ವೈಎಸ್ಎಸ್/ಎಸ್‌ಆರ್‌ಎಫ್ ಅಧ್ಯಕ್ಷರ ಭಾರತ ಪ್ರವಾಸ — 2027
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿಯು ಮಂಗಳವಾರ, ಸೆಪ್ಟೆಂಬರ್ 15, 2026 ರಂದು ಬೆಳಿಗ್ಗೆ 11 ಗಂಟೆಗೆ (ಅಧಿಕೃತ ಭಾರತೀಯ ಕಾಲಮಾನ) ಪ್ರಾರಂಭವಾಗಲಿದೆ.
ಕಾರ್ಯಕ್ರಮದ ಬಗ್ಗೆ
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ / ಸೆಲ್ಫ್-ರಿಯಲೈಜೇಷನ್ ಫೆಲೋಶಿಪ್‌ನ (ವೈಎಸ್ಎಸ್/ಎಸ್‌ಆರ್‌ಎಫ್) ಗೌರವಾನ್ವಿತ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು 2027ರ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬುದನ್ನು ತಿಳಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ.
ತಮ್ಮ ಭೇಟಿಯ ಸಂದರ್ಭದಲ್ಲಿ ಸ್ವಾಮೀಜಿಯವರು ಕೆಳಗೆ ನೀಡಿರುವಂತೆ, ಎರಡು ನಗರಗಳಲ್ಲಿ ವಿಶೇಷ ಒಂದು ದಿನದ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ:
- ಜನವರಿ 24, ಭಾನುವಾರ: ಹೈದರಾಬಾದ್
- ಫೆಬ್ರವರಿ 21, ಭಾನುವಾರ: ನೊಯ್ಡಾ
ಸ್ವಾಮೀಜಿಯವರ ಹಿಂದಿನ ಭೇಟಿಗಳ ಸಂದರ್ಭದಲ್ಲಿ ನಮ್ಮೆಲ್ಲರಿಗೂ ದೊರೆತ ಮಹಾನ್ ಆಧ್ಯಾತ್ಮಿಕ ಸ್ಫೂರ್ತಿ ಮತ್ತು ಉನ್ನತಿಯನ್ನು ಸ್ಮರಿಸುತ್ತಾ, ಅವರ ಮುಂಬರುವ ಭೇಟಿಯನ್ನು ನಾವು ಸಂತೋಷದಿಂದ ಎದುರು ನೋಡುತ್ತೇವೆ. ಈ ಆಶೀರ್ವದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಎಲ್ಲಾ ವೈಎಸ್ಎಸ್/ಎಸ್‌ಆರ್‌ಎಫ್ ಭಕ್ತರನ್ನು ಪ್ರೀತಿಯಿಂದ ಆಹ್ವಾನಿಸುತ್ತೇವೆ.
ಹಿಂದಿನ ಭೇಟಿಗಳ ಮುಖ್ಯಾಂಶಗಳು






ಸ್ವಾಮೀಜಿಯವರ ಹಿಂದಿನ ಭೇಟಿಗಳ ಮಧುರ ಕ್ಷಣಗಳು ಮತ್ತು ಆಶೀರ್ವಾದಗಳನ್ನು ಮತ್ತೊಮ್ಮೆ ಮೆಲುಕು ಹಾಕಲು ಕೆಳಗಿನ ಕೊಂಡಿಗಳನ್ನು ವೀಕ್ಷಿಸುವಂತೆ ನಾವು ನಿಮ್ಮನ್ನು ಆಹ್ವಾನಿಸುತ್ತೇವೆ:
ಛಾಯಾಚಿತ್ರ ಸಂಗ್ರಹಗಳು
ಹಿಂದಿನ ಕಾರ್ಯಕ್ರಮಗಳು
ಒಂದು ಪರಿವರ್ತನಾತ್ಮಕ ಅನುಭವ
2025 ರಲ್ಲಿ ಸ್ವಾಮೀಜಿಯವರ ಭೇಟಿಯ ಸಮಯದಲ್ಲಿ ನಡೆಸಲಾದ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಭಕ್ತರ ಕೆಲವು ಅನಿಸಿಕೆಗಳನ್ನು ಕೆಳಗೆ ಹಂಚಿಕೊಳ್ಳಲಾಗಿದೆ.
