ವೈಎಸ್ಎಸ್ ಆಶ್ರಮಗಳಲ್ಲಿ 2026ರ ಎಸ್‌ಆರ್‌ಎಫ್ ವಿಶ್ವ
ಮಹಾಸಮ್ಮೇಳನದ ಪ್ರದರ್ಶನ
(ದಕ್ಷಿಣೇಶ್ವರ, ನೋಯ್ಡಾ, ಚೆನ್ನೈ, ದ್ವಾರಹಾಟ್)
ಸೋಮವಾರ, ಆಗಸ್ಟ್ 3, 2026 – ಭಾನುವಾರ, ಆಗಸ್ಟ್ 9, 2026 (ಅಧಿಕೃತ ಭಾರತೀಯ ಕಾಲಮಾನ)
ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಯ್ದಿರಿಸುವಿಕೆ ಈಗ ಆರಂಭವಾಗಿದೆ!
ದಯವಿಟ್ಟು ಗಮನಿಸಿ: ವೈಎಸ್ಎಸ್ ರಾಂಚಿ ಆಶ್ರಮದಲ್ಲಿ ಕಚ್ಚಾ ರಸ್ತೆಗಳ ಪುನರ್ನಿರ್ಮಾಣ, ಉದ್ಯಾನವನದ ಹಾದಿಗಳ ನವೀಕರಣ ಹಾಗೂ ಇತರ ಪುನರ್‌ನಿರ್ಮಾಣ ಕಾರ್ಯಗಳು ಸೇರಿದಂತೆ ಹಲವಾರು ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿರುವುದರಿಂದ, 2026ರ ಎಸ್‌ಆರ್‌ಎಫ್ ವಿಶ್ವ ಮಹಾಸಮ್ಮೇಳನವನ್ನು ರಾಂಚಿ ಆಶ್ರಮದಲ್ಲಿ ಪ್ರದರ್ಶಿಸಲಾಗುವುದಿಲ್ಲ.
ಕಾರ್ಯಕ್ರಮದ ಬಗ್ಗೆ
ನಾನು ಜನಸಮೂಹಕ್ಕಿಂತ ಒಬ್ಬ ಆತ್ಮವನ್ನೇ ಹೆಚ್ಚು ಇಷ್ಟಪಡುತ್ತೇನೆ; ಆದರೆ ಆತ್ಮಗಳ ಸಮೂಹವನ್ನು ಪ್ರೀತಿಸುತ್ತೇನೆ.
— ಶ್ರೀ ಶ್ರೀ ಪರಮಹಂಸ ಯೋಗಾನಂದರು
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ಆಶ್ರಮಗಳಲ್ಲಿ ವಿಶೇಷ ಆಧ್ಯಾತ್ಮಿಕ ಸಮಾಗಮವನ್ನು ಆಯೋಜಿಸಲಾಗಿದ್ದು, ಅಲ್ಲಿ 2026ರ ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ (ಎಸ್‌ಆರ್‌ಎಫ್) ವಿಶ್ವ ಮಹಾಸಮ್ಮೇಳನದ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುವುದು. ಈ ಅಪೂರ್ವ ಅವಕಾಶವು ವೈಎಸ್ಎಸ್ ಭಕ್ತರಿಗೆ ವೈಎಸ್ಎಸ್ ಆಶ್ರಮದ ಪವಿತ್ರ ವಾತಾವರಣದಲ್ಲಿ ತಂಗಿ, ಮಹಾಸಮ್ಮೇಳನದ ಆತ್ಮೋನ್ನತಿಯನ್ನು ಉಂಟುಮಾಡುವ ಆಧ್ಯಾತ್ಮಿಕ ಸ್ಪಂದನಗಳಲ್ಲಿ ಮಗ್ನರಾಗುವ ಅವಕಾಶವನ್ನು ಒದಗಿಸುತ್ತದೆ.
