ಪರಮಹಂಸ ಯೋಗಾನಂದರು ಪಶ್ಚಿಮದಲ್ಲಿ ಮಾಡಿದ ಮೊದಲ ಪ್ರವಚನ ಮತ್ತು ಅದರ ಮಹತ್ವಪೂರ್ಣ (ಶಾಶ್ವತ) ಸಂದೇಶ

4 ಅಕ್ಟೋಬರ್‌, 2024

ಸೆಪ್ಟೆಂಬರ್‌ 2020ರ ವಾರ್ತಾಪತ್ರದಿಂದ ಸ್ಫೂರ್ತಿ 

1920ರಲ್ಲಿ ಬೋಸ್ಟನ್‌ನಲ್ಲಿ ನಡೆದ ಧಾರ್ಮಿಕ ಮುಖಂಡರ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಯೋಗಾನಂದಜಿ ಸಹಪ್ರತಿನಿಧಿಗಳೊಂದಿಗೆ — ಅವರು “ಧರ್ಮದ ವಿಜ್ಞಾನ”ದ ಬಗ್ಗೆ ಅಮೆರಿಕದಲ್ಲಿ ಮಾಡಿದ ಮೊದಲ ಪ್ರವಚನದ ಕಾರ್ಯಕ್ರಮ

ಈ ತಿಂಗಳ, ಸೆಪ್ಟೆಂಬರ್‌ 19, 1920ರಂದು ನಾವು ಪರಮಹಂಸ ಯೋಗಾನಂದರು ಅಮೆರಿಕಕ್ಕೆ ಆಗಮಿಸಿದ ಮಹತ್ವಪೂರ್ಣ ಆಗಮನದ ವರ್ಷಾಚರಣೆಯನ್ನು ಆಚರಿಸುತ್ತೇವೆ.

ಆಗಮಿಸಿದ ಕೆಲವೇ ದಿನಗಳಲ್ಲಿ, ಯೋಗಾನಂದಜಿ, ಒಂದು ಸಂಸ್ಥೆಯನ್ನು ಆರಂಭಿಸಿದರು, ಮುಂದೆ ಅದನ್ನು ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ ಎಂದು ಹೆಸರಿಸಿದರು. ಅವರು ಭಾರತದಿಂದ ತಂದ ಕ್ರಿಯಾ ಯೋಗ ವಿಜ್ಞಾನವನ್ನು ಪ್ರಚುರಪಡಿಸುವ ಉದ್ದೇಶದಿಂದ ಸ್ಥಾಪಿತವಾದ ಎಸ್‌ಆರ್‌ಎಫ್‌, ಜಗದಾದ್ಯಂತ ಸದಸ್ಯತ್ವವನ್ನು ಹೊಂದಿ ಗುರುಗಳ ಕಾಲಾವಧಿಯಲ್ಲೇ ಬೆಳೆಯಿತು. (ಭಾರತದಲ್ಲಿ ಮತ್ತು ಅದರ ನೆರೆಹೊರೆಯ ರಾಷ್ಟ್ರಗಳಲ್ಲಿ ಪರಮಹಂಸಜಿಯವರ ಕಾರ್ಯವು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ ಎಂದು ಪ್ರಚಲಿತವಾಗಿದೆ.) 1952ರಲ್ಲಿ ಅವರು ಸ್ವರ್ಗಸ್ಥರಾದಾಗಿನಿಂದ, ಯೋಗಾನಂದಜಿಯವರ ಬೋಧನೆಗಳನ್ನು ಸದಾ-ವೃದ್ಧಿಸುತ್ತಿರುವ ವಿಶ್ವವ್ಯಾಪಕ ಅನುಯಾಯಿಗಳು ತಮ್ಮದಾಗಿಸಿಕೊಂಡಿರುವುದರಿಂದ ಅವುಗಳ ಪ್ರಭಾವವು ನಿರಂತರವಾಗಿ ವಿಸ್ತರಿಸುತ್ತಿದೆ.

