ಕ್ರಿಸ್‌ಮಸ್ ಸ್ಮರಣಾರ್ಥ ಧ್ಯಾನ

ಗುರುವಾರ, ಡಿಸೆಂಬರ್ 25, 2025

ಬೆಳಿಗ್ಗೆ 6:30

– ಬೆಳಿಗ್ಗೆ 8:00

(ಅಧಿಕೃತ ಭಾರತೀಯ ಕಾಲಮಾನ)

ಕ್ರಿಸ್‌ಮಸ್ ಸ್ಮರಣಾರ್ಥ ಧ್ಯಾನ ಡಿಸೆಂಬರ್ 25, 2025

ಕಾರ್ಯಕ್ರಮದ ಬಗ್ಗೆ

ಪ್ರತಿ ವರ್ಷ ಕ್ರಿಸ್‌ಮಸ್‌ ಸಮಯದಲ್ಲಿ ಸ್ವರ್ಗೀಯ ಲೋಕದಿಂದಿಳಿದು ಭೂಮಿಗೆ ಬರುವ ಕ್ರಿಸ್ತ-ಪ್ರೇಮ ಮತ್ತು ಆನಂದದ ಕಂಪನಗಳು ಸಾಮಾನ್ಯಕ್ಕಿಂತಲೂ ಹೆಚ್ಚು ಪ್ರಬಲವಾಗಿರುತ್ತವೆ. ಪ್ರಪಂಚದಲ್ಲಿ ಯೇಸು ಜನಿಸಿದಾಗ ಪ್ರಭಾಮಯವಾಗಿ ಹೊಳೆಯುತ್ತಿದ್ದ ಅನಂತ ಜ್ಯೋತಿಯಿಂದ ಆಕಾಶಮಂಡಲವೇ ತುಂಬಿಬಿಟ್ಟಿತ್ತು. ಭಕ್ತಿ ಮತ್ತು ಆಳವಾದ ಧ್ಯಾನದ ಮೂಲಕ ಸಾಮರಸ್ಯದಲ್ಲಿರುವ ವ್ಯಕ್ತಿಗಳು ಕ್ರಿಸ್ತ ಯೇಸುವಿನಲ್ಲಿರುವ ಸರ್ವವ್ಯಾಪಿ ಪ್ರಜ್ಞೆಯಿಂದ ಪರಿವರ್ತಿಸುವ ಕಂಪನಗಳನ್ನು ಅದ್ಭುತವಾಗಿ ಸ್ಪರ್ಶಿಸಬಹುದಾದ ರೀತಿಯಲ್ಲಿ ಅನುಭವಿಸುತ್ತಾರೆ.

— ಪರಮಹಂಸ ಯೋಗಾನಂದ

ಕ್ರಿಸ್‌ಮಸ್ ಎಂಬ ಪವಿತ್ರ ಸಂದರ್ಭದಂದು ಯೇಸು ಕ್ರಿಸ್ತರ ಜನ್ಮವನ್ನು ಗೌರವಿಸುವ ಸಲುವಾಗಿ, ಡಿಸೆಂಬರ್ 25 ಗುರುವಾರ ವೈಎಸ್‌ಎಸ್‌ನ ಒಬ್ಬ ಸನ್ಯಾಸಿಯವರಿಂದ ವಿಶೇಷ ಆನ್‌ಲೈನ್ ಧ್ಯಾನವನ್ನು ನಡೆಸಲಾಯಿತು.

ಕಾರ್ಯಕ್ರಮವು ಪ್ರಾರ್ಥನೆ ಮತ್ತು ಭಜನೆಗಳಿಂದ ಆರಂಭವಾಗಿ, ನಂತರ ಕೆಲವು ಸ್ಫೂರ್ತಿದಾಯಕ ವಾಚನಗಳು ಹಾಗೂ ಮೌನ ಧ್ಯಾನದ ಅವಧಿಯನ್ನು ಒಳಗೊಂಡಿತ್ತು. ಅಧಿವೇಶನವು ಇತರರಿಗಾಗಿ ಪ್ರಾರ್ಥನೆ ಮತ್ತು ಪರಮಹಂಸ ಯೋಗಾನಂದರವರ ಉಪಶಮನಕಾರಿ ಚಿಕಿತ್ಸಾ ತಂತ್ರವನ್ನು ನೆರವೇರಿಸುವುದರೊಂದಿಗೆ ಕೊನೆಗೊಂಡಿತು. ಇದರ ನಂತರ ಸಮಾರೋಪ ಪ್ರಾರ್ಥನೆ ನಡೆಯಿತು.

ಕ್ರಿಸ್‌ಮಸ್ ಸ್ಮರಣಾರ್ಥ ಧ್ಯಾನಗಳನ್ನು ವೈಎಸ್‌ಎಸ್ ಆಶ್ರಮಗಳು, ಕೇಂದ್ರಗಳು ಹಾಗೂ ಮಂಡಳಿಗಳಲ್ಲಿಯೂ ಸಹ ನಡೆಸಲಾಯಿತು. ನಿಮ್ಮ ಸಮೀಪದಲ್ಲಿರುವ ಕೇಂದ್ರದ ವಿವರಗಳನ್ನು ತಿಳಿದುಕೊಳ್ಳಲು, ದಯವಿಟ್ಟು ಇಲ್ಲಿ ಒತ್ತಿ.

ವೈಎಸ್ಎಸ್/ಎಸ್‌ಆರ್‌ಎಫ್‌ ಅಧ್ಯಕ್ಷ ಸ್ವಾಮಿ ಚಿದಾನಂದ ಗಿರಿ ಅವರಿಂದ ಕ್ರಿಸ್‌ಮಸ್ ಸಂದೇಶ

ಕ್ರಿಸ್‌ಮಸ್ ಸಂದರ್ಭದಲ್ಲಿ ವೈಎಸ್‌ಎಸ್/ಎಸ್‌ಆರ್‌ಎಫ್ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ ಅವರ ವಿಶೇಷ ಸಂದೇಶವನ್ನು ಓದಲು, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತಿ.

ಈ ಪವಿತ್ರ ಸಂದರ್ಭದಲ್ಲಿ ನೀವು ಕಾಣಿಕೆ ನೀಡಲು ಬಯಸಿದರೆ, ಕೆಳಗೆ ಹಂಚಿಕೊಂಡಿರುವ ಲಿಂಕ್ ಮೂಲಕ ನೀವು ಕಾಣಿಕೆ ಸಲ್ಲಿಸಬಹುದು. ನಿಮ್ಮ ಬೆಂಬಲಕ್ಕೆ ನಾವು ಕೃತಜ್ಞರಾಗಿರುತ್ತೇವೆ.

para-ornament

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