“[ಅಹಮದಾಬಾದ್ ಕಾರ್ಯಕ್ರಮವು] ಇದುವರೆಗೆ ನನಗೆ ದೊರೆತ ಅನುಭವಗಳಲ್ಲೇ ಅತ್ಯಂತ ಸಮೃದ್ಧಗೊಳಿಸಿದ ಮತ್ತು ಮನಸ್ಸಿಗೆ ನೆಮ್ಮದಿ ನೀಡಿದ ಅನುಭವವಾಗಿದೆ. ಸ್ವಾಮಿ ಚಿದಾನಂದಜೀಯವರೊಂದಿಗೆ ಧ್ಯಾನ ಮಾಡಲು, ದಿವ್ಯ ಭಜನೆಗಳನ್ನು ಹಾಡಲು ಮತ್ತು ಆನಂದಮಯ ಸತ್ಸಂಗದ ಭಾಗವಾಗಲು ಅವಕಾಶ ದೊರೆತಿರುವುದಕ್ಕಾಗಿ ನಾನು ದೈವಿಕ ಆಶೀರ್ವಾದವನ್ನು ಪಡೆದವನಾಗಿ, ಅತ್ಯಂತ ಕೃತಜ್ಞನಾಗಿದ್ದೇನೆ... ಈ ಅನುಭವವು ನನ್ನ ಹೃದಯವನ್ನು ಪ್ರೀತಿ ಮತ್ತು ಆನಂದದ ಸಾಗರದಿಂದ ತುಂಬಿತು... ನನ್ನ ಆಧ್ಯಾತ್ಮಿಕ ಪ್ರಯಾಣವನ್ನು ನನ್ನ ಅಂತರಂಗದ ಅತ್ಯಂತ ಆಳವಾದ ಮಟ್ಟಕ್ಕೆ ಕೊಂಡೊಯ್ದ ನಿಮ್ಮ ದೈವಿಕ ಸಾನ್ನಿಧ್ಯಕ್ಕಾಗಿ ಸ್ವಾಮಿ ಚಿದಾನಂದಜೀಯವರೇ, ಧನ್ಯವಾದಗಳು.”
“ನೊಯ್ಡಾದಲ್ಲಿ ಸ್ವಾಮಿ ಚಿದಾನಂದಜೀಯವರು ‘ಆಧ್ಯಾತ್ಮಿಕ ದ್ಯುತಿಸಂಶ್ಲೇಷಣೆ’ ಕುರಿತು ಮಾತನಾಡಿದ ಧ್ಯಾನ ಮಂದಿರದಲ್ಲಿನ ಪ್ರಬಲ ಆಧ್ಯಾತ್ಮಿಕ ಕಂಪನಗಳನ್ನು ಸ್ಪಷ್ಟವಾಗಿ ಅನುಭವಿಸಬಹುದಾಗಿತ್ತು. ಆ ಪ್ರವಚನವು ಮುಗಿಯುವುದನ್ನೇ ನಾವು ಬಯಸಲಿಲ್ಲ! ಅಂದು ಅವರು ಆಡಿದ ಮಾತುಗಳ ಅರ್ಥ ಮತ್ತು ಮಹತ್ವವನ್ನು ಸಂಪೂರ್ಣವಾಗಿ ಗ್ರಹಿಸಲು ನಮ್ಮೆಲ್ಲರಿಗೂ ವರ್ಷಗಳೇ ಬೇಕಾಗಬಹುದೇನೋ! ಈ ಕಾರ್ಯಕ್ರಮವನ್ನು ಪ್ರತ್ಯಕ್ಷವಾಗಿ ಅನುಭವಿಸಲು ಅಲ್ಲಿ ಉಪಸ್ಥಿತರಿರಲು ಸಾಧ್ಯವಾದುದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ.”
