ಕ್ರಿಯಾ ಯೋಗದ 150ನೆಯ ವಾರ್ಷಿಕೋತ್ಸವ

2011ನೆಯ ಸಂವತ್ಸರವು ಸನಾತನ ಕ್ರಿಯಾಯೋಗ ವಿಜ್ಞಾನವನ್ನು ಆಧುನಿಕ ಜಗತ್ತಿಗೆ ಮರು ಪರಿಚಯಿಸಿದ 150ನೇ ವರ್ಷವೆಂದು ಗುರುತಿಸಲ್ಪಟ್ಟಿದೆ. 1861 ರಲ್ಲಿ ಲಾಹಿರಿ ಮಹಾಶಯರು ಸಾವಿಲ್ಲದ ಗುರು ಮಹಾವತಾರ ಬಾಬಾಜಿಯವರನ್ನು ಹಿಮಾಲಯದಲ್ಲಿ ಭೇಟಿ ಮಾಡಿದರು ಮತ್ತು ಪವಿತ್ರ ಆತ್ಮ-ವಿಜ್ಞಾನದ ದೀಕ್ಷೆ ಪಡೆದರು. ಪರಮಹಂಸ ಯೋಗಾನಂದರು ಹೀಗೆ ಬರೆದಿರುವರು: “ಈ ಮಂಗಳಕರ ಪ್ರಸಂಗವು ಕೇವಲ ಲಾಹಿರಿ ಮಹಾಶಯರೊಬ್ಬರಿಗೆ ಮಾತ್ರ ಉಂಟಾಗಿಲ್ಲ; ಇಡೀ ಮಾನವ ಜನಾಂಗಕ್ಕೆ ಅದೊಂದು ಶುಭ ಘಳಿಗೆಯಾಗಿತ್ತು. ಕಳೆದು ಹೋಗಿದ್ದ ಅಥವಾ ಬಹಳ ಹಿಂದೆಯೇ ಮರೆಯಾಗಿದ್ದ ಅತ್ಯುನ್ನತ ಯೋಗದ ಕಲೆಯನ್ನು ಮತ್ತೆ ಬೆಳಕಿಗೆ ತರಲಾಯಿತು.”

ಈ ವಾರ್ಷಿಕೋತ್ಸವವನ್ನು ಗೌರವಿಸಲು, ಮತ್ತು ಇನ್ನು ಮುಂದೆಯೂ ಆತ್ಮ ಸಾಕ್ಷಾತ್ಕಾರದ ಈ ಕ್ರಿಯಾ ತಂತ್ರವನ್ನು ಜಗತ್ತಿನಾದ್ಯಂತ ಸತ್ಯಾನ್ವೇಷಕರಿಗೆ ಹರಡಲು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ವು 2011ರಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿತು:

