ಅಂತರಾಷ್ಟ್ರೀಯ ಯೋಗ ದಿನ

ಈಗ ಯೋಗದ ತತ್ವ ಮತ್ತು ವಿಜ್ಞಾನಕ್ಕಾಗಿ ಇಡೀ ವಿಶ್ವವು ಪ್ರತಿ ವರ್ಷವೂ ಗೌರವ ಸಮರ್ಪಿಸುತ್ತಿದೆ ಎಂಬುದನ್ನು ತಿಳಿದು ಪರಮಹಂಸ ಯೋಗಾನಂದರು ಅತ್ಯಂತ ಸಂತಸಗೊಳ್ಳುವರು. ಏಕೆಂದರೆ ಅವರ ಜೀವನವು ಎಲ್ಲಾ ಸತ್ಯಾನ್ವೇಷಕರಿಗೆ ಯೋಗಧ್ಯಾನದ ಪ್ರಾಚೀನ ತಂತ್ರಗಳನ್ನು ಪರಿಚಯಿಸಲು ಸಮರ್ಪಿತವಾಗಿತ್ತು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯೋಗದ ಬಗ್ಗೆ ಪ್ರಸ್ತುತ ವಿಶ್ವದ ಹೆಚ್ಚಾದ ಆಸಕ್ತಿಯು, ಪರಮಹಂಸ ಯೋಗಾನಂದರು ನೂರಾರು ವರ್ಷಗಳ ಹಿಂದೆ ಭಾರತದಿಂದ ಅಮೆರಿಕಾಗೆ ತೆಗೆದುಕೊಂಡು ಹೋದ ಅವರ ಬೋಧನೆಗಳ ಪರಿಣಾಮವೇ ಆಗಿರುತ್ತದೆ. “ಭಾರತದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ವಿಚಾರವು ಯುನೈಟೆಡ್ ನೇಶನ್ಸ್ ನಲ್ಲಿ ಅತಿ ಸುಲಭವಾಗಿ ಒಪ್ಪಿಗೆ ಪಡೆದಿದೆ ಎಂದರೆ ಅದಕ್ಕೆ ಅತಿ ಹೆಚ್ಚು ಗೌರವವು ಅಮೇರಿಕಾದಲ್ಲಿನ ಭಾರತದ ಮೊದಲ ಯೋಗ ಗುರು ಪರಮಹಂಸ ಯೋಗಾನಂದರಿಗೆ ಸಲ್ಲುತ್ತದೆ.” ಹೀಗೆ ಒಂದು ಆನ್ಲೈನ್ ಸಮಾಚಾರ ವರದಿ ಮಾಡಿರುತ್ತದೆ. “ಅವರು ಯುನೈಟೆಡ್ ಸ್ಟೇಟ್ಸ್ ನಲ್ಲಿ ಒಂದು ಶತಮಾನದ ಹಿಂದೆಯೇ ಯೋಗದ ಬಗ್ಗೆ ಅಡಿಪಾಯ ಹಾಕುವುದರಲ್ಲಿ ಮಹತ್ತಾದ ಪಾತ್ರವಹಿಸಿದ್ದಾರೆ.”

ಅತಿ ಹೆಚ್ಚು ಮನ್ನಣೆ ಪಡೆದಿರುವ ಭಗವದ್ಗೀತೆಯ ಅನುವಾದ ಮತ್ತು ವ್ಯಾಖ್ಯಾನ (ಗಾಡ್ ಟಾಕ್ಸ್ ವಿತ್ ಅರ್ಜುನ) ದಲ್ಲಿ ಪರಮಹಂಸ ಯೋಗಾನಂದರು ವಿವರಿಸುತ್ತಾರೆ: “ಯೋಗ ಎನ್ನುವ ಪದವು ಮನಸ್ಸು ಭಗವಂತನೊಡನೆ ಶ್ರುತಿಗೊಳ್ಳುವ ಪರಿಣಾಮದ ಪರಿಪೂರ್ಣ ಪ್ರಶಾಂತಿ ಅಥವಾ ಮಾನಸಿಕ ಸಮತೋಲನ ಎಂಬುದನ್ನು ಸೂಚಿಸುತ್ತದೆ. ಯೋಗವು ಧ್ಯಾನದ ಆಧ್ಯಾತ್ಮಿಕ ತಂತ್ರದಿಂದ ವ್ಯಕ್ತಿಯು ಭಗವತ್‌ಚೇತನದೊಂದಿಗೆ ಶ್ರುತಿಗೊಳ್ಳುವುದನ್ನು ಸೂಚಿಸುತ್ತದೆ. ಇನ್ನು ಹೆಚ್ಚಾಗಿ, ಯೋಗವು ದೈವಿಕ ತಾದಾತ್ಮ್ಯತೆಯೆಡೆಗೆ ಮಾರ್ಗದರ್ಶಿಸುವ ಯಾವುದೇ ಪ್ರಕ್ರಿಯೆಯನ್ನು ತಿಳಿಸುತ್ತದೆ.”