“ಸನ್ಯಾಸಿಗಳು ಮತ್ತು ಭಕ್ತರ ಸಾನ್ನಿಧ್ಯದಲ್ಲಿ ಗೌರವಾನ್ವಿತ ಸ್ವಾಮಿ ಚಿದಾನಂದಜೀಯವರೊಂದಿಗೆ [ಚೆನ್ನೈಯಲ್ಲಿ] ನಡೆದ ತಲ್ಲೀನಗೊಳಿಸುವ ಒಂದು ದಿನದ ಕಾರ್ಯಕ್ರಮವು ಸಂತೋಷದಾಯಕ ಅನುಭವವಾಗಿತ್ತು... ಹಾಗೆಯೇ, ವೇಗವಾಗಿ ಸಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ಜೀವನದ ಏಳುಬೀಳುಗಳನ್ನು ಎದುರಿಸುತ್ತಿರುವ ಯುವಕನಾಗಿ, ಗುರುಜೀಯವರ ಕ್ರಿಯಾಯೋಗ ಬೋಧನೆಗಳು ಹೇಗೆ ಶಾಶ್ವತ ಆಶ್ರಯವನ್ನು ಒದಗಿಸುತ್ತವೆ ಎಂಬುದರ ಕುರಿತು ಸ್ವಾಮಿ ಚಿದಾನಂದಜೀಯವರು ನೀಡಿದ ಒಳನೋಟಗಳು ನನಗೆ ಅಮೂಲ್ಯವಾದ ಭರವಸೆಯನ್ನು ನೀಡಿದವು. ಈ ಕಾರ್ಯಕ್ರಮವು ಗುರುಜೀಯವರಿಂದ ದೊರೆತ ಅಮೂಲ್ಯ ಆಶೀರ್ವಾದವಾಗಿ ನನ್ನ ಹೃದಯದಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುತ್ತದೆ”
“ಸ್ವಾಮಿ ಚಿದಾನಂದಜೀಯವರ ಒಂದು ದಿನದ ಕಾರ್ಯಕ್ರಮವು ಒಂದು ಪರಿವರ್ತನಾತ್ಮಕ ಅನುಭವವಾಗಿತ್ತು... ಮೂರು ಗಂಟೆಗಳ ಧ್ಯಾನವು ಅತ್ಯಂತ ಆಳವಾದ ಮತ್ತು ಶಾಂತಿಯುತ ಅನುಭವವನ್ನು ನೀಡಿತು... ನನ್ನ ಅನುಮಾನಗಳು ಕರಗಿಹೋಗುತ್ತಿರುವಂತೆ, ನನ್ನಲ್ಲಿ ಅಪಾರವಾದ ನಿರಾಳತೆ ಮತ್ತು ವಿಶ್ವಾಸದ ಭಾವನೆ ಮೂಡಿತು. ಅವರ ಭೇಟಿಯು ಕೇವಲ ಒಂದು ಕಾರ್ಯಕ್ರಮವಾಗಿರಲಿಲ್ಲ; ಅದೊಂದು ಜಾಗೃತಿಯಾಗಿತ್ತು. ಅವರ ಮಾತುಗಳು, ಅವರ ಸಾನ್ನಿಧ್ಯ ಮತ್ತು ಅಲ್ಲಿ ನೆರೆದಿದ್ದವರ ಸಾಮೂಹಿಕ ಆಧ್ಯಾತ್ಮಿಕ ಶಕ್ತಿಯು ಎಂದೆಂದಿಗೂ ಉಳಿಯುವಂತಹ ಅನುಭವವನ್ನು ಸೃಷ್ಟಿಸಿತು.”