ಒಂದು ನೂರು ವರ್ಷಗಳ ಹಿಂದೆ ಬೋಸ್ಟನ್ನಿನಲ್ಲಿ ಯೋಗಾನಂದಜಿಯವರ ಚಾರಿತ್ರಿಕ ಆಗಮನದ ಗೌರವಾರ್ಥವಾಗಿ, ನಾವು ಅವರು ಸಂಯುಕ್ತ ಸಂಸ್ಥಾನಗಳಲ್ಲಿ (ಅಮೆರಿಕದಲ್ಲಿ) ಮಾಡಿದ ಮೊತ್ತ ಮೊದಲ ಪ್ರವಚನವಾದ “ಧರ್ಮದ ವಿಜ್ಞಾನ”ವನ್ನು ಮತ್ತೆ ಮೆಲುಕು ಹಾಕುತ್ತಿದ್ದೇವೆ. ಅವರು ಆಗಮಿಸಿದ ಕೇವಲ ಎರಡು ವಾರಗಳಿಗಿಂತ ಸ್ವಲ್ಪ ಹೆಚ್ಚು ಸಮಯದಲ್ಲಿ ಯೋಗಾನಂದಜಿ, ಪ್ರಪಂಚದ ಸುತ್ತಮುತ್ತಲಿನಿಂದ ಬಂದಿದ್ದ ಧಾರ್ಮಿಕ ಮುಖಂಡರುಗಳ ಸಮ್ಮೇಳನದಲ್ಲಿ ಮಾತಾನಾಡುತ್ತಾ, ಭಾರತದ ಸಾರ್ವತ್ರಿಕ ಆಧ್ಯಾತ್ಮಿಕತೆಯನ್ನು, ತೀವ್ರವಾದ ಆಸಕ್ತಿಯುನ್ನುಂಟಮಾಡುವಂತೆ ಪ್ರಸ್ತುತ ಪಡಿಸಿದರು — ಆಧುನಿಕ ವೈಜ್ಞಾನಿಕ ಯುಗಕ್ಕೆ ಪರಿಪೂರ್ಣವಾಗಿ ಹೊಂದುವ, ಬಹಳಷ್ಟು ಪಾಶ್ಚಿಮಾತ್ಯರಿಗೆ ಹೊಸದೆನ್ನುವ ಕಾಲಾತೀತವಾದರೂ ಕಾಲೋಚಿತವಾದ ಆದರ್ಶಗಳು.

ನೈಜ ಧರ್ಮವು ಅಧಿಕಾರಯುತವಾದದ್ದಲ್ಲ, ಬದಲಾಗಿ ಅದು ಸಾರ್ವತ್ರಿಕವಾದದ್ದು ಮತ್ತು ಭಗವಂತನು ಪರಮಾನಂದ ಎಂಬ ಕಲ್ಪನೆಯಲ್ಲಿ ನೆಲೆಗೊಳ್ಳುವಂಥದ್ದು ಎಂದು ಯೋಗಾನಂದಜಿ ದೃಢೀಕರಿಸಿದರು. ಅವರು ಅಂತರ್ಬೋಧೆಯ ಸಾಮರ್ಥ್ಯದ ಬಗ್ಗೆ ಮಾತನಾಡಿದರು ಮತ್ತು ಅದರಿಂದ ಭಗವಂತನನ್ನು ಕೇವಲ ತಾರ್ಕಿಕವಾಗಿಯಲ್ಲ ಪ್ರತ್ಯಕ್ಷವಾಗಿ ಮನಗಾಣಬಹುದು ಎಂದು ಹೇಳಿದರು. ಎಲ್ಲಕ್ಕಿಂತ ಮಹತ್ವವಾದದ್ದೆಂದರೆ, ಅವರು ತಮ್ಮ ಸಭಿಕರಿಗೆ ಒಬ್ಬರ ಭಗವದ್‌-ಗ್ರಹಿಕೆಯ ಸುಪ್ತ ಅಂತರ್ಬೋಧೆಯ ಶಕ್ತಿಯನ್ನು ಜಾಗೃತಗೊಳಿಸಲು ಒಂದು ಕಾರ್ಯರೂಪದ ಮಾರ್ಗವಿದೆ ಎಂದು ಹೇಳಿದರು. ಆ ಮಾರ್ಗವು ಪ್ರಜ್ಞಾಪೂರ್ವಕವಾಗಿ ಪ್ರಾಣ ಶಕ್ತಿಯನ್ನು ನಿಯಂತ್ರಿಸುವ ತಂತ್ರಗಳನ್ನು ಹೊಂದಿದೆ — ಅದು ಅವರ ಕಾಲಾವಧಿಯಲ್ಲಿ 1,00,000 (1 ಲಕ್ಷ) ಜನರಿಗೆ ಉಪದೇಶಿಸಿದ ಕ್ರಿಯಾ ಯೋಗ ವಿಜ್ಞಾನದ ತಂತ್ರಗಳನ್ನು ಹೊಂದಿದೆ. ಅವರ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಪಾಠಮಾಲಿಕೆಗಳ ಮೂಲಕ ಅದರ ವಿಸ್ತಾರವು ಇಂದೂ ಮುಂದುವರೆಯುತ್ತಿದೆ.