ಕಾರ್ಯಕ್ರಮಗಳ ಬಗ್ಗೆ

ಜೂನ್ 21 ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ, ಭಾರತೀಯ ಯೋಗದಾ ಸತ್ಸಂಗ ಸಂಸ್ಥೆಯು (ವೈಎಸ್ಎಸ್) ದೇಹ, ಮನಸ್ಸು ಮತ್ತು ಆತ್ಮದ ಯೋಗಕ್ಷೇಮಕ್ಕಾಗಿ ಆನ್‌ಲೈನ್ ಮತ್ತು ನೇರ ಕಾರ್ಯಕ್ರಮಗಳನ್ನು ಆಯೋಜಿಸಿತು.

ಆನ್‌ಲೈನ್ ಕಾರ್ಯಕ್ರಮಗಳ ಮುದ್ರಿಕೆಗಳು ಕೆಳಗೆ ಲಭ್ಯವಿವೆ.

ಎಲ್ಲಾ ಆನ್ಲೈನ್ ಕಾರ್ಯಕ್ರಮಗಳು

“ಕ್ರಿಯಾ ಯೋಗ ಧ್ಯಾನದ ಪರಿಚಯ”

(ಮಾರ್ಗದರ್ಶಿ ಧ್ಯಾನದ ಅವಧಿಯನ್ನು ಒಳಗೊಂಡಿದೆ)

ವೈಎಸ್ಎಸ್ ಸನ್ಯಾಸಿಗಳು ಇಂಗ್ಲಿಷ್ ಮತ್ತು ವಿವಿಧ ಭಾರತೀಯ ಭಾಷೆಗಳಲ್ಲಿ ಯೋಗ-ಧ್ಯಾನದ ಪರಿಚಯಾತ್ಮಕ ತರಬೇತಿಯನ್ನು ನೀಡಿದರು. ದೈನಂದಿನ ಜೀವನದ ಎಲ್ಲಾ ಸನ್ನಿವೇಶಗಳಲ್ಲಿ ಆಂತರಿಕ ಸಮತೋಲನ ಮತ್ತು ಶಾಂತತೆಯನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಕಂಡುಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಈ ತರಗತಿಗಳನ್ನು, ವಿಶೇಷವಾಗಿ ಸತ್ಯಾನ್ವೇಷಕರಿಗಾಗಿ ವಿನ್ಯಾಸಗೊಳಿಸಲಾಗಿತ್ತು. ಪರಮಹಂಸ ಯೋಗಾನಂದರ ಕ್ರಿಯಾ ಯೋಗದ ಬೋಧನೆಗಳ ಅಭ್ಯಾಸದ ಮೂಲಕ ಇದು ಆಂತರಿಕ ಆನಂದವನ್ನು ಜಾಗೃತಗೊಳಿಸುವುದಲ್ಲದೆ, ಅಂತಿಮವಾಗಿ ಆತ್ಮ ಸಾಕ್ಷಾತ್ಕಾರದೆಡೆಗೆ ಕೊಂಡೊಯ್ಯುತ್ತದೆ.

ಈ ಕಾರ್ಯಕ್ರಮಗಳು ಪರಮಹಂಸ ಯೋಗಾನಂದರು ಮತ್ತು ಅವರ ಬೋಧನೆಗಳ ಪರಿಚಯದೊಂದಿಗೆ ಪ್ರಾರಂಭವಾದವು. ಇದರ ನಂತರ ವೈಎಸ್ಎಸ್ ಸನ್ಯಾಸಿಗಳು ಮಾರ್ಗದರ್ಶಿತ ಧ್ಯಾನದ ಅವಧಿಯನ್ನು ನಡೆಸಿದರು. ಇದು ಸರಿಯಾದ ಭಂಗಿಯ ಅಭ್ಯಾಸ, ಪ್ರಾಥಮಿಕ ಉಸಿರಾಟದ ವ್ಯಾಯಾಮಗಳು, ದೃಢೀಕರಣ ಮತ್ತು ದೃಶ್ಯೀಕರಣವನ್ನು ಒಳಗೊಂಡಿತ್ತು.

