ಅಕ್ಟೋಬರ್ 29, 2019ರಂದು, ಮಾನ್ಯ ವಿತ್ತ ಮಂತ್ರಿಗಳಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌ರವರು ಶ್ರೀ ಶ್ರೀ ಪರಮಹಂಸ ಯೋಗಾನಂದರ 125ನೇ ಜನ್ಮ ಮಹೋತ್ಸವದ ಗೌರವಾರ್ಥವಾಗಿ ವಿಶೇಷವಾಗಿ ರೂಪಿಸಲಾದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದರು. ಈ ಮಹತ್ವಪೂರ್ಣ ಘಟನೆಯ ಬಗ್ಗೆ ನಮ್ಮ ಆರಂಭಿಕ ವರದಿಯ ಹೊರತಾಗಿ (ಸಂಪೂರ್ಣ ವರದಿಯನ್ನು ಓದಲು, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ), ಈ ನಿಯಮಿತ ಸಂಖ್ಯೆಯ ನಾಣ್ಯಗಳು ವೈಎಸ್‌ಎಸ್‌ವತಿಯಿಂದ ಈಗ ಭಾರತದಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ ಎಂದು ಪ್ರಕಟಿಸಲು ಸಂತೋಷವಾಗುತ್ತದೆ. (ದಯವಿಟ್ಟು ಗಮನಿಸಿ: ನಮಗೆ ಈ ನಾಣ್ಯಗಳನ್ನು ಹೊರದೇಶಗಳಿಗೆ ಮಾರಾಟ ಮಾಡಲು ಅಥವಾ ಕಳುಹಿಸಲು ಅನುಮತಿಯಿರುವುದಿಲ್ಲ. ಏಕೆಂದರೆ, ಭಾರತ ಸರ್ಕಾರವು ಸ್ಮರಣಾರ್ಥ ನಾಣ್ಯಗಳನ್ನು ಭಾರತದ ಹೊರಗೆ ಮಾರಾಟ ಮಾಡಲು ಅಥವಾ ರಫ್ತು ಮಾಡಲು ನಿರ್ಬಂಧ ವಿಧಿಸಿದೆ.)

ನಾಣ್ಯದ ಬಗ್ಗೆ
ನಾಣ್ಯದ ಮೇಲ್ಭಾಗದಲ್ಲಿ ಭಾರತ ದೇಶದ ಲಾಂಛನವಿದ್ದು, “ಭಾರತ” ಎಂದು ಹಿಂದಿಯಲ್ಲೂ, “ಇಂಡಿಯಾ” ಎಂದು ಸುತ್ತಲೂ ಕೆತ್ತಲಾಗಿದೆ. ಕೆಳಗೆ, ನಾಣ್ಯದ ಮೌಲ್ಯವನ್ನು “₹ 125” ಎಂದೂ ಬರೆಯಲಾಗಿದೆ. ಇದು ಅವರ 125ನೇ ಜನ್ಮ ಮಹೋತ್ಸವಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ. ನಾಣ್ಯದ ಹಿಂಭಾಗದಲ್ಲಿ ಶ್ರೀ ಶ್ರೀ ಪರಮಹಂಸ ಯೋಗಾನಂದರ ಚಿರಪರಿಚಿತ ಛಾಯಾಚಿತ್ರವಿದೆ. ವೃತ್ತಾಕಾರವಾಗಿ “ಪರಮಹಂಸ ಯೋಗಾನಂದರ 125ನೇ ಜನ್ಮ ದಿನೋತ್ಸವ” ವೆಂದು ಇಂಗ್ಲೀಷ್‌ನಲ್ಲಿ ಮತ್ತು ಹಿಂದಿಯಲ್ಲಿ ಬರೆಯಲಾಗಿದೆ.
