ವೈಎಸ್‌ಎಸ್‌ ಯುವ ಶಿಬಿರಗಳಲ್ಲಿ ನಗುವಿನ ಬೇಸಿಗೆ, ನಿಶ್ಚಲತೆ ಮತ್ತು ಸತ್ಸಂಗ

29 ಸೆಪ್ಟಂಬರ್‌, 2025

ಏಪ್ರಿಲ್, ಮೇ, ಮತ್ತು ಜೂನ್ ತಿಂಗಳುಗಳಲ್ಲಿ ನಡೆದ ಬಾಲಕಿಯರು ಮತ್ತು ಬಾಲಕರ ವಾರ್ಷಿಕ ಬೇಸಿಗೆ ಯುವ ಶಿಬಿರಗಳಲ್ಲಿ, ಯೋಗದಾ ಸತ್ಸಂಗದ ಭಕ್ತರು ಹಾಗೂ ಮಿತ್ರರ ಮಕ್ಕಳು ಮತ್ತು ಹದಿಹರೆಯದವರು ಒಂದು ವಾರ ಕಾಲ ಆನಂದಮಯ ಮೈತ್ರಿಕೂಟಕ್ಕಾಗಿ ಒಂದುಗೂಡಿದರು. ರಾಂಚಿ, ನೋಯ್ಡಾ, ಮತ್ತು ಚೆನ್ನೈನಲ್ಲಿರುವ ಯೋಗದಾ ಸತ್ಸಂಗ ಆಶ್ರಮಗಳು, 7-17 ರ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರನ್ನು ಒಂದು ವಾರದ ಕಾಲ ಧ್ಯಾನ, ಮೋಜಿನ ಚಟುವಟಿಕೆಗಳು ಹಾಗೂ ದೇಹ, ಮನಸ್ಸು, ಮತ್ತು ಆತ್ಮವನ್ನು ಬೆಳಗುವ ಪ್ರೇರಣಾದಾಯಕ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಲೀನವಾಗಲು ಬರಮಾಡಿಕೊಂಡವು.

ಗುರುದೇವ ಪರಮಹಂಸ ಯೋಗಾನಂದರ ಬದುಕುವುದು ಹೇಗೆ ಎಂಬ ವಿಷಯದ ಮೇಲಿನ ಅವರ ಬೋಧನೆಗಳನ್ನು ಆಧರಿಸಿದ ಈ ಶಿಬಿರಗಳು, ಅವರ ಆದರ್ಶಗಳಿಗನುಗುಣವಾಗಿ ಯುವಜನರಿಗಾಗಿ ಆಧ್ಯಾತ್ಮಿಕ ಶಿಕ್ಷಣದ ಅಗತ್ಯವನ್ನು ಮನಗಾಣಿಸುವುದಲ್ಲದೆ — ಮಕ್ಕಳನ್ನು ಧ್ಯಾನ ಮತ್ತು ಸರಿಯಾದ ಚಟುವಟಿಕೆಯ ಸಮತೋಲಿತ ಜೀವನವನ್ನು ನಡೆಸಲು ಸಶಕ್ತಗೊಳಿಸುತ್ತವೆ. ಪ್ರತಿಯೊಂದು ಆಶ್ರಮದಲ್ಲಿ ನಡೆದ ಶಿಬಿರದ ಚಟುವಟಿಕೆಗಳನ್ನು ವಿವಿಧ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರ ಅಗತ್ಯಗಳಿಗೆ ಅನುಗುಣವಾಗಿ ಚಿಂತನಾಪೂರ್ವಕವಾಗಿ ರೂಪಿಸಲಾಗಿತ್ತು; ಅದರಲ್ಲಿ ಚೈತನ್ಯದಾಯಕ ವ್ಯಾಯಾಮಗಳು, ಸಾಮೂಹಿಕ ಧ್ಯಾನಗಳು, ಸಂನ್ಯಾಸಿಗಳ ನೇತೃತ್ವದಲ್ಲಿನ ಸತ್ಸಂಗಗಳು, ಕಥಾಕಥನ, ಪೌಷ್ಟಿಕ ಆಹಾರ ಮತ್ತು ಹೊರಾಂಗಣ ಆಟಗಳು ಸೇರಿದ್ದವು.