“ಗುರುಜಿ ಮತ್ತು ವೈಎಸ್ಎಸ್ ಪ್ರತಿಪಾದಿಸುವ ಪ್ರತಿಯೊಂದು ಮೌಲ್ಯವೂ ಆ ಕಾರ್ಯಕ್ರಮದಲ್ಲಿ ಪ್ರತಿಬಿಂಬಿತವಾಗಿತ್ತು — ಸಹಾನುಭೂತಿ, ಕ್ರಮಬದ್ಧತೆ, ಸೌಜನ್ಯ, ಪ್ರಶಾಂತತೆ, ಹೀಗೆ ಇನ್ನೂ ಹಲವಾರು. ಸ್ವಾಮಿ ಚಿದಾನಂದಜೀಯವರನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶವೊಂದನ್ನು ಹೊರತುಪಡಿಸಿ, ಬೇರೆ ಯಾವುದೇ ನಿರೀಕ್ಷೆಯೊಂದಿಗೆ ನಾನು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಆದರೆ, ನಾನು ಎಂದಿಗೂ ಊಹಿಸಿರದ ಅನೇಕ ಅಮೂಲ್ಯ ಸಂಗತಿಗಳನ್ನು ಪಡೆದುಕೊಂಡು ಹಿಂದಿರುಗಿದೆ.”
“ನನ್ನ ಕುಟುಂಬದೊಂದಿಗೆ [ಬೆಂಗಳೂರಿನ] ಸತ್ಸಂಗದಲ್ಲಿ ಭಾಗವಹಿಸುವುದು ನಮ್ಮ ವೈಯಕ್ತಿಕ ಆತ್ಮಸಾಕ್ಷಾತ್ಕಾರದ ಹಾದಿಯನ್ನು ಬಲಪಡಿಸಿತು ಮಾತ್ರವಲ್ಲದೆ, ನಮ್ಮ ಪರಸ್ಪರ ಬಂಧವನ್ನು ಮತ್ತಷ್ಟು ಆಳಗೊಳಿಸಿತು. ಆತ್ಮಸ್ಪರ್ಶಿಯಾದ ಮಾತುಗಳು, ಒಟ್ಟಾಗಿ ಹಂಚಿಕೊಂಡ ಮೌನದ ಕ್ಷಣಗಳು ಮತ್ತು ಸಹಭಕ್ತರ ಅಚಲವಾದ ಬದ್ಧತೆಯು ನಮ್ಮಲ್ಲಿ ಹೊಸ ಪ್ರಜ್ಞೆ ಮತ್ತು ಆಂತರಿಕ ಶಾಂತಿಯನ್ನು ತುಂಬಿತು. ಈ ಪರಿವರ್ತನಾತ್ಮಕ ಅನುಭವವು ನಮ್ಮ ಚೈತನ್ಯವನ್ನು ಮರುಜೀವಗೊಳಿಸಿ, ನಮ್ಮ ಹೃದಯಗಳಲ್ಲಿ ಅಚ್ಚಳಿಯದ ಮುದ್ರೆಯನ್ನು ಮೂಡಿಸಿತು — ಆಧ್ಯಾತ್ಮಿಕ ಸಾಧನೆಯ ನಿರಂತರ ಶಕ್ತಿ ಮತ್ತು ಅದು ನಮ್ಮ ಜೀವನದ ಪ್ರತಿಯೊಂದು ಅಂಶಕ್ಕೂ ತರುವ ಬೆಳಕು ಹಾಗೂ ಆನಂದವನ್ನು ಸದಾ ನೆನಪಿಸುವಂತಾಯಿತು.”
“ಎಲ್ಲರೂ ಸ್ಪಷ್ಟವಾಗಿ ಗಮನಿಸಬಹುದಾಗಿದ್ದ ಸಂಗತಿಯೆಂದರೆ, [ಸ್ವಾಮೀಜಿಯವರ] ಸರಳತೆ ಮತ್ತು ಗುರುಜೀಯವರ ದೈವಿಕ ಪ್ರೀತಿಯನ್ನು ಹೊರಸೂಸುತ್ತಿದ್ದ ಅವರ ಸಾನ್ನಿಧ್ಯ. ಅವರ ಸಾನ್ನಿಧ್ಯದ ಆಶೀರ್ವಾದವನ್ನು ಪಡೆಯುವ ಸುಯೋಗ ಪಡೆದ ನಾವೆಲ್ಲರೂ, ಈ ಅನುಭವವನ್ನು ನೇಪಾಳಕ್ಕೆ ನಮ್ಮ ಗುರುವಿನಿಂದ ದೊರೆತ ವಿಶೇಷ ಆಧ್ಯಾತ್ಮಿಕ ಕೊಡುಗೆಯಾಗಿ ಎಂದೆಂದಿಗೂ ಹೃದಯದಲ್ಲಿ ಕಾಪಾಡಿಕೊಳ್ಳುತ್ತೇವೆ. ಜೈ ಗುರು.”
ಕಾರ್ಯಕ್ರಮದ ವಿವರಗಳು
- ಜನವರಿ 24, ಭಾನುವಾರ: ಹೈದರಾಬಾದ್
- ಫೆಬ್ರವರಿ 21, ಭಾನುವಾರ: ನೊಯ್ಡಾ
ಸ್ವಾಮಿ ಚಿದಾನಂದಜೀಯವರೊಂದಿಗೆ ನಡೆಯುವ ಪ್ರತಿಯೊಂದು ಒಂದು ದಿನದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ದೀರ್ಘ ಧ್ಯಾನ ಮತ್ತು ಸಂಜೆ ಧ್ಯಾನವಿರುತ್ತದೆ. ನಂತರ ಸ್ವಾಮೀಜಿಯವರು ಸತ್ಸಂಗ ನಡೆಸಿಕೊಡಲಿದ್ದಾರೆ.
ಸ್ವಾಮೀಜಿಯವರ ಭೇಟಿಯ ಸಮಯದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುವ ಹೈದರಾಬಾದ್ ಮತ್ತು ನೊಯ್ಡಾದ ಸ್ಥಳಗಳ ವಿವರಗಳು ಈ ಕೆಳಗಿನಂತಿವೆ:
ಹೈದರಾಬಾದ್
ದ ಅಡ್ರೆಸ್,
ವ್ಯಾಸ್ ನಗರ ರಸ್ತೆ,
ನರ್ಸಿಂಗಿ,
ಹೈದರಾಬಾದ್ – 500075
ತೆಲಂಗಾಣ
ಗೂಗಲ್ ನಕ್ಷೆ ಕೊಂಡಿ: ಇಲ್ಲಿ ಒತ್ತಿ
ನೊಯ್ಡಾ
ಯೋಗದಾ ಸತ್ಸಂಗ ಶಾಖಾ ಆಶ್ರಮ — ನೊಯ್ಡಾ
ಪರಮಹಂಸ ಯೋಗಾನಂದ ಮಾರ್ಗ
ಬಿ-4, ಸೆಕ್ಟರ್ 62
ನೊಯ್ಡಾ – 201307
ಗೌತಮ ಬುದ್ಧ ನಗರ
ಉತ್ತರ ಪ್ರದೇಶ
ಗೂಗಲ್ ನಕ್ಷೆ ಕೊಂಡಿ: ಇಲ್ಲಿ ಒತ್ತಿ
ಹಣ ಪಾವತಿ:
- ನೋಂದಣಿ ಶುಲ್ಕವು ಪ್ರತಿ ವ್ಯಕ್ತಿಗೆ ₹ 1,200. ಈ ಶುಲ್ಕವು ಊಟದ ವೆಚ್ಚವನ್ನು ಒಳಗೊಂಡಿರುತ್ತದೆ.
