ಸ್ವಾಮಿ ಶ್ರೀ ಯುಕ್ತೇಶ್ವರ ಆವಿರ್ಭಾವ ದಿವಸ
ಸ್ಮರಣಾರ್ಥ ಕಾರ್ಯಕ್ರಮಗಳು

ವೈಎಸ್‌ಎಸ್‌ ಓಡಿಕೆ ಸ್ವಾಮಿ ಶ್ರೀ ಯುಕ್ತೇಶ್ವರರ ಆವಿರ್ಭಾವ ದಿವಸದ ಸ್ಮರಣಾರ್ಥ ಕಾರ್ಯಕ್ರಮಗಳು — ಮೇ 2026

ಕಾರ್ಯಕ್ರಮದ ಬಗ್ಗೆ

ನನ್ನ ಸರ್ವಸ್ವವನ್ನು ನನ್ನ ಗುರುವಾದ ಸ್ವಾಮಿ ಶ್ರೀ ಯುಕ್ತೇಶ್ವರರಿಗೆ ಅರ್ಪಿಸಿದ್ದೇನೆ; ಅವರು ಸಕಲ ವಿಧದಲ್ಲಿಯೂ ಒಬ್ಬ ಮಹಾಗುರುಗಳಾಗಿದ್ದರು. ಅವರ ವಿವೇಕವನ್ನು ಅನುಸರಿಸಿದ ಕಾರಣದಿಂದಲೇ ನಾನು ನನ್ನ ಧ್ಯೇಯವನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಯಿತು….

— ಪರಮಹಂಸ ಯೋಗಾನಂದ

ಮೇ 10 ರಂದು, ನಾವು ಪರಮಹಂಸ ಯೋಗಾನಂದರ ಗುರುಗಳಾದ ಮತ್ತು ವೈಎಸ್‌ಎಸ್‌/ಎಸ್‌ಆರ್‌ಎಫ್‌ ಭಕ್ತರ ಪರಮಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರ ಆವಿರ್ಭಾವ ದಿವಸವನ್ನು (ಜನ್ಮ ವಾರ್ಷಿಕೋತ್ಸವ) ಆಚರಿಸುತ್ತೇವೆ. ಅವರನ್ನು ಜ್ಞಾನಾವತಾರ ಅಂದರೆ “ಜ್ಞಾನದ ಅವತಾರ” ಎಂದು ಪೂಜ್ಯಭಾವದಿಂದ ಕಾಣಲಾಗುತ್ತದೆ.

ಈ ಪವಿತ್ರ ಸಂದರ್ಭವನ್ನು ಸ್ಮರಿಸಲು ಮೇ ತಿಂಗಳಲ್ಲಿ ಆಯೋಜಿಸಲಾದ ಎರಡು ವಿಶೇಷ ಕಾರ್ಯಕ್ರಮಗಳಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ನಿಮ್ಮನ್ನು ಆದರದಿಂದ ಸ್ವಾಗತಿಸುತ್ತೇವೆ.

ಪೂಜ್ಯ ಸ್ವಾಮಿ ಶ್ರೀ ಯುಕ್ತೇಶ್ವರ್ ಗಿರಿ ಅವರ ಗೌರವಾರ್ಥವಾಗಿ
ಮೂರು-ಗಂಟೆಗಳ ಸ್ಮರಣಾರ್ಥ ಧ್ಯಾನ

ಭಾನುವಾರ, ಮೇ 3, 2026
ಬೆಳಿಗ್ಗೆ 6:10 – 9:30 ರ ವರೆಗೆ (ಭಾರತೀಯ ಕಾಲಮಾನ)

ಮೇ 3 ರಂದು, ಯೋಗದಾ ಸತ್ಸಂಗದ ಸನ್ಯಾಸಿಯೊಬ್ಬರು ನಡೆಸಿಕೊಡುವ ಮೂರು ಗಂಟೆಗಳ ಆನ್‌ಲೈನ್ ಧ್ಯಾನದೊಂದಿಗೆ ನಾವು ಸ್ವಾಮಿ ಶ್ರೀ ಯುಕ್ತೇಶ್ವರಜಿಯವರಿಗೆ ಗೌರವ ಸಲ್ಲಿಸುವೆವು. ಈ ಕಾರ್ಯಕ್ರಮವು ಕೀರ್ತನೆ, ಧ್ಯಾನ ಮತ್ತು ಪ್ರೇರಣಾದಾಯಕ ವಾಚನಗಳ ಅವಧಿಗಳನ್ನು ಒಳಗೊಂಡಿರುತ್ತದೆ.