ರಾಂಚಿ ಆಶ್ರಮ:

7-12 ವರ್ಷ ವಯಸ್ಸಿನ ಮಕ್ಕಳು ಮತ್ತು 13-17 ವರ್ಷ ವಯಸ್ಸಿನ ಹದಿಹರೆಯದವರು ಪವಿತ್ರವಾದ ವೈಎಸ್‌ಎಸ್‌ ರಾಂಚಿ ಆಶ್ರಮದ ಆವರಣದಲ್ಲಿ ನಡೆದ 7-ದಿನಗಳ ಯುವ ಶಿಬಿರದಲ್ಲಿ ಭಾಗವಹಿಸಿದ್ದರು. ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನವನ್ನು ಒಳಗೊಂಡಿದ್ದ ದೈನಂದಿನ ಆಧ್ಯಾತ್ಮಿಕ ದಿನಚರಿಯು, ಭಜನೆಗಳು, ಸಾಮೂಹಿಕ ಪಠಣ ಮತ್ತು ʼಕೃಷ್ಣ ಕಥಾʼ — ಭಗವಾನ್ ಕೃಷ್ಣನ ಬಾಲ್ಯದ ಕಥೆಗಳನ್ನು ಮರು ನಿರೂಪಿಸುವುದು — ಮುಂತಾದ ಭಕ್ತಿಪೂರ್ಣ ಚಟುವಟಿಕೆಗಳೊಂದಿಗೆ ಬೆಸೆದುಕೊಂಡಿತ್ತು. ಧ್ಯಾನಗಳನ್ನು “ಬಾಬಾಜಿಯ ಗುಹೆ” ಎಂದು ಕರೆಯಲಾಗುವ ವಿಶೇಷವಾಗಿ ನಿರ್ಮಿಸಿದ ಒಂದು ಡೇರೆಯಲ್ಲಿಯೂ ನಡೆಸಲಾಯಿತು. ಇದು ಹಿಮಾಲಯದ ಗುಹೆಗಳಲ್ಲಿರುವಂತಹ ಶಾಂತಿಯುತ ಕಂಪನಗಳಿಗೆ ತಮ್ಮನ್ನು ಮಾನಸಿಕವಾಗಿ ಕೊಂಡೊಯ್ಯಲು ಸಹಕಾರಿಯಾಗುವಂತೆ ರೂಪಿಸಲಾಗಿತ್ತು.

ಬದುಕುವುದು ಹೇಗೆ ಎಂಬ ತರಬೇತಿಯ ಅಂಗವಾಗಿ, ಮಕ್ಕಳಿಗೆ ಸಾಮಾಜಿಕ ಶಿಷ್ಟಾಚಾರ, ಹೂಮಾಲೆ ರಚನೆ, ತೋಟಗಾರಿಕೆ ಮತ್ತು ಕರಕುಶಲ ಕಲೆಗಳನ್ನೊಳಗೊಂಡಂತೆ ಅನೇಕ ಸೃಜನಾತ್ಮಕ ಮತ್ತು ಸ್ವಯಂ- ವಿಕಾಸ ಚಟುವಟಿಕೆಗಳಿಗೆ ವ್ಯಾಪಕ ಅವಕಾಶ ಕಲ್ಪಿಸಲಾಯಿತು. ಚಿಂತನಶೀಲ ಮತ್ತು ಜವಾಬ್ದಾರಿಯುತ ನಡತೆಯನ್ನು ಪ್ರೋತ್ಸಾಹಿಸಲು, ಮಕ್ಕಳಿಗೆ ಪ್ರತಿದಿನವೂ ಒಂದು ಗಂಟೆಯ ಕಾಲ ‘ಸ್ವಯಂ-ನಿರ್ದೇಶಿತ ಚಟುವಟಿಕೆʼಯನ್ನು ನಿಗದಿಪಡಿಸಲಾಗಿತ್ತು. ಅದನ್ನು ಅವರು ದಿನಚರಿ ಬರೆಯುವುದು, ಆತ್ಮಾವಲೋಕನ ಮತ್ತು ಆಶ್ರಮದ ಮಾರ್ಗದರ್ಶಿತ ಪ್ರವಾಸಗಳಲ್ಲಿ ಕಳೆಯಬಹುದಿತ್ತು.

