ನಿಮ್ಮ ಅವಿರತವಾದ, ದೈನಂದಿನ ಆಧ್ಯಾತ್ಮಿಕ ಪ್ರಗತಿಯನ್ನು ಹೊರತುಪಡಿಸಿ ಬೇರೇನೂ ಮುಖ್ಯವಲ್ಲ; ಅದಕ್ಕಾಗಿ, ಕ್ರಿಯಾ ಯೋಗವನ್ನು ಬಳಸಿ.
— ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ
ನಮ್ಮ ಪ್ರೀತಿಯ ಗುರುದೇವ ಪರಮಹಂಸ ಯೋಗಾನಂದ ಮತ್ತು ವೈಎಸ್ಎಸ್ / ಎಸ್ಆರ್‌ಎಫ್ ಮಾರ್ಗದ ಭಕ್ತರ ಪರಮಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರ್ ಅವರ ಮಹಾಸಮಾಧಿಯ ವಿಶೇಷ ದಿನಗಳ ನೆನಪಿಗಾಗಿ, ವೈಎಸ್ಎಸ್ ಸನ್ಯಾಸಿಗಳು ಮಾರ್ಚ್ 8 ರ ಶನಿವಾರ 6 ಘಂಟೆಗಳ ಆನ್ಲೈನ್ ಧ್ಯಾನವನ್ನು ನಡೆಸಿಕೊಟ್ಟರು.
ಈ ಧ್ಯಾನದ ಅವಧಿಯು ಚೈತನ್ಯದಾಯಕ ವ್ಯಾಯಾಮದೊಂದಿಗೆ ಪ್ರಾರಂಭವಾಗಿ, ನಂತರ ಪ್ರಾರ್ಥನೆ, ಸ್ಫೂರ್ತಿದಾಯಕ ಓದುವಿಕೆ ಮತ್ತು ಪಠಣ ಮತ್ತು ಧ್ಯಾನಗಳನ್ನು ಒಳಗೊಂಡಿತ್ತು. ಪರಮಹಂಸ ಯೋಗಾನಂದರ ಉಪಶಮನದಾಯಕ ತಂತ್ರ ಮಾಡುವಿಕೆ ಮತ್ತು ಮುಕ್ತಾಯ ಪ್ರಾರ್ಥನೆಯೊಂದಿಗೆ ಅವಧಿಯು ಕೊನೆಗೊಂಡಿತ್ತು.
ಮಾರ್ಚ್ 8 ರ ಶನಿವಾರದಂದು ಧ್ಯಾನದ ವೇಳಾಪಟ್ಟಿ ಹೀಗಿತ್ತು:
- ಚೈತನ್ಯದಾಯಕ ವ್ಯಾಯಾಮಗಳು – ಬೆಳಿಗ್ಗೆ 7:40 ರಿಂದ 8:00 ರವರೆಗೆ (ಭಾರತೀಯ ಕಾಲಮಾನ)
- ಮೊದಲ ಸೆಷನ್ – ಬೆಳಿಗ್ಗೆ 8:00 ರಿಂದ 11:00 (ಭಾರತೀಯ ಕಾಲಮಾನ)
- ಎರಡನೇ ಸೆಷನ್ – ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 2:00 ರವರೆಗೆ (ಭಾರತೀಯ ಕಾಲಮಾನ)
ಈ ವಿಶೇಷ ಸಂದರ್ಭದಲ್ಲಿ, ವಿವಿಧ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಲಿಗಳು ಭಕ್ತರಿಗೆ ವೈಯಕ್ತಿಕವಾಗಿ ಸಹ ಕಾರ್ಯಕ್ರಮಗಳನ್ನು ನಡೆಸಿದವು.
ಈ ಪವಿತ್ರವಾದ ಸಂದರ್ಭದಲ್ಲಿ, ನೀವು ಕೊಡುಗೆ ನೀಡಲು ಬಯಸಿದರೆ, ಕೆಳಗೆ ನೀಡಲಾದ ಲಿಂಕ್ ಅನ್ನು ಬಳಸಿಕೊಂಡು ನಮ್ಮ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ನೀವು ಅದನ್ನು ಮಾಡಬಹುದು. ನಿಮ್ಮ ಕೊಡುಗೆಯು ಹಲವಾರು ಮಾನವೀಯ ಚಟುವಟಿಕೆಗಳನ್ನು ಕೈಗೊಳ್ಳಲು ನಮಗೆ ಸಹಾಯ ಮಾಡುವುದಲ್ಲದೆ, ಮಹಾನ್ ಗುರುಗಳ ಬಗ್ಗೆ ನಿಮ್ಮ ಶಾಶ್ವತ ಪ್ರೀತಿ ಮತ್ತು ಅಚಲ ಭಕ್ತಿಯನ್ನು ತೋರಿಸುತ್ತದೆ.