ದಯವಿಟ್ಟು ಗಮನಿಸಿ: ಈ ಕಾರ್ಯಕ್ರಮವು ಮಂಗಳವಾರ, ಮೇ 5, ರಾತ್ರಿ 10 ಗಂಟೆಯವರೆಗೆ (ಭಾರತೀಯ ಕಾಲಮಾನ) ವೀಕ್ಷಿಸಲು ಲಭ್ಯವಿರುತ್ತದೆ.

ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿಯವರ ಆವಿರ್ಭಾವ
ದಿವಸದ ಸ್ಮರಣಾರ್ಥ ಧ್ಯಾನ

ಭಾನುವಾರ, ಮೇ 10, 2026
ಬೆಳಗ್ಗೆ 6:30 – 8:00 ರ ವರೆಗೆ (ಭಾರತೀಯ ಕಾಲಮಾನ)

ಮೇ 10 ರಂದು ಸ್ವಾಮಿ ಶ್ರೀ ಯುಕ್ತೇಶ್ವರಜಿ ಅವರ ಆವಿರ್ಭಾವ ದಿವಸದಂದು, ವೈಎಸ್‌ಎಸ್‌ ಸನ್ಯಾಸಿಯೊಬ್ಬರಿಂದ ನಡೆಸಲ್ಪಡುವ ಆನ್‌ಲೈನ್ ಸ್ಮರಣಾರ್ಥ ಧ್ಯಾನದೊಂದಿಗೆ ನಾವು ಆ ಮಹಾನ್ ಜ್ಞಾನಾವತಾರರನ್ನು ಗೌರವಿಸುತ್ತೇವೆ.

ದಯವಿಟ್ಟು ಗಮನಿಸಿ: ಈ ಕಾರ್ಯಕ್ರಮವು ಮೇ 11, ಸೋಮವಾರ, ರಾತ್ರಿ 10 ಗಂಟೆಯವರೆಗೆ (ಭಾರತೀಯ ಕಾಲಮಾನ) ವೀಕ್ಷಣೆಗೆ ಲಭ್ಯವಿರುತ್ತದೆ.

ಈ ಸ್ಮರಣಾರ್ಥ ಧ್ಯಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಎಲ್ಲರನ್ನೂ ಸ್ವಾಗತಿಸುತ್ತೇವೆ.

ಈ ವಿಶೇಷ ಸಂದರ್ಭವನ್ನು ಯೋಗದಾ ಸತ್ಸಂಗ ಸೊಸೈಟಿಯ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳಾದ್ಯಂತ ವೈಯಕ್ತಿಕ ಧ್ಯಾನ ಕಾರ್ಯಕ್ರಮಗಳೊಂದಿಗೆ ಸಹ ಆಚರಿಸಲಾಗುವುದು. ಈ ಕಾರ್ಯಕ್ರಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಭಾಗವಹಿಸಲು, ದಯವಿಟ್ಟು ನಿಮ್ಮ ಸಮೀಪದ ಧ್ಯಾನ ಕೇಂದ್ರವನ್ನು ಸಂಪರ್ಕಿಸಿ.

ಈ ಪವಿತ್ರ ಸಂದರ್ಭದಲ್ಲಿ, ವೈಎಸ್‌ಎಸ್‌/ಎಸ್‌ಆರ್‌ಎಫ್‌ ಗುರು ಪರಂಪರೆಯಿಂದ ನಮಗೆ ತಲುಪಿದ ಕ್ರಿಯಾ ಯೋಗ ಮಾರ್ಗದ ಆಶೀರ್ವಾದಕ್ಕಾಗಿ ಭಕ್ತಾದಿಗಳು ಪ್ರಣಾಮಿ ಅರ್ಪಿಸುವ ಮೂಲಕ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ.

ಈ ಆತ್ಮೋದ್ಧಾರಕ ಬೋಧನೆಗಳನ್ನು ಪ್ರಾಮಾಣಿಕ ಸಾಧಕರಿಗೆ ತಲುಪಿಸುವ ವೈಎಸ್‌ಎಸ್‌ನ ಕಾರ್ಯಕ್ಕೆ ನೀವು ಕೊಡುಗೆ ನೀಡಲು ಇಚ್ಛಿಸಿದರೆ, ಕೆಳಗೆ ನೀಡಿರುವ ಕೊಂಡಿಯ ಮೂಲಕ ಹಾಗೆ ಮಾಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