ಪರಮಹಂಸ ಯೋಗಾನಂದರು ಮತ್ತು ಸ್ವಾಮಿ
ಶ್ರೀ ಯುಕ್ತೇಶ್ವರರ ಗೌರವಾರ್ಥ ಸ್ಮರಣೋತ್ಸವಗಳು

ಮಹಾಸಮಾಧಿ ಸ್ಮರಣಾರ್ಥ ಧ್ಯಾನಗಳು, ಮಾರ್ಚ್ 2026

ಕಾರ್ಯಕ್ರಮದ ಬಗ್ಗೆ

ಪರಮಹಂಸ ಯೋಗಾನಂದರ ಮಹಾಸಮಾಧಿ ವಾರ್ಷಿಕೋತ್ಸವ — ಪರಮಾತ್ಮನೊಂದಿಗೆ ಸಂಪೂರ್ಣ ಐಕ್ಯತೆಯ ಸ್ಥಿತಿಯಲ್ಲಿ ಒಬ್ಬ ಮಹಾಯೋಗಿ ಜಾಗೃತಪೂರ್ವಕವಾಗಿ ದೇಹವನ್ನು ತ್ಯಜಿಸಿದ ಮಹತ್ತ್ವದ ಕ್ಷಣ — ಮಾರ್ಚ್ 7 ರಂದು ಆಚರಿಸಲಾಗುತ್ತದೆ. ಅವರ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರ ಮಹಾಸಮಾಧಿ ವಾರ್ಷಿಕೋತ್ಸವವು ಮಾರ್ಚ್ 9 ರಂದು ನಡೆಯುತ್ತದೆ. ಈ ಪವಿತ್ರ ಸಂದರ್ಭಗಳನ್ನು ಗೌರವಿಸುವ ಸಲುವಾಗಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸನ್ಯಾಸಿಗಳು ಕೆಳಕಂಡ ವಿಶೇಷ ಆನ್‌ಲೈನ್ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ:

ಪರಮಹಂಸ ಯೋಗಾನಂದ
ಮಹಾಸಮಾಧಿ ಸ್ಮರಣಾರ್ಥ ಧ್ಯಾನ

ಶನಿವಾರ, ಮಾರ್ಚ್ 7, 2026
ಬೆಳಿಗ್ಗೆ 6:30 – ಬೆಳಿಗ್ಗೆ 8:00 (ಅಧಿಕೃತ ಭಾರತೀಯ ಕಾಲಮಾನ)

ಮಾರ್ಚ್ 7, 1952 ರಂದು ಪರಮಹಂಸ ಯೋಗಾನಂದಜಿಯವರು ಮಹಾಸಮಾಧಿ ಪ್ರವೇಶಿಸಿದರು. ಈ ದಿನವನ್ನು ಭಾರತದಾದ್ಯಂತ ವಿಶೇಷ ಧ್ಯಾನ ಕಾರ್ಯಕ್ರಮಗಳೊಂದಿಗೆ ಸ್ಮರಿಸಲಾಗುತ್ತದೆ. ವೈಎಸ್‌ಎಸ್ ಸನ್ಯಾಸಿಯೊಬ್ಬರಿಂದ ನಡೆಸಲಾಗುವ ಒಂದು ವಿಶೇಷ ಆನ್‌ಲೈನ್ ಧ್ಯಾನದಲ್ಲಿ ಭಾಗವಹಿಸಲು ನಿಮ್ಮನ್ನು ಆಹ್ವಾನಿಸುತ್ತೇವೆ. ಈ ಕಾರ್ಯಕ್ರಮದಲ್ಲಿ ಸಂಕೀರ್ತನೆ, ಪ್ರೇರಣಾದಾಯಕ ಪಠಣಗಳು ಮತ್ತು ಧ್ಯಾನ ಒಳಗೊಂಡಿರುತ್ತದೆ.

ದಯವಿಟ್ಟು ಗಮನಿಸಿ: ಈ ಕಾರ್ಯಕ್ರಮವು ಭಾನುವಾರ, ಮಾರ್ಚ್ 8, ರಾತ್ರಿ 10 ಗಂಟೆಯವರೆಗೆ (ಅಧಿಕೃತ ಭಾರತೀಯ ಕಾಲಮಾನ) ವೀಕ್ಷಣೆಗೆ ಲಭ್ಯವಿರುತ್ತದೆ.