ಇಂಗ್ಲೀಷ್‌ ತರಗತಿಗಳು

(ಸ್ವಾಮಿ ಲಲಿತಾನಂದ ಗಿರಿಯವರಿಂದ)

ಹಿಂದಿ ತರಗತಿಗಳು

(ಸ್ವಾಮಿ ಚೈತನ್ಯಾನಂದ ಗಿರಿಯವರಿಂದ)

ತಮಿಳು ತರಗತಿಗಳು

(ಸ್ವಾಮಿ ಶುದ್ಧಾನಂದ ಗಿರಿಯವರಿಂದ)

ತೆಲುಗು ತರಗತಿಗಳು

(ಸ್ವಾಮಿ ಕೇದಾರಾನಂದ ಗಿರಿಯವರಿಂದ)


ಪರಮಹಂಸ ಯೋಗಾನಂದರ ಬಗ್ಗೆ

Founder Paramahansa Yoganandaಪರಮಹಂಸ ಯೋಗಾನಂದರು ತಮ್ಮ ಸಮಗ್ರ ಬೋಧನೆಗಳಿಂದ ಲಕ್ಷಾಂತರ ಜನರ ಜೀವನದ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದಾರೆ. ವ್ಯಾಪಕವಾಗಿ “ಪಶ್ಚಿಮದಲ್ಲಿ ಯೋಗ ಪಿತಾಮಹ”ಎಂದು ಪರಿಗಣಿಸಲ್ಪಟ್ಟ ಪರಮಹಂಸಜಿಯವರು ವೈಜ್ಞಾನಿಕ ಪ್ರಾಣಾಯಾಮ (ಪ್ರಾಣಶಕ್ತಿ ನಿಯಂತ್ರಣ )ತಂತ್ರಗಳನ್ನು ಒಳಗೊಂಡ ಬೋಧನೆಗಳನ್ನು ವಿಶ್ವಾದ್ಯಂತ ದೊರೆಯುವಂತೆ ಮಾಡಿದವರಲ್ಲಿ ಮೊದಲಿಗರು. ಯೋಗದ ಅಂತಿಮ ಉದ್ದೇಶ ತನ್ನನ್ನು ತಾನು ಸರ್ವವ್ಯಾಪಿ, ಸರ್ವಶಕ್ತ ಆತ್ಮ ಎಂಬುದನ್ನು ಅರಿಯುವುದು. ಯೋಗಾನಂದಜಿ ಅವರ ಕಾರ್ಯವ್ಯಾಪ್ತಿ- ಯೋಗದಾ ಸತ್ಸಂಗ ಪಾಠ ಮಾಲಿಕೆ ಯಲ್ಲಿ ವಿಸ್ತೃತಗೊಂಡಿದ್ದು- ಇದು ಅನುಷ್ಠಾನಕ್ಕೆ ಆಧಾರವಾಗಿರುವ ತಳಹದಿಗೆ ಪ್ರಾಯೋಗಿಕ ವಿಧಾನವನ್ನು ನೀಡುತ್ತದೆ. ಮತ್ತು ಈ ವ್ಯವಸ್ಥೆಯು ಅತಿ ಹೆಚ್ಚಿನ ಸಂಖ್ಯೆಯ ಜನರಿಗೆ ಮೆಚ್ಚುಗೆಯಾಗುತ್ತಿದೆ: ಕೇವಲ ಹಠಯೋಗದ ಭೌತಿಕ ಲಾಭಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಅಷ್ಟೇ ಅಲ್ಲ , ಯಾರು ತಮ್ಮ ಮಾನಸಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಇಚ್ಛಿಸುವರೋ ಅಲ್ಲದೆ, ಅತ್ಯಂತ ಹೆಚ್ಚಾಗಿ ತಮ್ಮ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಹೆಚ್ಚಿಸುವ ಆಸಕ್ತರೆಲ್ಲರಿಗೂ ಸಹಾಯಕಾರಿ.

ಅವರ ಬೋಧನೆಗಳು ಮತ್ತು ಅವರು ಕಲಿಸಿದ ಧ್ಯಾನ ತಂತ್ರಗಳು ಈಗ ಇವುಗಳ ಮೂಲಕ ದೊರಕುತ್ತಿವೆ:

ಇತರರ ಹೇಳಿಕೆಗಳು


ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಬಗ್ಗೆ

Main Building of Ranchi Ashramಕಳೆದ ನೂರು ವರ್ಷಗಳಿಂದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈ ಎಸ್ ಎಸ್), ಅದರ ಸಂಸ್ಥಾಪಕರಾದ ಪಶ್ಚಿಮದ ಯೋಗ ಪಿತಾಮಹ ಎಂದು ಅಪಾರವಾಗಿ ಗೌರವಿಸಲ್ಪಡುವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಮತ್ತು ಜನೋಪಕಾರಿ ಕಾರ್ಯವನ್ನು ನಡೆಸಿಕೊಂಡು ಹೋಗಲು ಸಮರ್ಪಿಸಿಕೊಂಡಿದೆ.

