿಗೆಗೆ ಧನ್ಯವಾದಗಳು, ಇದರಿಂದ ನಾವು ನಮ್ಮ ಪಾಠಗಳು ಮತ್ತು ಪುಸ್ತಕಗಳ ಬೆಲೆಗಳನ್ನು ಅವೆಲ್ಲವಕ್ಕೂ ಗಣನೀಯ ಪ್ರಮಾಣದ ಅನುದಾನವನ್ನು ನೀಡುತ್ತಾ ಇಂದಿನ ಮಾರುಕಟ್ಟೆಯ ಬೆಲೆಗಳಿಗಿಂತ ಕಡಿಮೆ ದರದಲ್ಲಿ ಇರಿಸಲು ನಮಗೆ ಸಾಧ್ಯವಾಗಿದೆ. ಗುರುದೇವರ ಪರಿವರ್ತನೀಯ ಬೋಧನೆಗಳನ್ನು ಯಾರೆಲ್ಲ ಬಯಸುತ್ತಾರೋ ಅವರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ನೀವು ಬೆಂಬಲ ನೀಡುವುದನ್ನು ಮುಂದುವರಿಸುತ್ತೀರಿ ಎಂಬ ನಂಬಿಕೆಯಲ್ಲಿ, ಮುಂಬರುವ ವರ್ಷದಲ್ಲಿ ಎಲ್ಲ ಬೋಧನೆಗಳನ್ನು ಕಡಿಮೆ ಬೆಲೆಗಳಲ್ಲಿ ನೀಡಲು ನಾವು ಉದ್ದೇಶಿಸಿದ್ದೇವೆ.

ಇಂಗ್ಲಿಷಿನಲ್ಲಿ “ದಿ ಯೋಗ ಆಫ್‌ ಭಗವದ್ಗೀತ”ದ ಲೋಕಾರ್ಪಣೆ
“ವೇರ್‌ ದೇರ್‌ ಈಸ್‌ ಲೈಟ್‌”ನ ತೆಲುಗು ಇಪುಸ್ತಕದ ಲೋಕಾರ್ಪಣೆ
ಭಕ್ತಾದಿಗಳಿಗೆ ಆಧ್ಯಾತ್ಮಿಕ ಬೆಂಬಲವನ್ನು ನೀಡುವುದು

ವಿಭಿನ್ನ ಕಾರ್ಯಕ್ರಮಗಳು ಮತ್ತು ಕಾರ್ಯಾರಂಭಗಳ ಮೂಲಕ ಭಾರತ ಉಪಖಂಡದೆಲ್ಲೆಡೆ ಭಕ್ತಾದಿಗಳಿಗೆ ಬೆಂಬಲ ನೀಡಲು ವೈಎಸ್‌ಎಸ್‌ ಅದರ ಬದ್ಧತೆಯಲ್ಲಿ ಅಚಲವಾಗಿದೆ: 

ಸನ್ಯಾಸಿಗಳ ಪ್ರವಾಸಗಳು, ಸಂಗಂಗಳು ಮತ್ತು ಕ್ರಿಯಾ ದೀಕ್ಷೆಗಳು

ವೈಎಸ್‌ಎಸ್‌ ನೋಯ್ಡಾ ಆಶ್ರಮದಲ್ಲಿ ಸಾಧನಾ ಸಂಗಂ
ಲೂಧಿಯಾನಾದಲ್ಲಿ ನಡೆದ ಸನ್ಯಾಸಿಗಳ ಪ್ರವಾಸದ ಸಮಯದಲ್ಲಿ ಕಂಡುಬಂದ ನಗುಮುಖಗಳು

2024ರಲ್ಲಿ, ವೈಎಸ್‌ಎಸ್‌ ಸನ್ಯಾಸಿಗಳು ಭಾರತ ಮತ್ತು ಶ್ರೀ ಲಂಕಾದ 50 ವಿವಿಧ ನಗರಗಳಿಗೆ ಭೇಟಿ ನೀಡಿ, ಸಾವಿರಾರು ಹೃದಯಗಳನ್ನು ಸ್ಪರ್ಶಿಸುವ ಉಪನ್ಯಾಸಗಳನ್ನು ನೀಡುತ್ತಾ ಕ್ರಿಯಾ ಯೋಗ ದೀಕ್ಷೆಯನ್ನು ನೀಡಿದರು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅಷ್ಟೇ ಅಲ್ಲದೆ, ನಮ್ಮ ರಾಂಚಿ, ನೋಯ್ಡಾ, ದಕ್ಷಿಣೇಶ್ವರ್‌, ಚೆನ್ನೈ ಆಶ್ರಮಗಳಲ್ಲಿ ಮತ್ತು ಇಗತ್‌ಪುರಿ ಸಾಧನಾಲಯದಲ್ಲಿ 20ಕ್ಕೂ ಹೆಚ್ಚು ಸಾಧನಾ ಸಂಗಂಗಳನ್ನು ಆಯೋಜಿಸಿದೆವು ಮತ್ತು 3,500ಕ್ಕೂ ಹೆಚ್ಚು ಭಕ್ತಾದಿಗಳು ಆಧ್ಯಾತ್ಮಿಕ ಪುನರುದ್ಧಾರಕ್ಕಾಗಿ ಗುರೂಜಿಯವರ ಬೋಧನೆಗಳಲ್ಲಿ ನಾಲ್ಕು ದಿನಗಳ ಕಾಲ ಮುಳುಗಿದ್ದರು. ನಮ್ಮ ಸನ್ಯಾಸಿಗಳು ನೋಯ್ಡಾ ಆಶ್ರಮದಲ್ಲಿ 10 ಧ್ಯಾನಶಿಬಿರಗಳನ್ನು ಏರ್ಪಡಿಸಿದರು ಮತ್ತು ಪುರಿ ಮತ್ತು ದಿಹಿಕಾ ಧ್ಯಾನಶಿಬಿರಗಳ ಕೇಂದ್ರದಲ್ಲಿ ಧ್ಯಾನಶಿಬಿರಗಳನ್ನು ಏರ್ಪಡಿಸಿದರು.

ಆನ್‌ಲೈನ್‌ ಸ್ಫೂರ್ತಿದಾಯಕ ಕಾರ್ಯಕ್ರಮಗಳು

ಒಂದು ಆನ್‌ಲೈನ್‌ ಸ್ಫೂರ್ತಿದಾಯಕ ಕಾರ್ಯಕ್ರಮದಲ್ಲಿ ಸ್ವಾಮಿ ಶುದ್ಧಾನಂದ ಒಂದು ಪ್ರವಚನವನ್ನು ಮಾಡುತ್ತಿದ್ದಾರೆ

ವೈಯಕ್ತಿಕ ಕಾರ್ಯಕ್ರಮಗಳು ನಮ್ಮ ಪ್ರಯತ್ನಗಳ ಮೂಲದಲ್ಲಿ ಇರುತ್ತದಾದರೂ, ದೂರ, ಆರೋಗ್ಯ ಮತ್ತು ಇತರ ಕಾರಣಗಳಿಂದಾಗಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದವರಿಗೆ, ವೈಎಸ್‌ಎಸ್‌ ಸನ್ಯಾಸಿಗಳು ಆನ್‌ಲೈನ್‌ ವೇದಿಕೆಗಳ ಮೂಲಕ ನಿಯತವಾಗಿ ಅವರನ್ನು ತಲುಪುವುದಕ್ಕೆ ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ವಾರದ ಧ್ಯಾನಗಳ ಜೊತೆಗೆ, ವೈಎಸ್‌ಎಸ್‌ ವೆಬ್‌ಸೈಟ್‌ (ಜಾಲತಾಣ) ಮತ್ತು ಆನ್‌ಲೈನ್‌ ಮಾಧ್ಯಮಗಳ ಮೂಲಕ, ಭಕ್ತಾದಿಗಳು ಎಲ್ಲೇ ಇದ್ದರೂ ಅವರಿಗೆ ಕ್ರಿಯಾತ್ಮಕ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುತ್ತಾ ಗುರುದೇವರ ಪರಿವರ್ತನೀಯ “ಬದುಕುವುದು-ಹೇಗೆ” ಸಿದ್ಧಾಂತಗಳ ಮೇಲೆ 30ಕ್ಕೂ ಹೆಚ್ಚು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಹೊಸ ವರ್ಷದಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮಗಳು

  • ಭಕ್ತಾದಿಗಳನ್ನು ಉತ್ತೇಜಿಸಲು ಮತ್ತು ಉದ್ಧರಿಸಲು ನಮ್ಮ ಪೂಜ್ಯ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದಜಿ, ಮುಂದಿನ ವಾರಗಳಲ್ಲಿ ಭಾರತ ಮತ್ತು ನೇಪಾಳಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರು, ಚೆನ್ನೈ, ಅಹ್ಮದಾಬಾದ್‌, ನೋಯ್ಡಾ ಮತ್ತು ಕಠ್ಮಂಡುವಿನಲ್ಲಿ ಭಕ್ತಾದಿಗಳಿಗೆ ಅವರ ಉತ್ಕೃಷ್ಟ ಜ್ಞಾನ ಮತ್ತು ಪ್ರಾಯೋಗಿಕ ಆಧ್ಯಾತ್ಮಿಕ ಮಾರ್ಗದರ್ಶನದ ಲಾಭವನ್ನು ಪಡೆದುಕೊಳ್ಳಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
  • ಪವಿತ್ರ ಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಭಕ್ತಾದಿಗಳನ್ನು ಆಹ್ವಾನಿಸಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ವೈಎಸ್‌ಎಸ್‌ ಶಿಬಿರದಲ್ಲಿ, ಅವರ ವಾಸ ಹಾಗೂ ಭೋಜನಗಳಿಗೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಭಕ್ತಾದಿಗಳಿಗೆ ಒಂದು ಆಧ್ಯಾತ್ಮಿಕ ಉನ್ನತೀಕರಣದ ಅನುಭವವನ್ನು ನೀಡಲು ವೈಎಸ್‌ಎಸ್‌ ಸನ್ಯಾಸಿಗಳು ಶಿಬಿರದಲ್ಲಿ ಸಮೂಹ ಧ್ಯಾನಗಳನ್ನು ಮತ್ತು ಸತ್ಸಂಗಗಳನ್ನು ನೀಡಲಿದ್ದಾರೆ.

ಪ್ರತಿಯೊಬ್ಬರಿಗೂ ಖರ್ಚುವೆಚ್ಚಗಳನ್ನು ಭರಿಸಲು ಸಾಧ್ಯವಾಗುವಂತೆ ವೈಎಸ್‌ಎಸ್‌ ಎಲ್ಲ ಕಾರ್ಯಕ್ರಮಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಶುಲ್ಕವನ್ನು ಬಹಳ ಸೀಮಿತವಾಗಿಡಲು ಪ್ರಯತ್ನಿಸುತ್ತದೆ, ಈ ಕಾರಣಕ್ಕಾಗಿ, ಇಂತಹ ಕಾರ್ಯಕ್ರಮಗಳನ್ನು ನಡೆಸಲು ಬೇಕಾಗುವ ಖರ್ಚುವೆಚ್ಚಗಳನ್ನು ಭರಿಸಲು ನಮಗೆ ಸಾಧ್ಯಮಾಡಲು ಭಕ್ತಾದಿಗಳ ಬೆಂಬಲ ಅತ್ಯಾವಶ್ಯಕವಾಗಿದೆ.

ಆಶ್ರಮಗಳ ನಿರ್ವಹಣೆ ಮತ್ತು ಭಕ್ತಾದಿಗಳ ಆತಿಥ್ಯ

ಅನ್ವೇಷಕರು ಸಾಂತ್ವನವನ್ನು ಪಡೆಯಲು, ಗಾಢವಾಗಿ ಧ್ಯಾನ ಮಾಡಲು ಮತ್ತು ಸನ್ಯಾಸಿಗಳಿಂದ ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯಲು ವೈಎಸ್‌ಎಸ್‌ ಆಶ್ರಮಗಳು ದಿವ್ಯ ಶಾಂತಿ ಮತ್ತು ಆಧ್ಯಾತ್ಮಿಕ ನವತಾರುಣ್ಯದ ಪವಿತ್ರ ಸ್ಥಳಗಳಾಗಬೇಕೆಂದು ಗುರುದೇವರು ಉದ್ದೇಶಿಸಿದ್ದರು. ಈ ಪವಿತ್ರ ಸ್ಥಳಗಳು ಭಕ್ತಾದಿಗಳ ಆಧ್ಯಾತ್ಮಿಕ ಬದುಕಿನಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸುತ್ತವೆ, ಆದರೆ ಅವುಗಳನ್ನು ನಿರ್ವಹಿಸಲು ಗಮನಾರ್ಹವಾದ ಸಂಪನ್ಮೂಲಗಳು ಮತ್ತು ಶ್ರದ್ಧಾಪೂರ್ಣ ಮೇಲ್ವಿಚಾರಣೆಯು ಬೇಕಾಗುತ್ತದೆ.