- ಆದಾಗ್ಯೂ, ಭಕ್ತರು ಉಳಿಯಲು ಬಯಸುವ ದಿನಗಳ ಸಂಖ್ಯೆಯನ್ನು ಆಧರಿಸಿ ವಸತಿ ಸೌಲಭ್ಯವನ್ನು ಪಡೆಯಲು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ವಸತಿ ಶುಲ್ಕಗಳು ಈ ಕೆಳಗಿನಂತಿವೆ:
- ಹೈದರಾಬಾದ್: ಪ್ರತಿ ವ್ಯಕ್ತಿಗೆ ಪ್ರತಿ ರಾತ್ರಿಗೆ ₹ 1,000
- ನೊಯ್ಡಾ: ಪ್ರತಿ ವ್ಯಕ್ತಿಗೆ ಪ್ರತಿ ರಾತ್ರಿಗೆ ₹ 1,250
- ನೊಯ್ಡಾ ಕಾರ್ಯಕ್ರಮಕ್ಕಾಗಿ ವಸತಿ ಕೋರುವ ಭಕ್ತರಿಗೆ ನೊಯ್ಡಾ ಆಶ್ರಮದ ಸುತ್ತಮುತ್ತ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು
ವೈಎಸ್ಎಸ್ ನೊಯ್ಡಾ ಆಶ್ರಮದ ಒಳಗೆ ಯಾವುದೇ ವಸತಿ ಸೌಲಭ್ಯ ಲಭ್ಯವಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
ನೀವು ನೋಂದಣಿ ಶುಲ್ಕವನ್ನು ಪಾವತಿಸಲು ಕಷ್ಟಪಡುತ್ತಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿಯು ಮಂಗಳವಾರ, ಸೆಪ್ಟೆಂಬರ್ 15, 2026 ರಂದು ಬೆಳಿಗ್ಗೆ 11 ಗಂಟೆಗೆ (ಅಧಿಕೃತ ಭಾರತೀಯ ಕಾಲಮಾನ) ಪ್ರಾರಂಭವಾಗಲಿದೆ.
ನೋಂದಣಿ ಪ್ರಾರಂಭವಾದ ನಂತರ, ಭಕ್ತರು ಆನ್‌ಲೈನ್ ವೈಎಸ್ಎಸ್ ಡಿವೋಟಿ ಪೋರ್ಟಲ್ ಮೂಲಕ, ವೈಎಸ್ಎಸ್ ಸಹಾಯವಾಣಿಗೆ ಕರೆ ಮಾಡಿ, ಅಥವಾ ಯಾವುದೇ ವೈಎಸ್ಎಸ್ ಆಶ್ರಮಕ್ಕೆ ಅಥವಾ ಹೈದರಾಬಾದ್ ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.
ಡಿವೋಟಿ ಪೋರ್ಟಲ್ ಮೂಲಕ ಆನ್‌ಲೈನ್ ನೋಂದಣಿ:
ತ್ವರಿತ ಮತ್ತು ಸುಲಭವಾದ ನೋಂದಣಿಗಾಗಿ, ಭಕ್ತರು ವೈಎಸ್ಎಸ್ ಡಿವೋಟಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.
ವೈಎಸ್ಎಸ್ ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ನೋಂದಣಿ:
ದಯವಿಟ್ಟು (0651) 6655 555 ಗೆ ಕರೆ ಮಾಡಿ ಅಥವಾ [email protected] ಗೆ ಇಮೇಲ್ ಮಾಡಿ ಮತ್ತು ಈ ಕೆಳಗಿನ ವಿವರಗಳನ್ನು ಒದಗಿಸಿ:
- ನಿಮ್ಮ ಪೂರ್ಣ ಹೆಸರು
- ವಯಸ್ಸು
- ವಿಳಾಸ
- ಇಮೇಲ್ ಮತ್ತು ದೂರವಾಣಿ ಸಂಖ್ಯೆ
- ವೈಎಸ್ಎಸ್ ಪಾಠಗಳ ನೋಂದಣಿ ಸಂಖ್ಯೆ (ಅಥವಾ ಎಸ್‌ಆರ್‌ಎಫ್ ಸದಸ್ಯತ್ವ ಸಂಖ್ಯೆ)
- ನೀವು ಬರುವ ಮತ್ತು ಹೊರಡುವ ಪ್ರಸ್ತಾವಿತ ದಿನಾಂಕಗಳು
ನಿಮ್ಮ ಮೊಬೈಲ್ ಅಥವಾ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವ ಪಾವತಿ ಕೊಂಡಿಯ ಮೂಲಕ ನೀವು ಮೊತ್ತವನ್ನು ಪಾವತಿಸಬಹುದು.