ಪರಮಹಂಸ ಯೋಗಾನಂದ ಮತ್ತು ಸ್ವಾಮಿ ಶ್ರೀ ಯುಕ್ತೇಶ್ವರ
ಸ್ಮರಣಾರ್ಥ ಆರು ಗಂಟೆಗಳ ಧ್ಯಾನ

ಭಾನುವಾರ, ಮಾರ್ಚ್ 8, 2026
ಬೆಳಿಗ್ಗೆ 9:40 – ಸಂಜೆ 4:00 (ಅಧಿಕೃತ ಭಾರತೀಯ ಕಾಲಮಾನ)

ನಮ್ಮ ಪ್ರಿಯ ಗುರುದೇವರಾದ ಪರಮಹಂಸ ಯೋಗಾನಂದರ ಮತ್ತು ವೈಎಸ್‌ಎಸ್/ಎಸ್‌ಆರ್‌ಎಫ್ ಮಾರ್ಗದ ಭಕ್ತರ ಪರಮಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರ ಮಹಾಸಮಾಧಿಯ ವಿಶೇಷ ದಿನಗಳ ಸ್ಮರಣಾರ್ಥವಾಗಿ, ವೈಎಸ್‌ಎಸ್ ಸನ್ಯಾಸಿಗಳಿಂದ ಭಾನುವಾರ, ಮಾರ್ಚ್ 8 ರಂದು ನಡೆಸಲಾಗುವ ಆರು ಗಂಟೆಗಳ ಆನ್‌ಲೈನ್ ಧ್ಯಾನದಲ್ಲಿ ನಮ್ಮೊಂದಿಗೆ ಸೇರಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ಕಾರ್ಯಕ್ರಮವು ಚೈತನ್ಯವರ್ಧಕ ವ್ಯಾಯಾಮಗಳೊಂದಿಗೆ ಆರಂಭವಾಗಿ, ಪ್ರಾರ್ಥನೆ, ಪ್ರೇರಣಾದಾಯಕ ವಾಚನ, ಹಾಗೂ ಸಂಕೀರ್ತನೆ ಮತ್ತು ಧ್ಯಾನದ ಅವಧಿಗಳೊಂದಿಗೆ ಮುಂದುವರೆಯುತ್ತದೆ. ಇದು ಪರಮಹಂಸ ಯೋಗಾನಂದರ ಉಪಶಮನಕಾರಿ ತಂತ್ರ ಮತ್ತು ಮುಕ್ತಾಯದ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.

ಕಾರ್ಯಕ್ರಮದ ವಿವರವಾದ ವೇಳಾಪಟ್ಟಿ ಹೀಗಿದೆ:

  • ಚೈತನ್ಯದಾಯಕ ವ್ಯಾಯಾಮಗಳು – ಬೆಳಗ್ಗೆ 9:40 ರಿಂದ ಬೆಳಗ್ಗೆ 10:00 ರವರೆಗೆ (ಅಧಿಕೃತ ಭಾರತೀಯ ಕಾಲಮಾನ)
  • ಪ್ರಥಮ ಭಾಗ – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ (ಅಧಿಕೃತ ಭಾರತೀಯ ಕಾಲಮಾನ)
  • ವಿರಾಮ – ಮಧ್ಯಾಹ್ನ 1:00 ರಿಂದ ಮಧ್ಯಾಹ್ನ 1:30 ರವರೆಗೆ (ಅಧಿಕೃತ ಭಾರತೀಯ ಕಾಲಮಾನ)
  • ದ್ವಿತೀಯ ಭಾಗ – ಮಧ್ಯಾಹ್ನ 1:30 ರಿಂದ ಸಂಜೆ 4:00 ರವರೆಗೆ (ಅಧಿಕೃತ ಭಾರತೀಯ ಕಾಲಮಾನ)


ದಯವಿಟ್ಟು ಗಮನಿಸಿ:
ನೇರ ಪ್ರಸಾರದಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ, ಈ ಕಾರ್ಯಕ್ರಮವು ಮಾರ್ಚ್ 10, ಮಂಗಳವಾರ, ರಾತ್ರಿ 10:00 ರವರೆಗೆ (ಅಧಿಕೃತ ಭಾರತೀಯ ಕಾಲಮಾನ) ವೀಕ್ಷಣೆಗೆ ಲಭ್ಯವಿರುತ್ತದೆ.