  • ಯೋಗದ ಸತ್ಸಂಗ ನಿಯತಕಾಲಿಕೆಯ ಒಂದು ಸಂಚಿಕೆಯನ್ನೇ ಕ್ರಿಯಾ ಯೋಗದ ವಿಜ್ಞಾನಕ್ಕಾಗಿ ಮೀಸಲಿಡಲಾಯಿತು.
kriyapage
  • ವೈಎಸ್‌ಎಸ್ ವೆಬ್ ಸೈಟ್ ನಲ್ಲಿ ಒಂದು ಹೊಸ ವಿಭಾಗವನ್ನು ಸೇರಿಸಿ, ಆತ್ಮ ಸಾಕ್ಷಾತ್ಕಾರದ ಈ ಪವಿತ್ರ ತಂತ್ರದ ಇತಿಹಾಸ ಮತ್ತು ಲಾಭಗಳನ್ನು ಎತ್ತಿ ಹಿಡಿಯುವಂತೆ ಮಾಡಲಾಯಿತು.
  • ವೈಎಸ್ಎಸ್ ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ಪರಮಹಂಸ ಯೋಗಾನಂದರ ಕ್ರಿಯಾಯೋಗದ ಮೇಲಿನ ಬರವಣಿಗೆಗಳ ಆಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಆ ಸಮಯದಲ್ಲಿ ವೈಎಸ್ಎಸ್/ಎಸ್ಆರ್‌ಎಫ್ ಅಧ್ಯಕ್ಷೆ ಶ್ರೀ ಮೃಣಾಲಿನಿ ಮಾತಾರವರ ಒಂದು ವಿಶೇಷ ಸಂದೇಶವನ್ನು ಭಕ್ತರಲ್ಲಿ ಪಸರಿಸಲಾಯಿತು.
  • 2011ರ ಶರದ್ ಸಂಗಮದ, ಎಲ್ಲಾ ತರಗತಿಗಳಲ್ಲಿ, ಕ್ರಿಯಾ ವಿಜ್ಞಾನದ ಪ್ರಮುಖ ಅಂಶಗಳ ಮೇಲೆ ಒಂದು ವಿಶೇಷ ಗಮನವನ್ನು ಕೇಂದ್ರೀಕರಿಸಲಾಗಿತ್ತು.
kriyamagzine
  • ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್)ವು ವಿಶೇಷ ಕಾರ್ಯಕ್ರಮಗಳನ್ನು ತಮ್ಮ ನಿಯತಕಾಲಿಕೆಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ವಿಶೇಷ ವಿಷಯವಾಗಿ ಚಿತ್ರಿಸಿದವು. ಆ ವಿಶೇಷ ಕಾರ್ಯಕ್ರಮಗಳಲ್ಲಿ ಪಾದಯಾತ್ರೆಗಳು, ಅಥವಾ ಶೋಭಾ ಯಾತ್ರೆಗಳು, 1861ರಲ್ಲಿನ – ರಾಣಿಖೇತ್‌ನಿಂದ ಬಾಬಾಜಿಯವರ ಗುಹೆಗೆ — ಲಾಹಿರಿ ಮಹಾಶಯರು ತಮ್ಮ ಗುರು ಬಾಬಾಜಿಯವರಿಂದ ಕ್ರಿಯಾ ಯೋಗ ದೀಕ್ಷೆ ಪಡೆದ ಜಾಗಕ್ಕೆ, ಅವರು ಮಾಡಿದ ಪಯಣವನ್ನು ಮರು ಸೃಷ್ಟಿಸಲಾಯಿತು. ವೈಎಸ್ಎಸ್ ಸದಸ್ಯರ ಮತ್ತು ವೈಎಸ್ಎಸ್ ಸನ್ಯಾಸಿಗಳ ಎರಡು ತಂಡಗಳು ವಿವಿಧ ಸಂದರ್ಭಗಳಲ್ಲಿ, ಹಿಮಾಲಯದ ತಪ್ಪಲಿನಲ್ಲಿ 11-ಗಂಟೆಗಳ ಚಾರಣದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಭಾಗವಹಿಸಿದ ಭಕ್ತನೊಬ್ಬನು ಹೀಗೆ ಬರೆದಿರುವನು:

“ನಮ್ಮ ಪಯಣವು ಪ್ರಕಾಶಮಯ ಮುಂಜಾವಿನಲ್ಲಿ ಬೆಳಗ್ಗೆ 6:00 ಗಂಟೆಗೆ ಪ್ರಾರಂಭವಾಯಿತು. ಅದೊಂದು ಸುಂದರ, ಉಜ್ವಲ ಬೆಳಕಾಗಿತ್ತು ಮತ್ತು ಆಹ್ಲಾದಕರ ವಾತಾವರಣವು ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿತು. ಜೊತೆಗೆ ಸೇರಿದ ಲಾಭಾಂಶವೆಂದರೆ, ಸ್ವಾಮಿ ನಿರ್ವಾಣಾನಂದ, ಬ್ರಹ್ಮಚಾರಿಗಳಾದ ಸದಾನಂದ ಮತ್ತು ಅಚ್ಯುತಾನಂದ, ಹಾಗೂ ಪ್ರವೇಶಾರ್ಥಿ ದಿವ್ಯಾಂಶು, ಇವರುಗಳು ನಮಗೆ ಮಾರ್ಗದ ಉದ್ದಕ್ಕೂ ವಿವೇಕದ ನುಡಿಮುತ್ತುಗಳನ್ನು ನೀಡಿ ಪ್ರೋತ್ಸಾಹಿಸುತ್ತ ನಡೆದದ್ದು. ನಾವು ಸಣ್ಣ ನಗರಗಳನ್ನು ಮತ್ತು ಹಳ್ಳಿಗಳನ್ನು ಹಾದು ಹೋಗುತ್ತಿರುವಾಗ, ಸ್ಥಳೀಯರು ನಮ್ಮನ್ನು ಸ್ವಾಗತಿಸಿದರು, ಮತ್ತು ಹುರಿದುಂಬಿಸಿದರು. 6 ಗಂಟೆಗಳಲ್ಲಿ ನಾವು ಬಿಂಟ ಎಂಬ ಒಂದು ಸಣ್ಣ ನಗರವನ್ನು ತಲುಪಿದೆವು. ಅಲ್ಲಿ ನಾವು ಒಂದು ಸರಳ ಊಟ ಮಾಡಿದೆವು. ಭವ್ಯವಾದ ಪರ್ವತಗಳು, ಆತ್ಮಕ್ಕೆ ತಂಪೆರೆಯುವ ದೃಶ್ಯಾವಳಿಗಳು, ಅನಂತ ಆಕಾಶ, ಹುರಿದುಂಬಿಸುತ್ತಿದ್ದ ಸೂರ್ಯ, ಮತ್ತು ತೇಲುತ್ತಿದ್ದ ಮೋಡಗಳು, ಅದೆಷ್ಟು ಉಲ್ಲಾಸಕರವಾಗಿದ್ದುವೆಂದರೆ, ನಮಗೆ ಚಾರಣದ ಕಷ್ಟವೇ ಅನುಭವವಾಗಲಿಲ್ಲ. ನಾವು ಸುಂದರ ಝರಿಗಳನ್ನು ಹಾಗೂ ವನಗಳನ್ನು, ಪ್ರಕೃತಿ ಮಾತೆಯ ಶಾಂತಿಯನ್ನು, ಆನಂದಿಸುತ್ತಾ ಮತ್ತು ಭಗವಂತನ ಹಾಗೂ ಗುರುವಿನ ಪ್ರೇಮವನ್ನು ಅನುಭವಿಸುತ್ತಾ ಮುಂದೆ ಸಾಗಿದೆವು.”