ಎಸ್‌ಆರ್‌ಎಫ್ ವಿಶ್ವ ಮಹಾಸಮ್ಮೇಳನವು ಒಂದು ವಾರ್ಷಿಕ ಕಾರ್ಯಕ್ರಮವಾಗಿದ್ದು, ಇದು ಪ್ರಪಂಚದಾದ್ಯಂತದ ಸತ್ಯಾನ್ವೇಷಿಗಳನ್ನು ಒಟ್ಟುಗೂಡಿಸಿ, ಪರಮಹಂಸ ಯೋಗಾನಂದರ ಕ್ರಿಯಾಯೋಗ ಬೋಧನೆಗಳಲ್ಲಿ ಆಳವಾಗಿ ಅಧ್ಯಯನ ಮಾಡಲು ಅವಕಾಶ ನೀಡುತ್ತದೆ. ಈ ಸಮ್ಮೇಳನವು ಒಂದು ವಾರದ ಆಧ್ಯಾತ್ಮಿಕ ಸಮೃದ್ಧಿಯಿಂದ ತುಂಬಿದ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ:
- ವೈಎಸ್ಎಸ್/ಎಸ್‌ಆರ್‌ಎಫ್ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರೊಂದಿಗೆ ವಿಶೇಷ ಧ್ಯಾನ ಮತ್ತು ಸತ್ಸಂಗ
- ಸಾಮೂಹಿಕ ಧ್ಯಾನಗಳು
- ಪರಮಹಂಸ ಯೋಗಾನಂದರ ಬದುಕುವುದು ಹೇಗೆ ಎಂಬ ಜ್ಞಾನದ ಕುರಿತು ಸನ್ಯಾಸಿಗಳು ನೀಡುವ ಸ್ಪೂರ್ತಿದಾಯಕ ಸತ್ಸಂಗಗಳು
- ವೈಎಸ್‌ಎಸ್/ಎಸ್‌ಆರ್‌ಎಫ್ ಧ್ಯಾನ ತಂತ್ರಗಳ ಕುರಿತು ತರಗತಿಗಳು — ಚೈತನ್ಯದಾಯಕ ವ್ಯಾಯಾಮಗಳು, ಹಾಂಗ್- ಸಾ ಮತ್ತು ಓಂ ತಂತ್ರಗಳ ಬಗ್ಗೆ ಆಳವಾದ ಬೋಧನೆ
- ಆತ್ಮದ ಉದ್ಧಾರಕ್ಕಾಗಿ ಮತ್ತು ಭಕ್ತಿಯನ್ನು ಗಾಢವಾಗಿಸಲು ಕೀರ್ತನೆಗಳು ಹಾಗೂ ಭಕ್ತಿಪೂರ್ಣ ಗಾಯನದ ಅವಧಿಗಳು
- ವೀಡಿಯೊ ಪ್ರಸ್ತುತಿಗಳು
ನೋಯ್ಡಾ, ದಕ್ಷಿಣೇಶ್ವರ, ಚೆನ್ನೈ ಮತ್ತು ದ್ವಾರಹಾಟ್‌ನಲ್ಲಿರುವ ವೈಎಸ್ಎಸ್ ಆಶ್ರಮಗಳಲ್ಲಿ ಈ ಪ್ರದರ್ಶನ ಕಾರ್ಯಕ್ರಮವನ್ನು ಏಕಕಾಲದಲ್ಲಿ ಆಯೋಜಿಸಲಾಗುವುದು. ಇದು ವೈಎಸ್ಎಸ್ ಭಕ್ತರಿಗೆ ಆಧ್ಯಾತ್ಮಿಕವಾಗಿ ನವಚೈತನ್ಯವನ್ನು ಪಡೆದುಕೊಳ್ಳಲು, ಗುರುದೇವರ ಬೋಧನೆಗಳನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಹಾಗೂ ಧ್ಯಾನ ತಂತ್ರಗಳ ಅಭ್ಯಾಸವನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳಲು ಅಪೂರ್ವ ಅವಕಾಶವನ್ನು ಒದಗಿಸುತ್ತದೆ. ವೈಎಸ್ಎಸ್ ಸನ್ಯಾಸಿಗಳು ಬೆಳಿಗ್ಗೆ ಮತ್ತು ಸಂಜೆ ಸಾಮೂಹಿಕ ಧ್ಯಾನಗಳನ್ನು ನಡೆಸುವುದರ ಜೊತೆಗೆ, ವಿನಂತಿಯ ಮೇರೆಗೆ ಭಕ್ತರಿಗೆ ಆಧ್ಯಾತ್ಮಿಕ ಸಲಹೆ ಹಾಗೂ ಮಾರ್ಗದರ್ಶನವನ್ನೂ ನೀಡುವರು.