ಮಕ್ಕಳು ಒಂದು ವಿನೋದಮಯವಾದ ಆಟದ ನಂತರ ತಮ್ಮ ಟ್ರೋಫಿಯನ್ನು ಪಡೆದುಕೊಂಡರು
ಹದಿಹರೆಯದವರು “ಬಾಬಾಜಿಯ ಗುಹೆ” ಯಲ್ಲಿ ಧ್ಯಾನ ಮಾಡಿದರು

ಆ ವಾರವು ಒಂದು ವಿಜೃಂಭಣೆಯ “ಪಲ್ಲಕ್ಕಿ” ಮೆರವಣಿಗೆಯೊಂದಿಗೆ ಅವಿಸ್ಮರಣೀಯವಾಗಿ ಮುಕ್ತಾಯಗೊಂಡಿತು. ಈ ಮೆರವಣಿಗೆಯಲ್ಲಿ ಮಕ್ಕಳು ಮತ್ತು ಯುವಕರು ತಾವು ವಾರದುದ್ದಕ್ಕೂ ಪ್ರೀತಿಯಿಂದ ವಿನ್ಯಾಸಗೊಳಿಸಿದ್ದ ಪಲ್ಲಕ್ಕಿಗಳ ಮೇಲೆ ಗುರುಗಳ ಭಾವಚಿತ್ರಗಳನ್ನು ಇಟ್ಟು ಭಜನೆಗಳನ್ನು ಹಾಡುತ್ತಾ ಭಕ್ತಿಪೂರ್ವಕವಾಗಿ ಹೊತ್ತೊಯ್ದರು. ಅವರು ಆಧ್ಯಾತ್ಮಿಕ ರಸಪ್ರಶ್ನೆ, ನಿಧಿಶೋಧ, ಗುರೂಜಿಗಳ ಆರಂಭಿಕ ಜೀವನದ ಕುರಿತ ವಿಶೇಷ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಕಳೆದ ವಾರವನ್ನು ನೆನಪಿಸಿಕೊಳ್ಳುವಂತೆ ಮಾಡಿದ ಶಿಬಿರದ ಚಿತ್ರ ಪ್ರದರ್ಶನದಲ್ಲಿಯೂ ಭಾಗವಹಿಸಿದರು.

ನೋಯ್ಡಾ ಆಶ್ರಮ:

ವೈಎಸ್ಎಸ್ ನೋಯ್ಡಾ ಆಶ್ರಮವು ಮೇ ಮತ್ತು ಜೂನ್ ತಿಂಗಳುಗಳಲ್ಲಿ ಹುಡುಗಿಯರು ಮತ್ತು ಹುಡುಗರಿಗಾಗಿ ಒಂದು ವಾರದ ಅವಧಿಯ ಎರಡು ಪ್ರತ್ಯೇಕ ಶಿಬಿರಗಳನ್ನು ಆಯೋಜಿಸಿತ್ತು. ಭಾಗವಹಿಸುವವರನ್ನು ನಾಲ್ಕು ಗುಂಪುಗಳಾಗಿ ವಿಭಜಿಸಿ, ತರಬೇತಿ ಪಡೆದ ನಾಯಕರ ಪ್ರೀತಿಪೂರ್ವಕ ಮಾರ್ಗದರ್ಶನದಲ್ಲಿ ಇರಿಸಲಾಯಿತು.

ವೈಎಸ್ಎಸ್ ಸನ್ಯಾಸಿಯೊಬ್ಬರು ನಡೆಸುವ ಚೈತನ್ಯದಾಯಕ ವ್ಯಾಯಾಮಗಳೊಂದಿಗೆ ಹುಡುಗರು ತಮ್ಮ ದಿನವನ್ನು ಪ್ರಾರಂಭಿಸಿದರು
ಒಬ್ಬ ಸ್ವಯಂಸೇವಕರು ಗುರು ಕಥಾ ಸಂಕೀರ್ತನೆಯನ್ನು ನಡೆಸಿದರು

