ಪರಮಹಂಸ ಯೋಗಾನಂದರ ಜನ್ಮೋತ್ಸವದ
ಸ್ಮರಣಾರ್ಥ ಧ್ಯಾನ ಮತ್ತು ಪ್ರವಚನ

(ಇಂಗ್ಲಿಷಿನಲ್ಲಿ ಒಬ್ಬ ವೈಎಸ್‌ಎಸ್‌ ಸನ್ಯಾಸಿಯವರಿಂದ)

ಭಾನುವಾರ, ಜನವರಿ 5, 2025

ಬೆಳಿಗ್ಗೆ 6.30

– ಬೆಳಿಗ್ಗೆ 8.30

(ಅಧಿಕೃತ ಭಾರತೀಯ ಕಾಲಮಾನ)

ಕಾರ್ಯಕ್ರಮದ ಬಗ್ಗೆ

ನೈಜ ಪ್ರೇಮವು ದಿವ್ಯವಾದುದು ಮತ್ತು ದಿವ್ಯ ಪ್ರೇಮವು ಆನಂದಮಯವಾದುದು. ಒಂದು ಉತ್ಕಟ ಬಯಕೆಯಿಂದ ನೀವು ಭಗವಂತನನ್ನು ಅರಸುತ್ತಾ ಹೆಚ್ಚು ಹೆಚ್ಚಾಗಿ ಧ್ಯಾನ ಮಾಡಿದಾಗ, ಆ ಪ್ರೇಮವನ್ನು ನೀವು ನಿಮ್ಮ ಅಂತರಾಳದಲ್ಲಿ ಹೆಚ್ಚಾಗಿ ಅನುಭವಿಸುತ್ತೀರಿ. ಆಗ ನಿಮಗೆ ಅರಿವಾಗುತ್ತದೆ, ಪ್ರೇಮವೇ ಆನಂದ ಮತ್ತು ಆನಂದವೇ ಭಗವಂತ ಎಂದು.

— ಪರಮಹಂಸ ಯೋಗಾನಂದ

ಜನವರಿ 5, ಪರಮಹಂಸ ಯೋಗಾನಂದರ ಆವಿರ್ಭವ ದಿವಸ (ಜನ್ಮೋತ್ಸವ). ಅವರು 1893ರಲ್ಲಿ ಭಾರತದ ಗೋರಖ್‌ಪುರದಲ್ಲಿ ಭಾಗಬತಿ ಮತ್ತು ಜ್ಞಾನ ಪ್ರಭಾ ದಂಪತಿಗಳಿಗೆ ಜನಿಸಿರು ಮತ್ತು ಅವರಿಗೆ ಮುಕುಂದ ಲಾಲ್‌ ಘೋಷ್‌ ಎಂದು ಹೆಸರನ್ನಿಡಲಾಯಿತು. ಅವರ ಜನನದ ಮುಂಚೆಯೇ, ಭಾರತದ ಯೋಗ ಧ್ಯಾನದ ಪವಿತ್ರ ವಿಜ್ಞಾನವನ್ನು ಪಶ್ಚಿಮಕ್ಕೆ ತರುವಲ್ಲಿ ಅವರು ವಹಿಸುವ ಪ್ರಧಾನ ಪಾತ್ರದ ಬಗ್ಗೆ ಅವರ ಜ್ಞಾನೋದಯ ಹೊಂದಿದ ಗುರುಗಳ ಪರಂಪರೆ ಭವಿಷ್ಯ ಕಂಡಿತ್ತು.

ನಮ್ಮ ಪೂಜ್ಯ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಜನ್ಮೋತ್ಸವದ ಈ ಪವಿತ್ರ ಸಂದರ್ಭವನ್ನು, ಭಾನುವಾರ, ಜನವರಿ 5ರಂದು ಬೆಳಿಗ್ಗೆ 6.30ರಿಂದ 8.30ರ ವರೆಗೆ (ಭಾರತೀಯ ಕಾಲಮಾನ) ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ, ವೈಎಸ್‌ಎಸ್‌ ಸನ್ಯಾಸಿಯೊಬ್ಬರಿಂದ ಇಂಗ್ಲಿಷಿನಲ್ಲಿ ನಡೆಸಿಕೊಡುವ ವಿಶೇಷ ಆನ್‌ಲೈನ್‌ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ದಿವ್ಯಗೀತೆಗಳ ಗಾಯನ, ಪಠಣ ಮತ್ತು ಸ್ವಲ್ಪ ಕಾಲದ ಧ್ಯಾನದ ನಂತರದ ಪ್ರವಚನವೂ ಸೇರಿದ್ದವು.

ಪರಮಹಂಸಜಿಯವರ ಜನ್ಮೋತ್ಸವವನ್ನು, ಪ್ರೇಮವತಾರರಿಗೆ ಪ್ರೇಮ, ಭಕ್ತಿ ಮತ್ತು ಹೃದಯತುಂಬಿದ ಕೃತಜ್ಞತೆಗಳನ್ನು ಸಮರ್ಪಿಸುತ್ತಾ ದೇಶದಾದ್ಯಂತದ ಎಲ್ಲ ಆಶ್ರಮಗಳು, ಧ್ಯಾನ ಕೇಂದ್ರಗಳು ಮತ್ತು ಮಂಡಳಿಗಳಲ್ಲೂ ಆಚರಿಸಲಾಯಿತು.

ಈ ದಿನ, ಪೂಜ್ಯ ಪರಮಹಂಸಜಿಯವರು ಜಗತ್ತಿಗೆ ಕ್ರಿಯಾ ಯೋಗದ, ಬದುಕನ್ನು ಬದಲಾಯಿಸುವ ಧ್ಯಾನದ ಬೋಧನೆಗಳನ್ನು ನೀಡಿದ್ದಕ್ಕಾಗಿ, ಭಕ್ತಾದಿಗಳು ತಮ್ಮ ಆಧ್ಯಾತ್ಮಿಕ ಪಯಣಕ್ಕೆ ಅವರ ಮಾರ್ಗದರ್ಶನ ಹಾಗೂ ಅನುಗ್ರಹಗಳಿಗಾಗಿ ತಮ್ಮ ಕಾಣಿಕೆಯನ್ನು ನೀಡಿ ಕೃತಜ್ಞತೆಗಳನ್ನು ಅರ್ಪಿಸುತ್ತಾರೆ. ನೀವು ನಿಮ್ಮ ಪವಿತ್ರ ಕಾಣಿಕೆಯನ್ನು ನೀಡ ಬಯಸಿದಲ್ಲಿ ಕೆಳಗಿನ ಗುಂಡಿಯನ್ನು ಒತ್ತಿ.

ನೂತನ ಅತಿಥಿ

ಪರಮಹಂಸ ಯೋಗಾನಂದರ ಬಗ್ಗೆಯೂ ಅವರ ಉಪದೇಶಗಳ ಬಗ್ಗೆಯೂ ತಿಳಿಯಲು ಕೆಳಗಿನ ಲಿಂಕ್ ಗಳನ್ನು ನೋಡಿಕೊಳ್ಳಿ:

ಇದನ್ನು ಹಂಚಿಕೊಳ್ಳಿ