⁠ಈ ಕಾರ್ಯಕ್ರಮವು ಈಗ ಮುಕ್ತಾಯಗೊಂಡಿದೆ.
ಮುಂದೆ ಆಯೋಜಿಸುವ ಘಟನಾವಳಿಯಲ್ಲಿ ನೀವು ನಮ್ಮೊಂದಿಗೆ ಭಾಗಿಯಾಗಲು ಇಚ್ಛಿಸಿದಲ್ಲಿ, ದಯವಿಟ್ಟು ಘಟನಾವಳಿಗಳು ಪುಟಕ್ಕೆ ಭೇಟಿ ನೀಡಿ.

ಎಸ್‌ಆರ್‌ಎಫ್‌ ಲೇಕ್ ಶ್ರೈನ್ 75 ನೇ ವಾರ್ಷಿಕೋತ್ಸವದ ಆಚರಣೆ

(ಸ್ವಾಮಿ ಚಿದಾನಂದ ಗಿರಿಯವರೊಂದಿಗೆ ವಿಶೇಷ ನೇರ ಪ್ರಸಾರ)

ಶನಿವಾರ, ಆಗಸ್ಟ್ 22, 2026

ರಾತ್ರಿ 10:30 ರಿಂದ

(ಅಧಿಕೃತ ಭಾರತೀಯ ಕಾಲಮಾನ)

ಎಸ್‌ಆರ್‌ಎಫ್ ಲೇಕ್ ಶ್ರೈನ್ 75ನೇ ವಾರ್ಷಿಕೋತ್ಸವ ಆಚರಣೆ (ಸ್ವಾಮಿ ಚಿದಾನಂದ ಗಿರಿಯವರೊಂದಿಗೆ ವಿಶೇಷ ನೇರ ಪ್ರಸಾರ) — ಆಗಸ್ಟ್ 22, 2026

ಕಾರ್ಯಕ್ರಮದ ಬಗ್ಗೆ

1950ರಲ್ಲಿ ಕ್ಯಾಲಿಫೋರ್ನಿಯಾದ ಪೆಸಿಫಿಕ್ ಪಾಲಿಸೇಡ್ಸ್‌ನಲ್ಲಿರುವ ಎಸ್‌ಆರ್‌ಎಫ್‌ ಲೇಕ್ ಶ್ರೈನ್ ಅನ್ನು ಪರಮಹಂಸ ಯೋಗಾನಂದಜೀಯವರು ಸಮರ್ಪಿಸಿದ 75ನೇ ವಾರ್ಷಿಕೋತ್ಸವವನ್ನು ಆಚರಿಸುವ ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ವೈಎಸ್ಎಸ್/ಎಸ್‌ಆರ್‌ಎಫ್‌ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರೊಂದಿಗೆ ಸೇರಿಕೊಳ್ಳುವಂತೆ ನಾವು ನಿಮ್ಮನ್ನು ಅತ್ಯಂತ ಸಂತೋಷದಿಂದ ಆಹ್ವಾನಿಸುತ್ತೇವೆ.

ಎಸ್‌ಆರ್‌ಎಫ್‌ ಲೇಕ್ ಶ್ರೈನ್ ಅನ್ನು ಪರಮಹಂಸ ಯೋಗಾನಂದಜಿಯವರು ವಿಶ್ವದಾದ್ಯಂತದ ಜನರು ಬಂದು ತಮ್ಮ ಹೃದಯ, ಮನಸ್ಸು ಮತ್ತು ಆತ್ಮದಲ್ಲಿ ನಿಜವಾದ ಶಾಂತಿಯನ್ನು ಅನುಭವಿಸಬಹುದಾದ ಒಂದು ಸಾರ್ವತ್ರಿಕ ಆಧ್ಯಾತ್ಮಿಕ ಅಭಯಾರಣ್ಯವಾಗಿ ಸ್ಥಾಪಿಸಿದರು. ಆಗಸ್ಟ್ 20, 1950ರಂದು ಲೇಕ್ ಶ್ರೈನ್‌ನ ಸಮರ್ಪಣಾ ಸಮಾರಂಭದಲ್ಲಿ ಅವರು ಹೀಗೆ ಹೇಳಿದರು: “ಜೀವನದ ನಿಜವಾದ ಕಲೆಯನ್ನು ಅಭ್ಯಾಸ ಮಾಡಲು ನಮಗೆ ಸಾಧ್ಯವಾಗಬೇಕಾದರೆ ವಿಶ್ವ ಭ್ರಾತೃತ್ವ ಇರಬೇಕು. ಎಲ್ಲರೂ ಸಾಮಾನ್ಯ ನಂಬಿಕೆಯಲ್ಲಿರುವ ಏಕತೆಯನ್ನು ಅನುಭವಿಸುವಂತೆ ಈ ದೇವಾಲಯವನ್ನು ಎಲ್ಲಾ ಧರ್ಮಗಳಿಗಾಗಿ ಸೃಷ್ಟಿಸಲಾಗಿದೆ.”

2025ರ ಪೆಸಿಫಿಕ್ ಪ್ಯಾಲಿಸೇಡ್ಸ್ ಬೆಂಕಿಯ ಅವಘಡದ ನಂತರ, ಲೇಕ್ ಶ್ರೈನ್ ಆವರಣದಲ್ಲಿ ಕೈಗೊಂಡ ಪರಿಹಾರ ಕಾರ್ಯಗಳಿಂದಾಗಿ ಈ ಕಾರ್ಯಕ್ರಮವನ್ನು 2025ರಲ್ಲಿ ನಡೆಸಲು ಸಾಧ್ಯವಾಗಲಿಲ್ಲ. ವೈಎಸ್ಎಸ್/ಎಸ್‌ಆರ್‌ಎಫ್‌ ಅಧ್ಯಕ್ಷರೊಂದಿಗೆ ಈ ಪವಿತ್ರ ಸ್ಥಳದಲ್ಲಿ ವಿಶೇಷ ಸಂಭ್ರಮಾಚರಣೆಯ ಮೂಲಕ ಈ ಮಹತ್ವದ ವಾರ್ಷಿಕೋತ್ಸವವನ್ನು ಈಗ ಆಚರಿಸಲು ನಮಗೆ ಅತೀವ ಸಂತೋಷವಾಗಿದೆ.

ಈ ಕಾರ್ಯಕ್ರಮವು ಆಗಸ್ಟ್ 22, ಶನಿವಾರ ರಾತ್ರಿ 10:30 ಗಂಟೆಯಿಂದ (ಭಾರತೀಯ ಕಾಲಮಾನ) ಲಾಸ್ ಏಂಜಲೀಸ್‌ನಲ್ಲಿರುವ ಎಸ್‌ಆರ್‌ಎಫ್ ಲೇಕ್ ಶ್ರೈನ್ ಮಂದಿರದಿಂದ ನೇರ ಪ್ರಸಾರಗೊಳ್ಳುತ್ತದೆ ಮತ್ತು ನಂತರವೂ ವೀಕ್ಷಣೆಗೆ ಲಭ್ಯವಿರುತ್ತದೆ.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