ಸ್ವಾಮಿ ಶ್ರೀ ಯುಕ್ತೇಶ್ವರ
ಮಹಾಸಮಾಧಿ ಸ್ಮರಣಾರ್ಥ ಧ್ಯಾನ

ಮಾರ್ಚ್ 9, 2026, ಸೋಮವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00 (ಅಧಿಕೃತ ಭಾರತೀಯ ಕಾಲಮಾನ)

ಜ್ಞಾನಾವತಾರ ಅಥವಾ “ಜ್ಞಾನದ ಅವತಾರ” ಎಂದು ಪೂಜ್ಯನೀಯರಾದ ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿಯವರು ಪರಮಹಂಸ ಯೋಗಾನಂದರ ಗುರುವಾಗಿದ್ದಾರೆ ಮತ್ತು ಶ್ರೀ ಶ್ರೀ ಲಾಹಿರಿ ಮಹಾಶಯರ ಶಿಷ್ಯರಾಗಿದ್ದಾರೆ. ಮಾರ್ಚ್ 9, 1936 ರಂದು, ಸ್ವಾಮಿ ಶ್ರೀ ಯುಕ್ತೇಶ್ವರರು ಮಹಾಸಮಾಧಿ ಹೊಂದಿದರು, ಆ ದಿನವನ್ನು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ವಿಶೇಷ ಧ್ಯಾನಗಳೊಂದಿಗೆ ಸ್ಮರಿಸುತ್ತದೆ.

ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ ಅವರ ಗೌರವಾರ್ಥವಾಗಿ ನಡೆಯುವ ಒಂದು ವಿಶೇಷ ಆನ್‌ಲೈನ್ ಸ್ಮರಣಾರ್ಥ ಧ್ಯಾನದಲ್ಲಿ ನಮ್ಮೊಂದಿಗೆ ನೀವು ಪಾಲ್ಗೊಳ್ಳಿರೆಂದು ನಿಮ್ಮನ್ನು ನಾವು ಆಹ್ವಾನಿಸುತ್ತೇವೆ. ಇದನ್ನು ಮಾರ್ಚ್ 9, ಸೋಮವಾರದಂದು ವೈಎಸ್ಎಸ್ ಸನ್ಯಾಸಿಯೊಬ್ಬರು ಮುನ್ನಡೆಸಲಿದ್ದು, ಇದು ಸಂಕೀರ್ತನೆ, ಪ್ರೇರಣಾದಾಯಕ ಪಠಣ ಹಾಗೂ ಧ್ಯಾನವನ್ನು ಒಳಗೊಂಡಿರುತ್ತದೆ.

ದಯವಿಟ್ಟು ಗಮನಿಸಿ: ಈ ಕಾರ್ಯಕ್ರಮವು ಮಾರ್ಚ್ 10, ಮಂಗಳವಾರ ರಾತ್ರಿ 10 ಗಂಟೆ (ಅಧಿಕೃತ ಭಾರತೀಯ ಕಾಲಮಾನ) ವರೆಗೆ ವೀಕ್ಷಿಸಲು ಲಭ್ಯವಿರುತ್ತದೆ.

ಈ ಶುಭ ಸಂದರ್ಭದಲ್ಲಿ, ಮಹಾನ್ ಗುರು ಮತ್ತು ಪರಮಗುರುಗಳನ್ನು ಗೌರವಿಸಲು ನೇರ ಸ್ಮರಣಾರ್ಥ ಕಾರ್ಯಕ್ರಮಗಳನ್ನು ವಿವಿಧ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ಸಹ ನಡೆಸಲಾಗುತ್ತದೆ. ನಿಮ್ಮ ಸಮೀಪದ ಕೇಂದ್ರವನ್ನು ಸಂಪರ್ಕಿಸಲು, ದಯವಿಟ್ಟು ಇಲ್ಲಿ ಒತ್ತಿ.

ಗುರುವಿನಿಂದ ಪಡೆದ ಅಪಾರ ಆಧ್ಯಾತ್ಮಿಕ ಆಶೀರ್ವಾದಗಳಿಗೆ ತಮ್ಮ ಪ್ರೀತಿ ಹಾಗೂ ಕೃತಜ್ಞತೆಯ ಸಂಕೇತವಾಗಿ ಭಕ್ತರು ಈ ದಿನ ಗುರು-ಪ್ರಣಾಮಿ ಅರ್ಪಿಸುತ್ತಾರೆ. ನೀವು ಈ ವಿಶೇಷ ಸಂದರ್ಭದಲ್ಲಿ ಕಾಣಿಕೆ ಸಲ್ಲಿಸಲು ಬಯಸಿದರೆ, ಕೆಳಗೆ ನೀಡಿರುವ ಕೊಂಡಿಯನ್ನು ಒತ್ತುವ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