ಹೊಸ ವರ್ಷವನ್ನು ನೀವು ಬೆಳೆಸಬೇಕಾದ ಉದ್ಯಾನವೆಂದು ಭಾವಿಸಿರಿ. ಅದರ ಮಣ್ಣಿನಲ್ಲಿ ಉತ್ತಮ ಅಭ್ಯಾಸಗಳ ಬೀಜಗಳನ್ನು ಬಿತ್ತಿ, ಭೂತಕಾಲದ ಚಿಂತೆಗಳು ಮತ್ತು ತಪ್ಪು ನಡೆಗಳನ್ನು ಬೇಡದ ಹುಲ್ಲಿನಂತೆ ಕಿತ್ತೊಗೆಯಿರಿ.
— ಪರಮಹಂಸ ಯೋಗಾನಂದ
ಹೊಸ ವರ್ಷದ ಆಗಮನದೊಂದಿಗೆ ಪರಮಹಂಸ ಯೋಗಾನಂದಜಿಯವರು ಗುಂಪು ಧ್ಯಾನದ ಅಭ್ಯಾಸವನ್ನು ಪ್ರಾರಂಭಿಸಿದರು. ಹೊಸ ವರ್ಷವನ್ನು ಪ್ರಾರಂಭಿಸುವಾಗ ಭಕ್ತರು ಆಳವಾಗಿ ಧ್ಯಾನ ಮಾಡುವಂತೆ ಮತ್ತು ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ ಅವುಗಳ ಬದಲು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ದೃಢ ಸಂಕಲ್ಪ ಕೈಗೊಳ್ಳುವಂತೆ ಅವರು ಪ್ರೋತ್ಸಾಹಿಸಿದರು.
ಡಿಸೆಂಬರ್ 31 ಬುಧವಾರ ರಾತ್ರಿ 11:30 ರಿಂದ ಗುರುವಾರ ಜನವರಿ 1 ಬೆಳಿಗ್ಗೆ 12:15 (ಭಾರತೀಯ ಕಾಲಮಾನ) ರವರೆಗೆ ನಡೆಯುವ ವಿಶೇಷ ಆನ್‌ಲೈನ್ ಹೊಸ ವರ್ಷದ ಮುನ್ನಾದಿನದ ಗುಂಪು ಧ್ಯಾನದಲ್ಲಿ ನಮ್ಮೊಂದಿಗೆ ಸೇರಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಈ ಧ್ಯಾನವನ್ನು ವೈಎಸ್ಎಸ್ ಸನ್ಯಾಸಿಯೊಬ್ಬರು ಇಂಗ್ಲಿಷ್‌ನಲ್ಲಿ ನಡೆಸಲಿದ್ದಾರೆ.
ದಯವಿಟ್ಟು ಗಮನಿಸಿ: ಮೇಲೆ ಹಂಚಿಕೊಂಡಿರುವ ಸಮಯದಲ್ಲಿ ಈ ಧ್ಯಾನಕ್ಕೆ ಹಾಜರಾಗಲು ಸಾಧ್ಯವಾಗದವರಿಗೆ, ಜನವರಿ 6, ಮಂಗಳವಾರ ರಾತ್ರಿ 10:00 ಗಂಟೆಯವರೆಗೆ (ಭಾರತೀಯ ಕಾಲಮಾನ) ಯೂಟ್ಯೂಬ್‌ನಲ್ಲಿ ದಾಖಲಿತ ವೀಡಿಯೊ ವೀಕ್ಷಿಸಲು ಲಭ್ಯವಿರುತ್ತದೆ.
ಧ್ಯಾನದ ಮೂಲಕ ಹೊಸ ವರ್ಷವನ್ನು ಆರಂಭಿಸುವ ಈ ವಿಶಿಷ್ಟ ವಿಧಾನವನ್ನು ನಮ್ಮ ವೈಎಸ್ಎಸ್ ಆಶ್ರಮಗಳಲ್ಲಿ ಮತ್ತು ನಮ್ಮ ಕೆಲವು ಕೇಂದ್ರಗಳು ಮತ್ತು ಮಂಡಳಿಗಳಲ್ಲಿಯೂ ಆಚರಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ವೈಎಸ್ಎಸ್ ಕೇಂದ್ರವನ್ನು ಸಂಪರ್ಕಿಸಿ.
ನೀವು ಅನ್ವೇಷಿಸಲು ಸಹ ಇಷ್ಟಪಡಬಹುದು:
ಈ ಹೊಸ ವರ್ಷದ ಸಂದರ್ಭದಲ್ಲಿ, ಪರಮಹಂಸ ಯೋಗಾನಂದಜಿಯವರ ಆಧ್ಯಾತ್ಮಿಕ ಹಾಗೂ ಮಾನವೀಯ ಸೇವಾಕಾರ್ಯಗಳಿಗೆ ಕೊಡುಗೆ ನೀಡಲು ನಿಮಗೆ ಆತ್ಮೀಯ ಸ್ವಾಗತ. ದೇಣಿಗೆ ನೀಡಲು ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತಿ.
