ಎಸ್‌ಆರ್‌ಎಫ್ ಭಕ್ತರಿಗಾಗಿ ನೋಂದಣಿ:
- ಆಸಕ್ತ ಎಸ್‌ಆರ್‌ಎಫ್ ಭಕ್ತರು [email protected] ಗೆ ಇಮೇಲ್ ಕಳುಹಿಸುವ ಮೂಲಕ YSS ಸಹಾಯವಾಣಿಯನ್ನು ಸಂಪರ್ಕಿಸಲು ಮತ್ತು ಮೇಲೆ ತಿಳಿಸಿದ ಎಲ್ಲಾ ವಿವರಗಳನ್ನು ಒದಗಿಸಲು ವಿನಂತಿಸಲಾಗಿದೆ.
- ಎಸ್‌ಆರ್‌ಎಫ್ ಭಕ್ತರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಸ್ಥಳದಲ್ಲಿ ಊಟ ಮಾಡಲು ಹಾರ್ದಿಕ ಸ್ವಾಗತ, ಆದರೆ ಕೆಳಗೆ ಹಂಚಿಕೊಳ್ಳಲಾದ ಯಾವುದೇ ಹೋಟೆಲ್‌ಗಳಲ್ಲಿ ತಮ್ಮದೇ ಆದ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಲು ಅವರನ್ನು ವಿನಂತಿಸಲಾಗಿದೆ.
ದಯವಿಟ್ಟು ಗಮನಿಸಿ:
- ವೈಎಸ್ಎಸ್ / ಎಸ್‌ಆರ್‌ಎಫ್ ಭಕ್ತರು ಮಾತ್ರ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.
- 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲ.
- ವಿವಿಧ ಸ್ಥಳಗಳಲ್ಲಿ ಲಭವಿರುವ ಮಿತಿಯಾದ ವಸತಿ ಸೌಲಭ್ಯಗಳಿಂದಾಗಿ, ವಸತಿ ಅಗತ್ಯವಿರುವ ನೋಂದಣಿಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದ ಮೇಲೆ ಖಚಿತಪಡಿಸಲಾಗುವುದು.
- ಎರಡೂ ಸ್ಥಳಗಳಲ್ಲಿನ ಕಾರ್ಯಕ್ರಮಗಳಿಗೆ ಹಾಜರಾಗಲು ಆಸಕ್ತಿ ಹೊಂದಿರುವ ಭಕ್ತರು ಹಾಗೆ ಮಾಡಬಹುದು.
ಹೈದರಾಬಾದ್ ಮತ್ತು ನೊಯ್ಡಾದ ಒಂದು ದಿನದ ಕಾರ್ಯಕ್ರಮಗಳಿಗಾಗಿ, ಭಕ್ತರು ಕಾರ್ಯಕ್ರಮದ ಹಿಂದಿನ ದಿನದ ಸಂಜೆ ಆಗಮಿಸಲು ಮತ್ತು ಕಾರ್ಯಕ್ರಮ ಮುಗಿದ ನಂತರದ ಬೆಳಿಗ್ಗೆಯವರೆಗೆ ಉಳಿಯಲು ಆಯ್ಕೆ ಮಾಡಬಹುದು. ವಸತಿ ಸೌಲಭ್ಯವನ್ನು ಪಡೆಯಲು ಬಯಸಿದರೆ, ಭಕ್ತರು ಉಳಿಯಲು ಬಯಸುವ ದಿನಗಳ ಸಂಖ್ಯೆಯ ಆಧಾರದ ಮೇಲೆ ಹೆಚ್ಚುವರಿ ಶುಲ್ಕವಿರುತ್ತದೆ. ವಸತಿ ಶುಲ್ಕಗಳು ಈ ಕೆಳಗಿನಂತಿವೆ:
- ಹೈದರಾಬಾದ್: ಪ್ರತಿ ವ್ಯಕ್ತಿಗೆ ಪ್ರತಿ ರಾತ್ರಿಗೆ ₹1,000
- ನೊಯ್ಡಾ: ಪ್ರತಿ ವ್ಯಕ್ತಿಗೆ ಪ್ರತಿ ರಾತ್ರಿಗೆ ₹1,250
ನೊಯ್ಡಾ ಕಾರ್ಯಕ್ರಮಕ್ಕಾಗಿ ವಸತಿ ಕೋರುವ ಭಕ್ತರಿಗೆ ನೊಯ್ಡಾ ಆಶ್ರಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು.
