ಶ್ರೀ ಶ್ರೀ ಲಾಹಿರಿ ಮಹಾಶಯರ
ಸ್ಮರಣೋತ್ಸವ

ವೈಎಸ್ಎಸ್ ಒಡಿಕೆ ಲಾಹಿರಿ ಮಹಾಶಯರ ಸ್ಮರಣಾರ್ಥ ಕಾರ್ಯಕ್ರಮಗಳು — ಸೆಪ್ಟೆಂಬರ್ 2026

ಕಾರ್ಯಕ್ರಮದ ಬಗ್ಗೆ

ಈ ಮಹಾನ್ ಗೃಹಸ್ಥಗುರು ನಡೆಸಿದ ಸುಸಂಗತವಾದ ಸಮತೋಲಿತ ಜೀವನವು ಸಹಸ್ರಾರು ಸ್ತ್ರೀಪುರುಷರಿಗೆ ಸ್ಫೂರ್ತಿ ನೀಡಿತು.

— ಪರಮಹಂಸ ಯೋಗಾನಂದ

ಪರಮಹಂಸ ಯೋಗಾನಂದರ ಪರಮಗುರುಗಳಾದ ಲಾಹಿರಿ ಮಹಾಶಯರು, ಆಧುನಿಕ ಜಗತ್ತಿಗೆ ಕ್ರಿಯಾಯೋಗವನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಯೋಗಾವತಾರ (“ಯೋಗದ ಅವತಾರ”) ಎಂದು ಎಲ್ಲಾ ವೈಎಸ್ಎಸ್/ಎಸ್‌ಆರ್‌ಎಫ್ ಭಕ್ತರಿಂದ ಗೌರವಾನ್ವಿತರಾಗಿದ್ದಾರೆ. ಸೆಪ್ಟೆಂಬರ್ 30, 1828 ರಂದು ಜನಿಸಿದ ಲಾಹಿರಿ ಮಹಾಶಯರು ಸೆಪ್ಟೆಂಬರ್ 26, 1895 ರಂದು ತಮ್ಮ ಅಂತಿಮ ಧ್ಯಾನವಾದ ಮಹಾಸಮಾಧಿಯ ಸಮಯದಲ್ಲಿ ಈ ಲೋಕದಿಂದ ನಿರ್ಗಮಿಸಿದರು — ಮಹಾಸಮಾಧಿ ಎಂದರೆ ಅಂತಿಮ ಧ್ಯಾನ, ಅಥವಾ ಭಗವಂತನೊಂದಿಗಿನ ಸಚೇತನ ಸಮ್ಮಿಲನ; ಈ ಸಮಯದಲ್ಲಿ ಒಬ್ಬ ಸಿದ್ಧಸಾಧಕ ಗುರುವು ತನ್ನನ್ನು ವಿಶ್ವವ್ಯಾಪಿ ಓಂಕಾರದಲ್ಲಿ ಲೀನಗೊಳಿಸಿಕೊಂಡು ಭೌತಿಕ ಶರೀರವನ್ನು ತ್ಯಜಿಸುತ್ತಾನೆ.

ವೈಎಸ್ಎಸ್ ಸನ್ಯಾಸಿಗಳು 2026 ರ ಸೆಪ್ಟೆಂಬರ್‌ನಲ್ಲಿ ಲಾಹಿರಿ ಮಹಾಶಯರ ಮಹಾಸಮಾಧಿ ಮತ್ತು ಆವಿರ್ಭಾವ ವಾರ್ಷಿಕೋತ್ಸವಗಳನ್ನು ಗೌರವಿಸಲು ಎರಡು ವಿಶೇಷ ಆನ್‌ಲೈನ್ ಧ್ಯಾನಗಳನ್ನು ನಡೆಸಿಕೊಡಲಿದ್ದಾರೆ:

ಲಾಹಿರಿ ಮಹಾಶಯರ ಮಹಾಸಮಾಧಿ
ದಿವಸ ಸ್ಮರಣಾರ್ಥ ಧ್ಯಾನ

ಶನಿವಾರ, ಸೆಪ್ಟೆಂಬರ್ 26, 2026
ಬೆಳಿಗ್ಗೆ 6:30 – 8:00 (ಭಾರತೀಯ ಕಾಲಮಾನ)

ಸೆಪ್ಟೆಂಬರ್ 26, 1895ರಂದು, ಈ ಮಹಾಗುರುಗಳು ಮಹಾಸಮಾಧಿಯನ್ನು ಪ್ರವೇಶಿಸಿದರು; ಇದು ದೈವ ಸಾಕ್ಷಾತ್ಕಾರವನ್ನು ಪಡೆದ ಯೋಗಿಯೊಬ್ಬರು ದೇಹದಿಂದ ಪ್ರಜ್ಞಾಪೂರ್ವಕವಾಗಿ ನಿರ್ಗಮಿಸುವ ಅಂತಿಮ ಸ್ಥಿತಿಯಾಗಿದೆ. ಈ ದಿನದ ಸ್ಮರಣೆಗಾಗಿ, ವೈಎಸ್ಎಸ್ ಸನ್ಯಾಸಿಯೊಬ್ಬರ ನೇತೃತ್ವದಲ್ಲಿ ನಡೆಯುವ ಆನ್‌ಲೈನ್ ಧ್ಯಾನದಲ್ಲಿ ಪಾಲ್ಗೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ಈ ಕಾರ್ಯಕ್ರಮವು ಆರಂಭಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ನಂತರ ವಾಚನ, ಜಪ ಮತ್ತು ಧ್ಯಾನದ ಅವಧಿಯನ್ನು ಒಳಗೊಂಡಿರುತ್ತದೆ. ಪರಮಹಂಸ ಯೋಗಾನಂದಜಿಯವರ ಉಪಶಮನಕಾರಿ ತಂತ್ರದ ಅಭ್ಯಾಸ ಮತ್ತು ಮುಕ್ತಾಯದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಕೊನೆಗೊಳ್ಳುತ್ತದೆ.