ನಿಮ್ಮ ಆಧ್ಯಾತ್ಮಿಕ ಉತ್ಸಾಹವನ್ನು ಪುನರುಜ್ಜೀವನಗೊಳಿಸಲು ಮಾತ್ರವಲ್ಲದೆ, ಇತರ ಶ್ರದ್ಧಾವಂತ ಸಾಧಕರೊಂದಿಗೆ ಧ್ಯಾನ ಮಾಡುವುದರಿಂದ ಮತ್ತು ಅವರ ಸಹವಾಸದಲ್ಲಿರುವುದರಿಂದ ಬರುವ ಆನಂದ ಮತ್ತು ಆಶೀರ್ವಾದಗಳನ್ನು ಅನುಭವಿಸಲು ಈ ವಿಶಿಷ್ಟ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಪರಮಹಂಸ ಯೋಗಾನಂದರ ಜೀವನ ಪರಿವರ್ತಕ ಬೋಧನೆಗಳಲ್ಲಿ ಮತ್ತು ದೈವೀ ಸಾನಿಧ್ಯದ ಸ್ಪಷ್ಟ ಅನುಭವದಲ್ಲಿ ಆಳವಾಗಿ ಮುಳುಗಲು ನಾವು ಒಟ್ಟಾಗಿ ಸೇರುತ್ತೇವೆ — ಇಂತಹ ಕಾರ್ಯಕ್ರಮದ ಪ್ರಮುಖ ಅಂಶವಾಗಿರುವ ಈ ಆಶೀರ್ವಾದಗಳನ್ನು ಪಡೆಯಲು ನಮ್ಮೊಂದಿಗೆ ಭಾಗವಹಿಸಿ.
ದಯವಿಟ್ಟು ಗಮನಿಸಿ:
- ಈ ಕಾರ್ಯಕ್ರಮಕ್ಕೆ ವೈಎಸ್ಎಸ್/ಎಸ್‌ಆರ್‌ಎಫ್ ಭಕ್ತರಿಗೆ ಮಾತ್ರ ಪ್ರವೇಶವಿರುತ್ತದೆ.
- 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿರುವುದಿಲ್ಲ.
- ಕಾರ್ಯಕ್ರಮದ ವೇಳಾಪಟ್ಟಿ ತೀವ್ರವಾಗಿರುವುದರಿಂದ, ದುರ್ಬಲ ಆರೋಗ್ಯ ಹೊಂದಿರುವ ಅಥವಾ ವಿಶೇಷ ಅಗತ್ಯತೆಗಳಿರುವ ಭಕ್ತರು ಅರ್ಜಿ ಸಲ್ಲಿಸದಿರಲು ಸೂಚಿಸಲಾಗಿದೆ.
- ಮುಂಗಡ ಕಾಯ್ದಿರಿಸುವಿಕೆಯ ವಿನಂತಿಗಳನ್ನು ಮೊದಲು ಬಂದವರಿಗೆ ಮೊದಲು ಅವಕಾಶ ಎಂಬ ಆಧಾರದ ಮೇಲೆ ದೃಢೀಕರಿಸಲಾಗುವುದು.
