ನನ್ನ ದೇಹ ಹೊರಟು ಹೋಗುತ್ತದೆ ಆದರೆ ನನ್ನ ಕೆಲಸ ಮುಂದುವರಿಯುತ್ತದೆ. ಮತ್ತು ನನ್ನ ಆತ್ಮವು ಜೀವಂತವಾಗಿರುತ್ತದೆ.
— ಪರಮಹಂಸ ಯೋಗಾನಂದ
ಮಹಾಸಮಾಧಿ ಎಂಬುದು ದೈವ-ಸಾಕ್ಷಾತ್ಕಾರ ಪಡೆದ ಯೋಗಿಯು ಭೌತಿಕ ದೇಹದಿಂದ ಅಂತಿಮವಾಗಿ ಪ್ರಜ್ಞಾಪೂರ್ವಕವಾಗಿ ನಿರ್ಗಮನ ಮಾಡುವುದನ್ನು ಸೂಚಿಸುತ್ತದೆ. ನಮ್ಮ ಪ್ರೀತಿಯ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಮಹಾಸಮಾಧಿಯ ಪವಿತ್ರ ಸಂದರ್ಭದಲ್ಲಿ, ವೈಎಸ್ಎಸ್ ಸನ್ಯಾಸಿ ನೇತೃತ್ವದಲ್ಲಿ ಆನ್ಲೈನ್ ಧ್ಯಾನ ನಡೆಸಲಾಯಿತು. ಈ ಕಾರ್ಯಕ್ರಮವು ಪಠಣ, ಸ್ಪೂರ್ತಿದಾಯಕ ಓದುವಿಕೆ ಮತ್ತು ಧ್ಯಾನವನ್ನು ಒಳಗೊಂಡಿತ್ತು.
ಈ ಸಂದರ್ಭದಲ್ಲಿ ವಿವಿಧ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಲಿಗಳಲ್ಲಿ ವೈಯಕ್ತಿಕವಾಗಿ ಸ್ಮರಣಾರ್ಥ ಕಾರ್ಯಕ್ರಮಗಳನ್ನು ನಡೆಸಲಾಯಿತು.
ನೀವು ಅನ್ವೇಷಿಸಲು ಸಹ ಬಯಸಬಹುದು:
- ಪರಮಹಂಸ ಯೋಗಾನಂದರ ಸ್ಮರಣೆಯಲ್ಲಿ: ಗುರುಗಳ ಅಂತಿಮ ದಿನಗಳ ವೈಯಕ್ತಿಕ ವಿವರ
- ಪರಮಹಂಸ ಯೋಗಾನಂದ
- ಧ್ಯಾನದ ಕ್ರಿಯಾ ಯೋಗ ಮಾರ್ಗ
- ಅಂತಿಮ ವರ್ಷಗಳು ಮತ್ತು ಮಹಾಸಮಾಧಿ
- ಪರಮಹಂಸ ಯೋಗಾನಂದರ ಕೊನೆಯ ದಿನಗಳು – ಶ್ರೀ ಶ್ರೀ ದಯಾ ಮಾತಾ (ಸಂಘಮಾತಾ ಮತ್ತು ವೈಎಸ್ಎಸ್/ಎಸ್ಆರ್ಎಫ್ ನ ಮೂರನೇ ಅಧ್ಯಕ್ಷೆ) ಅವರ ಭಾಷಣ
- ವೈ.ಎಸ್.ಎಸ್. ಶತಮಾನೋತ್ಸವದ ಸ್ಮರಣಾರ್ಥ ಪ್ರಧಾನಿಯವರು ಅಂಚೆ ಚೀಟಿ ಬಿಡುಗಡೆ ಮಾಡಿದರು
ಈ ವಿಶೇಷ ದಿನವನ್ನು ಭಕ್ತರು ಗುರು-ಪ್ರಣಾಮಿ ನೀಡುವ ಮೂಲಕ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೆಂದು ಗುರುತಿಸುತ್ತಾರೆ, ಗುರುಗಳು ತಮ್ಮ ಜೀವನದಲ್ಲಿ ತರುವ ಅಪಾರವಾದ ಆಶೀರ್ವಾದಗಳಿಗಾಗಿ ಅವರನ್ನು ಗೌರವಿಸುತ್ತಾರೆ. ನೀವು ಈ ದೇಣಿಗೆಯನ್ನು ಆನ್ ಲೈನ್ ಮೂಲಕ ನೀಡಬಹುದು. ನಿಮ್ಮ ಉದಾರ ಕೊಡುಗೆಯು ಅವರ ಸ್ಪೂರ್ತಿದಾಯಕ ಬೋಧನೆಗಳನ್ನು ಹರಡಲು ಸಹಾಯ ಮಾಡುತ್ತದೆ.