ಎಸ್‌ಆರ್‌ಎಫ್‌ ಮಾತೃ ಕೇಂದ್ರದ ಭವಿಷ್ಯಕ್ಕಾಗಿ ಒಂದು ದೃಷ್ಟಿಕೋನ

(ಸ್ವಾಮಿ ಚಿದಾನಂದ ಗಿರಿಯವರೊಂದಿಗೆ ಒಂದು ವಿಶೇಷ ನೇರ ಪ್ರಸಾರ)

ಶನಿವಾರ, ಸೆಪ್ಟೆಂಬರ್ 12, 2026

ರಾತ್ರಿ 10:30 ರಿಂದ

(ಅಧಿಕೃತ ಭಾರತೀಯ ಕಾಲಮಾನ)

ಸ್ವಾಮಿ ಚಿದಾನಂದ ಗಿರಿಯವರೊಂದಿಗೆ ವಿಶೇಷ ನೇರ ಪ್ರಸಾರ — ಸೆಪ್ಟೆಂಬರ್ 12, 2026

ಕಾರ್ಯಕ್ರಮದ ಬಗ್ಗೆ

ವೈಎಸ್ಎಸ್/ಎಸ್‌ಆರ್‌ಎಫ್‌ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ ಹಾಗೂ ಎಸ್‌ಆರ್‌ಎಫ್‌ ಉಪಾಧ್ಯಕ್ಷರಾದ ಸ್ವಾಮಿ ವಿಶ್ವಾನಂದ ಗಿರಿ ಅವರು, ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯ ನವೀಕರಣ ಮತ್ತು ಪುನರ್ನಿರ್ಮಾಣ ಯೋಜನೆಯ ಹಿಂದಿನ ದೃಷ್ಟಿಕೋನ ಮತ್ತು ಸ್ಫೂರ್ತಿಯನ್ನು ಅನಾವರಣಗೊಳಿಸುತ್ತಾ, ಪೂರ್ಣಗೊಂಡ ಯೋಜನೆಯ “ಮುನ್ನೋಟವನ್ನು” ಹಂಚಿಕೊಳ್ಳಲಿದ್ದಾರೆ; ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾವು ನಿಮ್ಮನ್ನು ಆದರದಿಂದ ಆಹ್ವಾನಿಸುತ್ತೇವೆ.

ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯನ್ನು (ಎಸ್‌ಆರ್‌ಎಫ್‌ ಮಾತೃ ಕೇಂದ್ರ) ಪರಮಹಂಸ ಯೋಗಾನಂದಜೀಯವರು 1925ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಸ್ಥಾಪಿಸಿದರು. ಇದು ಪ್ರಾಚೀನ ಕ್ರಿಯಾಯೋಗ ವಿಜ್ಞಾನವನ್ನು ಸಮಸ್ತ ಮಾನವಕುಲಕ್ಕೆ ಪಸರಿಸುವ ಅವರ ವಿಶ್ವ ಕಾರ್ಯಾಚರಣೆಯ ಆಧ್ಯಾತ್ಮಿಕ ಮತ್ತು ಆಡಳಿತಾತ್ಮಕ ಕೇಂದ್ರವಾಗಿದೆ.

ಈ ಕಾರ್ಯಕ್ರಮವು ಸೆಪ್ಟೆಂಬರ್ 12, ಶನಿವಾರ ರಾತ್ರಿ 10:30 ಗಂಟೆಯಿಂದ ( ಭಾರತೀಯ ಕಾಲಮಾನ) ಲಾಸ್ ಏಂಜಲೀಸ್‌ನಲ್ಲಿರುವ ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಿಂದ ನೇರ ಪ್ರಸಾರವಾಗಲಿದೆ ಮತ್ತು ನಂತರವೂ ವೀಕ್ಷಿಸಲು ಲಭ್ಯವಿರುತ್ತದೆ.

ಈ ಕಾರ್ಯಕ್ರಮವು ಇಂಗ್ಲಿಷ್‌ನಲ್ಲಿ ನಡೆಯಲಿದೆ. ಹಿಂದಿ ಭಾಷೆಯಲ್ಲಿ ಏಕಕಾಲಿಕ ಭಾಷಾಂತರದ ಸೌಲಭ್ಯವಿರುತ್ತದೆ (ನೇರ ಕಾರ್ಯಕ್ರಮದ ಸಮಯದಲ್ಲಿ ಮಾತ್ರ, ಝೂಮ್ ಮೂಲಕ).

ಹಿಂದಿ ಭಾಷೆಯಲ್ಲಿ ಏಕಕಾಲಿಕ ಭಾಷಾಂತರವನ್ನು ಪಡೆಯಲು:

  • ಝೂಮ್ ಮೂಲಕ ಸೇರಿ (ನೇರ ಕಾರ್ಯಕ್ರಮದ ಸಮಯದಲ್ಲಿ). ಕಾರ್ಯಕ್ರಮ ಪ್ರಾರಂಭವಾಗುವ ಕೆಲವು ನಿಮಿಷಗಳ ಮುನ್ನವೇ ಸೇರಿಕೊಳ್ಳುವಂತೆ ಸೂಚಿಸಲಾಗಿದೆ.
  • ನಿಮ್ಮ ಝೂಮ್ ವೀಕ್ಷಣೆಯ ಕೆಳಭಾಗದಲ್ಲಿರುವ ಟೂಲ್‌ಬಾರ್‌ನಲ್ಲಿರುವ “Interpretation” ಗುಂಡಿಯನ್ನು ಒತ್ತಿ. (ನಿಮಗೆ ಆ ಆಯ್ಕೆ ಕಾಣದಿದ್ದರೆ, “More” ಗುಂಡಿಯನ್ನು ಒತ್ತಿ ಮತ್ತು ಕಾಣಿಸಿಕೊಳ್ಳುವ ಮೆನುವಿನಿಂದ “Interpretation” ಅನ್ನು ಆಯ್ಕೆ ಮಾಡಿ.)
  • ಪಟ್ಟಿಯಿಂದ “Hindi” ಯನ್ನು ಆಯ್ಕೆ ಮಾಡಿ.
  • ಕಾರ್ಯಕ್ರಮ ಪ್ರಾರಂಭವಾದ ನಂತರ, ನೀವು ಹಿಂದಿಯಲ್ಲಿ ಏಕಕಾಲಿಕ ವ್ಯಾಖ್ಯಾನವನ್ನು ಕೇಳುವಿರಿ.

ದಯವಿಟ್ಟು ಗಮನಿಸಿ:

  • ನಿಮಗೆ ತಾಂತ್ರಿಕ ಸಹಾಯದ ಅಗತ್ಯವಿದ್ದರೆ, ದಯವಿಟ್ಟು (0651) 6655 555 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ [email protected] ಗೆ ಇಮೇಲ್ ಕಳುಹಿಸುವ ಮೂಲಕ ವೈಎಸ್‌ಎಸ್ ಸಹಾಯವಾಣಿಯನ್ನು ಸಂಪರ್ಕಿಸಿ.
  • ಈ ನೇರಪ್ರಸಾರ ಕಾರ್ಯಕ್ರಮಕ್ಕಾಗಿ, ವೈಎಸ್‌ಎಸ್ ಸಹಾಯವಾಣಿ ರಾತ್ರಿ 10 ಗಂಟೆಯಿಂದ (ಅಧಿಕೃತ ಭಾರತೀಯ ಕಾಲಮಾನ) ತಾಂತ್ರಿಕ ಬೆಂಬಲಕ್ಕಾಗಿ ಲಭ್ಯವಿರುತ್ತದೆ.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