ಪ್ರಸ್ತುತಿ
ನಾಣ್ಯವನ್ನು ಸುಂದರವಾದ ಶೇಖರಣಾ ಡಬ್ಬದಲ್ಲಿ ಸಂಗ್ರಹಿಸಲಾಗಿದ್ದು, ಅದರಲ್ಲಿ ಪರಮಹಂಸ ಯೋಗಾನಂದರ ಜೀವನ ಹಾಗೂ ಅವರ ಕಾರ್ಯಗಳ ಬಗ್ಗೆ ಒಂದು ಸಂಕ್ಷಿಪ್ತ ವರದಿಯನ್ನು ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ನೀಡಲಾಗಿದೆ. ನಾಣ್ಯ ಸಂಗ್ರಹಣೆಯ ಹವ್ಯಾಸವಿರುವವರಿಗಾಗಿ, ನಾಣ್ಯದ ಖನಿಜ ಸಂಯೋಜನೆಯ ವಿವರವನ್ನು ನೀಡಲಾಗಿದೆ.
ಬೆಲೆ:
₹ 5,000 (ಪ್ಯಾಕೆಜಿಂಗ್ ಮತ್ತು ಸಾಗಾಣಿಕೆ ವೆಚ್ಚವನ್ನು ಒಳಗೊಂಡಿದೆ) ಭಾರತದಲ್ಲಿ ಮಾತ್ರ
ಸಾಗಾಣಿಕೆ:
ನಾಣ್ಯವನ್ನು ಭಾರತದಲ್ಲಿ ಮಾತ್ರ ಕಳುಹಿಸಲಾಗುತ್ತದೆ.
ಆದೇಶ ಸ್ವೀಕರಿಸಿದ 5-7 ದಿನಗಳ ಒಳಗೆ ರವಾನೆ ಮಾಡಲಾಗುತ್ತದೆ.
(ಕೋವಿಡ್-19 ಪರಿಸ್ಥಿತಿಯ ಕಾರಣ, ಕೆಲವು ಪ್ರದೇಶಗಳಿಗೆ ವಿತರಣೆ ಮಾಡುವುದರಲ್ಲಿ ವಿಳಂಬವಾಗಬಹುದು)
ಖರೀದಿಸುವುದು ಹೇಗೆ:
ಆನ್‌ಲೈನ್: ವೈಎಸ್‌ಎಸ್ ಪುಸ್ತಕ ಮಳಿಗೆಯಲ್ಲಿ ನೀವು ಆನ್‌ಲೈನ್‌ನಲ್ಲಿ ಖರೀದಿಸಬಹುದು
125ನೇ ಜನ್ಮ ಮಹೋತ್ಸವದ ಸುದ್ದಿ ಸಂಗ್ರಹ
- ಪರಮಹಂಸ ಯೋಗಾನಂದರ ಸ್ಮರಣಾರ್ಥವಾಗಿ ವಿತ್ತ ಮಂತ್ರಿಗಳು ನಾಣ್ಯವನ್ನು ಬಿಡುಗಡೆ ಮಾಡಿದರು
- ಭಾರತ ಸರ್ಕಾರದಿಂದ ಪರಮಹಂಸ ಯೋಗಾನಂದರ 125ನೇ ಜನ್ಮ ದಿನೋತ್ಸವದ ಸಂಸ್ಮರಣೆ
- ಪರಮಹಂಸ ಯೋಗಾನಂದರ 125ನೇ ಜನ್ಮ ದಿನೋತ್ಸವ – ಸ್ವಾಮಿ ಚಿದಾನಂದ ಗಿರಿಯವರಿಂದ ಒಂದು ಸಂದೇಶ
- ಪರಮಹಂಸ ಯೋಗಾನಂದರ 125ನೇ ಜನ್ಮ ದಿನೋತ್ಸವದ ಕಾರ್ಯಕ್ರಮಗಳು
- ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಪೋತ್ಸಾಹ ನೀಡಿದ ಸಾರ್ವಜನಿಕ ಭಾಷಣ