ಆಶ್ರಮದಲ್ಲಿ ನಡೆದ ಮುಂಜಾನೆಯ ಜಪ ನಡಿಗೆಗಳು ಶಿಬಿರದ ಆಧ್ಯಾತ್ಮಿಕ ದಿನಚರಿಯ ಮುಖ್ಯಾಂಶಗಳಲ್ಲಿ ಒಂದಾಗಿದ್ದು, ಇದು ಮಕ್ಕಳಿಗೆ ದಿನವಿಡೀ ಸರಿಯಾದ ಮನೋಭಾವವನ್ನು ಹೊಂದಲು ನೆರವಾಯಿತು. ಗುರು ಕಥಾ ಮತ್ತು ಪ್ರತಿದಿನದ ಸುಂದರಕಾಂಡದ ಅವಧಿಗಳು ಸಹ ಅವರ ಭಕ್ತಿಭಾವವು ಹೊರಹೊಮ್ಮಲು ಸಹಾಯಕವಾದವು. ಪರಮಹಂಸ ಯೋಗಾನಂದರ ಬೋಧನೆಗಳ ಆಧಾರಿತ ಬದುಕುವುದು ಹೇಗೆ ತರಗತಿಗಳ ಜೊತೆಗೆ, ಡಿಜಿಟಲ್ ಸುರಕ್ಷತೆ ಮತ್ತು ತುರ್ತು ಪ್ರಥಮ ಚಿಕಿತ್ಸೆಯಂತಹ ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಕುರಿತಾದ ಅವಧಿಗಳೂ ಶಿಬಿರದಲ್ಲಿ ಸೇರಿದ್ದವು. ಪುಟಾಣಿ ಮಕ್ಕಳಿಗೆ ಸನ್ಯಾಸಿಗಳೊಂದಿಗೆ ಸಂವಾದಿಸುವ ಮತ್ತು ತಮ್ಮ ಆಧ್ಯಾತ್ಮಿಕ ಕುತೂಹಲವನ್ನು ತಣಿಸಿಕೊಳ್ಳುವ ಅವಕಾಶವೂ ದೊರೆಯಿತು.

ಚೆನ್ನೈ ಆಶ್ರಮ:

ಚೆನ್ನೈನಲ್ಲಿ ಹೊಸದಾಗಿ ಉದ್ಘಾಟನೆಗೊಂಡ ವೈಎಸ್ಎಸ್ ಆಶ್ರಮವು ಏಪ್ರಿಲ್‌ನ ಕೊನೆಯ ವಾರ ಮತ್ತು ಮೇ ತಿಂಗಳ ಮೊದಲ ವಾರದಾದ್ಯಂತ ಹುಡುಗರು ಮತ್ತು ಹುಡುಗಿಯರಿಗಾಗಿ ಎರಡು ಪ್ರತ್ಯೇಕ ಬೇಸಿಗೆ ಶಿಬಿರಗಳನ್ನು ಆಯೋಜಿಸಿತ್ತು. ಪ್ರತಿಯೊಂದು ಶಿಬಿರವು ಸಂನ್ಯಾಸಿಗಳಿಂದ ಆಯೋಜಿಸಲ್ಪಟ್ಟ, ಪೋಷಕರು ಮತ್ತು ಮಕ್ಕಳಿಗಾಗಿ ಒಂದು ಹೃದಯಸ್ಪರ್ಶಿ ಸ್ವಾಗತ-ಸಂದರ್ಶನ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಶಿಬಿರದ ವೇಳಾಪಟ್ಟಿಯನ್ನು “ಯುವಜನತೆಗೆ ಆತ್ಮದ ಗುಣಗಳು” ಎಂಬ ವಿಷಯದ ಸುತ್ತ ಚಿಂತನಶೀಲವಾಗಿ ರೂಪಿಸಲಾಗಿತ್ತು, ಪ್ರತಿ ದಿನವನ್ನು ಕರುಣೆ, ನಮ್ರತೆ, ಆನಂದ, ಧೈರ್ಯ, ವಿವೇಕ ಮತ್ತು ಭಕ್ತಿಯಂತಹ ನಿರ್ದಿಷ್ಟ ಆಧ್ಯಾತ್ಮಿಕ ಗುಣಗಳಿಗೆ ಸಮರ್ಪಿಸಲಾಗಿತ್ತು.