ಕಾರ್ಯಕ್ರಮಗಳ ವೇಳಾಪಟ್ಟಿ
- ಪ್ರತಿ ಸ್ಥಳದಲ್ಲಿಯೂ ಕಾರ್ಯಕ್ರಮವು ಆಗಸ್ಟ್ 3, ಸೋಮವಾರದಂದು ಬೆಳಿಗ್ಗೆ ಪ್ರಾರಂಭವಾಗಿ, ಆಗಸ್ಟ್ 9, ಭಾನುವಾರ ಮಧ್ಯಾಹ್ನಕ್ಕೆ ಮುಕ್ತಾಯಗೊಳ್ಳುತ್ತದೆ.
- ಮುಂದಿನ ವಾರಗಳಲ್ಲಿ ವಿವರವಾದ ವೇಳಾಪಟ್ಟಿ ಲಭ್ಯವಾಗಲಿದೆ. ಕಾರ್ಯಕ್ರಮ ಸಮೀಪಿಸಿದಂತೆ ಈ ವಿಭಾಗವನ್ನು ದಯವಿಟ್ಟು ಪರಿಶೀಲಿಸಿ.
ಹೆಚ್ಚಿನ ಮಾಹಿತಿ
ವಾಸ್ತವ್ಯದ ಅವಧಿ:
- ಎಲ್ಲಾ ಭಕ್ತಾದಿಗಳಿಗೆ ಮೂರು ಹೆಚ್ಚುವರಿ ದಿನಗಳು ತಂಗಲು ಅವಕಾಶವಿರುತ್ತದೆ – ಅವರು ಕಾರ್ಯಕ್ರಮಕ್ಕೆ ಎರಡು ದಿನ ಮುಂಚಿತವಾಗಿ ಬರಬಹುದು, ಮತ್ತು ಕಾರ್ಯಕ್ರಮ ಮುಗಿದ ನಂತರ ಒಂದು ಹೆಚ್ಚುವರಿ ದಿನ ಉಳಿದುಕೊಳ್ಳಬಹುದು.
- ಗುರೂಜಿಯವರ ಆಶ್ರಮದಲ್ಲಿ ನಿರಂತರವಾಗಿ ಹತ್ತು ದಿನಗಳನ್ನು ಕಳೆಯುವುದರಿಂದ, ಭಕ್ತರು ವಿಶ್ರಾಂತಿ, ಮನಸ್ಸಿನ ನೆಮ್ಮದಿ ಮತ್ತು ಆಧ್ಯಾತ್ಮಿಕ ಪುನಶ್ಚೇತನಕ್ಕಾಗಿ ಸಾಕಷ್ಟು ಸಮಯವನ್ನು ಪಡೆಯುತ್ತಾರೆ. ನಿಮ್ಮ ಆಗಮನ ಮತ್ತು ನಿರ್ಗಮನವನ್ನು ಅದಕ್ಕೆ ಅನುಗುಣವಾಗಿ ಯೋಜಿಸಬಹುದು.
ವಸತಿ:
- ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಸತಿಯ ವ್ಯವಸ್ಥೆ ಇರುತ್ತದೆ. ಕುಟುಂಬ ಸದಸ್ಯರು ದಯವಿಟ್ಟು ಇದಕ್ಕೆ ಅನುಗುಣವಾಗಿ ತಮ್ಮ ಯೋಜನೆಗಳನ್ನು ರೂಪಿಸಿ ಹಾಗೂ ಅಗತ್ಯ ಸಾಮಾನುಗಳನ್ನು ಸಿದ್ಧಪಡಿಸಿಕೊಳ್ಳಿ.
- ವಸತಿ ಅಥವಾ ಆಹಾರಕ್ಕೆ ವಿಶೇಷ ವ್ಯವಸ್ಥೆಗಳ ಅಗತ್ಯವಿರುವ ಭಕ್ತರು ದಯವಿಟ್ಟು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು.