ಕೆಳಗಿನದು ಯೋಗಾನಂದಜಿಯವರ ಪುಸ್ತಕ ರೂಪದಲ್ಲಿರುವ ಮಹತ್ವಪೂರ್ಣ ಪ್ರವಚನವಾದ ಧರ್ಮದ ವಿಜ್ಞಾನದ ಪುಟ್ಟ ಆಯ್ದ ಭಾಗ. ಇದನ್ನು 1920ರಲ್ಲಿ ಮೊದಲು ಪ್ರಕಟಿಸಲಾಯಿತು. ಅಂದಿನಿಂದ ಇದನ್ನು ವೈಎಸ್‌ಎಸ್‌/ಎಸ್‌ಆರ್‌ಎಫ್‌ ನಿರಂತರವಾಗಿ ಪ್ರಕಟಿಸುತ್ತಾ ಬಂದಿದೆ.

ಭಗವಂತನನ್ನು ನಾವು ಏನೆಂದು ಕಲ್ಪಿಸಿಕೊಳ್ಳುತ್ತೇವೋ ಅದು ದಿನನಿತ್ಯ, ಅಲ್ಲ, ಪ್ರತಿಗಂಟೆಗಳಿಗೂ ಸತತವಾಗಿ ಮಾರ್ಗದರ್ಶನ ಕೊಡುವಂಥದ್ದಾಗಿರಬೇಕು. ಭಗವಂತನ ಕಲ್ಪನೆಯೇ ನಮ್ಮ ದಿನನಿತ್ಯದ ಜೀವನಗಳ ನಡುವೆಯೂ ನಾವು ಅವನನ್ನು ಅರಸುವಂತೆ ಪ್ರಚೋದಿಸುವಂತಿರಬೇಕು.

ನಮ್ಮ ಒಂದು ಇಚ್ಛೆಯನ್ನು ಪೂರೈಸುವಲ್ಲಿ, ಜನರೊಂದಿಗೆ ವ್ಯವಹರಿಸುವಲ್ಲಿ, ಹಣಗಳಿಕೆಯಲ್ಲಿ, ಪುಸ್ತಕ ಓದುವಲ್ಲಿ, ಪರೀಕ್ಷೆ ಪಾಸಾಗುವಲ್ಲಿ, ಅತ್ಯಂತ ಕ್ಷುಲ್ಲಕ ಕೆಲಸದಿಂದ ಅತ್ಯುನ್ನತ ಕಾರ್ಯಗಳಲ್ಲಿ ಭಗವಂತನಿಲ್ಲದೆ ಸಾಧ್ಯವಿಲ್ಲ ಎಂಬ ಭಾವನೆ ಇರದಿದ್ದರೆ, ನಮಗಿನ್ನೂ ಭಗವಂತ ಮತ್ತು ಬದುಕಿನ ನಡುವೆ ಯಾವುದೇ ಬಾಂಧವ್ಯದ ಅನುಭವವಾಗಿಲ್ಲ ಎನ್ನುವುದು ಸ್ಪಷ್ಟ.

