ಗುರು ಮತ್ತು ಶಿಷ್ಯರ ಸಂಬಂಧವು ಸ್ನೇಹದಲ್ಲಿನ ಪ್ರೀತಿಯ ಪರಮ ಅಭಿವ್ಯಕ್ತಿಯಾಗಿದೆ; ಅದು ನಿಶ್ಶರತ್ ದಿವ್ಯ ಸ್ನೇಹವಾಗಿದ್ದು, ಒಂದೇ ಒಂದು ಸಾಮಾನ್ಯ ಗುರಿಯ ಮೇಲೆ ಆಧಾರಿತವಾಗಿದೆ: ಎಲ್ಲಕ್ಕಿಂತ ಹೆಚ್ಚಾಗಿ ದೇವರನ್ನು ಪ್ರೀತಿಸುವ ಬಯಕೆ.
— ಪರಮಹಂಸ ಯೋಗಾನಂದ
ಗುರು ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ, ವೈಎಸ್ಎಸ್ ಭಕ್ತರು, ಪೂಜ್ಯ ವೈಎಸ್ಎಸ್ ಗುರುಗಳ ಪರಂಪರೆಗೆ — ವಿಶೇಷವಾಗಿ ನಮ್ಮ ಪ್ರಿಯ ಗುರುದೇವರಾದ ಶ್ರೀ ಶ್ರೀ ಪರಮಹಂಸ ಯೋಗಾನಂದರಿಗೆ — ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತಾರೆ. ಅವರ ದೈವೀ ಪ್ರೇರಣೆ ಮತ್ತು ಮಾರ್ಗದರ್ಶನವು ನಮ್ಮನ್ನು ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ನಿರಂತರವಾಗಿ ಮುನ್ನಡೆಸುತ್ತಿವೆ.
ಈ ಸಂದರ್ಭವನ್ನು ಸ್ಮರಿಸಲು ಮತ್ತು ಪವಿತ್ರ ಗುರು-ಶಿಷ್ಯ ಸಂಬಂಧವನ್ನು ಗೌರವಿಸಲು, ವೈಎಸ್‌ಎಸ್ ಸನ್ಯಾಸಿಯೊಬ್ಬರಿಂದ ವಿಶೇಷ ಆನ್‌ಲೈನ್ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಆಧ್ಯಾತ್ಮಿಕವಾಗಿ ಪೋಷಿಸುವ ಕಾರ್ಯಕ್ರಮವು ಸಾಮೂಹಿಕ ಧ್ಯಾನ, ಭಕ್ತಿಪೂರ್ವಕ ಕೀರ್ತನೆ ಮತ್ತು ಪ್ರೇರಣಾತ್ಮಕ ಪ್ರವಚನವನ್ನು ಒಳಗೊಂಡಿತ್ತು.
ಈ ಶುಭ ಸಂದರ್ಭದಲ್ಲಿ, ವೈಎಸ್‌ಎಸ್ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ನೇರ ಕಾರ್ಯಕ್ರಮಗಳನ್ನು ಸಹ ನಡೆಸಲಾಯಿತು.
ವೈಎಸ್‌ಎಸ್/ಎಸ್ಆರ್‌ಎಫ್ ಅಧ್ಯಕ್ಷರಾದ ಸ್ವಾಮಿ ಚಿದಾನಂದ ಗಿರಿ ಅವರಿಂದ ಸಂದೇಶ
ನಮ್ಮ ಪೂಜ್ಯ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರಿಂದ ಈ ಸಂದರ್ಭದ ವಿಶೇಷ ಸಂದೇಶವನ್ನು ಓದಲು, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತಿ:
ನಮ್ಮ ಗುರುದೇವರಾದ ಶ್ರೀ ಶ್ರೀ ಪರಮಹಂಸ ಯೋಗಾನಂದರು ಮತ್ತು ವೈಎಸ್ಎಸ್ ಗುರುಗಳ ಪರಂಪರೆಯು ನಿಮ್ಮ ಜೀವನದಲ್ಲಿ ಸುರಿಸಿರುವ ಅಪಾರ ಆಶೀರ್ವಾದಗಳಿಗಾಗಿ ನಿಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ಹಾಗೂ ಅವರ ದೈವಿಕ ಧ್ಯೇಯವನ್ನು ಸೇವೆ ಮಾಡಲು ನಿಮ್ಮ ಬದ್ಧತೆಯನ್ನು ಪುನರ್ ದೃಢಪಡಿಸಲು ನೀವು ಇಚ್ಛಿಸುವುದಾದರೆ, ಗುರು ಪೂರ್ಣಿಮಾ ಮನವಿಯನ್ನು ಓದಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ:
ಈ ವಿಶೇಷ ಸಂದರ್ಭದಲ್ಲಿ ಕಾಣಿಕೆ ನೀಡಲು, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತಿ:
