ದಯವಿಟ್ಟು ಗಮನಿಸಿ ಈ ಕಾರ್ಯಕ್ರಮವು ಭಾನುವಾರ, ಸೆಪ್ಟೆಂಬರ್ 27 ರ ರಾತ್ರಿ 10 ಗಂಟೆಯವರೆಗೆ (ಭಾರತೀಯ ಕಾಲಮಾನ) ವೀಕ್ಷಣೆಗೆ ಲಭ್ಯವಿರುತ್ತದೆ.

ಲಾಹಿರಿ ಮಹಾಶಯರ ಆವಿರ್ಭಾವ ದಿವಸ
ಸ್ಮರಣಾರ್ಥ ಧ್ಯಾನ

ಬುಧವಾರ, ಸೆಪ್ಟೆಂಬರ್ 30, 2026
ಬೆಳಿಗ್ಗೆ 6:30 – 8:00 (ಭಾರತೀಯ ಕಾಲಮಾನ)

ಸೆಪ್ಟೆಂಬರ್ 30ರಂದು ಈ ಮಹಾನ್ ಯೋಗಾವತಾರರ ಆವಿರ್ಭಾವ ದಿವಸದ (ಜನ್ಮ ವಾರ್ಷಿಕೋತ್ಸವ) ಸ್ಮರಣಾರ್ಥ ವೈಎಸ್ಎಸ್ ಸನ್ಯಾಸಿಯೊಬ್ಬರು ವಿಶೇಷ ಆನ್‌ಲೈನ್ ಧ್ಯಾನವನ್ನು ನಡೆಸಲಿದ್ದಾರೆ. ಈ ಕಾರ್ಯಕ್ರಮವು ಆರಂಭಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ನಂತರ ವಾಚನ, ಜಪ ಮತ್ತು ಧ್ಯಾನದ ಅವಧಿಯನ್ನು ಒಳಗೊಂಡಿರುತ್ತದೆ. ಪರಮಹಂಸ ಯೋಗಾನಂದರ ಉಪಶಮನಕಾರಿ ತಂತ್ರದ ಅಭ್ಯಾಸ ಮತ್ತು ಮುಕ್ತಾಯದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಕೊನೆಗೊಳ್ಳುತ್ತದೆ.

ದಯವಿಟ್ಟು ಗಮನಿಸಿ: ಈ ಕಾರ್ಯಕ್ರಮವು ಅಕ್ಟೋಬರ್ 1, ಗುರುವಾರ ರಾತ್ರಿ 10:00 ಗಂಟೆಯವರೆಗೆ (ಭಾರತೀಯ ಕಾಲಮಾನ) ವೀಕ್ಷಣೆಗೆ ಲಭ್ಯವಿರುತ್ತದೆ.

ನೇರ ಕಾರ್ಯಕ್ರಮಗಳು

ಈ ವಿಶೇಷ ಸಂದರ್ಭಗಳಲ್ಲಿ, ವೈಎಸ್ಎಸ್ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ನೇರ ಉಪಸ್ಥಿತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ದಯವಿಟ್ಟು ನಿಮ್ಮ ಸಮೀಪವಿರುವ ಧ್ಯಾನ ಕೇಂದ್ರವನ್ನು ಸಂಪರ್ಕಿಸಿ.

ದೇಣಿಗೆ ಅರ್ಪಿಸುವುದು

ಈ ವಿಶೇಷ ದಿನಗಳಲ್ಲಿ, ನೀವು ಕಾಣಿಕೆಯನ್ನು ಅರ್ಪಿಸಲು ಬಯಸಿದರೆ, ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಕೆಳಗೆ ನೀಡಿರುವ ಕೊಂಡಿಯನ್ನು ಬಳಸಿ ಅದನ್ನು ಮಾಡಬಹುದು. ನಿಮ್ಮ ಕೊಡುಗೆಯು ನಾವು ಹಲವಾರು ಮಾನವೀಯ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯ ಮಾಡುವುದಲ್ಲದೆ, ಮಹಾನ್ ಗುರುವಿನ ಮೇಲಿನ ನಿಮ್ಮ ಶಾಶ್ವತ ಪ್ರೀತಿ ಮತ್ತು ಅಚಲ ಭಕ್ತಿಯನ್ನು ತೋರುತ್ತದೆ.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