ಬಾಲಕಿಯರು ತಾವು ಕೃತಜ್ಞರಾಗಿರುವ ವಿಷಯಗಳ ಬಗ್ಗೆ ಟಿಪ್ಪಣಿಗಳಿಂದ ತುಂಬಿದ "ಕೃತಜ್ಞತೆಯ ಜಾಡಿಗಳನ್ನು" ಪೂಜಾ ವೇದಿಕೆಯ ಬಳಿ ಇರಿಸಿದರು.
ಬಾಲಕರು ಮಡಕೆ ಚಿತ್ರಕಲೆಯ ತರಗತಿಯಲ್ಲಿ ಮಗ್ನರಾಗಿದ್ದರು

ಕರಕುಶಲ ಕಲೆಗಳು, ಆನಿಮೇಷನ್ ಚಲನಚಿತ್ರಗಳ ಪ್ರದರ್ಶನಗಳು ಮತ್ತು ಆಟಗಳಂತಹ ಚಟುವಟಿಕೆಗಳನ್ನು ಆ ದಿನದ ವಿಷಯಕ್ಕೆ ಪೂರಕವಾಗಿ ಹಾಗೂ ಆಧ್ಯಾತ್ಮಿಕ ಗುಣಗಳ ಕುರಿತು ಮಕ್ಕಳ ತಿಳುವಳಿಕೆಯನ್ನು ಗಾಢವಾಗಿಸಲು ಉದ್ದೇಶಪೂರ್ವಕವಾಗಿ ರೂಪಿಸಲಾಗಿತ್ತು. ಅಡುಗೆ ಮತ್ತು ವಿಶ್ರಾಂತಿ ಕುರಿತ ವಿಶೇಷ ಅವಧಿಗಳು ಸಹ ಮಕ್ಕಳು ಆರೋಗ್ಯ ಮತ್ತು ಸ್ವಾಸ್ಥ್ಯದ ಬಗ್ಗೆ ಸಮಗ್ರ ಕಲ್ಪನೆಯನ್ನು ಬೆಳೆಸಿಕೊಳ್ಳಲು ನೆರವಾದವು.

ಯೋಗದಾ ಸತ್ಸಂಗ ಆಶ್ರಮಗಳಾದ್ಯಂತ ನಡೆದ ಬೇಸಿಗೆ ಶಿಬಿರಗಳು ಕೇವಲ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಶಿಬಿರಗಳಷ್ಟೇ ಆಗಿರದೇ, ಯುವ ಮನಸ್ಸುಗಳು ಪರಮಹಂಸ ಯೋಗಾನಂದರ ಸಾರ್ವತ್ರಿಕ ಮತ್ತು ಕಾಲಾತೀತ ಬೋಧನೆಗಳ ಮೂಲಕ ತಮ್ಮ ಆಂತರಿಕ ಸಾಮರ್ಥ್ಯವನ್ನು ಕಂಡುಕೊಳ್ಳಲು ಸಿಕ್ಕ ಒಂದು ಅವಕಾಶವೂ ಆಗಿತ್ತು. ಮಕ್ಕಳು ಮತ್ತು ಹದಿಹರೆಯದವರು ಮಧುರ ನೆನಪುಗಳೊಂದಿಗೆ ಸ್ಫೂರ್ತಿ ಮತ್ತು ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಂಡು ಮನೆಗೆ ಹಿಂದಿರುಗುವಾಗ, ಅನೇಕರು ಗುರೂಜಿಯವರೊಂದಿಗೆ ಆಳವಾದ ಭಾಂದವ್ಯದ ಭಾವನೆಯೊಂದಿಗೆ ತಮ್ಮ ಆಂತರಿಕ ಜೀವನವನ್ನು ಪೋಷಿಸಲು ಬೇಕಾದ ಸಾಧನಗಳೊಂದಿಗೆ ತೆರಳಿದರು.