ಮೊದಲು ಬಂದವರಿಗೆ ಮೊದಲು ಅವಕಾಶ:
- ನಾಲ್ಕೂ ಸ್ಥಳಗಳಲ್ಲಿ ವಸತಿ ಸೌಕರ್ಯಗಳು ಸೀಮಿತವಾಗಿರುವುದರಿಂದ, ಮೊದಲು ಬಂದವರಿಗೆ ಆದ್ಯತೆಯ ಮೇಲೆ ಕಾಯ್ದಿರಿಸುವಿಕೆಗಳನ್ನು ಖಚಿತಪಡಿಸಲಾಗುವುದು.
- ನಿಮ್ಮ ಕಾಯ್ದಿರಿಸುವಿಕೆ ದೃಢಪಟ್ಟಿದ್ದರೂ ಸಹ ನೀವು ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ಕಾಯ್ದಿರಿಸುವಿಕೆ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಅಥವಾ ಮತ್ತೊಬ್ಬರಿಗೆ ವರ್ಗಾಯಿಸಲಾಗುವುದಿಲ್ಲ.
ಹಣ ರವಾನೆಗಳು:
- ನೋಂದಣಿ ಶುಲ್ಕ ಪ್ರತಿ ವ್ಯಕ್ತಿಗೆ ₹ 2,500. ಈ ಶುಲ್ಕವು ವಸತಿ ಮತ್ತು ಊಟದ ಶುಲ್ಕಗಳನ್ನು ಒಳಗೊಂಡಿದೆ. ಈ ಶುಲ್ಕವನ್ನು ಪಾವತಿಸಲು ನಿಮಗೆ ಕಷ್ಟವಾಗಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
- ಊಟ ಅಥವಾ ವಸತಿ ಅಗತ್ಯವಿಲ್ಲದ ಭಕ್ತರು ಶುಲ್ಕವಿಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿಗಳು ಈಗ ತೆರೆದಿವೆ!
ಭಕ್ತರು ವೈಎಸ್ಎಸ್ ದಿವೋಟೀ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ, ಅಥವಾ ವೈಎಸ್ಎಸ್ ಸಹಾಯವಾಣಿಗೆ ಕರೆ ಮಾಡುವ ಮೂಲಕ, ಅಥವಾ ಪ್ರದರ್ಶನ ಕಾರ್ಯಕ್ರಮ ನಡೆಯುವ ಆಶ್ರಮಗಳಲ್ಲಿ ಯಾವುದಾದರೂ ಒಂದಕ್ಕೆ ಭೇಟಿ ನೀಡುವ ಮೂಲಕ ಮುಂಗಡ ಕಾಯ್ದಿರಿಸುವಿಕೆಯನ್ನು ಮಾಡಬಹುದು.
ಕಾಯ್ದಿರಿಸುವಿಕೆ ಪ್ರಕ್ರಿಯೆಗೆ ಸಂಬಂಧಿಸಿದ ವಿವರವಾದ ಮಾಹಿತಿಯು ಈ ಕೆಳಗಿನಂತಿದೆ:
ದಿವೋಟೀ ಪೋರ್ಟಲ್ ಮೂಲಕ ಆನ್‌ಲೈನ್ ಕಾಯ್ದಿರಿಸುವಿಕೆ:
ತ್ವರಿತ ಮತ್ತು ಸುಲಭ ಕಾಯ್ದಿರಿಸುವಿಕೆಗಾಗಿ, ಭಕ್ತರು ಆನ್‌ಲೈನ್ ದಿವೋಟೀ ಪೋರ್ಟಲ್ ಮೂಲಕ ತಮ್ಮ ಕಾಯ್ದಿರಿಸುವಿಕೆ ವಿನಂತಿಯನ್ನು ಸಲ್ಲಿಸಬಹುದು.
ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ಕಾಯ್ದಿರಿಸುವಿಕೆ:
ದಯವಿಟ್ಟು (0651 6655 555) ಗೆ ಕರೆ ಮಾಡಿ ಅಥವಾ [email protected] ಗೆ ಇಮೇಲ್ ಮಾಡಿ ಮತ್ತು ಈ ಕೆಳಗಿನ ವಿವರಗಳನ್ನು ಒದಗಿಸಿ:
- ನಿಮ್ಮ ಪೂರ್ಣ ಹೆಸರು
- ವಯಸ್ಸು
- ವಿಳಾಸ
- ಇಮೇಲ್ ಮತ್ತು ದೂರವಾಣಿ ಸಂಖ್ಯೆ
- ವೈಎಸ್ಎಸ್ ಪಾಠಗಳ ನೋಂದಣಿ ಸಂಖ್ಯೆ (ಅಥವಾ ಎಸ್‌ಆರ್‌ಎಫ್ ಸದಸ್ಯತ್ವ ಸಂಖ್ಯೆ)
- ತಾವು ಆಗಮಿಸುವ ಮತ್ತು ನಿರ್ಗಮಿಸಲು ಉದ್ದೇಶಿಸಿರುವ ದಿನಾಂಕಗಳು
ನಿಮ್ಮ ಮೊಬೈಲ್ ಅಥವಾ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗುವ ಪಾವತಿ ಲಿಂಕ್ ಮೂಲಕ ನೀವು ಹಣವನ್ನು ಪಾವತಿಸಬಹುದು.
ದಯವಿಟ್ಟು ಗಮನಿಸಿ:
- ಕಾಯ್ದಿರಿಸುವಿಕೆ ವಿನಂತಿಗಳು ಗರಿಷ್ಠ ಮಿತಿಯನ್ನು ತಲುಪಿದರೆ, ನಿರ್ದಿಷ್ಟ ಸ್ಥಳದ ಕಾಯ್ದಿರಿಸುವಿಕೆಯ ಅವಕಾಶ ಮೊದಲೇ ಮುಕ್ತಾಯಗೊಳ್ಳಬಹುದು.
- ಯಶಸ್ವಿ ಕಾಯ್ದಿರಿಸುವಿಕೆಯ ನಂತರ, ನಿಮಗೆ ಇ-ಮೇಲ್, ವಾಟ್ಸಾಪ್ ಅಥವಾ ಎಸ್‌ಎಂಎಸ್ ಮೂಲಕ ದೃಢೀಕರಣ ಸಂದೇಶವನ್ನು ಕಳುಹಿಸಲಾಗುತ್ತದೆ. ಒಂದು ವೇಳೆ ಅಂತಹ ದೃಢೀಕರಣ ಸಂದೇಶವು ನಿಮಗೆ ದೊರೆಯದಿದ್ದರೆ, ದಯವಿಟ್ಟು ವೈಎಸ್ಎಸ್ ಸಹಾಯವಾಣಿಯನ್ನು (0651 6655 555) ಸಂಪರ್ಕಿಸಿ ಅಥವಾ ([email protected]) ಗೆ ಇ-ಮೇಲ್ ಕಳುಹಿಸಿ.
- ಈ ಕಾರ್ಯಕ್ರಮದಲ್ಲಿ ವೈಎಸ್‌ಎಸ್/ಎಸ್‌ಆರ್‌ಎಫ್ ಭಕ್ತರು ಮಾತ್ರ ಭಾಗವಹಿಸಬಹುದು.
- 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿರುವುದಿಲ್ಲ.