“ರಾಂಚಿ ಆಶ್ರಮದೊಳಗೆ ಪ್ರವೇಶಿಸಿದಾಗ ನನಗೆ ನಾನು ಶಾಂತಿ ಹಾಗೂ ಪ್ರೇಮದ ಸ್ವರ್ಗಧಾಮದೊಳಗೆ ಹೆಜ್ಜೆಯಿಡುತ್ತಿದ್ದೇನೆ ಎಂಬಂತೆ ಭಾಸವಾಯಿತು. ಧ್ಯಾನಪೂರ್ಣ ಪ್ರಶಾಂತತೆ, ಸೊಗಸಾಗಿ ಇಟ್ಟುಕೊಂಡಿರುವ ಪರಿಸರಗಳು ಮತ್ತು ಆದರದ ಅತಿಥಿಸತ್ಕಾರ, ಇವೆಲ್ಲವೂ ನಾನು ಇಹಲೋಕದಿಂದ ಬಿಡಿಸಿಕೊಂಡು ತತ್‌ಕ್ಷಣವೇ ಭಗವಂತನೊಂದಿಗೆ ಸಂಪರ್ಕ ಸಾಧಿಸಿಕೊಳ್ಳುವಂತೆ ಮಾಡಿದವು.”
— ಡಿ. ಎಂ. ಕೊಲ್ಹಾಪುರ್‌, ಮಹಾರಾಷ್ಟ್ರ

ರಾಂಚಿಯಲ್ಲಿ ಧ್ಯಾನದ ಉದ್ಯಾನವನಗಳು ಮತ್ತು ಮಂದಿರಗಳಿಂದ ಹಿಡಿದು ಲಿಚ್ಚಿ ವೇದಿ ಮತ್ತು ಸ್ಮೃತಿ ಮಂದಿರಗಳಂತಹ ಯಾತ್ರಾ ಸ್ಥಳಗಳು ಸೇರಿದಂತೆ, ಪ್ರತಿಯೊಂದು ಜಾಗವನ್ನೂ ಒಂದು ನಿರ್ಮಲ ಹಾಗೂ ಆಧ್ಯಾತ್ಮಿಕವಾಗಿ ವಿದ್ಯುದಾವೇಶಿತವಾದ ವಾತಾವರಣವನ್ನಾಗಿ ಸೃಷ್ಟಿಸಲು ಗಮನಹರಿಸಲಾಗಿದೆ. ಈ ಪವಿತ್ರೀಕರಿಸಿದ ಜಾಗಗಳು ಆಂತರಿಕ ಶಾಂತಿ ಮತ್ತು ದಿವ್ಯ ಸಂಸರ್ಗಕ್ಕೆ ಆಸ್ಪದ ಕೊಡುತ್ತಾ ಭಕ್ತಾದಿಗಳು ಭಗವಂತ ಮತ್ತು ಗುರುವಿನೊಡನೆ ತಮ್ಮ ಸಂಬಂಧವನ್ನು ಗಾಢಗೊಳಿಸಲು ಉತ್ತೇಜಿಸುತ್ತವೆ.

ವೈಎಸ್‌ಎಸ್‌ ಆಶ್ರಮಗಳಿಗೆ ಭೇಟಿ ನೀಡಿ ಅವರ ಸಾಧನೆಯ ಮೇಲೆ ಏಕಾಗ್ರರಾಗ ಬಯಸುವ, ಅದರಲ್ಲೂ ಅಲ್ಲಿಗೆ ಹೋಗಿಬರಲು ಸಾಕಷ್ಟು ಸಂಪನ್ಮೂಲವಿಲ್ಲದವರಿಗೂ ಸೇರಿದಂತೆ, ಎಲ್ಲರಿಗೂ ವೈಎಸ್‌ಎಸ್‌ ಆಶ್ರಮಗಳು ಭಕ್ತಾದಿಗಳಿಗೆ ಇರಲು ಆರಾಮದಾಯಕ ಸ್ಥಳವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಇದರಲ್ಲಿ ಎಲ್ಲ ಸಂದರ್ಶಕರಿಗೂ ಒಂದು ಪ್ರಶಾಂತ ಹಾಗೂ ಉನ್ನತೀಕರಿಸುವ ಅನುಭವವನ್ನು ಖಚಿತಪಡಿಸಲು ಆಧುನಿಕ ಅತಿಥಿ ಸೌಕರ್ಯಗಳು, ದಕ್ಷ ಗೃಹ ಕೃತ್ಯ ನಿರ್ವಹಣೆಯ ಸೇವೆಗಳು, ಮತ್ತು ಒಂದು ಸ್ವಚ್ಛ, ಆರೋಗ್ಯಪೂರ್ಣ ವಾತಾವರಣವೂ ಸೇರಿದೆ.

