
ಅನೇಕ ವರ್ಷಗಳ ನಂತರವೂ, ಪರಮಹಂಸ ಯೋಗಾನಂದರ ಜೀವನ ಚರಿತ್ರೆ, ಯೋಗಿಯ ಆತ್ಮಕಥೆಯು ಲಕ್ಷಾಂತರ ಜನರಿಗೆ, ಭಾರತದ ಪುರಾತನ ಯೋಗ ಧ್ಯಾನದ ಬೋಧನೆಗಳನ್ನು ನೀಡುವ ಒಂದು ಪರಿಚಯಾತ್ಮಕ ಕೃತಿಯಾಗಿ ಮುಂದುವರೆಯುತ್ತಿದೆ. ಭಾರತದ ಸಿತಾರ್ ಕಲಾವಿದ, ದಿವಂಗತ ರವಿ ಶಂಕರ್; ಆಪಲ್ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ, ದಿವಂಗತ ಸ್ಟೀವ್ ಜಾಬ್ಸ್; ಭಾರತದ ಕ್ರಿಕೆಟ್ ಪಟು ವಿರಾಟ್ ಕೊಹ್ಲಿ ಮತ್ತು ಇನ್ನೂ ಅನೇಕ ಪ್ರಖ್ಯಾತರು ಶಿಫಾರಸ್ಸು ಮಾಡಿರುವ ಈ ಪುಸ್ತಕವು, ಪ್ರಪಂಚದಾದ್ಯಂತ ಓದುಗರನ್ನು ಸ್ಫೂರ್ತಿಗೊಳಿಸುತ್ತಿದೆ. ಐವತ್ತು ಭಾಷೆಗಳಿಗಿಂತಲೂ ಅಧಿಕ ಭಾಷೆಗಳಲ್ಲಿ ಮುದ್ರಿತವಾದ ಇದನ್ನು “20ನೇ ಶತಮಾನದ 100 ಶ್ರೇಷ್ಠ ಪುಸ್ತಕಗಳಲ್ಲಿ” ಒಂದು ಎಂದು ಪರಿಗಣಿಸಲಾಗಿದೆ.
ಪ್ರಸ್ತುತವಾಗಿ ನಾವು ಯೋಗಿಯ ಆತ್ಮಕಥೆಯ ಉಚಿತ ಇ-ಪುಸ್ತಕ ಪ್ರತಿಯನ್ನು ನೀಡುತ್ತಿದ್ದೇವೆ. ದಯಮಾಡಿ ನಿಮ್ಮ ಇಮೇಲ್ ವಿಳಾಸ ಮತ್ತು ನಿಮಗೆ ಯಾವ ಭಾಷೆಯಲ್ಲಿ ಬೇಕು ಎಂದು ತಿಳಿಸಿ, ನಾವು ನಿಮಗೆ ಉಚಿತ ಪ್ರತಿಯನ್ನು ಇಮೇಲ್ ಮೂಲಕ ಕಳಿಸುತ್ತೇವೆ.
ಉಚಿತ ಇ-ಪುಸ್ತಕ ಅನ್ನು ಡೌನ್ಲೋಡ್ ಮಾಡಿಕೊಳ್ಳಿ
(ಈ ಕೊಡುಗೆಯು ಕೇವಲ ಭಾರತ, ನೇಪಾಳ ಮತ್ತು ಶ್ರೀ ಲಂಕಾದಲ್ಲಿ ಮಾತ್ರ ಲಭ್ಯವಿದೆ — 22 ಜೂನ್ 2025 ವರೆಗೂ ಲಭ್ಯವಿದೆ)
ನಿಮ್ಮ ವಿವರಗಳನ್ನು ಹಂಚಿಕೊಳ್ಳಿ
ದಯವಿಟ್ಟು ಗಮನಿಸಿ, ಕೇವಲ ಭಾರತ, ನೇಪಾಳ ಮತ್ತು ಶ್ರೀ ಲಂಕಾದಲ್ಲಿ ಮಾತ್ರ ಉಚಿತ ಇ-ಪುಸ್ತಕ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಮೆಚ್ಚುಗೆಯೋಲೆಗಳು