ಪ್ರತಿಬಾರಿಯಂತೆ, ಭಕ್ತ-ಸ್ವಯಂಸೇವಕರ ಸೇವೆಯು ಕಾಯ್ದಿರಿಸುವಿಕೆ ವಿಭಾಗ, ವಸತಿ, ಧ್ವನಿ-ದೃಶ್ಯ ವ್ಯವಸ್ಥೆ, ಭೋಜನ, ನೈರ್ಮಲ್ಯ, ಮಾರ್ಗದರ್ಶನ ಹಾಗೂ ಇತರ ವಿಭಾಗಗಳಲ್ಲಿ ಅಗತ್ಯವಿರುತ್ತದೆ. ಇವುಗಳಲ್ಲಿ ಕೆಲವು ವಿಭಾಗಗಳಿಗೆ ಕಾರ್ಯಕ್ರಮ ಪ್ರಾರಂಭವಾಗುವ ಒಂದು ಅಥವಾ ಎರಡು ದಿನಗಳ ಮುಂಚೆಯೇ ಕೆಲವು ಸ್ವಯಂಸೇವಕರ ಅಗತ್ಯವಿರುತ್ತದೆ. ನೀವು ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಇಚ್ಛಿಸಿದರೆ, ದಯವಿಟ್ಟು ಕಾಯ್ದಿರಿಸುವಿಕೆ ಅರ್ಜಿಯಲ್ಲಿ ಅದನ್ನು ಸೂಚಿಸಿ.
ಕಾಯ್ದಿರಿಸುವಿಕೆ ಮತ್ತು ವಿಚಾರಣೆಗಳಿಗಾಗಿ ಸಂಪರ್ಕ ವಿವರಗಳು
ಯೋಗದಾ ಸತ್ಸಂಗ ಮಠ — ದಕ್ಷಿಣೇಶ್ವರ
21, ಯು. ಎನ್. ಮುಖರ್ಜಿ ರಸ್ತೆ, ದಕ್ಷಿಣೇಶ್ವರ
ಕೋಲ್ಕತ್ತಾ, ಪಶ್ಚಿಮ ಬಂಗಾಳ – 700 076
ದೂರವಾಣಿ: +91 8420873743, +91 9073581656, +91 7439825373
ಇಮೇಲ್: [email protected]
ಯೋಗದಾ ಸತ್ಸಂಗ ಶಾಖಾ ಆಶ್ರಮ — ನೋಯ್ಡಾ
ಪರಮಹಂಸ ಯೋಗಾನಂದ ಮಾರ್ಗ, ಬಿ–4, ಸೆಕ್ಟರ್ 62
ಗೌತಮ ಬುದ್ಧ ನಗರ, ಉತ್ತರ ಪ್ರದೇಶ – 201 307
ದೂರವಾಣಿ: +91 9899811808, +91 9899811909
ಇಮೇಲ್: [email protected]
ಯೋಗದಾ ಸತ್ಸಂಗ ಶಾಖಾ ಆಶ್ರಮ — ಚೆನ್ನೈ
ಮನ್ನೂರ್ ಗ್ರಾಮ, ಪಿ. ಓ. ವಲ್ಲಾರಪುರಂ
ಶ್ರೀಪೆರಂಬದೂರು, ಕಾಂಚಿಪುರಂ, ತಮಿಳುನಾಡು – 602 105
ದೂರವಾಣಿ: +91 7550012444, +91 7305861965
ಇಮೇಲ್: [email protected]
ಯೋಗದಾ ಸತ್ಸಂಗ ಶಾಖಾ ಆಶ್ರಮ — ದ್ವಾರಹಟ್
ದ್ವಾರಹಟ್
ಅಲ್ಮೋರಾ, ಉತ್ತರಾಖಂಡ – 263 653
ದೂರವಾಣಿ: +91 9756082167, +91 9411708541
ಇಮೇಲ್: [email protected]
ಪರ್ಯಾಯವಾಗಿ, ಕೆಳಗೆ ಹಂಚಿಕೊಂಡಿರುವ ವಿವರಗಳನ್ನು ಬಳಸಿಕೊಂಡು ನೀವು ವೈಎಸ್ಎಸ್ ಸಹಾಯವಾಣಿಯನ್ನು ಸಹ ಸಂಪರ್ಕಿಸಬಹುದು:
ದೂರವಾಣಿ: (0651) 6655 555
ಇಮೇಲ್: [email protected]

















