ಸೆಪ್ಟೆಂಬರ್ 1, 2025 ರಂದು, ವೈಎಸ್ಎಸ್ ಸನ್ಯಾಸಿಗಳಾದ ಸ್ವಾಮಿ ಈಶ್ವರಾನಂದ ಗಿರಿ ಮತ್ತು ಸ್ವಾಮಿ ಧೈರ್ಯಾನಂದ ಗಿರಿ ಅವರು ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಅವರನ್ನು ಡೆಹ್ರಾಡೂನ್‌ನಲ್ಲಿ ಭೇಟಿಯಾಗಿ, ರಾಜ್ಯದಲ್ಲಿ ನಡೆಯುತ್ತಿರುವ ಪ್ರವಾಹ ಪರಿಹಾರ ಕಾರ್ಯಗಳಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿಗಳ ಚೆಕ್ ನೀಡಿದರು.
ಮುಖ್ಯಮಂತ್ರಿಗಳು ವೈಎಸ್ಎಸ್ ಸನ್ಯಾಸಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಅವರಿಗೆ ಶಾಲು ಹೊದಿಸಿ ಗೌರವಿಸಿದರು. ಅವರೊಂದಿಗೆ ರಾಜ್ಯದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗಳ ವಿವರಗಳನ್ನು ಹಂಚಿಕೊಂಡರು. ಸಂಕಷ್ಟದಲ್ಲಿರುವವರಿಗೆ ಸಮಯೋಚಿತ ಬೆಂಬಲ ನೀಡಿದುದಕ್ಕಾಗಿ ವೈಎಸ್ಎಸ್‌ಗೆ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಸಭೆಯ ಸಮಯದಲ್ಲಿ, ಸ್ವಾಮಿ ಈಶ್ವರಾನಂದ ಅವರು ವೈಎಸ್ಎಸ್ ಸಂಸ್ಥಾಪಕರಾದ ಶ್ರೀ ಶ್ರೀ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಪರಂಪರೆಯ ಪುಸ್ತಕಗಳನ್ನು ಶ್ರೀ ಧಾಮಿ ಅವರಿಗೆ ನೀಡಿದರು.


ವೈಎಸ್ಎಸ್ ಸನ್ಯಾಸಿಗಳು ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಅವರನ್ನು ಭೇಟಿ ಮಾಡಿದರು
ಪರಮಹಂಸ ಯೋಗಾನಂದರ ಆದರ್ಶಗಳಿಗೆ ವೈಎಸ್ಎಸ್‌ನ ನಿರಂತರ ಬದ್ಧತೆಯನ್ನು ಈ ಸಮರ್ಪಣೆಯು ಪ್ರತಿಬಿಂಬಿಸುತ್ತದೆ: “ಇತರರಿಗೆ ಆಧ್ಯಾತ್ಮಿಕ, ಮಾನಸಿಕ ಮತ್ತು ಭೌತಿಕ ಸೇವೆ ಸಲ್ಲಿಸುವುದರಿಂದ, ನಿಮ್ಮ ಸ್ವಂತ ಅವಶ್ಯಕತೆಗಳು ಪೂರೈಕೆಯಾಗುವುದನ್ನು ನೀವು ಕಾಣುವಿರಿ. ಇತರರಿಗೆ ಸೇವೆ ಸಲ್ಲಿಸುವಾಗ ನೀವು ನಿಮ್ಮ ಸರ್ವಸ್ವವನ್ನು ಮರೆತಾಗ, ನೀವು ಬಯಸದೇ ಇದ್ದರೂ ಸಹ, ನಿಮ್ಮ ಸಂತೋಷದ ಪಾತ್ರೆ ತುಂಬುವುದು ನಿಮಗೆ ಕಂಡುಬರುವುದು.”
ಈ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟು, ಸಂಸ್ಥೆಯು ತನ್ನ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳ ಮೂಲಕ ಭಾರತದಾದ್ಯಂತ ಅಗತ್ಯವುಳ್ಳವರಿಗೆ ಸೇವೆ ಸಲ್ಲಿಸುತ್ತದೆ.
ವೈಎಸ್ಎಸ್‌ನ ಪರಿಹಾರ ಚಟುವಟಿಕೆಗಳಿಗೆ ಕೊಡುಗೆ ನೀಡಲು ನೀವು ಬಯಸಿದರೆ, ದಯವಿಟ್ಟು ಕೆಳಗೆ ಹಂಚಿಕೊಂಡಿರುವ ಕೊಂಡಿಗೆ ಭೇಟಿ ನೀಡಿ: