ಶ್ರೀ ಶ್ರೀ ಲಾಹಿರಿ ಮಹಾಶಯರ ಆವಿರ್ಭಾವ ದಿವಸ

ಆನ್‌ಲೈನ್‌ನಲ್ಲಿ ಸ್ಮರಣಾರ್ಥ ಧ್ಯಾನ

ಮಂಗಳವಾರ, ಸೆಪ್ಟಂಬರ್‌ 30

ಬೆಳಿಗ್ಗೆ 6:30 ರಿಂದ

– ಬೆಳಿಗ್ಗೆ 8:00 ರ ವರೆಗೆ

(ಅಧಿಕೃತ ಭಾರತೀಯ ಕಾಲಮಾನ)

ಕಾರ್ಯಕ್ರಮದ ಬಗ್ಗೆ

“ಕ್ರಿಯಾ ಅಭ್ಯಾಸ ಮಾಡುವವರೊಂದಿಗೆ ನಾನು ಸದಾ ಇರುತ್ತೇನೆ,” ಎಂದು ತಮ್ಮ ಸಮೀಪದಲ್ಲಿ ಇರಲು ಸಾಧ್ಯವಾಗದ ಶಿಷ್ಯರಿಗೆ ಅವರು ಸಮಾಧಾನ ಹೇಳುತ್ತಿದ್ದರು. “ನಿಮ್ಮ ನಿರಂತರವಾಗಿ ವಿಸ್ತರಿಸುತ್ತಿರುವ ಆಧ್ಯಾತ್ಮಿಕ ಗ್ರಹಿಕೆಗಳ ಮೂಲಕ ನಾನು ನಿಮ್ಮನ್ನು ಪಾರಮಾರ್ಥಿಕ ಧಾಮಕ್ಕೆ ಮಾರ್ಗದರ್ಶಿಸುವೆ.”

— ಶ್ರೀ ಶ್ರೀ ಲಾಹಿರಿ ಮಹಾಶಯರು, ಯೋಗಿಯ ಆತ್ಮಕಥೆ ಯಲ್ಲಿ ಉಲ್ಲೇಖಿಸಿದಂತೆ

ಯೋಗಾವತಾರ ಅಥವಾ “ಯೋಗದ ಅವತಾರ” ಲಾಹಿರಿ ಮಹಾಶಯರು, 160 ವರ್ಷಗಳಿಗೂ ಹಿಂದೆ ಹಿಮಾಲಯದ ರಾಣಿಕೇತ್ ಬಳಿ ಅಮರ ಗುರು ಮಹಾವತಾರ ಬಾಬಾಜಿಯವರನ್ನು ಮೊದಲು ಭೇಟಿಯಾಗಿ, ಅವರಿಂದ ಪವಿತ್ರ ವಿಜ್ಞಾನದ ಕ್ರಿಯಾ ಯೋಗ ದೀಕ್ಷೆಯನ್ನು ಪಡೆದರು. ಪರಮಹಂಸ ಯೋಗಾನಂದರು ತಮ್ಮ ಯೋಗಿಯ ಆತ್ಮಕಥೆ ಕೃತಿಯ ಮೂಲಕ ಈ ದಿವ್ಯ ಆಶೀರ್ವಾದವನ್ನು ಮೊದಲು ಜಗತ್ತಿನ ಗಮನಕ್ಕೆ ತಂದರು. ಅದರಲ್ಲಿ ಅವರು ಹೀಗೆ ಹೇಳಿದ್ದಾರೆ: “ಈ ಮಂಗಳಕರ ಘಟನೆ ಲಾಹಿರಿ ಮಹಾಶಯರಿಗೆ ಮಾತ್ರ ಸಂಭವಿಸಲಿಲ್ಲ; ಅದು ಸಮಸ್ತ ಮಾನವಕುಲಕ್ಕೆ ಒಂದು ಅದೃಷ್ಟದ ಕ್ಷಣವಾಗಿತ್ತು. ಕಳೆದುಹೋಗಿದ್ದ, ಅಥವಾ ಬಹಳ ಹಿಂದೆಯೇ ಮರೆಯಾಗಿದ್ದ, ಯೋಗದ ಅತಿಶ್ರೇಷ್ಠ ಕಲೆಯನ್ನು ಬೆಳಕಿಗೆ ತರಲಾಯಿತು”.

ಸೆಪ್ಟೆಂಬರ್ 30 ರಂದು, ಪವಿತ್ರ ಕ್ರಿಯಾ ಯೋಗ ಬೋಧನೆಗಳನ್ನು ಜಗತ್ತಿಗೆ ತಂದ ಮಹಾನ್ ಯೋಗಾವತಾರರಾದ ಲಾಹಿರಿ ಮಹಾಶಯರ ಆವಿರ್ಭಾವ ದಿವಸವನ್ನು (ಜನ್ಮ ವಾರ್ಷಿಕೋತ್ಸವವನ್ನು) ವೈಎಸ್‌ಎಸ್‌ ಸನ್ಯಾಸಿಯೊಬ್ಬರು ನಡೆಸಿದ ವಿಶೇಷ ಆನ್‌ಲೈನ್ ಧ್ಯಾನದೊಂದಿಗೆ ಆಚರಿಸಲಾಯಿತು.

ಈ ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ನಂತರ ಪಠಣ, ಭಜನೆ ಮತ್ತು ಧ್ಯಾನದ ಅವಧಿಯೊಂದಿಗೆ ಮುಂದುವರಿದು, ಪರಮಹಂಸ ಯೋಗಾನಂದರ ಉಪಶಮನಕಾರಿ ತಂತ್ರದ ಅಭ್ಯಾಸ ಮತ್ತು ಸಮಾರೋಪ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಂಡಿತು.

ಈ ಆನ್‌ಲೈನ್ ಧ್ಯಾನದ ಜೊತೆಗೆ, ಈ ಸಂದರ್ಭದಲ್ಲಿ ವೈಎಸ್‌ಎಸ್‌ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ನೇರ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿತ್ತು.

ಈ ಶುಭ ಸಂದರ್ಭದಲ್ಲಿ ನೀವು ಕಾಣಿಕೆ ನೀಡಲು ಬಯಸಿದರೆ, ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಮತ್ತು ಕೆಳಗೆ ನೀಡಿರುವ ಕೊಂಡಿಯನ್ನು ಬಳಸಿ ಕಾಣಿಕೆ ಸಲ್ಲಿಸಬಹುದು. ನಿಮ್ಮ ಕೊಡುಗೆಯು ಅನೇಕ ಮಾನವೀಯ ಚಟುವಟಿಕೆಗಳನ್ನು ಕೈಗೊಳ್ಳಲು ನಮಗೆ ಸಹಾಯ ಮಾಡುವುದಲ್ಲದೆ, ಮಹಾನ್ ಗುರುಗಳ ಮೇಲಿನ ನಿಮ್ಮ ಶಾಶ್ವತ ಪ್ರೀತಿ ಮತ್ತು ಅಚಲ ಭಕ್ತಿಯನ್ನು ಸಹ ತೋರಿಸುತ್ತದೆ.

ನೂತನ ಅತಿಥಿ

ಪರಮಹಂಸ ಯೋಗಾನಂದರ ಬಗ್ಗೆಯೂ ಅವರ ಉಪದೇಶಗಳ ಬಗ್ಗೆಯೂ ತಿಳಿಯಲು ಕೆಳಗಿನ ಲಿಂಕ್ ಗಳನ್ನು ನೋಡಿಕೊಳ್ಳಿ:

ಇದನ್ನು ಹಂಚಿಕೊಳ್ಳಿ