ನಾನು ಈ ಪುಸ್ತಕವನ್ನು ಪ್ರೀತಿಸುತ್ತೇನೆ. ತಮ್ಮ ಆಲೋಚನೆಗಳು ಮತ್ತು ಸಿದ್ಧಾಂತಗಳನ್ನು ಸವಾಲಿಗೊಡ್ಡಲು ಸಾಕಷ್ಟು ಧೈರ್ಯವಿರುವ ಎಲ್ಲರೂ ಇದನ್ನು ಓದಲೇಬೇಕು. ಈ ಪುಸ್ತಕದಲ್ಲಿನ ಜ್ಞಾನವನ್ನು ಅರ್ಥಮಾಡಿಕೊಳ್ಳುವುದರಿಂದ ಮತ್ತು ಅನುಷ್ಠಾನಿಸುವುದರಿಂದ ನಿಮ್ಮ ಸಂಪೂರ್ಣ ದೃಷ್ಟಿಕೋನ ಮತ್ತು ಜೀವನ ಬದಲಾಗುತ್ತದೆ. ದೈವತ್ವದಲ್ಲಿ ನಂಬಿಕೆಯಿಡಿ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುತ್ತ ಮುಂದುವರಿಯುತ್ತಿರಿ.😇#onelove #begrateful #helponeanother
“ಆಧುನಿಕ ಕಾಲದ ಹಿಂದೂ ಮಹಾತ್ಮರ ಅಸಾಧಾರಣ ಜೀವನ ಹಾಗೂ ಶಕ್ತಿಗಳನ್ನು ಪ್ರತ್ಯಕ್ಷವಾಗಿ ಕಂಡು ಹೇಳುವಂತಹ ಈ ಪುಸ್ತಕ ಯಥಾಕಾಲದ ಹಾಗೂ ಕಾಲಾತೀತವಾದ ಪ್ರಾಮುಖ್ಯವನ್ನು ಪಡೆದಿದೆ….ಅವರ ಅಸಾಮಾನ್ಯ ಜೀವನ ದಾಖಲೆ, ವಾಸ್ತವವಾಗಿ, ಪಶ್ಚಿಮದಲ್ಲಿ ಹಿಂದೆಂದೂ ಪ್ರಕಟವಾಗದ ಹಿಂದೂ ಮನಸ್ಸು ಮತ್ತು ಅಂತರಾಳದ ಆಳ ಮತ್ತು ಭಾರತದ ಆಧ್ಯಾತ್ಮಿಕ ಸಂಪತ್ತನ್ನು ಬಹಳ ಗಂಭೀರವಾಗಿ ತಿಳಿಯಪಡಿಸುವ ಕಥನಗಳಲ್ಲೊಂದು.”
“ಅತ್ಯಂತ ರಂಜನೀಯ, ಸರಳ ಮತ್ತು ಕೇವಲ ಆತ್ಮಜ್ಞಾನವನ್ನು ಪ್ರಕಾಶಗೊಳಿಸುವ ಬಾಳಿನ ಕಥನಗಳಲ್ಲೊಂದು…ವಿದ್ಯೆಯ ವಾಸ್ತವಿಕ ನಿಧಿಯ ಗೃಹ…ಈ ಪುಟಗಳಲ್ಲಿ ಒಬ್ಬನು ಸಂಧಿಸುವ ಖ್ಯಾತ ನಾಮರು ಆಧ್ಯಾತ್ಮಿಕ ಜ್ಞಾನವನ್ನು ಹೊಂದಿರುವ ಸ್ನೇಹಿತರಾಗಿ ಸ್ಮರಣೆಗೆ ಹಿಂತಿರುಗುತ್ತಾರೆ, ಅವರಲ್ಲಿ ಅತ್ಯಂತ ಶ್ರೇಷ್ಠರಾದವರೆಂದರೆ ಭಗವಂತನೋನ್ಮತ್ತರಾದ ಗ್ರಂಥಕರ್ತರೇ.”
“(ಯೋಗಾನಂದರ) ಸುಪ್ರಸಿದ್ಧ ಯೋಗಿಯ ಆತ್ಮಕಥೆಯಲ್ಲಿ ಯೋಗದ ಸಾಧನೆಯಿಂದ ಉತ್ತಮ ಸ್ತರಗಳನ್ನು ಮುಟ್ಟಿದ “ವಿಶ್ವ ಪ್ರಜ್ಞೆಯ” ಪ್ರಖರವಾದ ಮಾಹಿತಿಯನ್ನು ಮತ್ತು ಯೋಗದ ಮತ್ತು ವೇದಾಂತದ ದೃಷ್ಟಿಗಳಿಂದ ಮಾನವನ ಸಹಜ ಸ್ವಭಾವವನ್ನು ಕುರಿತ ಅನೇಕ ಆಕರ್ಷಣೀಯ ಯಥಾರ್ಥ ಚಿತ್ರಗಳನ್ನು ಅವರು ನೀಡಿರುತ್ತಾರೆ.”