ವೈಎಸ್ಎಸ್ ನೊಯ್ಡಾ ಆಶ್ರಮದ ಒಳಗೆ ಯಾವುದೇ ವಸತಿ ಸೌಲಭ್ಯ ಲಭ್ಯವಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
ದಯವಿಟ್ಟು ಗಮನಿಸಿ:
- ಎರಡೂ ಸ್ಥಳಗಳಲ್ಲಿ ಲಭ್ಯವಿರುವ ಮಿತಿಯಾದ ವಸತಿ ಸೌಲಭ್ಯಗಳಿಂದಾಗಿ, ವಸತಿ ಅಗತ್ಯವಿರುವ ನೋಂದಣಿಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದ ಮೇಲೆ ಖಚಿತಪಡಿಸಲಾಗುವುದು.
- ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಹಂಚಿಕೊಳ್ಳುವ ವಸತಿ ಒದಗಿಸಲಾಗುವುದು. ಕುಟುಂಬದ ಸದಸ್ಯರು ದಯವಿಟ್ಟು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿ ಮತ್ತು ಸಿದ್ಧತೆ ಮಾಡಿಕೊಳ್ಳಿ.
- ವಸತಿ ಅಥವಾ ಆಹಾರಕ್ಕಾಗಿ ವಿಶೇಷ ಅಗತ್ಯತೆಗಳನ್ನು ಹೊಂದಿರುವ ಭಕ್ತರು ದಯವಿಟ್ಟು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಳ್ಳಿ. ಹತ್ತಿರದ ಹೋಟೆಲ್‌ಗಳ ಪಟ್ಟಿಯನ್ನು ಕೆಳಗೆ ಹಂಚಿಕೊಳ್ಳಲಾಗಿದೆ.
ಯಾವಾಗಲೂ ಇರುವಂತೆ, ನೋಂದಣಿ, ವಸತಿ, ದೃಶ್ಯ-ಶ್ರಾವ್ಯ ವ್ಯವಸ್ಥೆ, ಭೋಜನ, ನೈರ್ಮಲ್ಯ, ಮಾರ್ಗದರ್ಶನ ಮತ್ತು ಇತರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಭಕ್ತ-ಸ್ವಯಂಸೇವಕರ ಅಗತ್ಯವಿರುತ್ತದೆ. ಈ ಕೆಲವು ಕ್ಷೇತ್ರಗಳಲ್ಲಿ, ಪ್ರತಿ ಕಾರ್ಯಕ್ರಮ ಪ್ರಾರಂಭವಾಗುವ ಒಂದು ಅಥವಾ ಎರಡು ದಿನಗಳ ಮುಂಚಿತವಾಗಿಯೇ ಸ್ವಯಂಸೇವಕರ ಅಗತ್ಯವಿರುತ್ತದೆ. ನೀವು ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಬಯಸಿದರೆ, ದಯವಿಟ್ಟು ನೋಂದಣಿ ನಮೂನೆಯಲ್ಲಿ ಇದನ್ನು ಸೂಚಿಸಿ.
ನೋಂದಣಿ ಮತ್ತು ವಿಚಾರಣೆಗಾಗಿ ಸಂಪರ್ಕ ವಿವರಗಳು
ಯೋಗದಾ ಸತ್ಸಂಗ ಶಾಖಾ ಮಠ — ರಾಂಚಿ
ಪರಮಹಂಸ ಯೋಗಾನಂದ ಪಥ
ರಾಂಚಿ – 834001
ಜಾರ್ಖಂಡ್
ಫೋನ್: (0651) 6655 555 (ಸೋಮ-ಶನಿ, ಬೆಳಿಗ್ಗೆ 9:00 – ಸಂಜೆ 4:30)
ಇಮೇಲ್: [email protected]

