ಸಾಕ್ಷ್ಯವಚನಗಳು:

ಪೋಷಕರು ಮತ್ತು ಮಕ್ಕಳು ಶಿಬಿರದ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ:

ಮಕ್ಕಳು:

ಪೋಷಕರು:  

ಬೇಸಿಗೆ ಶಿಬಿರದ ಮಕ್ಕಳಿಂದ “ಗುರೂಜಿಯವರಿಗೆ ಪತ್ರಗಳು”

ರಾಂಚಿ ಯುವ ಶಿಬಿರ, 2025 ರಲ್ಲಿ, ಯುವ ಭಕ್ತರು ಶ್ರೀ ಶ್ರೀ ಪರಮಹಂಸ ಯೋಗಾನಂದರಿಗೆ ವೈಯಕ್ತಿಕ ಪತ್ರಗಳನ್ನು ಬರೆಯುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಲು ಕಲಿತರು. ಕೆಳಗೆ ಕೆಲವು ಆಯ್ದ ಭಾಗಗಳನ್ನು ನೀಡಲಾಗಿದೆ:

ನನ್ನ ಪ್ರೀತಿಯ ಗುರೂಜಿ,
ತಾವು ಹೇಗಿದ್ದೀರಿ? ತಾವು ಕ್ಷೇಮವಾಗಿದ್ದೀರಿ ಎಂದು ಆಶಿಸುತ್ತೇನೆ. ನನ್ನ ಆಶಯವು ಧ್ಯಾನದಲ್ಲಿ ಉತ್ತಮ ಪ್ರಗತಿ ಸಾಧಿಸುವುದು, ಇತರರಿಗೆ ಸಹಾಯ ಮಾಡುವುದು, ಅಧ್ಯಯನದಲ್ಲಿ ಉತ್ತಮ ಪ್ರಗತಿ ಸಾಧಿಸುವುದು ಮತ್ತು ನನ್ನ ಪೋಷಕರಿಗೆ ಕೀರ್ತಿ ತರುವುದು ಆಗಿದೆ. ನಾನು ಯಾವಾಗಲೂ ಸದ್ಭಾವನೆಗಳನ್ನು ಹೊಂದಲು ಬಯಸುತ್ತೇನೆ. ತಾವು ಯಾವಾಗಲೂ ನನ್ನ ಜೊತೆಗಿರುತ್ತೀರಿ ಎಂದು ನನಗೆ ತಿಳಿದಿದೆ. ಜೈ ಗುರು!

ತಮ್ಮ ಶಿಷ್ಯ,
– ಎಸ್

ಪ್ರೀತಿಯ ಗುರೂಜಿ,
ನಾನು ಇಲ್ಲಿ ಸಂತೋಷವಾಗಿದ್ದೇನೆ. ತಾವು ಹೇಗಿದ್ದೀರಿ? ಕೆಲವು ದಿನಗಳ ಹಿಂದೆ ನಾನು ನಿಮಗೆ ಡೈರಿ ಮಿಲ್ಕ್ ಚಾಕಲೇಟ್ ಕೊಟ್ಟಿದ್ದೆ. ಅದು ನಿಮಗೆ ಇಷ್ಟವಾಯಿತು ಎಂದು ಭಾವಿಸುತ್ತೇನೆ. ನಾನು ವಿಜ್ಞಾನ ವಿಭಾಗವನ್ನು ಆರಿಸಿಕೊಂಡಿದ್ದೇನೆ… ನನಗೆ ಬಹಳಷ್ಟು ಆಶಯಗಳಿವೆ. ಅಂದಹಾಗೆ, ನಿಮ್ಮ ಕಣ್ಣುಗಳು ಬಹಳ ಸುಂದರವಾಗಿವೆ. ನಾನು ಪ್ರತಿದಿನ ಧ್ಯಾನ ಮಾಡುವುದಿಲ್ಲ, ಆದರೆ ಪ್ರಯತ್ನಿಸುತ್ತೇನೆ.

