ಪರಮಹಂಸ ಯೋಗಾನಂದರು ರಚಿಸಿದ, ವಿಶ್ವವಿಖ್ಯಾತ ಆಧ್ಯಾತ್ಮಿಕ ಶ್ರೇಷ್ಠ ಕೃತಿಯಾದ ಯೋಗಿಯ ಆತ್ಮಕಥೆ, ಯಲ್ಲಿ ಉಲ್ಲೇಖಿಸಲಾದ ನಿಗೂಢ ಯೋಗಿ ಮಹಾವತಾರ ಬಾಬಾಜಿ ಯಾರು? ಬದರಿ ನಾರಾಯಣದ ಬಳಿಯ ಉತ್ತರ ಹಿಮಾಲಯದ ಕಡಿದಾದ ಪರ್ವತಗಳಲ್ಲಿ ವಾಸಿಸುವ ಅಮರ ಗುರುವಾಗಿ ಪರಿಚಯಿಸಲ್ಪಟ್ಟಿರುವ ಬಾಬಾಜಿಯವರನ್ನು ಮಹಾವತಾರ (ಮಹಾನ್ ಅವತಾರ) ಎಂದು ವರ್ಣಿಸಲಾಗಿದೆ. ಅವರು ಪುನರ್ಜನ್ಮದ ಚಕ್ರದಿಂದ ಸಂಪೂರ್ಣವಾಗಿ ಹೊರಬಂದಿರುವ ಮತ್ತು ಮಾನವಕುಲದ ಆಧ್ಯಾತ್ಮಿಕ ಉನ್ನತಿಗಾಗಿ ಸಹಸ್ರಾರು ವರ್ಷಗಳಿಂದ ಕಾಂತಿಯುತ, ಯೌವನದ ದೈಹಿಕ ರೂಪವನ್ನು ಕಾಯ್ದುಕೊಂಡಿರುವ ಒಬ್ಬ ದಿವ್ಯ ಅವತಾರ. ಬಾಬಾಜಿಯವರನ್ನು ಭೇಟಿಯಾದವರು ಅವರ ಸ್ವಭಾವವು ಶುದ್ಧ ಪ್ರೀತಿಯಿಂದ ಕೂಡಿದೆ ಮತ್ತು ವಿನಯವು ಅವರ ಪ್ರಮುಖ ಲಕ್ಷಣವಾಗಿದೆ ಎಂದು ಹೇಳುತ್ತಾರೆ. ಅವರ ಪವಿತ್ರ ಹೆಸರನ್ನು ಭಕ್ತಿಯಿಂದ ಉಚ್ಚರಿಸಿದರೆ ತಕ್ಷಣವೇ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ದ ಹಿರಿಯ ಸಂನ್ಯಾಸಿ, ಸ್ವಾಮಿ ಸ್ಮರಣಾನಂದ ಗಿರಿ ಅವರು ಮಹಾವತಾರ ಬಾಬಾಜಿ ಕುರಿತು ನೀಡಿದ ಈ ಇಂಗ್ಲಿಷ್ ಪ್ರವಚನದ ಮೂಲಕ ಇನ್ನಷ್ಟು ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಭಗವಂತನ ಸಾಕ್ಷಾತ್ಕಾರದ ಪವಿತ್ರ, ವೈಜ್ಞಾನಿಕ ತಂತ್ರವಾದ ಕ್ರಿಯಾ ಯೋಗವು ಹೇಗೆ ಒಂದು ಅಖಂಡ ಗುರು-ಶಿಷ್ಯ ಪರಂಪರೆಯ ಮೂಲಕ ಹರಿದುಬಂತು ಎಂಬುದನ್ನು ಕಂಡುಕೊಳ್ಳಿ—ಬಾಬಾಜಿಯವರಿಂದ ಲಾಹಿರಿ ಮಹಾಶಯರಿಗೆ, ಸ್ವಾಮಿ ಶ್ರೀ ಯುಕ್ತೇಶ್ವರರಿಗೆ ಮತ್ತು ಅಂತಿಮವಾಗಿ ಪರಮಹಂಸ ಯೋಗಾನಂದರಿಗೆ. ಇವರು 1920ರಲ್ಲಿ ಈ ಬೋಧನೆಗಳನ್ನು ಪಶ್ಚಿಮಕ್ಕೆ ತರಲು ಬಾಬಾಜಿಯವರಿಂದ ವೈಯಕ್ತಿಕವಾಗಿ ನಿಯೋಜಿಸಲ್ಪಟ್ಟಿದ್ದರು.
ಈ ಪ್ರವಚನವು ಐದು ಇತರ ಭಾರತೀಯ ಭಾಷೆಗಳಲ್ಲಿಯೂ ಲಭ್ಯವಿದೆ: ಹಿಂದಿ, ಬಂಗಾಳಿ, ಕನ್ನಡ, ತಮಿಳು ಮತ್ತು ತೆಲುಗು

