“ಬಿಂಟದಿಂದ 5 ಗಂಟೆಗಳ ಚಾರಣದ ನಂತರ, ನಾವು ಬಾಬಾಜಿಯವರ ಗುಹೆಯನ್ನು ತಲುಪಿದಾಗ, ರಾಣಿಖೇತ್ ನಿಂದ 11 ಗಂಟೆಗಳ ಕಾಲ ಚಾರಣ ಮಾಡಿದ್ದೇವೆಂದು ಊಹಿಸಲೂ ಆಗಲಿಲ್ಲ. ನಿಶ್ಚಯವಾಗಿಯೂ, ಬಾಬಾಜಿಯವರ ಆಶೀರ್ವಾದ, ಈ ಅನುಭವದ ಹಿಂದೆ ಇದ್ದಿರಲೇಬೇಕು. ಗುಹೆಯೊಳಗೆ ಧ್ಯಾನ ಮಾಡುತ್ತಿದ್ದಾಗ, ಬಾಬಾಜಿಯವರ ಪ್ರೇಮವು ನಮ್ಮ ಮೇಲೆ ವರ್ಷಿಸುತ್ತಿದ್ದುದನ್ನು ಅನುಭವಿಸಿದೆವು. ನಮ್ಮ ಪ್ರಜ್ಞೆಯಲ್ಲಿ ಈ ಜಗತ್ತು ಸ್ಥಬ್ಧವಾಯಿತು. ನಾವು ನಿತ್ಯ, ನೂತನ, ಪರಿಶುದ್ಧ ಆನಂದದಲ್ಲಿ ಮುಳುಗಿ ಹೋದೆವು. ಅದೊಂದು ಪುಷ್ಟೀಕರಿಸುವ ಅನುಭವವಾಗಿದ್ದು, ನಮ್ಮಲ್ಲಿ ಪ್ರತಿಯೊಬ್ಬರೂ ಮರೆಯಲಾಗದ ನೆನಪುಗಳನ್ನು ಹಿಂದಕ್ಕೆ ಹೊತ್ತುಕೊಂಡು ಬಂದೆವು.”

ಕ್ರಿಯಾ ವಾರ್ಷಿಕೋತ್ಸವವು ಅನೇಕ ಮುದ್ರಿತ ಹಾಗೂ ಆನ್ ಲೈನ್ ಪ್ರಕಾಶನಗಳಲ್ಲಿಯೂ ಕಾಣಿಸಿಕೊಂಡವು, ಇವುಗಳಲ್ಲಿಯೂ:

ad

ಇದನ್ನು ಹಂಚಿಕೊಳ್ಳಿ