ಪ್ರೀತಿಯಿಂದ,
– ಎಂಕೆ

ದಿವ್ಯ ಗುರುದೇವ,
ತಾವು ಹೇಗಿದ್ದೀರಿ? ನಾನು ಇಲ್ಲಿ ಚೆನ್ನಾಗಿದ್ದೇನೆ. ನಿಮ್ಮೊಂದಿಗೆ ಚರ್ಚಿಸಬೇಕಾದ ಬಹಳ ಮುಖ್ಯವಾದ ವಿಷಯವೊಂದಿದೆ.
ತಾವು ನನ್ನ ಬಳಿಗೆ ಯಾವಾಗ ಬರುವಿರಿ? ತಾವು ನನಗೆ ಯಾವಾಗ ದರ್ಶನ ನೀಡುವಿರಿ? ಕಳೆದ ಬಾರಿ ನಾನು ನಿಮ್ಮ ದರ್ಶನ ಪಡೆದಾಗ ಅನುಭವಿಸಿದ ಆ ಆನಂದವನ್ನು ನಾನು ನೆನಪಿಸಿಕೊಳ್ಳುತ್ತೇನೆ. ತಾವು ನನ್ನ ಬಳಿಗೆ ಬಂದು ದರ್ಶನ ನೀಡಿದರೆ, ಜೀವನದ ಕಷ್ಟಗಳು ಮಾಯವಾಗುತ್ತವೆ ಎಂಬುದು ನನಗೆ ಗೊತ್ತು. ಅಲ್ಲದೆ, ನನ್ನ ಮನೋಬಲವನ್ನು ಗಟ್ಟಿಗೊಳಿಸಲು, ನಿಮ್ಮ ಆಶೀರ್ವಾದದ ಅಗತ್ಯವಿದೆ. ಗುರುಗಳೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂಬುದು ನಿಮಗೆ ಗೊತ್ತೇ? ನಿಮಗೆ ಅದು ಗೊತ್ತಿದೆಯಲ್ಲವೇ? ದಯವಿಟ್ಟು ನನಗೆ “ನೀವೇ ನನ್ನ ಏಕಮಾತ್ರ ಪ್ರೇಮವಾಗುವಂತೆ ನಾನು ನಿಮ್ಮನ್ನು ಪ್ರೀತಿಸಲು ಸಾಧ್ಯವಾಗುವವರೆಗೂ” ಸಹಾಯ ಮಾಡಿ,

ನಿಮ್ಮ ಪ್ರೀತಿಯ ಮಗಳು,
– ಡಿ

ಗುರೂಜಿ, ತಾವು ಹೇಗಿದ್ದೀರಿ? ನಾನು ಚೆನ್ನಾಗಿದ್ದೇನೆ. ನನ್ನನ್ನು ಈ ಆಶ್ರಮದ ಶಿಬಿರಕ್ಕೆ ಕರೆತಂದಿದ್ದಕ್ಕಾಗಿ ಧನ್ಯವಾದಗಳು. ಇಲ್ಲಿ ಬಹಳ ಆನಂದಮಯವಾಗಿತ್ತು. ಕಳೆದ ವರ್ಷದಿಂದ ಇಲ್ಲಿಗೆ ಬರಲು ನಾನು ಕಾಯುತ್ತಿದ್ದೆ. ನನಗೆ ತುಂಬಾ ಸಂತೋಷವಾಗಿದೆ. ಧನ್ಯವಾದಗಳು. ಗುರೂಜಿ, ನಾನು ನಿಮ್ಮನ್ನು ಪ್ರೀತಿಸುತ್ತೇನೆ.

– ಕೆ

ಪ್ರೀತಿಯ ಗುರೂಜಿ,
ನನ್ನ ಮನವಿಯನ್ನು ಆಲಿಸಲು ನಿಮಗೆ ಬಿಡುವಿದೆ ಎಂದು ಭಾವಿಸುತ್ತೇನೆ. ನೀವು ನನ್ನೊಂದಿಗೆ ಸಂಭಾಷಿಸಿ, ನನ್ನ ಜೀವನದಲ್ಲಿ ಮಾರ್ಗದರ್ಶನ ನೀಡಬೇಕೆಂಬ ಆಶಯದಿಂದ ನಾನು ಬರೆಯುತ್ತಿದ್ದೇನೆ. ಮತ್ತು ನನಗೆ ಇನ್ನೊಂದು ಆಸೆಯಿದೆ. ನಿಮ್ಮ ಲಿಚಿ ಮರದಿಂದ ನನಗೆ ಕೆಲವು ಲಿಚಿ ಹಣ್ಣುಗಳು ಬೇಕು.

ಪ್ರೀತಿಯಿಂದ,
– ಎವಿ

ಇದನ್ನು ಹಂಚಿಕೊಳ್ಳಿ