ಪರಮಹಂಸ ಯೋಗಾನಂದರು ಯೋಗದಾ ಸತ್ಸಂಗ ಸೊಸೈಟಿಯನ್ನು 1917ರಲ್ಲಿ ಸಂಸ್ಥಾಪಿಸಿ, ಭಾರತದಲ್ಲಿ ಯುಗಯುಗಗಳ ಹಿಂದೆಯೇ ಜನ್ಮತಳೆದ ಪವಿತ್ರ ಅಧ್ಯಾತ್ಮ ವಿಜ್ಞಾನವಾದ ಕ್ರಿಯಾಯೋಗದ ವಿಶ್ವ ಬೋಧನೆಗಳು ಎಲ್ಲೆಡೆಗೆ ದೊರಕುವಂತೆ ಮಾಡಿದರು. ಈ ಪಂಥೀಯವಲ್ಲದ ಬೋಧನೆಗಳು, ಸಂಪೂರ್ಣ ತತ್ವ ಹಾಗೂ ಬದುಕುವ ಕಲೆಯು ಸರ್ವತೋಮುಖ ಸಫಲತೆ ಮತ್ತು ಯೋಗಕ್ಷೇಮಗಳನ್ನು ಸಾಕಾರಗೊಳಿಸುವ ಹಾಗೂ ಜೀವನದ ಅಂತಿಮ ಗುರಿಯಾದ ಆತ್ಮವು ಚೇತನ (ಭಗವಂತ)ದೊಂದಿಗೆ ತಾದಾತ್ಮ್ಯತೆಯನ್ನು ಹೊಂದಲು ಬೇಕಾದ ಧ್ಯಾನದ ವಿಧಾನಗಳನ್ನು ಒಳಗೊಂಡಿದೆ.

ಅತಿ ಹೆಚ್ಚು ಮನ್ನಣೆ ಪಡೆದಿರುವ ಭಗವದ್ಗೀತೆಯ ಅನುವಾದ ಮತ್ತು ವ್ಯಾಖ್ಯಾನ (ಗಾಡ್ ಟಾಕ್ಸ್ ವಿತ್ ಅರ್ಜುನ) ದಲ್ಲಿ ಪರಮಹಂಸ ಯೋಗಾನಂದರು ವಿವರಿಸುತ್ತಾರೆ: “ಯೋಗ ಎನ್ನುವ ಪದವು ಮನಸ್ಸು ಭಗವಂತನೊಡನೆ ಶ್ರುತಿಗೊಳ್ಳುವ ಪರಿಣಾಮದ ಪರಿಪೂರ್ಣ ಪ್ರಶಾಂತಿ ಅಥವಾ ಮಾನಸಿಕ ಸಮತೋಲನ ಎಂಬುದನ್ನು ಸೂಚಿಸುತ್ತದೆ. ಯೋಗವು ಧ್ಯಾನದ ಆಧ್ಯಾತ್ಮಿಕ ತಂತ್ರದಿಂದ ವ್ಯಕ್ತಿಯು ಭಗವತ್‌ಚೇತನದೊಂದಿಗೆ ಶ್ರುತಿಗೊಳ್ಳುವುದನ್ನು ಸೂಚಿಸುತ್ತದೆ. ಇನ್ನು ಹೆಚ್ಚಾಗಿ, ಯೋಗವು ದೈವಿಕ ತಾದಾತ್ಮ್ಯತೆಯೆಡೆಗೆ ಮಾರ್ಗದರ್ಶಿಸುವ ಯಾವುದೇ ಪ್ರಕ್ರಿಯೆಯನ್ನು ತಿಳಿಸುತ್ತದೆ.”


ನೂತನ ಅತಿಥಿ

ಪರಮಹಂಸ ಯೋಗಾನಂದರ ಬಗ್ಗೆಯೂ ಅವರ ಉಪದೇಶಗಳ ಬಗ್ಗೆಯೂ ತಿಳಿಯಲು ಕೆಳಗಿನ ಲಿಂಕ್ ಗಳನ್ನು ನೋಡಿಕೊಳ್ಳಿ:

ಇದನ್ನು ಹಂಚಿಕೊಳ್ಳಿ