ಕಾರ್ಯನಿರ್ವಹಣೆಯ ಖರ್ಚುವೆಚ್ಚಗಳು

ಈ ಆಶ್ರಮಗಳನ್ನು ನಡೆಸಲು ಮತ್ತು ನಿರ್ವಹಿಸಲು ಸಾಕಷ್ಟು ಖರ್ಚು ವೆಚ್ಚವಿರುತ್ತದೆ:

  • ಭೇಟಿ ನೀಡುವ ಭಕ್ತಾದಿಗಳಿಗೆ ಕೋಣೆಗಳು, ಭೋಜನ ಮತ್ತು ಸೌಕರ್ಯಗಳನ್ನು ಒದಗಿಸುವುದು
  • ಈ ಸೌಲಭ್ಯಗಳನ್ನು ನೀಡುವ ಮತ್ತು ನೋಡಿಕೊಳ್ಳುವ ಸಿಬ್ಬಂದಿಗಳ ವೇತನಗಳು
  • ಅತಿಥಿಗಳ ಸೌಕರ್ಯಗಳು, ಧ್ಯಾನದ ಹಜಾರಗಳು ಮತ್ತು ಇತರ ಮೂಲಭೂತ ಸೌಕರ್ಯಗಳ ನವೀಕರಣ ಮತ್ತು ದುರಸ್ತಿನ ಖರ್ಚುವೆಚ್ಚ



ನಿಮ್ಮ ದೇಣಿಗೆಗಳು ಈ ಪವಿತ್ರ ಸ್ಥಳಗಳನ್ನು ಸಂರಕ್ಷಿಸಲು ಮತ್ತು ಅಸಂಖ್ಯಾತ ಸತ್ಯ-ಶೋಧಕರಿಗೆ ಲಭಿಸುವ ಸಾಂತ್ವನ ಹಾಗೂ ಆಧ್ಯಾತ್ಮಿಕ ಪುನರಜ್ಜೀವನವನ್ನು ತರುವ ನಮ್ಮ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಸಾಧ್ಯವಾಗಿಸುತ್ತದೆ. ನಾವೆಲ್ಲರೂ ಒಟ್ಟು ಸೇರಿ ಎಲ್ಲ ಜೀವನೋಪಾಯದ ಅನ್ವೇಷಕರಿಗೂ ಗುರುದೇವರ ಲೋಕೋತ್ತರ ಆಧ್ಯಾತ್ಮಿಕವಾಗಿ ಉತ್ಸಾಹಕರ ಮತ್ತು ಸ್ವಾಗತಾರ್ಹ ವಾತಾವರಣವನ್ನು ಸೃಷ್ಟಿಸಬಹುದು.

ಈ ಪವಿತ್ರ ಆಶ್ರಮಗಳನ್ನು ನಿರ್ವಹಿಸಲು, ಗುರುದೇವರ ಬೋಧನೆಗಳನ್ನು ಭಾರತೀಯ ಭಾಷೆಗಳಲ್ಲಿ ಪ್ರಕಟಿಸಲು ಮತ್ತು ವೈಯಕ್ತಿಕ ಮತ್ತು ಆನ್‌ಲೈನ್‌ ಕಾರ್ಯಕ್ರಮಗಳೆರಡನ್ನೂ ಆಯೋಜಿಸಲು ಬೇಕಾದ ವಾರ್ಷಿಕ ಅಂದಾಜು ವೆಚ್ಚ ₹15 ಕೋಟಿ.

ಇದನ್ನು ಹಂಚಿಕೊಳ್ಳಿ