ಬುದ್ಧಿಶಕ್ತಿಯು ವಸ್ತು ವಿಷಯಗಳ ಆಂಶಿಕ ಹಾಗೂ ಪರೋಕ್ಷ ನೋಟವನ್ನು ಮಾತ್ರ ನೀಡುತ್ತದೆ. ಒಂದು ವಸ್ತುವನ್ನು ಬೌದ್ಧಿಕವಾಗಿ ನೋಡುವುದು ಎಂದರೆ ಅದರೊಡನೆ ಒಂದಾಗಿ ಅದನ್ನು ದೃಷ್ಟಿಸುವುದಲ್ಲ: ಅದರಿಂದ ಬೇರೆಯಾಗಿ ನೋಡುವುದು ಎಂದು. ಆದರೆ ಅಂತರ್ಬೋಧೆಯು…ಸತ್ಯದ ನೇರ ಗ್ರಹಿಕೆ. ಈ ಅಂತರ್ಬೋಧೆಯಲ್ಲಿಯೇ ಪರಮಾನಂದದ ಪ್ರಜ್ಞೆ ಅಥವಾ ಭಗವತ್ಪ್ರಜ್ಞೆಯ ಸಾಕ್ಷಾತ್ಕಾರವಾಗುವುದು.

ನಾವು ಅದನ್ನು ಹಾಗೆ ಮಾಡಲು ಬಿಟ್ಟರೆ ಈ ಪರಮಾನಂದ ಪ್ರಜ್ಞೆ ಅಥವಾ ಭಗವತ್ಪ್ರಜ್ಞೆ ನಮ್ಮ ಕ್ರಿಯೆಗಳನ್ನು ಹಾಗೂ ಮನಸ್ಥಿತಿಗಳನ್ನು ಆವರಿಸಿಕೊಳ್ಳುತ್ತದೆ.

ಕೇವಲ ನಮ್ಮನ್ನು ನಾವು ತಿಳಿದುಕೊಳ್ಳುವುದರಿಂದ ಮಾತ್ರವೇ ನಾವು ದೇವರನ್ನು ಅರಿಯಬಹುದು. ಏಕೆಂದರೆ, ನಮ್ಮ ನೈಜ ಪ್ರಕೃತಿ ಅವನದರಂತೆಯೇ ಇರುತ್ತದೆ. ಮನುಷ್ಯನನ್ನು ದೇವರ ಪ್ರತಿರೂಪದಂತೆಯೆ ರೂಪಿಸಲಾಗಿದೆ. ಇಲ್ಲಿ ಸೂಚಿಸಿರುವ ವಿಧಾನಗಳನ್ನು ಕಲಿತು ಶ್ರದ್ಧೆಯಿಂದ ಅಭ್ಯಾಸ ಮಾಡಿದಲ್ಲಿ, ನೀವೇ ಆನಂದಮಯ ಆತ್ಮ ಎನ್ನುವುದನ್ನು ಅರಿಯುತ್ತೀರಿ ಮತ್ತು ದೇವರನ್ನು ಸಾಕ್ಷಾತ್ಕರಿಸಿಕೊಳ್ಳುತ್ತೀರಿ.

ಧರ್ಮದ ವಿಜ್ಞಾನ ಪುಸ್ತಕದ ಪ್ರತಿಗಳನ್ನು ಖರೀದಿಸಲು ದಯಮಾಡಿ ನಮ್ಮ ವೈಎಸ್‌ಎಸ್‌ ಆನ್‌ಲೈನ್‌ ಪುಸ್ತಕದಂಗಡಿಗೆ ಭೇಟಿ ನೀಡಿ.

ಇದನ್ನು ಹಂಚಿಕೊಳ್ಳಿ